For Quick Alerts
ALLOW NOTIFICATIONS  
For Daily Alerts

ದೇಹದ ಬೆವರಿನ ದುರ್ವಾಸನೆ ನಿವಾರಿಸಲು ನೈಸರ್ಗಿಕ ಜ್ಯೂಸ್

By Jaya subramanya
|

ಬೇಸಿಗೆಯಲ್ಲಿ ಉರಿಯುತ್ತಿರುವ ಧಗೆ ಮತ್ತು ಬೆವರು ಎರಡನ್ನೂ ನೀವು ಎದುರಿಸಲೇಬೇಕಾಗುತ್ತದೆ. ಉರಿಯುತ್ತಿರುವ ಧಗೆಯೊಂದಿಗೆ ಹರಿಯುತ್ತಿರುವ ಬೆವರು ನಿಮ್ಮನ್ನು ಕಂಗೆಡಿಸಿಬಿಡುತ್ತದೆ. ಈ ಬೆವರು ವಾಸನೆಯನ್ನು ತರುತ್ತಿದ್ದರಂತೂ ಅದು ಚಡಪಡಿಕೆಯನ್ನು ಉಂಟುಮಾಡುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಇದು ನಿಮಗೆ ಮುಜುಗರವನ್ನು ತಂದಿಕ್ಕುತ್ತದೆ. ಈ ವಾಸನೆಯನ್ನು ದೂರಾಗಿಸಲು ನಾವು ಸುಗಂಧ ದ್ರವ್ಯಗಳ ಮೊರೆ ಹೋಗುತ್ತೇವೆ. ಆದರೆ ಇದು ತಾತ್ಕಾಲಿಕ ಪರಿಹಾರವಾಗಿರುತ್ತದೆ. ಅತಿಯಾಗಿ ಬೆವರುವಿಕೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು!

ಬರಿಯ ಸುಗಂಧದ್ರವ್ಯ ಮಾತ್ರವಲ್ಲದೆ ಶಾಶ್ವತ ಪರಿಹಾರವನ್ನು ಒದಗಿಸುವ ಉಪಾಯದೊಂದಿಗೆ ನಾವು ಬಂದಿದ್ದು ಇದೊಂದು ಜ್ಯೂಸ್ ರೆಸಿಪಿಯಾಗಿದೆ. ಇದು ದೇಹದ ದುರ್ವಾಸನೆಯನ್ನು ದೂರಮಾಡುತ್ತದೆ. ತ್ವಚೆಯ ಪಿಎಚ್ ನಿಯಂತ್ರಣವನ್ನು ಇದು ನಿರ್ವಹಿಸುವುದರ ಮೂಲಕ ದುರ್ವಾಸನೆಯನ್ನು ಹೋಗಲಾಡಿಸುತ್ತದೆ. ಮನೆಯಲ್ಲೇ ತಯಾರಿಸಬಹುದಾದ ನೈಸರ್ಗಿಕ ಜ್ಯೂಸ್ ಆಗಿರುವ ಇದನ್ನು ಅತಿ ಸರಳವಾಗಿ ನಿಮಗೆ ತಯಾರಿಸಿಕೊಳ್ಳಬಹುದು. ಹಾಗಿದ್ದರೆ ಬನ್ನಿ ಈ ಜ್ಯೂಸ್ ಅನ್ನು ಹೇಗೆ ತಯಾರಿಸುವುದು ಮತ್ತು ಇದಕ್ಕೆ ಬೇಕಾಗಿರುವ ಸಾಮಾಗ್ರಿಗಳನ್ನು ನಾವು ಅರಿತುಕೊಳ್ಳೋಣ.

Drinking This Juice Will Not Let You Smell Bad Even After Sweating

ಸಾಮಾಗ್ರಿಗಳು
1 ಆಪಲ್
1 ಪಾರ್ಸ್ಲೆ
3-4 ತಾಜಾ ಕ್ಯಾಬೇಜ್
1/2 ಇಂಚಿನ ಶುಂಠಿ ಮತ್ತು ತಾಜಾ ಹಿಂಡಿದ ಲಿಂಬೆ ರಸ

ಸಿದ್ಧತೆ:
ಈ ಜ್ಯೂಸ್ ಅನ್ನು ಅತಿ ಸರಳವಾಗಿ ನಿಮಗೆ ತಯಾರಿಸಿಕೊಳ್ಳಬಹುದು. ಎಲ್ಲಾ ಸಾಮಾಗ್ರಿಗಳನ್ನೂ ಚೆನ್ನಾಗಿ ತೊಳೆದುಕೊಳ್ಳಿ. ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ. ಜೂಸರ್‎ನಲ್ಲಿ ಇದನ್ನು ಚೆನ್ನಾಗಿ ತಿರುಗಿಸಿ. ಜ್ಯೂಸ್ ತಯಾರಾದ ನಂತರ ಅದನ್ನು ಗ್ಲಾಸ್‎ಗೆ ಹಾಕಿ ಪ್ರತೀ ದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಇದನ್ನು ಸೇವಿಸಿ.

ಈ ಜ್ಯೂಸ್ ಅನ್ನು ನಿಮಗೆ ಸಂಗ್ರಹಿಸಿಟ್ಟುಕೊಳ್ಳಬಹುದಾಗಿದ್ದು ಆದರೆ ಇದು 48 ಗಂಟೆಗಳಿಗಿಂತ ಹೆಚ್ಚು ಸಮಯ ಸಾಧ್ಯವಿಲ್ಲ. ತಾಜಾ ಸಾಮಾಗ್ರಿಗಳನ್ನೇ ಬಳಸಿಕೊಂಡು ತಾಜಾ ಜ್ಯೂಸ್ ಅನ್ನು ಸಿದ್ಧಮಾಡಿಕೊಳ್ಳಬಹುದು. ಮೊದಲಿಗೆ ಸ್ವಲ್ಪ ಈ ಜ್ಯೂಸ್ ಅನ್ನು ಸೇವಿಸಿ ಇದು ನಿಮ್ಮ ದೇಹಕ್ಕೆ ಹೊಂದಿಕೊಳ್ಳುತ್ತಿದೆಯೇ ಎಂಬುದನ್ನು ಕಂಡುಕೊಳ್ಳಿ. ನಿಮ್ಮ ದೇಹದ ದುರ್ಗಂಧವನ್ನು ಹೋಗಲಾಡಿಸುವುದು ಹೇಗೆ?

ಇದು ಯಾವುದೇ ಸಮಸ್ಯೆಯನ್ನು ಉಂಟುಮಾಡುತ್ತಿಲ್ಲ ಎಂದಾದಲ್ಲಿ ದೇಹದ ದುರ್ಗಂಧವನ್ನು ಹೋಗಲಾಡಿಸಲು ಈ ಜ್ಯೂಸ್ ಅನ್ನು ನಿತ್ಯವೂ ತಯಾರಿಸಿಕೊಂಡು ಸೇವಿಸಿ. ಮುಂದಿನ ಬಾರಿ ಬೆವರಿದಾಗ ಕೂಡ ನಿಮ್ಮ ದೇಹದಿಂದ ದುರ್ವಾಸನೆ ಬರುವುದಿಲ್ಲ.

English summary

Drinking This Juice Will Not Let You Smell Bad Even After Sweating

Summer and sweating are two things that go hand in hand. But that sweat doesn't have to stink and make you feel embarrassed in social situations. The fact that most of us are unaware of is that sweat is odourless. But, when it comes in contact with a certain kind of bacteria, normally found in your skin, it creates a bad smell, otherwise known as body odour.
X
Desktop Bottom Promotion