ನೆನಪಿಡಿ: ಸಕ್ಕರೆ ಹಾಕಿ ಮಾಡಿದ ಸಿಹಿ ತಿಂಡಿಗಳಿಂದ ಆದಷ್ಟು ದೂರವಿರಿ!

By: manu
Subscribe to Boldsky

ಇತ್ತೀಚೆಗೆ ನಡೆದಿರುವ ಸಂಶೋಧನೆಗಳ ಪ್ರಕಾರ ನಮ್ಮ ಆಹಾರದಲ್ಲಿ ನಮಗರಿಯದಂತೆಯೇ ನಾಲ್ಕು ವಿಷವಸ್ತುಗಳು ಸೇರಿವೆ. ಅವೆಂದರೆ ಸಕ್ಕರೆ, ಉಪ್ಪು, ಮೈದಾ ಮತ್ತು ಆಶ್ಚರ್ಯಗೊಳಿಸುವಂತೆ ಹಾಲು! ಈ ಮಾತನ್ನು ಸುಖಾಸುಮ್ಮನೇ ಹೇಳಿಲ್ಲ, ಬದಲಿಗೆ ಅಪಾರ ಸಂಶೋಧನೆ, ಅಂಕಿ ಅಂಶಗಳು, ವಿಶ್ಲೇಷಣೆ ಮೊದಲಾದವುಗಳ ಮೂಲಕ ತಜ್ಞರ ತಂಡವೇ ನಡೆಸಿದ ಸಂಶೋಧನೆಯಾಗಿದೆ. ಅತಿಯಾದ ಸಕ್ಕರೆ ಸೇವನೆ ರೋಗಕ್ಕೆ ಮುಕ್ತ ಆಹ್ವಾನ

ಇಂದು ಬಿಳಿಯ ಈ ಸಕ್ಕರೆ ಎಂಬ ವಿಷದ ಬಗ್ಗೆ ಹೆಚ್ಚಿನ ವಿವರಗಳನ್ನು ಅರಿಯೋಣ. ಸಾಮಾನ್ಯವಾಗಿ ಸಿಹಿ ಎಂದರೆ ಎಲ್ಲರಿಗೂ ಇಷ್ಟ. ಸಿಹಿತಿಂಡಿಗಳನ್ನು ನೋಡಿದಾಕ್ಷಣ ಬಾಯಲ್ಲಿ ನೀರೂರಿ ತಿನ್ನುವ ಅದಮ್ಯ ಬಯಕೆಯುಂಟಾಗುತ್ತದೆ. ಪರಿಣಾಮವಾಗಿ ಸಕ್ಕರೆಯ ಪ್ರಮಾಣ ಹೆಚ್ಚಿರುವ ಸಿಹಿತಿಂಡಿಗಳನ್ನು ಸೇವಿಸುತ್ತೇವೆ.   ಸಕ್ಕರೆ ಚಹಾ, ಕಾಫಿಗೆ ಮಾತ್ರವಲ್ಲ-ಸ್ವಚ್ಛತೆಗೂ ಬೇಕು!

ಒಂದು ತಿಂದರೆ ಮನಸ್ಸು ತೃಪ್ತಿಯಾಗದೇ ಎರಡು, ಮೂರು, ನಾಲ್ಕು ಹೀಗೇ ಮುಂದುವರೆಯುತ್ತಾ ಹೋಗುತ್ತದೆ. ಆದರೆ ಹೆಚ್ಚಿನ ಸಿಹಿ ತಿನ್ನುವುದು ಸಹಾ ಆರೋಗ್ಯಕ್ಕೆ ಮಾರಕ. ಹೇಗೆಂದರೆ ಬಿಳಿಸಕ್ಕರೆ ವಾಸ್ತವವಾಗಿ ಅತಿಹೆಚ್ಚು ಪ್ರಮಾಣದ ಗ್ಲುಕೋಸ್ ಕಣಗಳನ್ನು ಸಾಂದ್ರಗೊಳಿಸಿದ ಕಣವಾಗಿದೆ. ಒಂದು ಚಮಚ ಸಕ್ಕರೆ ದೇಹಕ್ಕೆ ಸೇರುತ್ತಿದ್ದಂತೆಯೇ ಆಗಾಧವಾದ ಪ್ರಮಾಣದ ಗ್ಲುಕೋಸ್ ರಕ್ತಕ್ಕೆ ಲಭಿಸುತ್ತದೆ... ಜೊತೆಗೆ ಅನೇಕ ಬಗೆಯ ಮಾರಕ ಕಾಯಿಲೆಗಳಿಗೂ ಮುನ್ನುಡಿ ಬರೆಯುತ್ತೇ!!.. ಮುಂದೆ ಓದಿ...

ಸಕ್ಕರೆಯ ರುಚಿಗೆ ವ್ಯಸನಕಾರಿಯಾಗಿ ಬಿಡುತ್ತೇವೆ

ಸಕ್ಕರೆಯ ರುಚಿಗೆ ವ್ಯಸನಕಾರಿಯಾಗಿ ಬಿಡುತ್ತೇವೆ

ನಮಗೆ ಅರಿವೇ ಇಲ್ಲದಂತೆ ನಾವೆಲ್ಲಾ ಸಕ್ಕರೆಗೆ ವ್ಯಸನರಾಗಿ ಬಿಟ್ಟಿದ್ದೇವೆ...ಟೀ, ಕಾಫಿ, ಜ್ಯೂಸ್ ಹೀಗೆ ಪ್ರತಿಯೊಂದಕ್ಕೂ ನಾವು ಸಕ್ಕರೆಯನ್ನು ಬಳಸುತ್ತೇವೆ ಏಕೆಂದರೆ ಸಕ್ಕರೆಯನ್ನು ಜೀರ್ಣಿಸಿಕೊಂಡ ಬಳಿಕ ರಕ್ತದಲ್ಲಿ ಡೋಪಮೈನ್ ಎಂಬ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ಒಂದು ಮೆದುಳಿಗೆ ಮುದ ನೀಡುವ ರಾಸಾಯನಿಕವಾಗಿದ್ದು ಮೆದುಳು ಹೆಚ್ಚು ಹೆಚ್ಚು ಇಷ್ಟಪಡತೊಡಗುತ್ತದೆ. ಚಿಕ್ಕಂದಿನ ಚಾಕಲೇಟಿನಿಂದ ಪ್ರಾರಂಭವಾದ ಸಕ್ಕರೆಯ ವ್ಯಸನ ನಮ್ಮನ್ನು ಜೀವಮಾನವಿಡೀ ಕಾಡುತ್ತದೆ.

ಕ್ಯಾನ್ಸರ್‌ ರೋಗವೂ ಬರಬಹುದಂತೆ!!

ಕ್ಯಾನ್ಸರ್‌ ರೋಗವೂ ಬರಬಹುದಂತೆ!!

ಸಕ್ಕರೆಯ ಪ್ರಮಾಣ ಹೆಚ್ಚಾದರೆ ಇದನ್ನು ಬಳಸಲ್ಪಡಲು ದೇಹ ಅತಿ ಹೆಚ್ಚಾದ ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸಬೇಕಾಗುತ್ತದೆ. ಇದು ಕ್ಯಾನ್ಸರ್ ಗೆ ಕಾರಣವಾಗಬಹುದು. ಇನ್ಸುಲಿನ್ ಸಂಬಂಧಿತ ಕೆಲವು ಅಂಗಾಂಶಗಳ ಜೀವಕೋಶಗಳು ಅನಿಯಂತ್ರಿತವಾಗಿ ಬೆಳೆಯಲು ಈ ಹೆಚ್ಚುವರಿ ಇನ್ಸುಲಿನ್ ಮೂಲವಾಗಿದ್ದು ಇದರಿಂದ ಉರಿಯೂತ ಉಂಟಾಗುತ್ತದೆ. ತಕ್ಷಣವೇ ಚಿಕಿತ್ಸೆ ಪಡೆಯದಿದ್ದರೆ ಕ್ಯಾನ್ಸರ್‌ಗೆ ತಿರುಗಬಹುದು.

ಮಧುಮೇಹ ಆವರಿಸುತ್ತದೆ

ಮಧುಮೇಹ ಆವರಿಸುತ್ತದೆ

ಸಕ್ಕರೆ ತಿನ್ನುವುದರಿಂದ ಮಧುಮೇಹ ಬರುವುದಿಲ್ಲ! ಆದರೆ ಸಕ್ಕರೆ ಹೆಚ್ಚು ತಿನ್ನುವುದರಿಂದ ಮಧುಮೇಹ ಆವರಿಸುವ ಸಾಧ್ಯತೆ ಹೆಚ್ಚುತ್ತದೆ. ಮುಂದೆ ಯಾವುದೋ ವಯಸ್ಸಿನಲ್ಲಿ ಬರಬೇಕಾಗಿದ್ದ ಮಧುಮೇಹ ಚಿಕ್ಕವಯಸ್ಸಿಗೇ ವಕ್ಕರಿಸುತ್ತದೆ. ಮಧುಮೇಹಿಗಳ ಮೂತ್ರದಲ್ಲಿ ಸಕ್ಕರೆಯ ಪ್ರಮಾಣ ಎಷ್ಟು ಹೆಚ್ಚಿರುತ್ತದೆ ಎಂದರೆ ಅದನ್ನು ಕೊಳೆಸಿದರೆ ವಿಸ್ಕಿ ಎಂಬ ಮದ್ಯವಾಗಿ ಪರಿವರ್ತಿತವಾಗುತ್ತದೆ.

ಲಿವರ್ ಹಾನಿಗೊಳಗಾಗುತ್ತದೆ

ಲಿವರ್ ಹಾನಿಗೊಳಗಾಗುತ್ತದೆ

ಲಿವರ್‌ನ ಅತ್ಯಂತ ದೊಡ್ಡ ವೈರಿ ಎಂದರೆ ಮದ್ಯ. ಒಂದು ವೇಳೆ ಇದರೊಂದಿಗೆ ಸಕ್ಕರೆ ಸೇರಿದರೆ ಮಂಗನಿಗೆ ಮದ್ಯ ಕುಡಿಸಿದಂತಾಗುತ್ತದೆ! ಮದ್ಯ ಯಕೃತ್‌ಗೆ ಅಥವಾ ಲಿವರ್ ಮಾಡುವ ಹಾನಿಯನ್ನು ಸಕ್ಕರೆ ಸಾವಿರ ಪಟ್ಟು ಹೆಚ್ಚಿಸುತ್ತದೆ. ಪರಿಣಾಮವಾಗಿ ಮದ್ಯದ ಪ್ರಹಾರಗಳಿಂದ ಕೊಂಚ ಜೀವದಲ್ಲಿ ಉಳಿದಿದ್ದ ಯಕೃತ್ ಸಕ್ಕರೆಯ ಪ್ರಹಾರದಿಂದ ಸಂಪೂರ್ಣವಾಗಿ ಸೋತು ಹೋಗುತ್ತದೆ. ಪರಿಣಾಮ: ಯಕೃತ್ ವೈಫಲ್ಯ, ಇನ್ನೊಬ್ಬರಿಂದ ಕಸಿ ಮಾಡಿಸಿಕೊಳ್ಳಬೇಕಾದ ಅನಿವಾರ್ಯತೆ.

ಹಾಗಾದರೆ ಇದಕ್ಕೆ ಪರಿಹಾರವೇನು?

ಹಾಗಾದರೆ ಇದಕ್ಕೆ ಪರಿಹಾರವೇನು?

* ಬಿಳಿ ಸಕ್ಕರೆಯ ಬದಲು ಕಂದು ಸಕ್ಕರೆ ಅಥವಾ ಬೆಲ್ಲ ಉಪಯೋಗಿಸಿ. ಬೆಲ್ಲವೂ ಕಪ್ಪು ಅಥವಾ ಕೆಂಪಗಿದ್ದಷ್ಟೂ ಉತ್ತಮ

* ಮಾರುಕಟ್ಟೆಯಲ್ಲಿ ದೊರಕುವ ಸಿಹಿಗಳನ್ನು ಸಾಧ್ಯವಾದಷ್ಟು ದೂರವಿರಿಸಿ

* ಶುಭಸಂದರ್ಭಗಳಲ್ಲಿ ನೀಡಲಾಗುವ ಸಿಹಿಗಳು ನೋಡಲು ಎಷ್ಟೇ ಆಕರ್ಷಕವಾಗಿರಲಿ, ಒಂದು ತುಂಡಿನಲ್ಲಿ ಅರ್ಧವನ್ನು ಮಾತ್ರ ತಿನ್ನಿ, ಮತ್ತೆ ಅದರ ಕಡೆಗೆ ನೋಡಲೇಬೇಡಿ.

ಬೇಕರಿ ತಿಂಡಿಯಿಂದ ದೂರವಿರಿ

ಬೇಕರಿ ತಿಂಡಿಯಿಂದ ದೂರವಿರಿ

* ಬೇಕರಿಯ ಮೈದಾ ಆಧಾರಿತ ತಿಂಡಿಗಳನ್ನು ಆದಷ್ಟೂ ದೂರ ಮಾಡಿ. ಏಕೆಂದರೆ ಇದರಲ್ಲಿ ನಾರು ಇಲ್ಲದೇ ಇರುವುದು ಮತ್ತು ರುಚಿಗಾಗಿ ಸಕ್ಕರೆ ಹಾಕಿರುವುದು ಅರೋಗ್ಯದ ಮೇಲೆ ವಿಪರೀತ ಪರಿಣಾಮಗಳನ್ನು ಬೀರುತ್ತದೆ.

* ಸಾಂಪ್ರಾದಾಯಿಕ ವಿಧಾನದ ಜೋನಿ ಬೆಲ್ಲ, ತಟ್ಟೆ ಬೆಲ್ಲ, ಜೇನು ಮೊದಲಾದವು ಬಿಳಿ ಸಕ್ಕರೆಯ ಬದಲಿಗೆ ಉಪಯೋಗಿಸಬಹುದಾದ ಸಿಹಿಗಳು.

ಟೀ ಕಾಫಿಗೆ ಸಕ್ಕರೆ ಸಾಧ್ಯವಾದಷ್ಟು ಕಡಿಮೆಮಾಡಿ

ಟೀ ಕಾಫಿಗೆ ಸಕ್ಕರೆ ಸಾಧ್ಯವಾದಷ್ಟು ಕಡಿಮೆಮಾಡಿ

* ಬೆಳಗ್ಗಿನ ಉಪಹಾರದಲ್ಲಿ ಸಕ್ಕರೆ ಚಿಮುಕಿಸಿ ತಿನ್ನುವ ಅಭ್ಯಾಸ ಕೊನೆಗೊಳಿಸಿ. (ಕೆಲವರಿಗೆ ದೋಸೆ, ಉಪ್ಪಿಟ್ಟು ಮೊದಲಾದವುಗಳನ್ನು ಸಕ್ಕರೆಯ ಜೊತೆ ಸೇವಿಸುವ ಅಭ್ಯಾಸವಿರುತ್ತದೆ)

* ಟೀ ಕಾಫಿ ಮೊದಲಾದ ನಿಮ್ಮ ನೆಚ್ಚಿನ ಪೇಯಗಳಲ್ಲಿ ಸಕ್ಕರೆ ಬದಲಿಗೆ ಕೊಂಚವೇ ಜೇನು ಅಥವಾ ಸಣ್ಣ ತುಂಡು ಬೆಲ್ಲ ಸೇರಿಸಿ ಕುಡಿಯಬಹುದು.

English summary

Harmful Effects of Sugar on the Body

There are a lot of people who consume tons of sugar items in a day which is not at all a good factor for the body. Apart from causing diabetes, this sweetness brings upon diabetes, cancer, heart problems and obesity.
Subscribe Newsletter