For Quick Alerts
ALLOW NOTIFICATIONS  
For Daily Alerts

ಆಲೂಗಡ್ಡೆಯನ್ನು ಮೊದಲು ಪರಿಶೀಲಿಸಿ, ಆಮೇಲೆ ಸಾಂಬಾರ್‌ಗೆ ಬಳಸಿ!

By Hemanth
|

ತರಕಾರಿಯಲ್ಲಿ ತುಂಬಾ ಜನಪ್ರಿಯವಾಗಿರುವಂತಹ ಆಲೂಗಡ್ಡೆಯಿಂದ ವಿವಿಧ ರೀತಿಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲೂ ಆಲೂಗಡ್ಡೆ ಉತ್ತರ ಭಾರತೀಯರಿಗೆ ನೆಚ್ಚಿನ ಆಹಾರ. ದಕ್ಷಿಣ ಭಾರತೀಯರು ಕೂಡ ಮಸಾಲೆ ದೋಸೆಗಳಲ್ಲಿ ಇದನ್ನು ಬಳಸುತ್ತಾರೆ. ತುಂಬಾ ರುಚಿಕರ ಹಾಗೂ ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಆಲೂಗಡ್ಡೆ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬೇಕೆಂದು ಇರುವವರು ಇದನ್ನು ಸೇವಿಸಬೇಕು.

ಇದರಲ್ಲಿ ಇರುವಂತಹ ಉನ್ನತ ಮಟ್ಟದ ಕಾರ್ಬೋಹೈಡ್ರೇಟ್ಸ್ ಅನ್ನು ದೇಹವು ಸುಲಭವಾಗಿ ಜೀರ್ಣಿಸಿಕೊಳ್ಳುತ್ತದೆ. ಇದರಿಂದ ದೇಹಕ್ಕೆ ಶಕ್ತಿ ಲಭ್ಯವಾಗುತ್ತದೆ. ಇಂತಹ ಆಹಾರವನ್ನು ನಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಂಡರೆ ತುಂಬಾ ಒಳ್ಳೆಯದು. ಆದರೆ ಇದರಿಂದ ಕೂಡ ಕೆಲವೊಂದು ಸಲ ದೂರವಿರಬೇಕಾಗುತ್ತದೆ...! ಆಲೂಗಡ್ಡೆ ಚಿಪ್ಸ್: ಹಣ ಕೊಟ್ಟು ಕಾಯಿಲೆ ಖರೀದಿಸಬೇಡಿ!

ಇದರಲ್ಲಿರುವ ಸೊಲಾನಿನ್ ಎನ್ನುವ ನ್ಯೂರೋಟಾಕ್ಸಿನ್ ತುಂಬಾ ಹಾನಿಕಾರಕ. ಅತಿಯಾದರೆ ಅಮೃತವು ವಿಷವೆನ್ನುತ್ತಾರೆ. ಅದೇ ರೀತಿ ಆಲೂಗಡ್ಡೆಯನ್ನು ಅತಿಯಾಗಿ ಸೇವಿಸಿದರೆ ಅದು ಆರೋಗ್ಯಕ್ಕೆ ಹಾನಿಕಾರಕ. ಯಾವಾಗ ಇದನ್ನು ಬಳಸಬಾರದು ಎಂದು ನೀವು ಈ ಲೇಖನದ ಮೂಲಕ ತಿಳಿದುಕೊಳ್ಳಿ...

ಆಲೂಗಡ್ಡೆಯ ಬಳಸುವ ಮುನ್....

ಆಲೂಗಡ್ಡೆಯ ಬಳಸುವ ಮುನ್....

ಆಲೂಗಡ್ಡೆಯನ್ನು ಮಾರುಕಟ್ಟೆಯಿಂದ ದೊಡ್ಡ ಪ್ರಮಾಣದಲ್ಲಿ ತರುವುದು ನಮಗೆ ಅಭ್ಯಾಸ ಮತ್ತು ದೀರ್ಘ ಕಾಲದ ತನಕ ಅದನ್ನು ಬಳಸುತ್ತೇವೆ. ಅಲ್ಲದೆ ಇದನ್ನು ದೀರ್ಘ ಕಾಲದ ತನಕ ಇಟ್ಟರೆ ಅದರಿಂದ ದೇಹಕ್ಕೆ ವಿಷವಾಗುವ ಸಾಧ್ಯತೆಯಿದೆ. ಕೆಲವೊಮ್ಮೆ ತುಂಬಾ ಸಮಯ ಅಡುಗೆಗೆ ಬಳಸದೆ ಇದನ್ನು ಇಟ್ಟಾಗ ಅದರಲ್ಲಿ ಸುಕ್ಕು ಹಾಗೂ ಮೆತ್ತಗಿನ ಪದರ ನಿರ್ಮಾಣವಾಗುತ್ತದೆ. ಅಷ್ಟೇ ಅಲ್ಲದೆ ಇದನ್ನು ಬಿಸಿಲಿಗೆ ಇಟ್ಟರೆ ಸೋಲಾನಿನ್ ಉತ್ಪತ್ತಿ ಹೆಚ್ಚಾಗುತ್ತದೆ. ಇದರಿಂದ ಮತ್ತಷ್ಟು ಕೆಟ್ಟ ಪರಿಣಾಮ ಉಂಟಾಗುವುದು.

ಮೊಳಕೆ ಬರುವುದು ಯಾವಾಗ..

ಮೊಳಕೆ ಬರುವುದು ಯಾವಾಗ..

ಆಲೂಗಡ್ಡೆಯಲ್ಲಿ ಮೊಳಕೆ ಬಂದರೆ ಅದನ್ನು ಬಳಸಬೇಕೇ ಅಥವಾ ಬಿಸಾಕಬೇಕೇ ಎನ್ನುವ ಸಂಶಯ ಈಗಲೂ ಜನರಲ್ಲಿ ಇದೆ. ಮೊಳಕೆಯಲ್ಲಿ ಉನ್ನತ ಮಟ್ಟದ ಸೊಲಾನಿನ್ ಮತ್ತು ಚಾಕೊನಿನ್ ಇದ್ದು, ಇದು ನರವ್ಯವಸ್ಥೆಗೆ ತುಂಬಾ ಹಾನಿ ಉಂಟು ಮಾಡಲಿದೆ. ಸಾವಯವವಾಗಿ ಬೆಳೆಸಿರುವ ಆಲೂಗಡ್ಡೆಯಲ್ಲಿ ರಾಸಾಯನಿಕಗಳನ್ನು ಬಳಸಿದ ಆಲೂಗಡ್ಡೆಯಿಂದ ಬೇಗನೆ ಮೊಳಕೆ ಬೆಳೆಯುತ್ತದೆ.

ಆಲೂಗಡ್ಡೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು!

ಗಟ್ಟಿಯಾಗಿರುವ ಆಲೂಗಡ್ಡೆ...

ಗಟ್ಟಿಯಾಗಿರುವ ಆಲೂಗಡ್ಡೆ...

ಆಲೂಗಡ್ಡೆ ಗಟ್ಟಿಯಾಗಿದ್ದಾಗ ಆಥವಾ ಸುಕ್ಕು ಹಾಗೂ ಮೆತ್ತಗೆ ಇರುವಾಗ ಮೊಳಕೆ ಬರುವುದು. ಗಟ್ಟಿಯಾಗಿರುವ ಆಲೂಗಡ್ಡೆಯಲ್ಲಿ ಮೊಳಕೆ ಬಂದರೆ ಆಗ ಮೊಳಕೆಯನ್ನು ಕತ್ತರಿಸಿ ತೆಗೆದು ಬಳಸಬಹುದು. ಯಾಕೆಂದರೆ ಅದರಲ್ಲಿರುವ ಪೋಷಕಾಂಶಗಳು ಹಾಗೆ ಉಳಿದುಕೊಂಡಿರುತ್ತದೆ. ಒಂದು ವೇಳೆ ಆಲೂಗಡ್ಡೆ ಸುಕ್ಕು ಕಟ್ಟಿದ್ದರೆ ಆಗ ಇದನ್ನು ಬಿಸಾಕಿ.

ಆಲೂಗಡ್ಡೆಯ ಸಿಪ್ಪೆಯ ಪವರ್‍‌ಗೆ ಶಭಾಷ್ ಎನ್ನಲೇಬೇಕು!

ಹಸಿರಾಗುವುದು ಯಾವಾಗ

ಹಸಿರಾಗುವುದು ಯಾವಾಗ

ಬಿಸಿಲಿಗೆ ಅತಿಯಾಗಿ ಒಡ್ಡಲ್ಪಟ್ಟಿರುವ ಆಲೂಗಡ್ಡೆಯಲ್ಲಿ ಸೊಲಾನಿನ್ ಅಂಶವು ಹೆಚ್ಚಾಗಿ ಅದು ಹಸಿರಾಗುವುದು. ಹೀಗೆ ಆಗಿದ್ದರೆ ಹಸಿರು ಭಾಗವನ್ನು ಕತ್ತರಿಸಿಕೊಂಡು ಉಳಿದ ಭಾಗವನ್ನು ಸೇವಿಸಬಹುದಾಗಿದೆ.

ಬಿಳಿ ಕೂದಲಿನ ಸಮಸ್ಯೆಗೆ ಮನೆ ಔಷಧಿ-'ಆಲೂಗಡ್ಡೆ ಸಿಪ್ಪೆ'

English summary

Is it safe to eat potatoes that have sprouted?

Potatoes are often bought in large numbers and used for a long period of time. However, one should be cautious as when the potatoes are left for too long, they can turn toxic for your body. When they are not cooked for a long period, they sag and develop a wrinkly and mushy layer. Also, when they are exposed to sunlight in the process, it may accelerate solanine production in them, making them all the more harmful for you.
X
Desktop Bottom Promotion