For Quick Alerts
ALLOW NOTIFICATIONS  
For Daily Alerts

ಬೆಳಿಗ್ಗೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ-ಈ ಮನೆಮದ್ದನ್ನು ಪ್ರಯತ್ನಿಸಿ

ಮಲಬದ್ಧತೆ ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ ಸಮಸ್ಯೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸದೇ ಇರುವ ಕಾರಣಕ್ಕೆ ಅಥವಾ ಕೆಲವೊಮ್ಮೆ ಅನಾರೋಗ್ಯಕರ ಆಹಾರವನ್ನು ಸೇವಿರುವ ಕಾರಣಕ್ಕೆ ಮಲಬದ್ಧತೆಯ ಸಮಸ್ಯೆ ಉಂಟಾಗಬಹುದು.

By Manu
|

ಇತ್ತೀಚಿನ ದಿನಗಳಲ್ಲಿ ವಾರದ ಕೆಲವು ಹೊತ್ತಾದರೂ ಹೊರಗಿನ ಊಟ ಮಾಡಬೇಕಾಗಿ ಬರುತ್ತದೆ. ಮನೆಯಲ್ಲಿಯೂ ಕೆಲವಾರು ಆಹಾರಗಳು ಮೈದಾ ಆಧಾರಿತವಾಗಿದ್ದು ಇದರಿಂದ ಮಲಬದ್ಧತೆ ಕರೆಯದೇ ಬಂದುಬಿಡುತ್ತದೆ. ಇದರೊಂದಿಗೆ ಹೊಟ್ಟೆಯುಬ್ಬರ, ಹುಳಿತೇಗು, ವಾಕರಿಕೆ, ಚಡಪಡಿಕೆ ಇತ್ಯಾದಿಗಳು ಬೋನಸ್ ರೂಪದಲ್ಲಿ ಪುಕ್ಕಟೆಯಾಗಿ ದೊರಕುತ್ತವೆ. ಮಲಬದ್ಧತೆ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆಯೇ? ಕಾರಣ ತಿಳಿದುಕೊಳ್ಳಿ

ಮೈದಾ ಹಾಗೂ ನಾರು ರಹಿತ ಇತರ ಯಾವುದೇ ಆಹಾರ ಸೇವಿಸಿದವರಿಗೆ ಈ ತೊಂದರೆ ಸಾಮಾನ್ಯವಾಗಿದೆ. ಒಂದು ವೇಳೆ ಈ ತೊಂದರೆ ನಿಮ್ಮನ್ನೂ ಆಗಾಗ ಕಾಡುತ್ತಿದ್ದರೆ ಇದಕ್ಕೆ ಪರಿಹಾರವಾಗಿ ಸುಲಭವಾದ ಪೇಯವೊಂದಿದೆ. ಇದನ್ನು ಕುಡಿದ ಕೊಂಚವೇ ಸಮಯದ ಬಳಿಕ ಮಲಬದ್ಧತೆ ಇಲ್ಲವಾಗುತ್ತದೆ. ಮಕ್ಕಳಲ್ಲಿ ಮಲಬದ್ಧತೆ ನಿವಾರಣೆಗೆ ಮನೆಮದ್ದು

ಈ ತೊಂದರೆಗೆ ನಾರು ರಹಿತ ಆಹಾರದ ಹೊರತಾಗಿ ಅತಿಹೆಚ್ಚಾಗಿ ತಿನ್ನುವುದು, ಆಹಾರದಲ್ಲಿ ಅನಾರೋಗ್ಯಕರ ಸಾಮಾಗ್ರಿಗಳ ಮಿಶ್ರಣ, ಕಡಿಮೆ ನೀರು ಕುಡಿಯುವುದು, ಮಾನಸಿಕ ಒತ್ತಡ, ದಿನದಲ್ಲಿ ಯಾವುದೋ ಹೊತ್ತಿನಲ್ಲಿ ಆಹಾರ ಸೇವಿಸುವುದು ಇತ್ಯಾದಿಗಳು ಕಾರಣವಾಗಿವೆ. ಮಲಬದ್ಧತೆ ಉಂಟುಮಾಡುವ 7 ಆಹಾರಗಳು

ಒಂದು ವೇಳೆ ನಿಮಗೆ ಸತತವಾಗಿ ಮಲಬದ್ಧತೆಯ ತೊಂದರೆ ಕಾಡುತ್ತಿದ್ದರೆ ನಿತ್ಯವೂ ಚೆನ್ನಾಗಿ ಕಳಿತ ಬಾಳೆಹಣ್ಣುಗಳನ್ನು ತಿನ್ನುವ ಮೂಲಕ ಈ ತೊಂದರೆಯನ್ನು ನಿವಾರಿಸಬಹುದು. ಇದರಲ್ಲಿರುವ ಉತ್ತಮ ಪ್ರಮಾಣದ ಕರಗುವ ನಾರು ಜೀರ್ಣಕ್ರಿಯೆ ಮತ್ತು ವಿಸರ್ಜನಾಕ್ರಿಯೆಯನ್ನು ಸುಗಮಗೊಳಿಸಿ ಮಲಬದ್ಧತೆಯಿಂದ ಕಾಪಾಡುತ್ತದೆ....ಬನ್ನಿ ಇಂತಹ ಸಮಸ್ಯೆಯಿಂದ ಮುಕ್ತಿ ಹೊಂದಲು ಇನ್ನಷ್ಟು ಪರಿಹಾರ ನೀಡಿದ್ದೇವೆ, ಮುಂದೆ ಓದಿ...

ದಿನನಿತ್ಯ ಗಂಜಿ ಊಟ ಮಾಡಿ

ದಿನನಿತ್ಯ ಗಂಜಿ ಊಟ ಮಾಡಿ

ಗಂಜಿಯಲ್ಲಿರುವ ಪಿಷ್ಟದಲ್ಲಿ ನಮ್ಮ ಜೀರ್ಣಕ್ರಿಯೆಗೆ ನೆರವಾಗುವ ಬ್ಯಾಕ್ಟೀರಿಯಾಗಳು ಇರುವ ಕಾರಣ ಜೀರ್ಣಕ್ರಿಯೆ ಆರಾಮವಾಗಿ ನಡೆಯುತ್ತದೆ. ಅಲ್ಲದೇ ಉತ್ತಮ ಪ್ರಮಾಣದ ಕರಗಿದ ನಾರು ಇರುವುದರಿಂದ ಆಹಾರ ಸುಲಭವಾಗಿ ಚಲಿಸಲು ಮತ್ತು ವಿಸರ್ಜನೆ ಸುಲಭವಾಗಲು ನೆರವಾಗುತ್ತದೆ.

ಖರ್ಜೂರ

ಖರ್ಜೂರ

ಮಲಬದ್ಧತೆ ಸಮಸ್ಯೆಯಿದ್ದರೆ ಖರ್ಜೂರವನ್ನು ರಾತ್ರಿಯಲ್ಲಿ ನೀರಿನಲ್ಲಿ ನೆನೆ ಹಾಕಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಮಲಬದ್ಧತೆ ಸಮಸ್ಯೆ ಕಂಡುಬರುವುದಿಲ್ಲ.

ಮುಟ್ಟಿದರೆ ಮುನಿ ಗಿಡದ ಎಲೆಗಳು

ಮುಟ್ಟಿದರೆ ಮುನಿ ಗಿಡದ ಎಲೆಗಳು

ನೀವು ಮಲಬದ್ಧತೆ ಸಮಸ್ಯೆಯಿಂದ ಬಳಲ್ತಾ ಇದ್ದು, ಐದಾರು ದಿನದಿಂದ ಟಾಯ್ಲೆಟ್ ಗೆ ಹೋಗಿಲ್ಲ ಅಂದ್ರೆ ಮುಟ್ಟಿದರೆ ಮುನಿ ಗಿಡ ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ಅರೆದು ಅದರ ರಸವನ್ನು ಕುಡಿಯುವುದರಿಂದ ಉಪಶಮನವಾಗುತ್ತೆ. ಎರಡರಿಂದ ಮೂರು ಸ್ಪೂನ್ ಕುಡಿದರೆ ಸಾಕಾಗುತ್ತೆ. ಇಲ್ಲವೇ ಒಂದು ಲೋಟ ನೀರಿಗೆ ಒಂದು ಅಥವಾ ಎರಡು ಸ್ಪೂನ್ ರಸವನ್ನು ಬೆರೆಸಿ ಕುಡಿಯಬಹುದು.

ಸಪೋಟ ಹಣ್ಣು

ಸಪೋಟ ಹಣ್ಣು

ಸಪೋಟ ಹಣ್ಣಿನಲ್ಲಿ ಆಹಾರಕ್ರಮದ ನಾರಿನಾಂಶ( 5.6/100 gms,) ಇರುವುದರಿಂದ ಮಲಬದ್ಧತೆಗೆ ಸಂಭಂದಪಟ್ಟ ಕೊರತೆಗಳನ್ನು ನೀಗಿಸಲು ಸಹಾಯಮಾಡುತ್ತದೆ. ಹೀಗಾಗಿ ಇದೊಂದು ಮಲಬದ್ಧತೆ ವಿಸರ್ಜನೆ ಮಾಡಿಸುವ ಔಷಧಿಯೆಂದು ಪರಿಗಣಿಸಬಹುದು. ಇದು ದೊಡ್ಡಕರುಳಿನ ಒಳಚರ್ಮವನ್ನು ಕಾಪಾಡುವುದಲ್ಲದೆ ಸೋಂಕುಗಳು ಬರುವುದನ್ನು ತಡೆಯುತ್ತದೆ.

ಸೀಬೆ ಹಣ್ಣು

ಸೀಬೆ ಹಣ್ಣು

ಸೀಬೆ ಹಣ್ಣು ವರ್ಷಪೂರ್ತಿ ಸಿಗದಿದ್ದರೂ ಹೆಚ್ಚಿನ ಕಾಲ ಸಿಗುತ್ತದೆ. ಯಾವಾಗ ಸಿಗುತ್ತದೆಯೋ ಆಗೆಲ್ಲಾ ಕೊಂಚ ಪ್ರಮಾಣದಲ್ಲಿ ತಿನ್ನುವ ಮೂಲಕ ಇವುಗಳ ಪ್ರಯೋಜನವನ್ನು ಪಡೆಯಬಹುದು... ಅದರಲ್ಲಿಯೂ ಮಲಬದ್ಧತೆ ಸಮಸ್ಯೆಗೆ ಇರುವವರು ತಪ್ಪದೇ ಸೀಬೆ ಹಣ್ಣನ್ನು ಸೇವಿಸಬೇಕು! ಏಕೆಂದರೆ ಈ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳೂ, ಕರಗುವ ನಾರು ಈ ಹಣ್ಣಿಗೆ ಅತ್ಯುತ್ತಮ ಆಹಾರದ ಪಟ್ಟಿಯಲ್ಲಿ ಸೇರಿಸಿದೆ. ಇದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ ಹಾಗೂ ಕರುಳುಗಳಲ್ಲಿ ಆಹಾರದ ಚಲನೆ ಸುಲಭವಾಗುತ್ತದೆ.

ಕರಿಮೆಣಸಿನ ನೀರು

ಕರಿಮೆಣಸಿನ ನೀರು

ಬೇಸಿಗೆಯಲ್ಲಿ ಮಲಬದ್ಧತೆ ಸಮಸ್ಯೆ ಸಾಮಾನ್ಯ. ಮಲಬದ್ಧತೆ ನಿವಾರಣೆಗೆ ಕರಿಮೆಣಸಿನ ನೀರನ್ನು ದಿನಕ್ಕೆ ಎರಡು ಸಲ ಕುಡಿಯಬೇಕು. ಇದು ಮಲವು ಸರಾಗವಾಗಿ ಹೋಗಲು ನೆರವಾಗುವುದು.

ಆಲೂಗಡ್ಡೆ!

ಆಲೂಗಡ್ಡೆ!

ಒಂದು ವೇಳೆ ಮಲಬದ್ಧತೆಯ ತೊಂದರೆ ಇದ್ದರೆ ಒಂದೆರಡು ಆಲೂಗಡ್ಡೆಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿದು ತಿನ್ನುವ ಮೂಲಕ ಮಲಬದ್ದತೆಯ ತೊಂದರೆ ದೂರವಾಗುತ್ತದೆ.

ಅಡುಗೆ ಪದಾರ್ಥಗಳಲ್ಲಿ ಸಾಕಷ್ಟು ತರಕಾರಿಗಳನ್ನು ಬಳಸಿ

ಅಡುಗೆ ಪದಾರ್ಥಗಳಲ್ಲಿ ಸಾಕಷ್ಟು ತರಕಾರಿಗಳನ್ನು ಬಳಸಿ

ನೀವು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಾ ಇದ್ದರೆ ತರಕಾರಿ ಸೇವನೆ ಮಾಡಿ. ಇದರಿಂದ ಮಲಬದ್ಧತೆ ಸಮಸ್ಯೆಯು ಕಡಿಮೆಯಾಗುವುದು. ತರಕಾರಿಗಳಲ್ಲಿ ಇರುವಂತಹ ಉನ್ನತ ಮಟ್ಟದ ನಾರಿನಾಂಶವು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುವುದು.

ಮಲಬದ್ಧತೆಗೆ ನೈಸರ್ಗಿಕ ಪೇಯ

ಮಲಬದ್ಧತೆಗೆ ನೈಸರ್ಗಿಕ ಪೇಯ

ಬೇಕಾಗುವ ಸಾಮಾಗ್ರಿಗಳು

*ಸೇಬಿನ ಶಿರ್ಕಾ (apple cider vinegar) ಎರಡು ದೊಡ್ಡ ಚಮಚ

*ಜೇನು: ಎರಡು ದೊಡ್ಡ ಚಮಚ

*ಉಗುರು ಬೆಚ್ಚನೆಯ ನೀರು: ಒಂದು ಲೋಟ

ಮಾಡುವ ವಿಧಾನ

ಮಾಡುವ ವಿಧಾನ

*ಒಂದು ಲೋಟ ನೀರನ್ನು ಉಗುರುಬೆಚ್ಚಗಾಗುವಷ್ಟು ಬಿಸಿಮಾಡಿ

*ಇದಕ್ಕೆ ಶಿರ್ಕಾ ಮತ್ತು ಜೇನು ಬೆರೆಸಿ ಕಲಕಿ.

*ಈ ದ್ರವವನ್ನು ಚೆನ್ನಾಗಿ ಕಲಕಿ ಪ್ರತಿದಿನ ಬೆಳಿಗ್ಗೆ ಕುಡಿಯಿರಿ. ಅಲ್ಲದೇ ಕೊಂಚ ಕೊಂಚವಾಗಿ ಇಡಿಯ ದಿನ ಕುಡಿಯುತ್ತಿರಿ.

*ಒಂದು ವೇಳೆ ಊಟದ ಬಳಿಕ ಹೊಟ್ಟೆಯುಬ್ಬರಿಕೆ ಕಂಡುಬಂದರೆ ತಕ್ಷಣ ಈ ಪೇಯವನ್ನು ಒಂದು ಲೋಟದಷ್ಟು ಕುಡಿಯಿರಿ.

*ಮಲಬದ್ಧತೆ ಇದ್ದಾಗಲೂ ಈ ಪೇಯವನ್ನು ಕುಡಿಯಬಹುದು ಹಾಗೂ ತಕ್ಷಣ ಒತ್ತಡದಿಂದ ಪಾರಾಗಬಹುದು.

ಹಾಲು ಮತ್ತು ಇತರ ಡೈರಿ ಆಹಾರಗಳಿಂದ ದೂರವಿರಿ

ಹಾಲು ಮತ್ತು ಇತರ ಡೈರಿ ಆಹಾರಗಳಿಂದ ದೂರವಿರಿ

ಕೆಲವರಿಗೆ ಹಾಲು ದೇಹಕ್ಕೆ ಒಗ್ಗುವುದಿಲ್ಲ. ಈ ಪರಿಸ್ಥಿತಿಗೆ ‘lactose intolerance‘ ಎಂದು ಕರೆಯುತ್ತಾರೆ. ಇವರಿಗೆ ಹಾಲು ಮೊಸರು ಮಜ್ಜಿಗೆಗಳು ಅಲರ್ಜಿಯಾಗುತ್ತವೆ. ಒಂದು ವೇಳೆ ಕುಡಿದರೆ ಆಮಶಂಕೆ ಅಥವಾ ಮಲಬದ್ಧತೆ, ಎರಡರಲ್ಲಿ ಒಂದು ತೊಂದರೆಗೆ ಒಳಗಾಗುತ್ತಾರೆ. ವಿಸ್ಮಯವೆಂದರೆ ಈ ವ್ಯಕ್ತಿಗಳಿಗೆ ತಮ್ಮ ದೇಹದ ಈ ವ್ಯಾಧಿಯ ಬಗ್ಗೆ ವೈದ್ಯರು ತಿಳಿಸುವವರೆಗೆ ಗೊತ್ತೇ ಇರುವುದಿಲ್ಲ.

English summary

Effective Home Remedies To Treat Constipation

This will save you from a lot of uneasy bathroom visits. These remedies are very natural and there is no need for fear of any side effects. The following are a few home remedies for constipation.
X
Desktop Bottom Promotion