ಬೇ ಎಲೆಗಳನ್ನು ಕುದಿಸಿ ತಯಾರಿಸಿದ 'ಚಹಾ' ಆರೋಗ್ಯಕ್ಕೆ ದುಪ್ಪಟ್ಟು ಲಾಭ

By: Arshad
Subscribe to Boldsky

ಬೇ ಎಲೆಗಳನ್ನು ಸಾಮಾನ್ಯವಾಗಿ ನಾವು ಪಲಾವ್‌ನಲ್ಲಿ ಉಪಯೋಗಿಸುತ್ತೇವೆ. ಆದರೆ ಇವನ್ನು ಕುದಿಸಿ ತಯಾರಿಸಿದ ಟೀ ಕುಡಿಯುವ ಮೂಲಕ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಟೀ ಯಲ್ಲಿ ಈಗಾಗಲೇ ಹಲವಾರು ವಿಧಗಳಿರುವಾಗ ಈ ಬೇ ಎಲೆಯ ಟೀ ಏಕೆ? ಇದಕ್ಕೆ ಉತ್ತರ ಇದರಲ್ಲಿರುವ ವಿಟಮಿನ್ ಸಿ ಮತ್ತು ವಿಟಮಿನ್ ಎ. ಬೇರಾವ ಟೀಯಲ್ಲಿಯೂ ಇಷ್ಟು ಪ್ರಮಾಣದ ಪೋಷಕಾಂಶಗಳು ದೊರಕುವುದಿಲ್ಲ. ಅಲ್ಲದೇ ಇದರಲ್ಲಿರುವ ಫೋಲಿಕ್ ಆಮ್ಲ, ತಾಮ್ರ, ಸೆಲೆನಿಯಂ, ಕಬ್ಬಿಣ, ಸತು, ಮ್ಯಾಂಗನೀಸ್, ಮೆಗ್ನೀಶಿಯಂ, ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ.

ಈ ಪೋಷಕಾಂಶಗಳು ಮಾತ್ರವೇ ಈ ಟೀ ಸೇವಿಸಲು ಪ್ರಮುಖ ಕಾರಣವೇ? ಅಲ್ಲ, ಇನ್ನೂ ಕೆಲವಾರು ಪ್ರಯೋಜನಗಳಿವೆ. ಇದಕ್ಕೂ ಮೊದಲು ಈ ಟೀ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ. ಮೊದಲು ಮೂರು ಲೋಟ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಹತ್ತು ಬೇ ಎಲೆಗಳನ್ನು ಹಾಕಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿಯನ್ನು ತಗ್ಗಿಸಿ ನೀವು ಆವಿಯಾಗಲು ಬಿಡಿ.

ಈ ನೀರು ಸುಮಾರು ಒಂದು ಲೋಟದಷ್ಟಾಗುವವರೆಗೆ ಮುಂದುವರೆಸಿ. ಬಳಿಕ ಈ ನೀರನ್ನು ಸೋಸಿ ಪ್ರತಿದಿನದ ಮಧ್ಯಾಹ್ನದ ಹಾಗೂ ರಾತ್ರಿಯ ಊಟದ ಮುನ್ನ ಕುಡಿಯಿರಿ. ಇದರಿಂದ ಪ್ರಮುಖವಾಗಿ ರಕ್ತದಲ್ಲಿ ಸಕ್ಕರೆಯ ಮಟ್ಟ ಸಮತೋಲನದಲ್ಲಿರುತ್ತದೆ. ಬನ್ನಿ, ಈ ಟೀ ಕುಡಿಯುವ ಪ್ರಯೋಜನಗಳ ಬಗ್ಗೆ ಅರಿಯೋಣ...

ಮಧುಮೇಹಿಗಳಿಗೆ ಉತ್ತಮ

ಮಧುಮೇಹಿಗಳಿಗೆ ಉತ್ತಮ

ಈ ಟೀ ಮಧುಮೇಹಿಗಳಿಗೆ ಉತ್ತಮವಾಗಿದ್ದು ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ದೇಹದಲ್ಲಿ ನೈಸರ್ಗಿಕವಾಗಿ ಇನ್ಸುಲಿನ್ ಉತ್ಪತ್ತಿಯಾಗಲು ನೆರವಾಗುವ ಮೂಲಕ ಮಧುಮೇಹವನ್ನು ನಿಯಂತ್ರಣದಲ್ಲಿರಿಸುತ್ತದೆ.

ಹೃದಯ

ಹೃದಯ

ಈ ಎಲೆಗಳಲ್ಲಿರುವ ಪೋಷಕಾಂಶಗಳು ಹೃದಯದ ಕ್ಷಮತೆಯನ್ನು ಹೆಚ್ಚಿಸಿ ಹೃದಯಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತವೆ. ಇದರಲ್ಲಿರುವ ಕ್ಯಾಫೆಟಿಕ್ ಆಮ್ಲ, ಸ್ಯಾಲಿಸೈಕ್ಲೇಟ್ ಹಾಗೂ ರ್‍ಯೂಟಿನ್ ಎಂಬ ಫೈಟೋ ನ್ಯೂಟ್ರಿಯೆಂಟುಗಳು ಹೃದಯದ ಆರೋಗ್ಯ ಕಾಪಾಡಲು ನೆರವಾಗುತ್ತವೆ.

ನೋವು ನಿವಾರಕ

ನೋವು ನಿವಾರಕ

ಸಂಧಿವಾತ, ಉಳುಕು ಮೊದಲಾದ ಕಾರಣಗಳಿಂದ ಮೂಳೆಗಳ ಸಂಧುಗಳಲ್ಲಿ ಎದುರಾಗುವ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಈ ಎಲೆಗಳಿಂದ ಬಸಿದ ಎಣ್ಣೆಯನ್ನು ನೋವಿರುವ ಭಾಗದ ಮೇಲೆ ಹಚ್ಚಿಕೊಳ್ಳುವ ಮೂಲಕ ನೋವು ಕಡಿಮೆಯಾಗುತ್ತದೆ. ಜೊತೆಗೇ ಈ ಟೀಯನ್ನು ಸಹಾ ನಿಯಮಿತವಾಗಿ ಕುಡಿಯುವ ಮೂಲಕ ನೋವು ಶೀಘ್ರವಾಗಿ ಕಡಿಮೆಯಾಗುತ್ತದೆ.

ಕೆಮ್ಮು

ಕೆಮ್ಮು

ಈ ಟೀ ಕುಡಿಯುವ ಮೂಲಕ ಹಾಗೂ ಈ ಎಲೆಗಳನ್ನು ಬಿಸಿನೀರಿನಲ್ಲಿ ಕುದಿಸಿ ಹಬೆಯನ್ನು ಸೇವಿಸುವ ಮೂಲಕ ಕೆಮ್ಮು ಹಾಗೂ ಶ್ವಾಸನಾಳಗಳಲ್ಲಿ ಉಂಟಾಗಿದ್ದ ಸೋಂಕುಗಳನ್ನು ನಿವಾರಿಸಲು ನೆರವಾಗುತ್ತದೆ. ಪರಿಣಾಮವಾಗಿ ಶೀತ ಹಾಗೂ ಫ್ಲೂ ಜ್ವರವೂ ಕಡಿಮೆಯಾಗುತ್ತದೆ.

ಮೂತ್ರಪಿಂಡಗಳು

ಮೂತ್ರಪಿಂಡಗಳು

ಒಂದು ವೇಳೆ ನಿಮಗೆ ಮೂತ್ರಪಿಂಡಗಳಲ್ಲಿ ಕಲ್ಲುಗಳಿರುವ ತೊಂದರೆ ಇದ್ದರೆ ಈ ಟೀ ಅತ್ಯುತ್ತಮ ಆಯ್ಕೆಯಾಗಿದೆ. ಆದರೆ ನಿಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯುವುದು ಅಗತ್ಯ.

ಯೂರಿಕ್ ಆಮ್ಲ

ಯೂರಿಕ್ ಆಮ್ಲ

ದಿನಕ್ಕೆರಡು ಬಾರಿ ಈ ಟೀ ಸೇವಿಸುವುದರಿಂದ ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟ ಸಮತೋಲದಲ್ಲಿರುತ್ತದೆ ಹಾಗೂ ಈ ಮೂಲಕ ಎದುರಾಗಿದ್ದ ತೊಂದರೆಗಳು ಇಲ್ಲವಾಗುತ್ತವೆ.

ಮಲಬದ್ಧತೆ

ಮಲಬದ್ಧತೆ

ಒಂದು ವೇಳೆ ಮಲಬದ್ಧತೆಯ ತೊಂದರೆ ಇದ್ದರೆ ಈ ಟೀ ಕುಡಿಯುವ ಮೂಲಕ ಉತ್ತಮ ಪರಿಹಾರ ದೊರಕುತ್ತದೆ. ಇದಕ್ಕಾಗಿ ದಿನಕ್ಕೆರಡು ಲೋಟ ಟೀ ಕುಡಿಯುವುದು ಪರಿಣಾಮಕಾರಿಯಾಗಿದೆ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಈ ಟೀ ಕುಡಿಯುವ ಮೂಲಕ ಅಧಿಕ ರಕ್ತದೊತ್ತಡ ಕಡಿಮೆಯಾಗಿ ಸಾಮಾನ್ಯ ಹಂತಕ್ಕೆ ಬರುತ್ತದೆ. ಅಲ್ಲದೇ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುತ್ತದೆ.

English summary

Here’s Why You Must Try Bay Leaf Tea!

Are these the only reasons to try bay leaf tea? No, there are so many other health benefits. But, how to make bay leaf tea? Pour 3 glasses of water in a vessel and add 10 bay leaves. Boil the water until water evaporates and only one glass of water remains. Strain and drink it before noon meal and nigh meal. Your blood sugar levels can remain under control. Now, just take a look at the bay leaf tea benefits.
Story first published: Monday, August 7, 2017, 23:48 [IST]
Subscribe Newsletter