Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸಿಂಪಲ್ಲಾಗಿ ಒಂದು ಮೊಟ್ಟೆ ಸಾರು
ಈ ಮೊಟ್ಟೆ ಸಾರು ಮಾಡುವುದು ಬಲು ಸುಲಭ. ಅಡುಗೆ ಬರದವರೂ ಕೂಡ ಇದನ್ನು ಮಾಡಿದರೆ ಸವಿರುಚಿಯ ಮೊಟ್ಟೆ ಸಾರು ಸಿದ್ಧವಾಗುವುದು. ಮನೆಯಲ್ಲಿ ಸಾಮಾನ್ಯವಾದ ಅಡುಗೆಗೆ ಬಳಸುವ ಪದಾರ್ಥಗಳನ್ನು ಬಳಸಿ, ಈ ಮೊಟ್ಟೆ ಸಾರು ತಯಾರಿಸಬಹುದಾಗಿದ್ದು, ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ.
ರೆಸಿಪಿಯನ್ನು ಈ ಕೆಳಗೆ ನೀಡಲಾಗಿದೆ ನೋಡಿ:
ಬೇಕಾಗುವ ಸಾಮಾಗ್ರಿಗಳು
ಬೇಯಿಸಿದ ಮೊಟ್ಟೆ 4
ಈರುಳ್ಳಿ 1
ಖಾರದ ಪುಡಿ 1 ಚಮಚ
ಕೊತ್ತಂಬರಿ ಪುಡಿ 3/4 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಟೊಮೆಟೊ 1-2
ಗರಂ ಮಸಾಲ ಪುಡಿ ಅರ್ಧ ಚಮಚ
ಬೇಯಿಸಿದ ಆಲೂಗಡ್ಡೆ 2
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು
ಎಣ್ಣೆ 1 ಚಮಚ
ಸಾಸಿವೆ
ಬೆಳ್ಳುಳ್ಳಿ 2-3 ಎಸಳು
ತಯಾರಿಸುವ ವಿಧಾನ:
* ಪಾತ್ರೆಗೆ ಎಣ್ಣೆ ಹಾಕಿ ಉರಿಯಲ್ಲಿ ಇಡಿ. ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ನಂತರ ಬೆಳ್ಳುಳ್ಳಿ, ಈರುಳ್ಳಿ ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ.
* ನಂತರ ಟೊಮೆಟೊ ಹಾಕಿ ಅದು ಮೆತ್ತಗಾಗುವವರೆಗೆ ಹುರಿದು ಅದನ್ನು ಚೆನ್ನಾಗಿ ಮ್ಯಾಶ್ ಮಾಡಿ, ಈಗ ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ, ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ , ಬೇಯಿಸಿದ ಆಲೂಗಡ್ಡೆಯನ್ನು ಕತ್ತರಿಸಿ ಹಾಕಿ 2 ನಿಮಿಷ ಸೌಟ್ ನಿಂದ ಆಡಿಸಿ. ನಂತರ 1 ಕಪ್ ನೀರು ಹಾಕಿ ಕುದಿಸಿ.
* ಮಿಶ್ರಣ ಚೆನ್ನಾಗಿ ಕುದಿ ಬಂದಾಗ ಬೇಯಿಸಿದ ಮೊಟ್ಟೆಯನ್ನು ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ, ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಮೊಟ್ಟೆ ಸಾರು ರೆಡಿ.



Click it and Unblock the Notifications

