ಸಿಂಪಲ್ ಟ್ರಿಕ್ಸ್: ನಾಣ್ಯದಿಂದ 'ಆಹಾರದ ಗುಣಮಟ್ಟ' ಪರೀಕ್ಷಿಸಿ!

Posted By: Hemanth
Subscribe to Boldsky

ಫ್ರಿಜ್‌ನಲ್ಲಿ ಇಡುವಂತಹ ಆಹಾರಗಳನ್ನು ಹೆಚ್ಚು ಬಳಕೆ ಮಾಡಿದರೆ ಅದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹಲವಾರು ಅಧ್ಯಯನಗಳು ಹೇಳುತ್ತಾ ಬಂದಿದೆ. ಆದರೆ ವಾರದಲ್ಲಿ ಒಂದೇ ದಿನ ರಜೆಯಿರುವ ಕಾರಣದಿಂದಾಗಿ ಮಾರುಕಟ್ಟೆಗೆ ಹೋಗಿ ವಾರಕ್ಕೆ ಬೇಕಾಗುವಂತಹ ಎಲ್ಲಾ ರೀತಿಯ ಸಾಮಗ್ರಿಗಳನ್ನು ತಂದು ಫ್ರಿಡ್ಜ್‌ನಲ್ಲಿ ಇಡುತ್ತೇವೆ. ಪ್ರತೀ ದಿನ ಮಾರುಕಟ್ಟೆಗೆ ಹೋಗುವುದು ಇದರಿಂದ ತಪ್ಪುವುದು ನಿಜ. ಆದರೆ ಅಡ್ಡಪರಿಣಾಮಗಳು ಅನೇಕ. ಇನ್ನು ಫ್ರಿಜ್‌ನಲ್ಲಿ ಅಪ್ಪಿತಪ್ಪಿಯೂ ಮೊಟ್ಟೆಗಳನ್ನು ಇಡಬೇಡಿ!

ಅದೇ ಕೆಲವೊಮ್ಮೆ ಒಂದು ವಾರ ಕಾಲ ಮನೆಯಿಂದ ದೂರ ಹೋಗುವ ಸಂದರ್ಭದಲ್ಲಿ ಕೆಲವೊಂದು ಆಹಾರಗಳನ್ನು ಫ್ರೀಜರ್‌ನಲ್ಲಿ ಇಡುತ್ತೇವೆ. ಆಗ ವಿದ್ಯುತ್ ಕಣ್ಣಾಮುಚ್ಚಾಲೆಯಾಡಬಹುದು. ಮರಳಿ ಬಂದಾಗ ಇದು ಉಪಯೋಗಿಸಲು ಯೋಗ್ಯವೇ ಎಂದು ನಮಗೆ ತಿಳಿಯುವುದಿಲ್ಲ. ನಿಮ್ಮ ಆರೋಗ್ಯಕ್ಕೆ ಫ್ರಿಜ್ ಹೀಗಿರಲಿ

ಆದರೆ ಫ್ರೀಜರ್‌ ನಲ್ಲಿ ಇಟ್ಟಂತಹ ಆಹಾರ ಬಳಸಲು ಯೋಗ್ಯವೇ ಎಂದು ತಿಳಿಯಲು ಬೋಲ್ಡ್ ಸ್ಕೈ ನಿಮಗೊಂದು ಉಪಾಯವನ್ನು ಹೇಳಿಕೊಡಲಿದೆ. ಇದನ್ನು ಪ್ರಯೋಗಿಸಿ ನೋಡಿ.... 

ಸಣ್ಣ ಕಪ್‌ನಲ್ಲಿ ನೀರು ತುಂಬಿಸಿಕೊಂಡು ಫ್ರೀಜರ್‌ನಲ್ಲಿಡಿ!

ಸಣ್ಣ ಕಪ್‌ನಲ್ಲಿ ನೀರು ತುಂಬಿಸಿಕೊಂಡು ಫ್ರೀಜರ್‌ನಲ್ಲಿಡಿ!

ಮನೆಯಿಂದ ದೂರ ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಸಮಯ ಪ್ರವಾಸಕ್ಕೆ ಹೋಗುತ್ತಾ ಇದ್ದರೆ ಆಹಾರವನ್ನು ಫ್ರೀಜರ್‌‌ನಲ್ಲಿ ಇಡುವ ಮೊದಲು ನೀವು ಒಂದು ಕೆಲಸ ಮಾಡಬೇಕು. ಸಣ್ಣ ಕಪ್‌ನಲ್ಲಿ ನೀರು ತುಂಬಿಸಿಕೊಂಡು ಅದನ್ನು ಫ್ರೀಜರ್‌ನಲ್ಲಿ ಇಡಿ.

ಒಂದು ರೂಪಾಯಿ ನಾಣ್ಯ

ಒಂದು ರೂಪಾಯಿ ನಾಣ್ಯ

ಅದು ಮಂಜುಗಡ್ಡೆಯಾದ ಬಳಿಕ ತೆಗೆದು ಅದರ ಮೇಲೊಂದು ಒಂದು ರೂಪಾಯಿ ನಾಣ್ಯವನ್ನು ಇಟ್ಟುಬಿಡಿ!

ಒಂದು ರೂಪಾಯಿ ನಾಣ್ಯ

ಒಂದು ರೂಪಾಯಿ ನಾಣ್ಯ

ಪ್ರವಾಸದಿಂದ ಮರಳಿದಾಗ ನಾಣ್ಯವು ಮೇಲಿನ ಭಾಗದಲ್ಲೇ ಇದ್ದರೆ ಕರೆಂಟ್ ಹೋಗಿಲ್ಲ. ನಿಮ್ಮ ಆಹಾರಕ್ಕೆ ಯಾವುದೇ ಸಮಸ್ಯೆಯಾಗಿಲ್ಲವೆಂದರ್ಥ.

ನಾಣ್ಯವು ಮಧ್ಯಭಾಗದಲ್ಲಿ ಇದ್ದರೆ

ನಾಣ್ಯವು ಮಧ್ಯಭಾಗದಲ್ಲಿ ಇದ್ದರೆ

ಒಂದು ವೇಳೆ ನಾಣ್ಯವು ಮಧ್ಯಭಾಗದಲ್ಲಿ ಇದ್ದರೆ ಸ್ವಲ್ಪ ಸಮಯಕ್ಕೆ ಕರೆಂಟ್ ಹೋಗಿ ಮತ್ತೆ ಬಂದಿದೆ ಎಂದು ತಿಳಿಯಿರಿ...ಇದರಿಂದಾಗಿ ಆಹಾರವು ತಾಜಾ ಇದೆ ಎನ್ನಬಹುದು. ನಾಣ್ಯವು ಕಪ್‌ನ ತಳದಲ್ಲಿದ್ದರೆ ಎಲ್ಲಾ ಆಹಾರವನ್ನು ಹೊರಗೆ ಎಸೆಯಿರಿ. ಇದು ತಿನ್ನಲು ಯೋಗ್ಯವಲ್ಲ!

ಆಹಾರವು ತಾಜಾವಾಗಿಲ್ಲವೆಂದು ನಿಮಗೆ ಅನಿಸುತ್ತಾ ಇದ್ದರೆ

ಆಹಾರವು ತಾಜಾವಾಗಿಲ್ಲವೆಂದು ನಿಮಗೆ ಅನಿಸುತ್ತಾ ಇದ್ದರೆ

ಆಹಾರವು ತಾಜಾವಾಗಿಲ್ಲವೆಂದು ನಿಮಗೆ ಅನಿಸುತ್ತಾ ಇದ್ದರೆ ಆಗ ಖಂಡಿತವಾಗಿಯೂ ಆಹಾರವನ್ನು ಹೊರಗೆಸೆಯಿರಿ. ಯಾಕೆಂದರೆ ಈ ಆಹಾರವು ವಿಷವಾಗುವ ಸಾಧ್ಯತೆ ಹೆಚ್ಚಿದೆ.

 

 

English summary

Here's Why You Should Leave a Coin in The Freezer

Sometimes when we’re away from home, the power goes off and we never know about it. However, this can cause food stored in the freezer to defrost and deteriorate. To find out if these food items are as frozen as you left them, use this simple trick before leaving home: fill a cup with water, and put it in the freezer. When it’s frozen, place a coin on the top, and return it to the freezer.