ನೆನಪಿಟ್ಟುಕೊಳ್ಳಿ- ಇನ್ನೆಂದಿಗೂ 'ನಿಂತು ನೀರು' ಕುಡಿಯಬೇಡಿ!

By: manu
Subscribe to Boldsky

ಚಿಕ್ಕಂದಿನಲ್ಲಿ ನೀವು ನಿಂತೇ ನೀರು ಕುಡಿಯುತ್ತಿದ್ದರೆ ನಿಮ್ಮ ಅಜ್ಜ ಅಜ್ಜಿಯರು ನಿಮ್ಮನ್ನು ಕುಳಿತೇ ನೀರು ಕುಡಿಯುವಂತೆ ಸೂಚನೆ ನೀಡುತ್ತಿದ್ದರೇ? ಇದೊಂದು ಹಳೆಯ ಮೂಢನಂಬಿಕೆ ಎಂದು ಹೆಚ್ಚಿನವರೆಲ್ಲಾ ಈ ಸಲಹೆಯನ್ನು ಉಪೇಕ್ಷಿಸಿ ನಿಂತೇ ನೀರು ಕುಡಿಯುತ್ತಾರೆ.ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ 10 ಲಾಭಗಳು

ಆದರೆ ನಮ್ಮ ಹಿರಿಯರು ತನ್ನ ಅನುಭವದಿಂದ ಕಂಡುಕೊಂಡಿರುವ ಪ್ರಕಾರ ಇದು ಮೂಢನಂಬಿಕೆಯಲ್ಲ, ಬದಲಿಗೆ ಇದಕ್ಕೆ ವೈಜ್ಞಾನಿಕವಾದ ಕಾರಣವೂ ಇದ್ದು ನಮ್ಮ ಹಿರಿಯರು ಹೇಳಿದ್ದು ಸರಿ ಎನ್ನುತ್ತಿದೆ.  ನೆನಪಿಡಿ, ಊಟ ಮಾಡುವಾಗ ನೀರು ಕುಡಿಯಬೇಡಿ...

ವಿಜ್ಞಾನವೂ ಕುಳಿತುಕೊಂಡೇ ನೀರು ಕುಡಿದರೆ ಆರೋಗ್ಯಕ್ಕೆ ಉತ್ತಮ ಎಂದು ಹೇಳುತ್ತಿದೆ. ವಿಜ್ಞಾನ ಹೀಗೆ ಹೇಳಬೇಕಾದರೆ ಇದಕ್ಕೆ ಸೂಕ್ತ ಪುರಾವೆ ಹಾಗೂ ಪ್ರಯೋಗಗಳ ಮೂಲಕ ದೃಢೀಕರಿಸಿಯೇ ಹೇಳಲಾಗಿರುತ್ತದೆ. ಅಂದಿನ ಕಾಲದಿಂದಲೇ ನಾನು ನಿಂತೇ ನೀರು ಕುಡಿಯುತ್ತಿದ್ದೇನೆ, ಗುಂಡುಕಲ್ಲಿನಂತಿದ್ದೇನೆ, ಏನಾಗಿದೆ ನನಗೀಗ ಎಂಬ ಉಢಾಫೆಯ ಮಾತುಗಳನ್ನಾಡುವವರಿಗೆ ವಿಜ್ಞಾನ ಯಾವ ಉತ್ತರ ನೀಡುತ್ತಿದೆ ಎಂಬುದನ್ನು ಕೆಳಗೆ ವಿವರಿಸಲಾಗಿದೆ....  

ನಿಂತೇ ನೀರು ಕುಡಿಯುವ ಮೊದಲು....

ನಿಂತೇ ನೀರು ಕುಡಿಯುವ ಮೊದಲು....

ಒಂದು ವೇಳೆ ನೀವು ನಿಂತೇ ನೀರು ಕುಡಿಯುವ ಅಭ್ಯಾಸವುಳ್ಳವರಾಗಿದ್ದರೆ ಇದು ನಿಮ್ಮ ಅನ್ನನಾಳದಲ್ಲಿ ಜಲಪಾತದಂತೆ ರಭಸದಲ್ಲಿ ಇಳಿಯುತ್ತದೆ ಹಾಗೂ ಹೊಟ್ಟೆಯ ತಳಭಾಗಕ್ಕೆ ಕೊಂಚ ಒತ್ತಡವನ್ನು ಹೇರುತ್ತದೆ. ಈ ಒತ್ತಡ ಹೊಟ್ಟೆ ಮತ್ತು ಸುತ್ತಮುತ್ತಲ ಅಂಗಗಳಿಗೆ ಘಾಸಿಯುಂಟುಮಾಡಬಹುದು.

ಬಾಯಾರಿಕೆ ತಣಿಯುವುದಿಲ್ಲ

ಬಾಯಾರಿಕೆ ತಣಿಯುವುದಿಲ್ಲ

ಬಾಯಾರಿಕೆಯ ಬಳಿಕ ನಿಂತೇ ನೀರು ಕುಡಿಯುವುದರಿಂದ ಬಾಯಾರಿಕೆ ತಣಿಯುವುದಿಲ್ಲ. ಬದಲಿಗೆ ಕುಳಿತು ಕುಡಿಯುವುದರಿಂದ ತಣಿಯುತ್ತದೆ. ಬೇಕಾದರೆ ಪರಾಮರ್ಶಿಸಿ ನೋಡಿ.

ಕೆಲವೊಮ್ಮೆ ಹೊಟ್ಟೆಯ ನೋವಿಗೂ ಕಾರಣವಾಗಬಹುದು!

ಕೆಲವೊಮ್ಮೆ ಹೊಟ್ಟೆಯ ನೋವಿಗೂ ಕಾರಣವಾಗಬಹುದು!

ನಿಂತೇ ನೀರು ಕುಡಿಯುವ ಮೂಲಕ ರಭಸವಾಗಿ ಧಾವಿಸುವ ನೀರು ಅನ್ನನಾಳ ಹೊಟ್ಟೆಯನ್ನು ಕೂಡುವ ಸ್ಥಳದಲ್ಲಿ (cardiac sphincter) ಕೊಂಚವೇ ಬಾಗಿದಂತಿದ್ದು ಈ ಭಾಗಕ್ಕೆ ಅತಿ ಹೆಚ್ಚಿನ ಒತ್ತಡವನ್ನು ಹೇರುತ್ತದೆ. ಇದು ಹೊಟ್ಟೆಯಲ್ಲಿರುವ ಆಮ್ಲೀಯ ಜಠರರಸವನ್ನೂ ಗಲಿಬಿಲಿಯಾಗಿಸಬಹುದು. ಹಾಗೂ ಈ ಒತ್ತಡವನ್ನು ಸರಿಪಡಿಸಲು ಇತರ ಸ್ನಾಯುಗಳೂ ಸಂಕುಚಿತಗೊಳ್ಳುವ ಮೂಲಕ ಹೊಟ್ಟೆಯ ಭಾಗದಲ್ಲಿ ಸೆಡೆತವುಂಟಾಬಹುದು. ಕೆಲವೊಮ್ಮೆ ಇದು ನೋವಿಗೂ ಕಾರಣವಾಗಬಹುದು.

ಕಿಡ್ನಿಗೂ ಹಾನಿ!!

ಕಿಡ್ನಿಗೂ ಹಾನಿ!!

ಈ ರಭಸಲ್ಲಿ ಧಾವಿಸಿದ ನೀರು ಮುಂದೆ ಸಾಗಿ ರಭಸದಲ್ಲಿಯೇ ಮೂತ್ರಪಿಂಡಗಳಿಗೂ ತಲುಪಬಹುದು. ಇದು ನೈಸರ್ಗಿಕವಾದ ಶುದ್ಧೀಕರಣ ಕ್ರಿಯೆಗೆ ಅಡ್ಡಿಯಾಗುತ್ತದೆ. ಅಲ್ಲದೇ ಮೂತ್ರಕೋಶದಲ್ಲಿ ಹೆಚ್ಚಿನ ಲವಣಾಂಶಗಳು ಸಂಗ್ರಹಗೊಳ್ಳುತ್ತವೆ ಮತ್ತು ಕೆಲವು ಸಂದರ್ಭದಲ್ಲಿ ರಕ್ತವೂ ಸ್ರಾವಗೊಳ್ಳಬಹುದು.

ಸಂಧಿವಾತ ಕಾರಣವಾಗಬಹುದು

ಸಂಧಿವಾತ ಕಾರಣವಾಗಬಹುದು

ಕೆಲವು ಸಂಶೋಧನೆಗಳಲ್ಲಿ ಕಂಡುಕೊಂಡಿರುವ ಪ್ರಕಾರ ನಿಂತೇ ನೀರು ಕುಡಿಯುವುದರಿಂದ ಸಂಧಿವಾತ ಅಥವಾ arthritis ಎದುರಾಗಬಹುದು ಹಾಗೂ ದೇಹದಲ್ಲಿ ದ್ರವಪದಾರ್ಥಗಳ ಸಮತೋಲನವನ್ನೇ ಏರು ಪೇರುಗೊಳಿಸಬಹುದು.ಸಂಧಿವಾತಕ್ಕೆ ಮನೆಮದ್ದು ಇರುವಾಗ, ವೈದ್ಯರ ಹಂಗೇಕೆ?

ಗುಟುಕು ಗುಟುಕಾಗಿ ಕುಡಿಯಿರಿ....

ಗುಟುಕು ಗುಟುಕಾಗಿ ಕುಡಿಯಿರಿ....

ನಮ್ಮ ಹಿರಿಯರು ನಂಬಿಕೊಂಡು ಬಂದಿರುವ ನಂಬಿಕೆಯ ಪ್ರಕಾರ ನೀರನ್ನು ಕುಳಿತೇ ಕುಡಿಯಬೇಕು. ಕುರ್ಚಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದಿದ್ದರೂ ನಿಂತಲೇ ಕುಕ್ಕರುಗಾಲು ಕುಳಿತು ನೀರು ಕುಡಿದ ಬಳಿಕ ಮೇಲೇಳಬೇಕು. ಅಲ್ಲದೇ ನೀರನ್ನು ಗಟಗಟ ಕುಡಿಯಬಾರದು, ಗುಟುಕು ಗುಟುಕಾಗಿ, ಕೊಂಚ ಕೊಂಚವೇ ಕುಡಿಯಬೇಕು. ದೊಡ್ಡ ಗುಟುಕನ್ನು ಒಮ್ಮೆಲೇ ಹೊಟ್ಟೆಗೆ ಕಳುಹಿಸಿದರೆ ಹೊಟ್ಟೆಯೊಳಗೊಂದು ತ್ಸುನಾಮಿಯೇ ಏಳಬಹುದು.

ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿಯಿರಿ

ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿಯಿರಿ

ನಿಮ್ಮ ನೀರು ಕುಡಿಯುವ ಅಭ್ಯಾಸವನ್ನು ನಿಮ್ಮ ಮೂತ್ರದ ಬಣ್ಣವೇ ಸೂಚಿಸುತ್ತದೆ. ಒಂದು ವೇಳೆ ಇದು ಹೆಚ್ಚೂ ಕಡಿಮೆ ಪಾರದರ್ಶಕವಾಗಿದ್ದರೆ ಉತ್ತಮ. ಗಾಢವಾಗಿದ್ದಷ್ಟೂ ನೀರು ಹೆಚ್ಚು ಕುಡಿಯಬೇಕೆಂದು ಅರ್ಥ. ಉತ್ತಮ ಆರೋಗ್ಯಕ್ಕಾಗಿ ಪ್ರತಿ ಗಂಟೆಗೊಮ್ಮೆ ಒಂದು ಲೋಟ ನೀರು ಕುಡಿಯುವುದು ಹಾಗೂ ಪ್ರತಿ ಎರಡು ಗಂಟೆಗಳಿಗೊಮ್ಮೆ ಮೂತ್ರವಿಸರ್ಜಿಸಬೇಕು.ಎಚ್ಚರ: ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!

   
English summary

Is It Bad To Drink Water While Standing?

During your childhood, whenever you tried to drink water while standing, your grandmother must have pestered you to sit and drink water. Though you thought it was just a superstition, this practice seems to have a scientific side to it. Yes, it is better to drink water in the sitting position. Well it doesn't mean that you will face adverse consequences if you drink water in standing position. But still, read on to know why sitting is better and standing is not while drinking water...
Please Wait while comments are loading...
Subscribe Newsletter