Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳಿಗ್ಗೆ ಮಲಬದ್ಧತೆ ಸಮಸ್ಯೆ ಕಾಣಿಸಿಕೊಂಡರೆ-'ಆಹಾರ ಪಥ್ಯೆ' ಹೀಗಿರಲಿ
ಮಲಬದ್ಧತೆ ಎನ್ನುವುದು ಹೇಳಿಕೊಳ್ಳಲು ದೊಡ್ಡ ಸಮಸ್ಯೆಯಲ್ಲದಿದ್ದರೂ ಇದು ಭಾರೀ ಸಮಸ್ಯೆಯನ್ನು ಉಂಟು ಮಾಡುವುದು. ಮಲಬದ್ಧತೆ ಎದುರಿಸುವ ವ್ಯಕ್ತಿಯ ಸಮಸ್ಯೆಗಳು ಆತನಿಗೆ ಮಾತ್ರ ಗೊತ್ತು. ಯಾಕೆಂದರೆ ಮಲಬದ್ಧತೆಯಿಂದಾಗಿ ಸಂಪೂರ್ಣ ಹೊಟ್ಟೆಯಲ್ಲಿ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಹೊಟ್ಟೆಯಿಂದ ಮಲವು ಸರಿಯಾಗಿ ಹೊರಗೆ ಹೋಗದೆ ಇರುವಾಗ ಹೊಟ್ಟೆಯುಬ್ಬರ ಕಾಣಿಸಿಕೊಳ್ಳಬಹುದು. ಇದು ಸಮಸ್ಯೆ ಉಂಟು ಮಾಡುವುದು.
ಗಂಟೆಗಟ್ಟಲೆ ಶೌಚಾಲಯದಲ್ಲಿ ಕುಳಿತುಕೊಂಡರೂ ಮಲ ಹೋಗದೆ ಇದ್ದಾಗ ಆಗುವಂತಹ ಅಸಹನೆ ಮತ್ತು ಕಿರಿಕಿರಿ ಹೇಳತೀರದು. ಮಲಬದ್ಧತೆ ಸಮಸ್ಯೆಯನ್ನು ಯಾರೂ ಹಗುರವಾಗಿ ತೆಗೆದುಕೊಳ್ಳಬಾರದು. ಯಾಕೆಂದರೆ ಇದರಿಂದ ಅಜೀರ್ಣ ಮತ್ತು ಮೂಲವ್ಯಾಧಿಯಂತಹ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮಲವು ಗಟ್ಟಿಯಾಗುವುದು, ನೀರಿನ ಕೊರತೆ, ನಿರ್ಜಲೀಕರಣ ಮತ್ತು ಸರಿಯಾದ ಆಹಾರ ಕ್ರಮವಿಲ್ಲದ ಇರುವುದು ಮಲಬದ್ಧತೆಗೆ ಕಾರಣ.
ಮಲಬದ್ಧತೆಯಿಂದ ಭಾರೀ ನೋವು, ಕಿರಿಕಿರಿ ಮತ್ತು ಹೊಟ್ಟೆಯುಬ್ಬರ ಕಾಣಿಸಿಕೊಳ್ಳಬಹುದು. ಇದಕ್ಕೆ ಹಲವಾರು ರೀತಿಯ ಔಷಧಿಗಳು ಲಭ್ಯವಿದೆ. ಆದರೆ ಮನೆಯಲ್ಲೇ ತಯಾರಿಸಬಹುದಾದ ಕೆಲವೊಂದು ಮನೆಮದ್ದುಗಳು ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡದೆ ಸಮಸ್ಯೆ ನಿವಾರಿಸುವುದು. ಆಹಾರ ಕ್ರಮವನ್ನು ಸರಿಯಾಗಿಡುವುದು ಮತ್ತು ಆರೋಗ್ಯಕರ ಜೀವನಶೈಲಿ ನಡೆಸುವುದು ಪ್ರಮುಖವಾಗಿದೆ. ಮಲಬದ್ಧತೆ ನಿವಾರಣೆ ಮಾಡಲು ಯಾವ ರೀತಿಯ ಆಹಾರಗಳನ್ನು ಸೇವಿಸಬಹುದು ಎಂದು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ನಿಮಗೆ ಹೇಳಿಕೊಡಲಿದೆ...

ಕೊತ್ತಂಬರಿ ಬೀಜ
*ಎರಡು ಚಮಚ ಕೊತ್ತಂಬರಿ ಬೀಜ
*ಒಂದು ಲೋಟ ನೀರು. ಇದಕ್ಕೆ ಕರಿಮೆಣಸು ಹಾಕಬಹುದು(ಆಯ್ಕೆ ನಿಮ್ಮದು)
ಹೇಳಿದ ಸಾಮಗ್ರಿಗಳನ್ನು ಒಂದು ಸಣ್ಣ ಬಾಣಲೆಗೆ ಹಾಕಿಕೊಂಡು ಅದನ್ನು ಕೆಲವು ನಿಮಿಷ ಕುದಿಯಲು ಬಿಡಿ.
*ಕುದಿದ ಬಳಿಕ ತಣ್ಣಗಾಗಲು ಬಿಡಿ ಮತ್ತು ನೀರನ್ನು ಸೋಸಿಕೊಳ್ಳಿ.
*ದಿನದಲ್ಲಿ 1-2 ಸಲ ಈ ನೀರನ್ನು ಕುಡಿಯಿರಿ.

ಫ್ಲ್ಯಾಕ್ಸ್ ಸೀಡ್ ಅಥವಾ ಅಗಸೆ ಬೀಜಗಳು
*ಎರಡು ಚಮಚ ತಾಜಾ ಫ್ಲ್ಯಾಕ್ಸ್ ಸೀಡ್ ತೆಗೆದುಕೊಂದು ಹುಡಿ ಮಾಡಿ.
ಒಂದು ಕಪ್ ಮೊಸರು ತೆಗೆದುಕೊಳ್ಳಿ.
*ಎರಡನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಬೆಳಿಗ್ಗೆ ಅಥವಾ ರಾತ್ರಿ ಮಲಗುವ ಮೊದಲು ಸೇವಿಸಿ.
*ಸಮಸ್ಯೆ ಕಡಿಮೆಯಾಗುವ ತನಕ ಸೇವಿಸಿ.

ಬಿಸಿನೀರಿನೊಂದಿಗೆ ಜೇನು
*ಒಂದು ಚಮಚ ಜೇನು ತೆಗೆದುಕೊಳ್ಳಿ.
*ಒಂದು ಲೋಟ ಬಿಸಿ ನೀರು.
*ಇದಕ್ಕೆ ಒಂದು ಚಮಚ ಲಿಂಬೆರಸ ಸೇರಿಸಿಕೊಳ್ಳಿ.
*ಎಲ್ಲಾ ಸಾಮಗ್ರಿಗಳನ್ನು ಸರಿಯಾಗಿ ಬೆರೆಸಿಕೊಂಡು ಅದನ್ನು ಬೆಳಿಗ್ಗೆ ಸೇವಿಸಿ.

ಬೀಜಗಳು
ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿರುವಂತಹ ಬಾದಾಮಿ, ಆಕ್ರೋಟ್ ಮತ್ತು ಪಿಸ್ತಾ ಸೇವಿಸಿದರೆ ಅದರಿಂದ ಕರುಳಿನ ಕ್ರಿಯೆಗಳು ಸರಿಯಾಗಿ ಆಗಿ ಮಲಬದ್ಧತೆ ನಿವಾರಣೆಯಾಗುವುದು. ಈ ಎಲ್ಲಾ ಬೀಜಗಳನ್ನು ಜತೆಯಾಗಿ ಸೇವಿಸುವುದರಿಂದ ಮಲಬದ್ಧತೆಯು ಬೇಗನೆ ನಿವಾರಣೆಯಾಗುವುದು.

ನೀರು
ಮಲಬದ್ಧತೆಗೆ ನಿರ್ಜಲೀಕರಣವು ಪ್ರಮುಖ ಕಾರಣವಾಗಿದೆ. ಹೆಚ್ಚೆಚ್ಚು ನೀರು ಕುಡಿದರೆ ಅದರಿಂದ ಕರುಳಿನ ಕ್ರಿಯೆಯು ಸರಾಗವಾಗಿ ಆಗುವುದು ಮತ್ತು ಮಲಬದ್ಧತೆ ಸಮಸ್ಯೆ ನಿವಾರಣೆಯಾಗುವುದು. ಪ್ರತೀದಿನ ಸುಮಾರು 8-10 ಲೋಟ ನೀರು ಕುಡಿದರೆ ಮಲಬದ್ಧತೆ ಸಮಸ್ಯೆ ಕಡಿಮೆಯಾಗುವುದು.

ದಿನನಿತ್ಯ ಗಂಜಿ ಊಟ ಮಾಡಿರಿ
ಗಂಜಿಯಲ್ಲಿರುವ ಪಿಷ್ಟದಲ್ಲಿ ನಮ್ಮ ಜೀರ್ಣಕ್ರಿಯೆಗೆ ನೆರವಾಗುವ ಬ್ಯಾಕ್ಟೀರಿಯಾಗಳು ಇರುವ ಕಾರಣ ಜೀರ್ಣಕ್ರಿಯೆ ಆರಾಮವಾಗಿ ನಡೆಯುತ್ತದೆ. ಅಲ್ಲದೇ ಉತ್ತಮ ಪ್ರಮಾಣದ ಕರಗಿದ ನಾರು ಇರುವುದರಿಂದ ಆಹಾರ ಸುಲಭವಾಗಿ ಚಲಿಸಲು ಮತ್ತು ವಿಸರ್ಜನೆ ಸುಲಭವಾಗಲು ನೆರವಾಗುತ್ತದೆ.



Click it and Unblock the Notifications











