For Quick Alerts
ALLOW NOTIFICATIONS  
For Daily Alerts

ನಿಮ್ಮ ಆರೋಗ್ಯಕ್ಕೆ ಫ್ರಿಜ್ ಹೀಗಿರಲಿ

By Super
|

ನಿಮ್ಮ ಮನೆಯಲ್ಲಿ ಬೆಳಗ್ಗೆಯೇ ತರುವ ಹಾಲಿನಿಂದ ಹಿಡಿದು, ರಾತ್ರಿ ಉಳಿದ ಚಪಾತಿ ಹಿಟ್ಟಿನವರೆಗು ಎಲ್ಲವು ಹೋಗಿ ಸೇರುವುದು ರೆಫ್ರಿಜರೇಟರಿಗೆ. ಇದರಲ್ಲಿ ಮನೆಗೆ ತರುವ ಬಹುತೇಕ ತಿಂಡಿಗಳು ತಮ್ಮ ಆಶ್ರಯವನ್ನು ಪಡೆಯುತ್ತವೆ. ಹೂಗಳು, ತರಕಾರಿಗಳು, ಪಾನೀಯಗಳು, ಔಷಧಿಗಳು, ಹಣ್ಣುಗಳು ಅಬ್ಬಾ! ಒಂದ ಎರಡಾ ರೆಫ್ರಿಜರೇಟರಿನಲ್ಲಿ ಎಷ್ಟೆಲ್ಲ ವಸ್ತುಗಳನ್ನು ತುಂಬಬಹುದು ಎಂದು ಪಟ್ಟಿ ತಯಾರಿಸಿದರೆ ಅದೇ ಒಂದು ಸಣ್ಣ ಕತೆಯಾಗಿ ಬಿಡುತ್ತದೆ.

ಹೀಗಾಗಿ ರೆಫ್ರಿಜರೇಟರ್ ನಿಮ್ಮ ಅಡುಗೆ ಮನೆಯ ಬೆನ್ನೆಲುಬು ಎಂದು ಹೇಳಬಹುದು. ಸಾಧಾರಣವಾಗಿ ಒಬ್ಬ ವ್ಯಕ್ತಿಯನ್ನು ಅವರ ಮನೆಯಲ್ಲಿರುವ ರೆಫ್ರಿಜರೇಟರ್ ಆಧಾರದ ಮೇಲೆ ನಿರ್ಧರಿಸಬಹುದು. ಆರೋಗ್ಯಕಾರಿ ಜೀವನಶೈಲಿಯನ್ನು ಆರಂಭಿಸಬೇಕು ಎಂದರೆ ಮೊದಲು ರೆಫ್ರಿಜರೇಟರಿನಿಂದ ಆರಂಭಿಸಬೇಕು. ಇಲ್ಲಿ ನಾವು ನಿಮಗಾಗಿ 7 ಆರೋಗ್ಯಕರವಾದ ರೆಫ್ರಿಜರೇಟರ್ ನಿರ್ವಹಣಾ ಸಲಹೆಗಳನ್ನು ನೀಡಿದ್ದೇವೆ ಓದಿ.

1. ಕುರುಕಲು ತಿಂಡಿಗಳಿಂದ ವಿಮುಕ್ತರಾಗಿ

1. ಕುರುಕಲು ತಿಂಡಿಗಳಿಂದ ವಿಮುಕ್ತರಾಗಿ

ಆರೋಗ್ಯಕರವಾದ ರೆಫ್ರಿಜಿರೇಟರನ್ನು ನಿರ್ವಹಿಸಲು ಮಾಡ ಬೇಕಾದ ಮೊದಲ ಕೆಲಸ- ನಿಮ್ಮ ರೆಫ್ರಿಜಿರೇಟರನ್ನು ಒಮ್ಮೆ ಪರೀಕ್ಷಿಸಿ. ಅದರಲ್ಲಿ ನಿಮ್ಮ ಗಮನಕ್ಕೆ ಬಂದ ಅಥವಾ ಬಾರದ ಎಲ್ಲಾ ಜಾಡಿಗಳನ್ನು ಪರೀಕ್ಷಿಸಿ. ಯಾವುದೇ ರೀತಿಯಾದ ಕುರುಕಲು ತಿಂಡಿಗಳು, ರೆಡಿ-ಟು- ಈಟ್ ಫ್ರೈಗಳು ಮತ್ತು ಜೆಲ್ಲ್-ಒ ಗಳನ್ನು, ಕೊಬ್ಬಿನಂಶ ಇರುವ ಪದಾರ್ಥಗಳನ್ನು ಸಂಗ್ರಹಿಸಲೇ ಬೇಡಿ. ಆಗ ಅನಿವಾರ್ಯವಾಗಿ ನೀವು ಆರೋಗ್ಯಕಾರಿ ಆಹಾರಗಳನ್ನು ಸೇವಿಸಲು ಆರಂಭಿಸುತ್ತೀರಿ.

2. ನಿರಂತರವಾಗಿ ಪರೀಕ್ಷಿಸಿ

2. ನಿರಂತರವಾಗಿ ಪರೀಕ್ಷಿಸಿ

ಪ್ರತಿ ತಿಂಗಳು ನಿಮ್ಮ ರೆಫ್ರಿಜಿರೇಟರಿನಲ್ಲಿರುವ ಆಹಾರ ಪದಾರ್ಥಗಳನ್ನು ಪರೀಕ್ಷಿಸುತ್ತಿರಿ. ಯಾವುದು ಆರೋಗ್ಯಕರ ಮತ್ತು ಯಾವುದು ಅನಾರೋಗ್ಯಕರ ಎಂದು ಪರೀಕ್ಷಿಸುತ್ತಿರಿ. ಆದಷ್ಟು ಕಡಿಮೆ ಕೊಬ್ಬಿನ, ಹೆಚ್ಚು ನಾರಿನಂಶದಿಂದ ಕೂಡಿರುವ ಮತ್ತು ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುವ ಆಹಾರಗಳನ್ನು ಸಂಗ್ರಹಿಸಿ. ಆದಷ್ಟು ಕುರುಕಲು ತಿಂಡಿಗಳನ್ನು ಸಂಗ್ರಹಿಸುವುದನ್ನು ಕಡಿಮೆ ಮಾಡಿ.

3. ಡೆಸರ್ಟ್ ಗಳನ್ನು ಮುಚ್ಚಿಡಿ

3. ಡೆಸರ್ಟ್ ಗಳನ್ನು ಮುಚ್ಚಿಡಿ

"ಕಣ್ಣಿಂದ ದೂರವಾದರೆ, ಮನಸ್ಸಿನಿಂದ ದೂರವಾದಂತೆ" ಎಂಬ ತಂತ್ರವು ನಿಮ್ಮ ಅಚ್ಚು ಮೆಚ್ಚಿನ ಡೆಸರ್ಟ್ ಗಳ ವಿಚಾರದಲ್ಲಿ ನಿಜವಾಗುತ್ತದೆ. ನಿಮಗೆ ಇಷ್ಟವೆನಿಸುವ ಆದರೆ ಆರೋಗ್ಯದ ದೃಷ್ಟಿಯಿಂದ ಹಾನಿಕಾರಕವಾದ ವಸ್ತುಗಳನ್ನು ಒಂದು ಮುಚ್ಚಿದ ಕಂಟೇನರಿನಲ್ಲಿ ಹಾಕಿ. ಇದನ್ನು ನಿಮ್ಮ ರೆಫ್ರಿಜಿರೇಟರಿನ ಹಿಂಬದಿಯಲ್ಲಿ ಅವಿತಿಡಿ. ಅದರ ಬದಲಿಗೆ ನಿಮ್ಮ ರೆಫ್ರಿಜಿರೇಟರನ್ನು ತೆರೆದ ಕೂಡಲೆ ಹಣ್ಣು, ತರಕಾರಿ ಮುಂತಾದ ಆರೋಗ್ಯಕಾರಿ ಅಂಶಗಳು ಕಣ್ಣಿಗೆ ಬೀಳುವಂತೆ ಇಡಿ. ಇದರಿಂದ ನಿಮ್ಮ ತಿನ್ನುವ ಚಪಲವು ಸಹ ಸ್ವಲ್ಪ ಕಡಿಮೆಯಾಗುತ್ತದೆ.

4. ಆಹಾರ ಪದಾರ್ಥಗಳಲ್ಲಿ ಬದಲಿ ವ್ಯವಸ್ಥೆ ಮಾಡಿ

4. ಆಹಾರ ಪದಾರ್ಥಗಳಲ್ಲಿ ಬದಲಿ ವ್ಯವಸ್ಥೆ ಮಾಡಿ

ನಿಮ್ಮ ಮತ್ತು ನಿಮ್ಮ ಕುಟುಂಬ ಸದಸ್ಯರ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಬದಲಿ ವ್ಯವಸ್ಥೆಗಳನ್ನು ರೆಫ್ರಿಜಿರೇಟನಲ್ಲಿ ಮಾಡಿ. ಅಂದರೆ ತಾಜಾ ಹಾಲಿನ ಬದಲಿಗೆ ಕೆನೆ ತೆಗೆದ ಹಾಲು, ಕೊಬ್ಬಿನಂಶವನ್ನು ಹೊಂದಿರುವ ಬೆಣ್ಣೆಯ ಬದಲಿಗೆ ಕೃತಕ ಬೆಣ್ಣೆ ( ಮಾರ್ಗರಿನ್ ), ಕೆಂಪು ಮಾಂಸದ ಬದಲಿಗೆ ಎಳೆಯ ಮಾಂಸ ಅಥವಾ ಮೀನುಗಳನ್ನು ನಿಮ್ಮ ರೆಫ್ರಿಜಿರೇಟರಿನಲ್ಲಿ ಇಡಿ. ಹೀಗೆ ಆರೋಗ್ಯಕಾರಿ ಅಂಶಗಳನ್ನು ಒಂದೊಂದಾಗಿ ಬದಲಿಯಾಗಿ ತರುವುದರಿಂದ ನಿಮ್ಮ ಕುಟುಂಬ ಸದಸ್ಯರ ಆರೋಗ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ನೀವು ಕಾಣಬಹುದು. ಯಾವುದೇ ಆಹಾರ ಪದಾರ್ಥಗಳನ್ನು ಕೊಳ್ಳುವಾಗ ಇದ್ದುದ್ದರಲ್ಲಿಯೇ ಕಡಿಮೆ ಕೊಬ್ಬಿನ ಅಥವಾ ಕೊಬ್ಬು ರಹಿತ ಆಹಾರಗಳನ್ನು ಖರೀದಿಸುವುದು ಜಾಣತನ.

5. ನಿಮ್ಮ ರೆಫ್ರಿಜಿರೇಟರಿನಲ್ಲಿ ಜಾರಿಗೆ ತನ್ನಿ ವರ್ಣ ಸಂಹಿತೆ!

5. ನಿಮ್ಮ ರೆಫ್ರಿಜಿರೇಟರಿನಲ್ಲಿ ಜಾರಿಗೆ ತನ್ನಿ ವರ್ಣ ಸಂಹಿತೆ!

ನಮಗೆ ನೀತಿ ಸಂಹಿತೆ, ವಸ್ತ್ರ ಸಂಹಿತೆ ಗೊತ್ತು ಇದು ಯಾವುದಪ್ಪ ವರ್ಣ ಸಂಹಿತೆ ಎಂದು ಕೊಂಡಿರಾ? ಹೌದು ಇದು ನಿಮ್ಮ ರೆಫ್ರಿಜಿರೇಟರಿನಲ್ಲಿ ಬಳಕೆಯಾಗುವ ಆಹಾರ ವಸ್ತುಗಳನ್ನು ತಕ್ಷಣ ಗುರುತಿಸಲು ನೀವೇ ಜಾರಿಗೆ ತಂದ ಸಂಹಿತೆ. ನೀವು ಬ್ರಹ್ಮಚಾರಿಯಾಗಿರಿ ಅಥವಾ ಸಂಸಾರಸ್ಥರಾಗಿರಿ. ಯಾರಿಗೆ ಆಗಲಿ ತಮ್ಮ ಆರೋಗ್ಯವು ಮಹಾ ಭಾಗ್ಯವಾಗಿಯೇ ಇರುತ್ತದೆ. ಹಾಗಾಗಿ ಇನ್ನು ಮುಂದೆ ನಿಮ್ಮ ರೆಫ್ರಿಜಿರೇಟರಿನಲ್ಲಿ ಕೆಲವು ಆಹಾರಗಳನ್ನು ಸಂಗ್ರಹಿಸುವ ಮೊದ.ಲು ಅವುಗಳನ್ನು ವರ್ಗೀಕರಣ ಮಾಡಿ. ಎಲ್ಲಾ ಆಹಾರ ಪದಾರ್ಥಗಳಿಗು ನಿಮ್ಮದೇ ಆದ ಕೋಡ್ ಇರಲಿ. ಅದಕ್ಕಾಗಿ ನಕ್ಷತ್ರಾಕಾರಗಳನ್ನು, ಹೃದಯದ ಚಿಹ್ನೆಗಳನ್ನು ಬಳಸಿ. ಉದಾಹರಣೆಗೆ ;- ಹೃದಯಕ್ಕೆ ಪೂರಕವಾದ ಆಹಾರಗಳಿಗೆ ಹಸಿರು ಬಣ್ಣವನ್ನು, ಆರೋಗ್ಯಕ್ಕೆ ಪೂರಕವಲ್ಲದವುಗಳಿಗೆ ಕೆಂಪು ಬಣ್ಣವನ್ನು ಹಚ್ಚಿ. ಇದರಿಂದ ನಿಮಗೆ ಅವುಗಳ ಪ್ರಭಾವ ಬೇಗ ಅರಿವಾಗುತ್ತದೆ.

6. ಬೆರೆಸಿ ಮತ್ತು ಹೊಂದಿಸಿ

6. ಬೆರೆಸಿ ಮತ್ತು ಹೊಂದಿಸಿ

ನಿಮ್ಮ ರೆಫ್ರಿಜರೇಟರಿನಲ್ಲಿ ಆರೋಗ್ಯಕಾರಿ ವಾತಾವರಣವನ್ನು ನಿರ್ಮಿಸುವ ಸಲುವಾಗಿ ನೀವು ಆಹಾರ ಸಂಗ್ರಹಣೆಯನ್ನೆ ಬಿಟ್ಟು ಬಿಡಬೇಕಾಗಿಲ್ಲ. ಅದರ ಬದಲಿಗೆ ನಿಮ್ಮ ರೆಫ್ರಿಜರೇಟರಿನಲ್ಲಿ ರುಚಿಯಾದ ಆಹಾರದ ಬದಲಿಗೆ ಸ್ವಲ್ಪ ಮಟ್ಟಿಗೆ ಆರೋಗ್ಯಕಾರಿ ಆಹಾರಗಳನ್ನು ಸಂಗ್ರಹಿಸಿ ಎಂದು ಹೇಳುತ್ತೇವೆ. ಹಾಗಾಗಿ ಕಡಿಮೆ ಕೊಬ್ಬಿರುವ ಯೋಗರ್ಟ್ ಜೊತೆಗೆ ಕೆಲವು ಒಣ ಹಣ್ಣುಗಳ ಮಿಶ್ರಣವನ್ನು ಇಡಿ ಅಥವಾ ಹೀಗಾಗಲೆ ಮಿಶ್ರಣಗೊಂಡು ಬಂದಿರುವ ಕೆನೆತೆಗೆದ ಹಾಲಿನಲ್ಲಿ ಮಾಡಿದ ಚಾಕೊಲೆಟ್‍ಗಳನ್ನು ಇಡಿ. ಹೀಗೆ ನಿಮ್ಮ ರೆಫ್ರಿಜಿರೇಟರಿನಲ್ಲಿ ಬೇರೆ ಬೇರೆ ಬಗೆಯ ಆರೋಗ್ಯಕಾರಿ ಅಂಶಗಳನ್ನು ಸೇರಿಸಿ.

7.ಫ್ರೋಜನ್ ಹಣ್ಣುಗಳು

7.ಫ್ರೋಜನ್ ಹಣ್ಣುಗಳು

ಐಸ್ ಕ್ರೀಮ್‍ಗಳಿಗೆ ಬದಲಿಯಾಗಿ ಬಳಸಲ್ಪಡುವ ಫ್ರೋಜನ್ ಹಣ್ಣುಗಳು ರುಚಿಕರವಾಗಿದ್ದು, ಮಕ್ಕಳ ತಿನ್ನುವ ಚಪವನ್ನಷ್ಟೇ ಅಲ್ಲದೆ ಅವರ ಆರೋಗ್ಯಕ್ಕು ಸಹ ಉಪಾಕಾರಿಯಾಗಿರುತ್ತವೆ. ಇನ್ನೇಕೆ ತಡ ಬಾಳೆ ಹಣ್ಣು, ಕಿತ್ತಳೆ ಮತ್ತು ದ್ರಾಕ್ಷಿಯ ಹೋಳುಗಳನ್ನು ಫ್ರೀಜ್ ಮಾಡಿ, ಸಿಹಿ ತಿನಿಸನ್ನು ತಯಾರಿಸಿ ನಿಮ್ಮ ಮಕ್ಕಳು ಐಸ್ ಕ್ರೀಮ್ ಕೇಳಿದಾಗ ಕೊಡಿ. ನಮ್ಮ ರೆಫ್ರಿಜರೇಟರುಗಳು ನಮ್ಮ ಆರೋಗ್ಯ ಮತ್ತು ಸದೃಢತೆಯನ್ನು ಬಿಂಬಿಸುತ್ತವೆ. ಹಾಗಾಗಿ ಆರೋಗ್ಯಕಾರಿ ರೆಫ್ರಿಜರೇಟರನ್ನು ನಿರ್ವಹಿಸುವುದರಿಂದಾಗಿ ನಿಮ್ಮ ಜೀವನದಲ್ಲಿ ಮತ್ತಷ್ಟು ಆರೋಗ್ಯವನ್ನು ದಕ್ಕಿಸಿಕೊಳ್ಳಬಹುದು.

English summary

7 Ways to Maintain a Healthy Fridge

A refrigerator is the backbone of your kitchen – and you can actually judge a person by the contents of their fridge. One of the foundations of starting off a healthy lifestyle is to get your fridge in order. Here, we bring to you the 7 ways to maintain a Healthy Fridge.
Story first published: Wednesday, September 11, 2013, 17:52 [IST]
X
Desktop Bottom Promotion