ಆರೋಗ್ಯ ಟಿಪ್ಸ್: ಹುಲ್ಲಿನ ಮೇಲಿನ ನಡಿಗೆ, ಆರೋಗ್ಯದ ಕಡೆಗೆ...

By: Hemanth
Subscribe to Boldsky

ವಾರಾಂತ್ಯ ಬಂದರೆ ಸಾಕು ಪ್ರತಿಯೊಬ್ಬರು ಒಂದೆರಡು ದಿನಗಳ ಕಾಲ ನಗರದ ಜಂಜಾಟದಿಂದ ದೂರ ಹೋಗಿ ಪ್ರಕೃತಿಯ ಸೌಂದರ್ಯವನ್ನು ಸವಿಯಬೇಕೆಂದು ಬಯಸುತ್ತಾರೆ. ನಗರದ ಟ್ರಾಫಿಕ್, ಕಲುಷಿತ ವಾತಾವರಣ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕಾಗಿ ಪ್ರತೀದಿನ ಸ್ವಲ್ಪ ದೂರ ನಡೆಯಬೇಕೆಂದು ಪ್ರತಿಯೊಬ್ಬರೂ ಹೇಳುತ್ತಾರೆ. ನಡುಗೆಯೇನು ಸಾಮಾನ್ಯ ಅಂದುಕೊಂಡಿರಾ?

ಇದು ನಿಜವಾದರೂ ಕೇವಲ ನಡೆದಾಡುವುದರಿಂದ ಮಾತ್ರ ಸಂಪೂರ್ಣ ಆರೋಗ್ಯ ಬರುವುದಿಲ್ಲ. ಗ್ರಾಮೀಣ ಭಾಗದಲ್ಲಿರುವ ವಯಸ್ಸಾದ ಜನರನ್ನು ನೋಡಿದರೆ ಅವರು ನಗರ ಪ್ರದೇಶದ ಯುವಕರಿಗಿಂತ ಕಟ್ಟುಮಸ್ತಾಗಿ ಆರೋಗ್ಯವಾಗಿರುತ್ತಾರೆ. ಬರಿಗಾಲಿನ ನಡಿಗೆಯಲ್ಲಿದೆ ಬಹುಪಯೋಗ

ಇದಕ್ಕೆಲ್ಲಾ ಕಾರಣ ಪ್ರಕೃತಿ. ಹೌದು, ಪ್ರಕೃತಿ ಜತೆಯಲ್ಲೇ ಇರುವುದು ಗ್ರಾಮೀಣ ಭಾಗದವರ ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ ಹುಲ್ಲಿನಲ್ಲಿ ನಡೆಯುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಇವೆ ಎಂದು ಹೇಳಿವೆ. ಯಾವೆಲ್ಲಾ ಲಾಭಗಳು ನಮಗೆ ಸಿಗಲಿದೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ....  

ಮೂಳೆಗಳ ಆರೋಗ್ಯಕ್ಕಾಗಿ

ಮೂಳೆಗಳ ಆರೋಗ್ಯಕ್ಕಾಗಿ

ಹುಲ್ಲಿನಲ್ಲಿ ನಡೆದಾಡುವುದರಿಂದ ಮೂಳೆಗಳ ಆರೋಗ್ಯವು ಉತ್ತಮವಾಗುವುದು. ಸಂಧಿವಾತದಂತಹ ಸಮಸ್ಯೆಯನ್ನು ಇದು ತಡೆಯುವುದು. ಬೆಳಿಗ್ಗೆ ನೀವು ಹುಲ್ಲಿನಲ್ಲಿ ನಡೆದಾಡುವಾಗ ಸೂರ್ಯನ ಬೆಳಕಿನಲ್ಲಿರುವ ವಿಟಮಿನ್ ಡಿ ದೇಹಕ್ಕೆ ಸೇರಿಕೊಳ್ಳುತ್ತದೆ. ಇದು ಆರೋಗ್ಯಕರ ಮೂಳೆಗಳಿಗೆ ತುಂಬಾ ಒಳ್ಳೆಯದು.

ಶಕ್ತಿ ಒದಗಿಸುವುದು

ಶಕ್ತಿ ಒದಗಿಸುವುದು

ಬೆಳಿಗ್ಗೆ ಹುಲ್ಲಿನಲ್ಲಿ ನಡೆದಾಡುವುದರಿಂದ ಕಾಲಿನ ಭಾಗಗಳು ಒದ್ದೆಯಾಗುವುದು. ಸೂರ್ಯನ ಬೆಳಕಿನಲ್ಲಿರುವ ಕೆಲವೊಂದು ಪ್ರಮುಖ ಅಂಶಗಳು ದೇಹವನ್ನು ಸೇರಿಕೊಳ್ಳುತ್ತದೆ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡಿ ದಿನವಿಡಿ ನೀವು ಉಲ್ಲಾಸಿತರಾಗಿರುವಂತೆ ಮಾಡುತ್ತದೆ. ಇದು ದೇಹದ ನರ ಹಾಗೂ ಸ್ನಾಯುಗಳನ್ನು ಉತ್ತಮ ಸ್ಥಿತಿಯಲ್ಲಿಡುತ್ತದೆ. ದೇಹದಲ್ಲಿರುವ ಕೀಟಾಣುಗಳನ್ನು ಹೊರಹಾಕುತ್ತದೆ.

ಆಯಸ್ಕಾಂತೀಯ ಶಕ್ತಿ!

ಆಯಸ್ಕಾಂತೀಯ ಶಕ್ತಿ!

ಚಪ್ಪಲಿ ಧರಿಸದೆ ಹುಲ್ಲಿನ ಮೇಲೆ ನಡೆದಾಡಿದರೆ ಭೂಮಿಯ ಆಯಸ್ಕಾಂತೀಯ ಶಕ್ತಿಯ

ಸಂಪರ್ಕವಾಗುತ್ತದೆ. ಇದರಿಂದ ದೇಹದಲ್ಲಿನ ವಿದ್ಯುತ್ಕಾಂತೀಯ ಮತ್ತು ಆಯಸ್ಕಾಂತೀಯ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ಕೆಲವೊಂದು ರೋಗಗಳಿಗೆ ಕಾರಣವಾಗುವಂತಹ ನಕಾರಾತ್ಮಕ ಅಂಶಗಳನ್ನು ದೂರ ಮಾಡುತ್ತದೆ. ಇದರಿಂದ ದೇಹವು ಸ್ವಚ್ಛವಾಗುವುದು.

ಒತ್ತಡದ ಬಿಂದುಗಳನ್ನು ಉತ್ತೇಜಿಸುವುದು

ಒತ್ತಡದ ಬಿಂದುಗಳನ್ನು ಉತ್ತೇಜಿಸುವುದು

ಪಾದದ ಅಡಿಯಲ್ಲಿ ಹಲವಾರು ರೀತಿಯ ಒತ್ತಡದ ಬಿಂದುಗಳಿವೆ. ಇದು ಉತ್ತೇಜಿಸಲ್ಪಟ್ಟಾಗ ದೇಹದಲ್ಲಿರುವ ವಿವಿಧ ಅಂಗಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಬೆಳಿಗ್ಗೆ ಚಪ್ಪಲಿ ಹಾಕದೆ ಹುಲ್ಲಿನ ಮೇಲೆ ನಡೆದಾಡಿದರೆ ಒತ್ತಡದ ಬಿಂದುಗಳು ಉತ್ತೇಜಿತವಾಗುತ್ತದೆ. ಇದರಿಂದ ದೇಹದ ವಿವಿಧ ರೋಗಗಳು ನಿವಾರಣೆಯಾಗುವುದು.

ಮನಸ್ಸನ್ನು ಶಾಂತಗೊಳಿಸುವುದು

ಮನಸ್ಸನ್ನು ಶಾಂತಗೊಳಿಸುವುದು

ಬೆಳಗ್ಗಿನ ಅವಧಿಯಲ್ಲಿ ಪ್ರಕೃತಿಯಲ್ಲಿರುವ ಶಾಂತ ವಾತಾವರಣವು ಮನಸ್ಸನ್ನು ಶಾಂತಗೊಳಿಸಿ ದೇಹವು ಪುನರ್ಚೇತನಗೊಳ್ಳುವಂತೆ ಮಾಡುತ್ತದೆ. ಸೂರ್ಯನ ಬಿಸಿ ಕಿರಣಗಳು, ಸ್ವಚ್ಛ ಗಾಳಿ ಮತ್ತು ಶಾಂತ ವಾತಾವರಣವು ಮನಸ್ಸನ್ನು ಶಾಂತಗೊಳಿಸುವುದು.

 
English summary

Here Is Why You Should Walk On The Grass In The Morning

We all know that walking is beneficial for our health. But have you ever thought about the health benefits of walking on the grass in the morning? Since childhood we have heard about this from our elders. They have always said that gazing at the green grass far away in the morning and walking on green grass is good for our health. Today in this article we shall talk about certain benefits of walking on green grass in the morning.
Story first published: Thursday, February 2, 2017, 23:41 [IST]
Please Wait while comments are loading...
Subscribe Newsletter