ಬೇಸಿಗೆಯಲ್ಲಿ ಅತಿಯಾಗಿ ಬೆವರಿದರೆ, ವೈದ್ಯರ ಬಳಿ ಒಮ್ಮೆ ಪರಿಶೀಲಿಸಿಕೊಳ್ಳಿ!

By: Divya
Subscribe to Boldsky

ಬೇಸಿಗೆಯ ಬಿಸಿಯಿಂದ ದೇಹದಲ್ಲಿ ಬೆವರುವಿಕೆಯು ಹೆಚ್ಚಾಗಿ ಕಿರಿಕಿರಿಯ ಅನುಭವ ಉಂಟುಮಾಡುತ್ತದೆ. ಅತಿಯಾದ ಬೆವರುವುದರಿಂದ ದೇಹದ ದುರ್ಗಂಧವು ಹೆಚ್ಚಾಗ ತೊಡಗುತ್ತದೆ. ಅದಕ್ಕಾಗಿಯೇ ಜನರು ಸಾಮಾನ್ಯವಾಗಿ ಏರ್ ಕಂಡೀಷನರ್, ಫ್ಯಾನ್ ಹಾಗೂ ಇನ್ನಿತರ ತುರ್ತು ಪರಿಹಾರವನ್ನು ಕಂಡುಕೊಳ್ಳಲು ಮುಂದಾಗುತ್ತಾರೆ.    ದೇಹದ ದುರ್ಗಂಧವನ್ನು ತಡೆಗಟ್ಟಲು ಸುಲಭ ಮಾರ್ಗೋಪಾಯಗಳು

ಬೇಸಿಗೆಯಲ್ಲಿ ಬೆವರುವುದು ನೈಸರ್ಗಿಕ ಪ್ರಕ್ರಿಯೆ ಎನ್ನುವುದನ್ನು ನಾವು ಮರೆಯಬಾರದು. ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗೆ ತಕ್ಕಂತೆ ನಮ್ಮ ದೇಹದಲ್ಲಿಯೂ ಆರೋಗ್ಯಕರ ಬದಲಾವಣೆಗಳು ಉಂಟಾಗುತ್ತವೆ. ಹಾಗಾಗಿ ಅದರ ಬಗ್ಗೆ ನಾವು ಕೀಳರಿಮೆ ಹೊಂದಬಾರದು. ದೇಹದಲ್ಲಿ ಆರೋಗ್ಯಕರ ಉಪ್ಪಿನೊಂದಿಗೆ ಪುನರ್ಭರ್ತಿ ಮಾಡದೆಯೇ ವಿಪರೀತವಾಗಿ ಬೆವರುವುದು ಸಹ ಒಳ್ಳೆಯದಲ್ಲ. ಆ ಸಮಯದಲ್ಲಿ ವ್ಯತಿರಿಕ್ತವಾದ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ದೇಹದ ಬೆವರಿನ ದುರ್ವಾಸನೆ ನಿವಾರಿಸಲು ನೈಸರ್ಗಿಕ ಜ್ಯೂಸ್

ಬೇಸಿಗೆಯ ಉದ್ದಕ್ಕೂ ಅತಿಯಾದ ಬಿಸಿಯಿಂದ ಆರೋಗ್ಯದ ಮೇಲೆ ಹೆಚ್ಚಿನ ಒತ್ತಡ ಉಂಟಾಗುವುದು. ಬೆವರುವುದು ನೈಸರ್ಗಿಕವಾಗಿ ಒಳ್ಳೆಯದ್ದೇ ಆದರೂ ಅತಿಯಾದ ಬೆವರುವಿಕೆಯು ಆರೋಗ್ಯವನ್ನು ಹಾಳು ಮಾಡುತ್ತದೆ. ಇದರೊಟ್ಟಿಗೆ ಒಂದು ಬಗೆಯ ಇರಿಸು ಮುರಿಸು ಮಾನಸಿಕ ನೆಮ್ಮದಿಯನ್ನು ಕೆಡಿಸುತ್ತದೆ.   ತಲೆ ಬೆವರಿ ಕೂದಲು ಹಾಳಾಗುವುದನ್ನು ತಡೆಯಲು ಟಿಪ್ಸ್

ಸಾಮಾನ್ಯವಾಗಿ ದೇಹದಲ್ಲಿ ಹೊರ ಚಿಮ್ಮುವ ಬೆವರು ದೈಹಿಕ ಶ್ರಮ, ಹಾರ್ಮೋನ್ ಹಾಗೂ ಅಸಮರ್ಪಕವಾದ ಆಹಾರ ಸೇವನೆಯ ಅಭ್ಯಾಸದಿಂದ ಉಂಟಾಗಬಹುದು. ಬೇಸಿಗೆಯಲ್ಲಿ ಉಂಟಾಗುವ ಅತಿಯಾದ ಬೆವರಿನಿಂದ ಉಂಟಾಗುವ ಸಮಸ್ಯೆಗಳು ಹಲವಾರು. ಅವುಗಳ ಬಗ್ಗೆ ಸೂಕ್ತವಾದ ಪರಿಹಾರ ಹಾಗೂ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಈ ಸಮಸ್ಯೆಯಿಂದ ಉಂಟಾಗುವ ತೊಂದರೆ ಹಾಗೂ ಪರಿಹಾರ ಕ್ರಮಗಳ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಇಲ್ಲಿದೆ...

ನಿರ್ಜಲೀಕರಣ

ನಿರ್ಜಲೀಕರಣ

ಬೇಸಿಗೆಯಲ್ಲಿ ಬೆವರುವುದು ಸಾಮಾನ್ಯ. ಆದರೆ ಅತಿಯಾದ ಬೆವರುವುವಿಕೆಯಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಅತಿಯಾದ ಆಯಾಸದಿಂದ ಕೆಲಸ ಮಾಡಲು ಮನಸ್ಸಿಲ್ಲದಂತಾಗುವುದು. ಜೊತೆಗೆ ರಕ್ತದ ಒತ್ತಡದಲ್ಲೂ ಕೊಂಚ ಏರು ಪೇರಾಗುವ ಸಾಧ್ಯತೆಗಳಿರುತ್ತದೆ.

ಉರಿ ಮೂತ್ರ

ಉರಿ ಮೂತ್ರ

ತ್ವಚೆಯ ಮೇಲ್ಭಾಗದಿಂದಲೇ ಅತಿಯಾಗಿ ನೀರಿನಂಶ ಹೊರ ಹೊಮ್ಮುವುದರಿಂದ ಮೂತ್ರ ವಿಸರ್ಜನೆಯ ಪ್ರಮಾಣ ಕಡಿಮೆಯಾಗುವುದು. ಇದರಿಂದ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಉರಿ/ನೋವು ಉಂಟಾಗುವುದು. ಪದೇ-ಪದೇ ಮೂತ್ರ ಬಂದಂತೆ ಅನಿಸುವುದು. ಮೂತ್ರಕ್ಕೆ ಕುಳಿತುಕೊಂಡರೆ ಮೂತ್ರ ಬರದು. ಬದಲಿಗೆ ಸಹಿಸಲಾರದಷ್ಟು ನೋವು ಉಂಟಾಗುವುದು.

ಕಿಡ್ನಿಯಲ್ಲಿ ಕಲ್ಲು

ಕಿಡ್ನಿಯಲ್ಲಿ ಕಲ್ಲು

ಬೇಸಿಗೆಯಲ್ಲಿ ಹೆಚ್ಚು ನೀರಿನಂಶ ದೇಹ ಶ್ರವಿಸುವುದರಿಂದ ಕಿಡ್ನಿಯಲ್ಲಿ ಉಪ್ಪಿನಂಶ ಒಂದೆಡೆ ಸಂಗ್ರಹವಾಗಿ ಗಟ್ಟಿಯಾಗುತ್ತವೆ. ಇದನ್ನೇ ಕಿಡ್ನಿ ಸ್ಟೋನ್ ಅಥವಾ ಮೂತ್ರ ಪಿಂಡದ ಕಲ್ಲು ಎಂದು ಕರೆಯುತ್ತಾರೆ. ಈ ಕಲ್ಲು ಒಂದೆಡೆಯಿಂದ ಇನ್ನೊಂದೆಡೆಗೆ ಚಲಿಸುವಾಗ ವಿಪರೀತ ನೋವು ಹಾಗೂ ವಾಂತಿಯಾಗುವ ಸಂಭವವಿರುತ್ತದೆ.

ಸೂಕ್ಷ್ಮ ಜಾಗದಲ್ಲಿ ಗಾಯ

ಸೂಕ್ಷ್ಮ ಜಾಗದಲ್ಲಿ ಗಾಯ

ದೇಹದ ಸೂಕ್ಷ್ಮ ಜಾಗಗಳಾದ ಕಂಕುಳು, ತೊಡೆಯ ಸಂಧಿಯಲ್ಲಿ ವಿಪರೀತ ಬೆವರಿನಿಂದ ಉರಿ ಊತಗಳು ಉಂಟಾಗಬಹುದು. ಇವುಗಳ ಬಗ್ಗೆ ಸರಿಯಾದ ಕಾಳಜಿ ವಹಿಸದೆ ಇದ್ದರೆ ಶಿಲೀಂಧ್ರ ಸೋಂಕು (ಫಂಗಸ್ ಇನ್‍ಫೆಕ್ಷನ್) ಉಂಟಾಗುತ್ತದೆ. ಜೊತೆಗೆ ದೊಡ್ಡ ಗಾಯಗಳಾಗಿ ಪರಿವರ್ತನೆ ಹೊಂದುವ ಸಾಧ್ಯತೆ ಇರುತ್ತದೆ. ಆ ಭಾಗದಲ್ಲಿ ತ್ವಚೆಯು ತನ್ನ ಬಣ್ಣವನ್ನು ಕಳೆದುಕೊಂಡು ಕಪ್ಪಾದ ಕಲೆಯನ್ನು ತಾಳುತ್ತವೆ.

ನಿರುತ್ಸಾಹ

ನಿರುತ್ಸಾಹ

ಅತಿಯಾದ ಬೆವರುವಿಕೆಯಿಂದ ಆಯಾಸದ ಅನುಭವ ವಾಗುತ್ತದೆ. ಯಾವುದೇ ಕೆಲಸ ಮಾಡಲು ಮನಸ್ಸು ಇರುವುದಿಲ್ಲ. ಸದಾಕಾಲ ವಿಶ್ರಾಂತಿಯಿಂದ ಕುಳಿತುಕೊಳ್ಳಬೇಕೆಂದು ಮನಸ್ಸು ಬಯಸುತ್ತದೆ.

ನಿದ್ರೆಗೆ ಶರಣಾಗುವುದು

ನಿದ್ರೆಗೆ ಶರಣಾಗುವುದು

ದೇಹದಲ್ಲಿ ಉತ್ಸಾಹ ಹಾಗೂ ಶಕ್ತಿಯನ್ನು ಕಳೆದುಕೊಳ್ಳುವುದರಿಂದ ಕಣ್ಣುಗಳು ವಿಶ್ರಾಂತಿಯನ್ನು ಬಯಸುತ್ತವೆ. ಹಾಗಾಗಿ ಸದಾ ಮಲಗಿ ನಿದ್ರಿಸುವಂತೆ ಮಾಡುತ್ತದೆ.

ತೂಕ ಕಡಿಮೆ ಆಗುವುದು

ತೂಕ ಕಡಿಮೆ ಆಗುವುದು

ಅತಿಯಾದ ಬೆವರಿನಿಂದ ಆರೋಗ್ಯಕರ ಕೊಬ್ಬಿನಂಶವು ದೇಹದಲ್ಲಿ ಕಡಿಮೆಯಾಗುತ್ತಾ ಬರುತ್ತವೆ. ಈ ರೀತಿಯ ಬದಲಾವಣೆಯಿಂದ ದೇಹದ ತೂಕವು ಕಡಿಮೆಯಾಗುತ್ತದೆ. ಒಂದೇ ಸಮನೆ ದೇಹದ ತೂಕ ಇಳಿದರೆ ನಿಶ್ಯಕ್ತಿ ಹಾಗೂ ನಿರುತ್ಸಾಹ ಉಂಟಾಗುತ್ತವೆ.

ನೀರಿನ ಗುಳ್ಳೆ ಆಗುವುದು

ನೀರಿನ ಗುಳ್ಳೆ ಆಗುವುದು

ಅತಿಯಾದ ಬಿಸಿ ಹಾಗೂ ಉರಿಯಿಂದ ಬೆವರಿನ ಪ್ರಮಾಣ ಹೆಚ್ಚಾಗುತ್ತದೆ. ಬೆವರುವಿಕೆಯ ಅನಿಯಮಿತವಾಗುವುದರಿಂದ ತ್ವಚೆಯಲ್ಲಿ ಚಿಕ್ಕ-ಚಿಕ್ಕ ನೀರಿನ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಇವು ಒಡೆಯುವಾಗ ಒಂದು ಬಗೆಯ ವಿಪರೀತ ತುರಿಕೆ ಹಾಗೂ ಉರಿ ನೋವು ಉಂಟಾಗುತ್ತದೆ.

ಬೆವರಿಗೆ ಪರಿಹಾರ

ಬೆವರಿಗೆ ಪರಿಹಾರ

1. ದೇಹವು ಅತಿಯಾಗಿ ನೀರಿನಂಶವನ್ನು ಹೊರ ಹಾಕುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ. ಹಾಗಾಗಿ ಪದೇ ಪದೇ ಆದಷ್ಟು ನೀರು, ಜ್ಯೂಸ್ ಹಾಗೂ ನೀರಿನಂಶ ಹೆಚ್ಚಾಗಿ ಇರುವ ಹಣ್ಣುಗಳನ್ನು ಸೇವಿಸಿ.

2. ಆದಷ್ಟು ಮಸಾಲೆ ಪದಾರ್ಥಗಳಿಂದ ದೂರವಿರಿ.

3. ಗಾಳಿಯಾಡುವ ಹತ್ತಿ ಬಟ್ಟೆಗಳನ್ನು ಧರಿಸಿ. ದೇಹಕ್ಕೆ ಬಾಹ್ಯ ಪರಿಸರದಿಂದ ಕಡಿಮೆ ಉಷ್ಣಾಂಶವಿದ್ದರೆ ಬೆವರುವ ಪ್ರಮಾಣ ಕಡಿಮೆಯಾಗುತ್ತದೆ.

4. ನಿಂಬೆ ಹಣ್ಣಿನ ಜ್ಯೂಸ್ ಸವಿಯಿರಿ. ನಿಂಬು ಬೆವರಿನ ಪ್ರಮಾಣವನ್ನು ಕಡಿಮೆಮಾಡಬಲ್ಲ ಸಾಮಥ್ರ್ಯವನ್ನು ಒಳಗೊಂಡಿದೆ. ಜೊತೆಗೆ ಬೇಸಿಗೆ ಬಿಸಿಗೆ ದೇಹದ ಸಮತೋಲನವನ್ನು ಕಾಪಾಡುತ್ತದೆ.

5. ದೇಹದ ಸೂಕ್ಷ್ಮ ಜಾಗಗಳಲ್ಲಿ ಅತಿಯಾದ ಬೆವರನ್ನು ನಿಯಂತ್ರಿಸಲು ಸೂಕ್ತವಾದ ಡಿಯೊಡ್ರಂಟ್‍ಗಳನ್ನು ಬಳಸಿ. ಕೆಲವರಿಗೆ ಡಿಯೊಡ್ರಂಟ್‍ಗಳು ತ್ವಚೆಯ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಅಂತಹವರು ವೈದ್ಯರ ಸಲಹೆ ಪಡೆದುಕೊಳ್ಳಬೇಕು.

6. ಸ್ನಾನದ ಬಳಿಕ ದೇಹಕ್ಕೆ ಪೌಡರ್ ಹಚ್ಚಿಕೊಳ್ಳಿ. ಇದರಿಂದ ಬೆವರುವುದನ್ನು ತಡೆಯಬಹುದು. ಜೊತೆಗೆ ದೇಹದ ದುರ್ಗಂಧವು ಮಾಯವಾಗುತ್ತದೆ.

7. ಮಸಾಲಯುಕ್ತ ಪದಾರ್ಥ ಹಾಗೂ ಖಾರವಾದ ಊಟ-ತಿಂಡಿಯಿಂದ ದೂರವಿರಿ.

8. ಪ್ರತಿದಿನ ಎರಡು ಬಾರಿ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ದೇಹ ಬೆವರಿನಿಂದ ಮುಕ್ತಿ ಪಡೆದು ತಾಜಾತನದ ಅನುಭವ ಪಡೆಯಬಹುದು. ಬೆವರುವಿಕೆಯ ಪ್ರಮಾಣವೂ ಕಡಿಮೆಯಾಗುತ್ತದೆ.

 
English summary

Issues with excessive sweating in summer

Excessive sweating, becomes an issue too. When you expose your skin to the hot sun and sweat, you must be careful. In fact, skin gets damaged if ignored especially in summer. But there are certain health tips for summer which will help you a bit when it comes to facing the problems related to the hot season.
Subscribe Newsletter