For Quick Alerts
ALLOW NOTIFICATIONS  
For Daily Alerts

ಅತಿಯಾದ ಸಕ್ಕರೆ ಸೇವನೆ ರೋಗಕ್ಕೆ ಮುಕ್ತ ಆಹ್ವಾನ

By Suma
|

ಪಂಚೇಂದ್ರಿಯಗಳಲ್ಲಿ ಯಾವುದು ಅತ್ಯುತ್ತಮ ಎಂದು ಕೇಳಿದರೆ ಯಾವ ಅಂಗವನ್ನೂ ಶ್ರೇಷ್ಠ ಎಂದು ಹೇಳಲಾಗುವುದಿಲ್ಲ. ಕಣ್ಣು, ಮೂಗು, ನಾಲಿಗೆ, ಕಿವಿ ಮತ್ತು ಚರ್ಮಗಳು ಒಂದೊಂದು ರೀತಿಯಲ್ಲಿ ಅಗತ್ಯವಿದೆ. ವಾಸ್ತವವಾಗಿ ಇವೆಲ್ಲವನ್ನೂ ಮೆದುಳು ನಿಯಂತ್ರಿಸುತ್ತದೆ. ಈ ಅಂಗಗಳು ಬಾಹ್ಯಪ್ರಪಂಚದ ಮಾಹಿತಿಯನ್ನು ಮೆದುಳಿಗೆ ಮುಟ್ಟಿಸುವ ಕೆಲಸವನ್ನು ಮಾತ್ರ ಮಾಡುತ್ತವೆ.

ಅದೇ ರೀತಿ ಇತರ ಅಂಗಗಳ ಮಾಹಿತಿಯನ್ನು ನೋಡಿ ಸೂಕ್ತ ಸೂಚನೆಗಳನ್ನು ನೀಡುತ್ತದೆ. ನಿತ್ಯದ ಆಹಾರವನ್ನು ಸೇವಿಸಲು ರುಚಿಯನ್ನು ಪಡೆಯುವ ನಾಲಿಗೆ ಸಹಾ ಆಹಾರ ಸ್ವೀಕಾರಾರ್ಹವೋ ಇಲ್ಲವೋ ಎಂದು ನಿರ್ಧರಿಸುತ್ತದೆ. ಆದರೆ ವಿಚಿತ್ರವೆಂದರೆ ಆಹಾರವನ್ನು ನೋಡಿದಾಕ್ಷಣ ಇದನ್ನು ತಿನ್ನಲು ಮನಸ್ಸಾಗುವುವಾಗ ಮಾತ್ರ ನಾಲಗೆಯ ಯಾವ ಪಾತ್ರವೂ ಇಲ್ಲ! ಸಾಮಾನ್ಯವಾಗಿ ಸಿಹಿ ಎಂದರೆ ಎಲ್ಲರಿಗೂ ಇಷ್ಟ. ಸಿಹಿತಿಂಡಿಗಳನ್ನು ನೋಡಿದಾಕ್ಷಣ ಬಾಯಲ್ಲಿ ನೀರೂರಿ ತಿನ್ನುವ ಅದಮ್ಯ ಬಯಕೆಯುಂಟಾಗುತ್ತದೆ. ಪರಿಣಾಮವಾಗಿ ಸಕ್ಕರೆಯ ಪ್ರಮಾಣ ಹೆಚ್ಚಿರುವ ಸಿಹಿತಿನಿಸಿನ ರುಚಿ ಸವಿಬೇಕೆಂಬ ಬಯಕೆ ಮನದಲ್ಲಿ ಮೂಡುವುದು ಸಹಜ. ಸಕ್ಕರೆ ಹಿಂದಿರುವ ಕರಾಳ ಸತ್ಯ: ಇಲ್ಲಿವೆ 10 ಪುರಾವೆಗಳು

ಆದರೆ ನೀವು ಆ ಸಿಹಿಯನ್ನು ಸವಿದ ನಂತರ ನಿಮ್ಮ ಮುಖ ಸಹಜವಾಗಿರುವುದಿಲ್ಲ. ಅದರಲ್ಲಿ ಏನೋ ಕೊರತೆಯನ್ನು ನೀವು ಕಾಣುತ್ತೀರಿ. ಸಿಹಿ ಪದಾರ್ಥಗಳ ಜೀವಾಳವಾಗಿರುವ ಸಿಹಿಯೇ ಅಲ್ಲಿ ಮಾಯವಾಗಿರುತ್ತದೆ. ಆ ಸಿಹಿತಿಂಡಿಗಳಿಗೆ ಸಕ್ಕರೆಯನ್ನು ಬೆರೆಸಿರುವುದೇ ಇಲ್ಲ...! ಅಂದರೆ ಸಕ್ಕರೆ ನಮ್ಮ ಜೀವನದಲ್ಲಿ ಪ್ರಮುಖವಾಗಿದ್ದು ಕಾಫಿ ಟೀಯಿಂದ ಹಿಡಿದು ಪ್ರತಿಯೊಂದಕ್ಕೂ ಸಿಹಿ ರುಚಿಯನ್ನು ನೀಡಲು ಸಕ್ಕರೆ ಬೇಕೇ ಬೇಕು.

ಆದರೆ ಹೆಚ್ಚು ಸಿಹಿಯಾಗಿರುವುದು ಹೆಚ್ಚು ಬಾಧಕ ಎಂಬಂತೆ ಸಕ್ಕರೆ ಕೂಡ ಕೆಲವೊಂದು ಅಪಾಯಕಾರಿ ಅಂಶಗಳನ್ನು ತನ್ನಲ್ಲಿ ಒಳಗೊಂಡಿದೆ. ಕೆಲವೊಂದು ವೈದ್ಯಕೀಯ ಮೂಲಗಳ ಪ್ರಕಾರ ಆಹಾರದಲ್ಲಿರುವ ಸಕ್ಕರೆಯ ಅಂಶವು ಕೊಬ್ಬು, ಮಧುಮೇಹ ಮತ್ತು ಇನ್ನಿತರ ದೈಹಿಕ ಕಾಯಿಲೆಗಳನ್ನು ತಂದೊಡ್ಡುವಲ್ಲಿ ಕಾರಣವಾಗಿದೆಯಂತೆ. ಹೆಚ್ಚು ಪ್ರಮಾಣದ ಸಕ್ಕರೆ ಇಲ್ಲವೇ ಈ ಅಂಶಗಳುಳ್ಳ ಆಹಾರಗಳನ್ನು ನೀವು ಸೇವಿಸುತ್ತಿದ್ದೀರಿ ಎಂದಾದಲ್ಲಿ ಮಧುಮೇಹದಂತಹ ಭೀಕರ ಸಮಸ್ಯೆ ನಿಮ್ಮನ್ನು ಎಡತಾಕುವುದು ಖಂಡಿತ. ಸಕ್ಕರೆಯನ್ನು ಪೂರ್ಣವಾಗಿ ತ್ಯಜಿಸಲು ಸಾಧ್ಯವಾಗದೇ ಇದ್ದರೂ ಇದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಕಂಡುಕೊಂಡು ಆದಷ್ಟು ದೇಹದಲ್ಲಿ ಅದು ಬೀರುವ ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಬಿಳಿ ಸಕ್ಕರೆ

ಬಿಳಿ ಸಕ್ಕರೆ

ನಿಮ್ಮ ದೈನಂದಿನ ಕಾಫಿಯಲ್ಲಿ ಒಂದು ಚಮಚದಷ್ಟು ಬಿಳಿ ಸಕ್ಕರೆ (ಬ್ರೌನ್ ಶುಗರ್) ಅನ್ನು ಬಳಸಿ ಅದನ್ನು ಸೇವಿಸಿ. ಮಿನರಲ್ಸ್ (ಕ್ಯಾಲ್ಶಿಯಮ್, ಮೆಗ್ನೇಶಿಯಮ್, ಪೊಟಾಶಿಯಮ್, ಕಬ್ಬಿಣ) ಇದರಲ್ಲಿದ್ದು ನಿಮ್ಮ ರೋಗನಿರೋಧಕಶ ಶಕ್ತಿಯನ್ನು ವರ್ಧಿಸಿ ರೋಗಗಳನ್ನು ಮೂಲದಲ್ಲೇ ನಿಯಂತ್ರಣದಲ್ಲಿಡುತ್ತವೆ.

ಖರ್ಜೂರ

ಖರ್ಜೂರ

ಇದೊಂದು ಆರೋಗ್ಯಕರ ಆಹಾರವಾಗಿದ್ದು ಸಕ್ಕರೆಯ ಬದಲಿಗೆ ಮಧುಮೇಹಿಗಳು ಸೇವಿಸಬಹುದಾದ ಸುರಕ್ಷಾ ಆಯ್ಕೆಯಾಗಿದೆ. ಇದನ್ನು ಪುಡಿ ಮಾಡಿ ಸಿರಪ್‌ನಂತೆ ತಯಾರಿಸಿ ಟೀ ಇಲ್ಲವೇ ಕಾಫಿಯಲ್ಲಿ ಬಳಸಿಕೊಳ್ಳಬಹುದಾಗಿದೆ.

ಜೇನು

ಜೇನು

ಬಿಳಿ ಸಕ್ಕರೆಗಿಂತಲೂ ಒಂದು ಸ್ಪೂನ್‌ನಷ್ಟು ಜೇನು ಹೆಚ್ಚು ಉತ್ತಮವಾಗಿದೆ. ಇದು ಹೃದಯಕ್ಕೆ ಮಾತ್ರ ಉತ್ತಮವಾಗಿರದೇ, ತೂಕ ಇಳಿಕೆಯಲ್ಲೂ ಸಹಕಾರಿಯಾಗಿದೆ.

ತೆಂಗಿನ ಕಾಯಿ

ತೆಂಗಿನ ಕಾಯಿ

ತುರಿದ ತೆಂಗಿನ ಕಾಯಿ ಸಕ್ಕರೆಯ ಬದಲಿಗೆ ಬಳಸಬಹುದಾದ ಆಹಾರ ಪದಾರ್ಥವಾಗಿದೆ. ಕಾಫಿ ಟೀಗೆ ಇದನ್ನು ಬಳಸಲು ಸಾಧ್ಯವಾಗದೇ ಇದ್ದರೂ ಇತರ ಸಿಹಿ ಪದಾರ್ಥಗಳಿಗೆ ಇದನ್ನು ಬಳಸಬಹುದಾಗಿದೆ.

ಹಣ್ಣಿನ ಜ್ಯೂಸ್

ಹಣ್ಣಿನ ಜ್ಯೂಸ್

ಸಕ್ಕರೆಯ ಬದಲಿಗೆ ಪರ್ಯಾಯ ಆಹಾರ ಪದಾರ್ಥಗಳನ್ನು ಬಳಸಿ ತಯಾರಿಸುವ ಹಣ್ಣಿನ ಜ್ಯೂಸ್ ಕೂಡ ಉತ್ತಮವಾಗಿದೆ. ಹಣ್ಣಿನ ಜ್ಯೂಸ್ ನ್ಯೂಟ್ರೀನ್‌ಗಳು ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುವುದರಿಂದ ಬಿಳಿ ಸಕ್ಕರೆಗಿಂತ ಇದು ಅತ್ಯುತ್ತಮವಾಗಿದೆ.

ಬೆಲ್ಲ

ಬೆಲ್ಲ

ತುರಿದ ಬೆಲ್ಲ ಹೆಚ್ಚಿನ ಭಾರತೀಯರ ಇಷ್ಟದ ಆಹಾರವಾಗಿದೆ. ಕಾಫಿ ಮತ್ತು ಟೀಗೆ ಬೆಲ್ಲವನ್ನು ಬಳಸಬಹುದಾಗಿದೆ. ಇದು ರಕ್ತ ಮತ್ತು ಹೃದಯಕ್ಕೆ ಅತ್ಯುತ್ತಮವಾಗಿದ್ದು ನಿಮ್ಮ ರಕ್ತ ಪ್ರಸಾರಣೆಯನ್ನು ಉತ್ತಮಗೊಳಿಸುವ ಅಂಶಗಳು ಇದರಲ್ಲಿದೆ.

ಮೇಪಲ್ ಸಿರಪ್

ಮೇಪಲ್ ಸಿರಪ್

ಮಧುಮೇಹಿಗಳಿಗೆ ಇದು ಅತ್ಯುತ್ತಮವಾಗಿದ್ದು ತೂಕ ಇಳಿಕೆಯಲ್ಲಿ ಪರಿಣಾಮಕಾರಿಯಾಗಿ ಪ್ರಭಾವ ಬೀರಲಿದೆ. ಬಿಳಿ ಸಕ್ಕರೆಯ ಬದಲಿಗೆ ಮೇಪಲ್ ಸಿರಪ್ ಉತ್ತಮವಾದುದಾಗಿದೆ.


English summary

7 Healthier Alternatives To Sugar

Sugar is a must add ingredient to a cup of tea or coffee. We, as Indians, cannot live without these sweet little granules added to our diet, which is why Boldsky has suggested you take this sweetness to a whole new level! What if we told you today that there are 7 alternatives to white sugar, will you try them out?
Story first published: Saturday, January 16, 2016, 16:38 [IST]
X
Desktop Bottom Promotion