Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ಅತ್ಯಂತ ಆರೋಗ್ಯಕರವಾದ 8 ಬಗೆಯ ಮೊಟ್ಟೆಗಳು
ಮೊಟ್ಟೆ ಬಗ್ಗೆ ಮಾತನಾಡುವಾಗ ಕೋಳಿ ಮೊಟ್ಟೆಗೆ ಮಾತ್ರ ಹೆಚ್ಚು ಒತ್ತು ನೀಡುತ್ತೇವೆ. ಆದರೆ ಕೋಳಿ ಮೊಟ್ಟೆಯಷ್ಟೇ, ಅಲ್ಲ ಅದಕ್ಕಿಂತ ಹೆಚ್ಚು ರುಚಿಕರವಾದ ಆರೋಗ್ಯಕರವಾದ ಅನೇಕ ಮೊಟ್ಟೆಗಳಿವೆ. ಅವುಗಳ ರುಚಿ ಹಳ್ಳಿ ಕಡೆಯವರಿಗೆ ಚಿರಪರಿಚಿತ. ಆದರೆ ನಗರ ಪ್ರದೇಶದಲ್ಲಿ ಫಾರಂ ಕೋಳಿ ಮೊಟ್ಟೆ ಹೆಚ್ಚಾಗಿ ಸಿಗುವುದರಿಂದ ಅದನ್ನೇ ಬಳಕೆ ಮಾಡುತ್ತೇವೆ.
ಇಲ್ಲಿ ಕೆಲವು ಆರೋಗ್ಯಕರ ಮೊಟ್ಟೆಗಳ ಬಗ್ಗೆ ಮಾಹಿತಿ ನೀಡಿದ್ಧೇವೆ. ಇವು ಎಲ್ಲಾ ಅಂಗಡಿಗಳಲ್ಲಿ ದೊರೆಯದಿದ್ದರು ಕೆಲವು ಅಂಗಡಿಗಳಲ್ಲಿ ದೊರೆಯುತ್ತದೆ. ಇನ್ನು ಕೆಲವು ಮೊಟ್ಟೆಗಳು ಊರು ಪ್ರದೇಶದಲ್ಲಿ ಮಾತ್ರ ದೊರೆಯುತ್ತದೆ. ಒಟ್ಟಿನಲ್ಲಿ ಮನುಷ್ಯ ತಿನ್ನಬಹುದಾದ ಆರೋಗ್ಯಕರ, ರುಚಿಕರವಾದ ಮೊಟ್ಟೆಗಳಾವುವು ಎಂದು ನೋಡೋಣ ಬನ್ನಿ:

ನಾಟಿ ಕೋಳಿ ಮೊಟ್ಟೆ
ನಾಟಿ ಕೋಳಿ ಮೊಟ್ಟೆ ಸ್ವಲ್ಪ ಕಂದು ಬಣ್ಣದಲ್ಲಿದ್ದು , ಅಧಿಕ ಪ್ರೊಟೀನ್ ಇದೆ. ಫಾರಂ ಕೋಳಿ ಮೊಟ್ಟೆಗಿಂತ ನಾಟಿ ಕೋಳಿ ಮೊಟ್ಟೆಗೆ ರುಚಿ ಹೆಚ್ಚು.

ಫಾರಂ ಕೋಳಿ ಮೊಟ್ಟೆ
ಈ ಮೊಟ್ಟೆಯನ್ನು ಅತ್ಯಾಧಿಕವಾಗಿ ತಿನ್ನುತ್ತೇವೆ. ಈ ಮೊಟ್ಟೆಯಲ್ಲೂ ಪ್ರೊಟೀನ್, ಸತು, ಕ್ಯಾಲ್ಸಿಯಂ ಅಧಿಕವಿದ್ದು ಆರೋಗ್ಯಕ್ಕೆ ಒಳ್ಳೆಯದು.

ಟರ್ಕಿ ಮೊಟ್ಟೆ
ಟರ್ಕಿ ಮೊಟ್ಟೆ ಚಿಕನ್ ಮೊಟ್ಟೆಗಿಂತ ದೊಡ್ಡ ಗಾತ್ರದಲ್ಲಿರುತ್ತದೆ. ಈ ಮೊಟ್ಟೆ ಹಳ್ಳಿಗಳಲ್ಲಿ ಹೆಚ್ಚಾಗಿ ದೊರೆಯುತ್ತದೆ. ಈ ಮೊಟ್ಟೆಯಲ್ಲಿ ಕ್ಯಾಲ್ಸಿಯಂ RDA ಅಂಶ ಅಧಿಕವಿದೆ.

ಬಾತು ಮೊಟ್ಟೆ
ಬಾತು ಮೊಟ್ಟೆಯಲ್ಲಿ ಕೊಬ್ಬಿನಂಶ ಅಧಿಕವಿದೆ. ಇದರಲ್ಲಿ ವಿಟಮಿನ್ ಬಿ ಅಧಿಕವಿದೆ. ಈ ಮೊಟ್ಟೆ ಅಲರ್ಜಿಯನ್ನು ಹೋಗಲಾಡಿಸುವಲ್ಲಿ ತುಂಬಾ ಸಹಕಾರಿ.

ಹೆಬ್ಬಾತು (ಹೆಬ್ಬಾತ್) ಮೊಟ್ಟೆ
ಹೆಬ್ಬಾತು ಪಕ್ಷಿಗಳ ಮೊಟ್ಟೆಗಳಲ್ಲಿ ಅತೀ ದೊಡ್ಡ ಗಾತ್ರದ ಮೊಟ್ಟೆಯಾಗಿದೆ. ಈ ಮೊಟ್ಟೆ ರುಚಿಯಲ್ಲಿ ಕೋಳಿಯ ಮೊಟ್ಟೆಯಂತೆ ಇದ್ದು, ಅದಕ್ಕಿಂತಲೂ ಹೆಚ್ಚಿನ ಪ್ರೊಟೀನ್ ಹೊಂದಿರುತ್ತದೆ.

ಚಿಕ್ಕ-ಚಿಕ್ಕ ಮೀನು ಮೊಟ್ಟೆ
ಈ ಮೀನಿನಲ್ಲಿ antioxidants ಅಧಿಕವಿದ್ದು, ಅತ್ಯಾಧಿಕವಾದ ಖನಿಜಾಂಶವಿದೆ.

ಹಿಲ್ಸಾ ಎಗ್
ಹಿಲ್ಸಾ ಎಗ್ ಅನ್ನು ಭಾರತದ ಪೂರ್ವ ಭಾಗದ ಕಡೆ ಹೆಚ್ಚಾಗಿ ತಿನ್ನುತ್ತಾರೆ. ಹಿಲ್ಸಾ ಎಗ್ ಇದು ಮೀನಿನ ಮೊಟ್ಟೆಯಾಗಿದೆ. ಇದರಲ್ಲಿ ಒಮೆಗಾ 3 ಕೊಬ್ಬಿನಂಶ ಅಧಿಕವಿದೆ. ಈ ಮೊಟ್ಟೆ ಗರ್ಭಿಣಿಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಬಾಂಟಾಮ್(bantam) ಮೊಟ್ಟೆ
ಈ ಮೊಟ್ಟೆ ಕೂಡ ಚಿಕನ್ ಮೊಟ್ಟೆಯಂತೆ ಇದ್ದು ಇದು ಚಿಕ್ಕ ಗಾತ್ರದ ಕೋಳಿಯ ಮೊಟ್ಟೆಯಾಗಿದೆ. ಈ ಮೊಟ್ಟೆಯಲ್ಲಿ ಪ್ರೊಟೀನ್ ಅಧಿಕವಿದ್ದು ಮಹಿಳೆಯರಿಗೆ ಅತ್ಯುತ್ತಮವಾದ ಆಹಾರ ಇದಾಗಿದೆ.



Click it and Unblock the Notifications
