For Quick Alerts
ALLOW NOTIFICATIONS  
For Daily Alerts

  ಇನ್ನು ಫ್ರಿಜ್‌ನಲ್ಲಿ ಅಪ್ಪಿತಪ್ಪಿಯೂ ಮೊಟ್ಟೆಗಳನ್ನು ಇಡಬೇಡಿ!

  By Manu
  |

  ದಿನಕ್ಕೊಂದು ಮೊಟ್ಟೆ ತಿಂದರೆ ದೇಹಕ್ಕೆ ಬೇಕಾಗಿರುವ ಎಲ್ಲಾ ಪೋಷಕಾಂಶಗಳು ಲಭ್ಯವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮೊಟ್ಟೆಯಲ್ಲಿ ಮಕ್ಕಳ ಬೆಳವಣಿಗೆಗೆ ಬೇಕಾಗಿರುವ ಎಲ್ಲಾ ರೀತಿಯ ಪೋಷಕಾಂಶಗಳು ಇದೆ. ಮೊಟ್ಟೆಯನ್ನು ತಿಂದರೆ ದೇಹಕ್ಕೆ ಅಗತ್ಯವಿರುವ ವಿಟಮಿನ್, ಖನಿಜಾಂಶಗಳು ನಮಗೆ ಲಭ್ಯವಾಗುತ್ತದೆ. ಅದರಲ್ಲೂ ನಾಟಿ ಕೋಳಿಯ ಮೊಟ್ಟೆಯು ದೇಹಕ್ಕೆ ತುಂಬಾ ಒಳ್ಳೆಯದು ಎನ್ನಲಾಗುತ್ತದೆ.  ಸಿಂಪಲ್ಲಾಗಿ ಒಂದು ಮೊಟ್ಟೆ ಸಾರು

  ಭಾರತದಲ್ಲಿ ಹೆಚ್ಚಾಗಿ ಕೋಳಿ ಹಾಗೂ ಬಾತುಕೋಳಿಯ ಮೊಟ್ಟೆಗಳನ್ನು ಸೇವನೆ ಮಾಡುತ್ತಾರೆ. ಆದರೆ ವಿದೇಶದಲ್ಲಿ ಕೋಳಿ, ಬಾತುಕೋಳಿ, ಟರ್ಕಿ ಮುಂತಾದ ಪಕ್ಷಿಗಳ ಮೊಟ್ಟೆಗಳನ್ನು ಸೇವನೆ ಮಾಡುತ್ತಾರೆ. ಬೆಳಗಿನ ಉಪಹಾರಕ್ಕೆ ಮೊಟ್ಟೆಯನ್ನು ಸೇವನೆ ಮಾಡಿದರೆ ಇಡೀ ದಿನಕ್ಕೆ ಬೇಕಾಗುವ ಶಕ್ತಿಯು ನಮ್ಮ ದೇಹಕ್ಕೆ ಒದಗುತ್ತದೆ.  ಅತ್ಯಂತ ಆರೋಗ್ಯಕರವಾದ 8 ಬಗೆಯ ಮೊಟ್ಟೆಗಳು

  ಮೊಟ್ಟೆಯು ಸ್ನಾಯುಗಳನ್ನು ದೃಢಗೊಳಿಸುವುದು ಮಾತ್ರವಲ್ಲದೆ ಮೂಳೆಗಳನ್ನು ರಕ್ಷಿಸಿ ಫಲವತ್ತತೆಯನ್ನು ಹೆಚ್ಚಿಸುವುದು. ಆದರೆ ಇಂದಿನ ದಿನಗಳಲ್ಲಿ ಮೊಟ್ಟೆಯನ್ನು ತಂದು ಫ್ರಿಜ್‌ನಲ್ಲಿ ಅಥವಾ ರೆಫ್ರಿಜರೇಟರ್‌ನಲ್ಲಿಡುವುದರಿಂದ ಅದರಲ್ಲಿ ಇರುವಂತಹ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದಿಲ್ಲ. ಫ್ರಿಜ್‌ನಲ್ಲಿಡುವ ಮೊಟ್ಟೆಯು ವಿಷಕಾರಿಯಾಗುವ ಸಾಧ್ಯತೆಯು ಇದೆ. ಇದು ಹೇಗೆಂದು ಮುಂದೆ ಓದುತ್ತಾ ತಿಳಿಯಿರಿ...  

  ಫ್ರಿಜ್‌ನಲ್ಲಿ ಮೊಟ್ಟೆಯನ್ನಿಟ್ಟರೆ ಏನಾಗುತ್ತದೆ?

  ಫ್ರಿಜ್‌ನಲ್ಲಿ ಮೊಟ್ಟೆಯನ್ನಿಟ್ಟರೆ ಏನಾಗುತ್ತದೆ?

  ಹೆಚ್ಚಾಗಿ ನಾವು ತರಕಾರಿ, ಹಣ್ಣು, ಮಾಂಸ, ತಯಾರಿಸಿದ ಆಹಾರ ಮತ್ತು ಮೊಟ್ಟೆಯನ್ನು ಫ್ರಿಜ್‌‌ನಲ್ಲಿ ಇಡುವುದು ರೂಢಿಯಾಗಿದೆ. ಇದು ದೀರ್ಘ ಕಾಲದ ತನಕ ತಾಜಾವಾಗಿರಲಿ ಎನ್ನುವುದೇ ನಮ್ಮ ಉದ್ದೇಶವಾಗಿರುತ್ತದೆ.

  ಪೋಷಕಾಂಶಗಳು ಕಡಿಮೆಯಾಗುತ್ತದೆಯಂತೆ!

  ಪೋಷಕಾಂಶಗಳು ಕಡಿಮೆಯಾಗುತ್ತದೆಯಂತೆ!

  ಆದರೆ ಮೊಟ್ಟೆಯನ್ನು ತುಂಬಾ ತಂಪಾದ ಜಾಗದಲ್ಲಿ ಶೇಖರಿಸಿ ಇಡುವುದರಿಂದ ಅದರಲ್ಲಿನ

  ಪೋಷಕಾಂಶಗಳು ಕಡಿಮೆಯಾಗುತ್ತದೆ ಎಂದು ಇತ್ತೀಚೆಗೆ ಜರ್ನಲ್ ಆಫ್ ಫುಡ್ ಪ್ರೊಟೆಕ್ಷನ್ ನಲ್ಲಿ ಬಂದ ಅಧ್ಯಯನವೊಂದು ಹೇಳಿದೆ.

  ಆರೋಗ್ಯಕ್ಕೆ ಮಾರಕ!

  ಆರೋಗ್ಯಕ್ಕೆ ಮಾರಕ!

  ಮೊಟ್ಟೆಯನ್ನು ಫ್ರಿಜ್‌ನಲ್ಲಿ ಶೇಖರಿಸಿ ಇಟ್ಟಾಗ ಅದರಲ್ಲಿರುವ ಕೆಲವೊಂದು ಖಿನಿಜಾಂಶಗಳು ಮತ್ತು ಪ್ರಮುಖ ಕಿಣ್ವಗಳು ಮಾನವ ದೇಹಕ್ಕೆ ಲಾಭವನ್ನು ಉಂಟು ಮಾಡುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತವೆ. ಯಾಕೆಂದರೆ ತಂಪಾದ ವಾತಾವರಣವು ಕಿಣ್ವಗಳನ್ನು ಕೊಂದು ಹಾಕುವುದು.

  ಹೊಟ್ಟೆನೋವು, ಟೈಪಾಯ್ಡ್ ರೋಗ ಕೂಡ ಬರಬಹುದು!

  ಹೊಟ್ಟೆನೋವು, ಟೈಪಾಯ್ಡ್ ರೋಗ ಕೂಡ ಬರಬಹುದು!

  ಫ್ರಿಜ್‌ನಲ್ಲಿ ಇಡುವಂತಹ ಮೊಟ್ಟೆಗಳಲ್ಲಿ ಸಾಲ್ಮೊನೆಲ್ಲಾ ಎನ್ನುವ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳಬಹುದು. ಇದು ದೇಹಕ್ಕೆ ಹಾನಿಕಾರಕ.

  ಮೊಟ್ಟೆಗಳನ್ನು ತಾಜಾವಾಗಿರುವಾಗಲೇ ಬಳಸಿ

  ಮೊಟ್ಟೆಗಳನ್ನು ತಾಜಾವಾಗಿರುವಾಗಲೇ ಬಳಸಿ

  ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾವು ಹೊಟ್ಟೆನೋವು, ಟೈಪಾಯ್ಡ್ ಇತ್ಯಾದಿ ರೋಗಗಳಿಗೆ ಕಾರಣವಾಗಬಹುದು. ಮೊಟ್ಟೆಯನ್ನು ಫ್ರಿಜ್‌ನಲ್ಲಿ ಇಡುವ ಬದಲು ಹೊರಗಡೆ ಇಟ್ಟುಕೊಂಡು ಅದು ತಾಜಾವಾಗಿರುವಾಗಲೇ ಬಳಸಿ.

   

  English summary

  Here Is Why You Must Never Store Eggs In The fridge!

  As most of us may know by now, egg is an extremely nutritious food that comes with numerous health benefits and what more; many tasty dishes can be made out of eggs!Since time immemorial, eggs obtained from hens have been widely used in preparing dishes that can be consumed by anyone, regardless of age and gender.
  Story first published: Tuesday, January 31, 2017, 23:28 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more