For Quick Alerts
ALLOW NOTIFICATIONS  
For Daily Alerts

  ಆಹಾರ+ನೀರು ಅಗತ್ಯಕ್ಕೂ ಹೆಚ್ಚಾದರೆ ಪ್ರಾಣಾಪಾಯ ಖಚಿತ!

  By Arshad
  |

  ಅತಿ ಹೆಚ್ಚಿನ ನೀರು ಸೇವಿಸಿದರೆ ಇದು ಪ್ರಾಣಾಪಾಯವಾಗಬಲ್ಲುದೇ? ಏಕೆಂದರೆ ಅತಿಯಾದರೆ ಅಮೃತವೂ ವಿಷವಂತೆ. ಯಾವುದೇ ಆಹಾರವನ್ನು ಅತಿಯಾಗಿ ಸೇವಿಸಿದರೆ ಅಪಾಯಕರವೇ ಹೌದು. ಆರೋಗ್ಯಕರ ಆಹಾರಗಳೂ ಮಿತಿಮೀರಿದರೆ ವಿಷವಾಗುತ್ತವೆ. ಅಗತ್ಯಕ್ಕೂ ಹೆಚ್ಚು ತಿನ್ನುವುದರಿಂದ ಕೆಲವಾರು ಋಣಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

  ಈ ವಿಷಯ ನಮಗೆಲ್ಲಾ ತಿಳಿದಿದೆ. ಆದರೆ ನೀರಿನ ಸಹಿತ ಕೆಲವು ಆಹಾರಗಳನ್ನು ಅಗತ್ಯಕ್ಕೂ ಹೆಚ್ಚು ಸೇವಿಸಿದರೆ ಇದು ಪ್ರಾಣಾಪಾಯ ಒಡ್ಡಬಲ್ಲುದು. ಇಂದಿನ ಲೇಖನದಲ್ಲಿ ಇಂತಹ ಆಹಾರಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಿದ್ದು ಈ ಆಹಾರಗಳನ್ನು ಎಂದಿಗೂ ಮಿತಿಮೀರದೇ ಸೇವಿಸಬೇಕು....

  ನೀರಿನ ಅತಿಯಾದ ಸೇವನೆ

  ನೀರಿನ ಅತಿಯಾದ ಸೇವನೆ

  ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ ಸುಮಾರು ಎರಡೂವರೆ ಲೀಟರುಗಳಷ್ಟು ನೀರಿನ ಅಗತ್ಯವಿದೆ. ಆದರೆ ಬಲವಂತವಾಗಿ ಇನ್ನೂ ಹೆಚ್ಚಿನ ನೀರು ಕುಡಿದರೆ? ಆಗಲೂ ಸುಮಾರು ಏಳು ಲೀಟರುಗಳಷ್ಟು ಪ್ರಮಾಣವನ್ನು ನಮ್ಮ ಮೂತ್ರಪಿಂಡಗಳು ಶೋಧಿಸುತ್ತವೆ. ಆದರೆ ವ್ಯಕ್ತಿಯ ದೇಹದ ಗಾತ್ರವನ್ನು ಅನುಸರಿಸಿ ಏಳರಿಂದ ಹತ್ತು ಲೀಟರ್‪ವರೆಗೂ ಈ ಮಿತಿಯಲ್ಲಿ ವ್ಯತ್ಯಾಸ ಕಂಡುಬರಬಹುದು. ಆದರೆ ಈ ಮಿತಿ ಮೀರಿದರೆ ನಮ್ಮ ಮೂತ್ರಪಿಂಡಗಳು ಈ ಆಗಾಧ ಪ್ರಮಾಣವನ್ನು ಶೋಧಿಸಲು ಸಾಧ್ಯವಾಗದೇ ಕುಸಿಯುತ್ತವೆ. ಪರಿಣಾಮವಾಗಿ ಉಸಿರಾಟವೇ ನಿಂತು ಹೋಗುವುದು ಅಥವಾ ಮೆದುಳು ಸ್ತಬ್ಧವಾಗುವುದು (brain edema) ಮೊದಲಾದವೂ ಕಾಣಬರುತ್ತವೆ. ಇದರ ಪರಿಣಾಮದಿಂದ ಸಾವೂ ಎದುರಾಗಬಹುದು.

  ಅತಿ ಹೆಚ್ಚಿನ ಕೆಫೀನ್ ಸೇವನೆ

  ಅತಿ ಹೆಚ್ಚಿನ ಕೆಫೀನ್ ಸೇವನೆ

  ಅತಿ ಹೆಚ್ಚು ಎಂದರೆ ಎಷ್ಟು? ತಜ್ಞರ ಪ್ರಕಾರ ದಿನಕ್ಕೆ ನೂರು ಮಿಲಿಗ್ರಾಂ (ಸಾಧಾರಣ ತೂಕದ ವ್ಯಕ್ತಿಗೆ) ಸಾಕು. ಆರೋಗ್ಯ ಉತ್ತಮವಿದ್ದರೆ ಇದನ್ನು ಗರಿಷ್ಠ ಮುನ್ನೂರು ಅಥವಾ ನಾನ್ನೂರು ಮಿ ಲಿಗ್ರಾಂ ಗೆ ಹೆಚ್ಚಿಸಬಹುದು. ಒಂದು ಎನರ್ಜಿ ಡ್ರಿಂಕ್‌ನಲ್ಲಿ ಸುಮಾರು ಮೂವತ್ತ್ಗೈದು ಮಿಲಿಗ್ರಾಂ ಇರುತ್ತದೆ. ಆ ಪ್ರಕಾರ ದಿನಕ್ಕೆ ಹತ್ತು ಎನರ್ಜಿಡ್ರಿಂಕ್ ಕುಡಿದವರು ಬದುಕುಳಿಯುವ ಸಾಧ್ಯತೆ ಕಡಿಮೆ. ಅಂತೆಯೇ ದಿನಕ್ಕೆ ನೂರುಕಪ್ ಕಾಫಿ ಕುಡಿಯುವವರೂ ಉಳಿಯುವ ಸಾಧ್ಯತೆ ಇಲ್ಲ.

  ಅತಿ ಹೆಚ್ಚು ಚಾಕಲೇಟು

  ಅತಿ ಹೆಚ್ಚು ಚಾಕಲೇಟು

  ಒಂದು ವೇಳೆ ಒಂದು ದಿನದ ಅವಧಿಯಲ್ಲಿ ವ್ಯಕ್ತಿಯೊಬ್ಬರು ಹತ್ತು ಕೇಜಿ ಚಾಕಲೇಟು ತಿಂದರೆ ಇವರ ದೇಹ ಎದುರಿಸಬೇಕಾದ ಕ್ಲಿಷ್ಟತೆಗಳಲ್ಲಿ ಆಂತರಿಕ ರಕ್ತಸ್ರಾವ, ಮೂರ್ಛೆರೋಗ (epileptic fits), ಅತಿಸಾರ, ವಾಕರಿಕೆ ಹಾಗೂ ಸಾವು ಸಹಾ ಸಂಭವಿಸಬಹುದು.

  ಅತಿಯಾದ ಮದ್ಯಪಾನ

  ಅತಿಯಾದ ಮದ್ಯಪಾನ

  ಮಾದಕ ಪಾನೀಯದ ಮಾದಕತೆ ಅದರಲ್ಲಿರುವ ಶೇಖಡಾವಾರು ಆಲ್ಕೋಹಾಲ್ ಪ್ರಮಾಣವನ್ನು ಅವಲಂಬಿಸಿದೆ. ಒಂದು ವೇಳೆ ನಲವತ್ತು ಶೇಖಡಾ ಆಲ್ಕೋಹಾಲ್ ಇರುವ ಮದ್ಯವನ್ನು ವ್ಯಕ್ತಿಯೊಬ್ಬರು ಒಂದು ಘಂಟೆಯ ಅವಧಿಯಲ್ಲಿ ಸುಮಾರು ಒಂದೂವರೆ ಲೀಟರಿನಷ್ಟು ಕುಡಿದರೆ ಇವರಿಗೆ ಸಾವು ನಿಶ್ಚಿತ!.

  ಅತಿಯಾದ ಸಿಗರೇಟು

  ಅತಿಯಾದ ಸಿಗರೇಟು

  ಒಂದರ ಹಿಂದೊಂದರಂತೆ ಎಪ್ಪತ್ತೈದು ಸಿಗರೇಟು ಸೇದಿದರೆ ಅದೇ ಧೂಮಪಾನಿಯ ಅಂತಿಮ ದಿನ. ಪ್ರತಿ ಸಿಗರೇಟಿನಲ್ಲಿಯೂ ಸುಮಾರು 0.8ಮಿಲಿಗ್ರಾಂ ನಷ್ಟು ಮಾರಕ ನಿಕೋಟಿನ್ ಇರುತ್ತದೆ.

  ಅತಿ ಹೆಚ್ಚು ಸೇಬುಹಣ್ಣು ತಿನ್ನುವುದು

  ಅತಿ ಹೆಚ್ಚು ಸೇಬುಹಣ್ಣು ತಿನ್ನುವುದು

  ದಿನಕ್ಕೊಂದು ಸೇಬು ವೈದ್ಯರನ್ನೇ ದೂರವಿಡುವುದೇನೋ ಸರಿ. ಆದರೆ ದಿನಕ್ಕೆ ಹದಿನೆಂಟು ದಾಟಿದರೆ ಮಾತ್ರ ಇದು ತಿಂದವನ್ನೇ ಲೋಕದಿಂದ ದೂರವಿಡುವುದು ಖಂಡಿತ. ಇದರಲ್ಲಿ ಅಲ್ಪ ಪ್ರಮಾಣದ ಸಯನೈಡ್ ಎಂಬ ವಿಷವಿದೆ. ಅಷ್ಟೂ ಸೇಬುಗಳ ಸಯನೈಡ್ ಒಟ್ಟುಗೂಡಿದರೆ ಸಾವು ಖಚಿತ.

  ಬಾಳೆಹಣ್ಣಿಗೂ ಮಿತಿ ಇದೆ

  ಬಾಳೆಹಣ್ಣಿಗೂ ಮಿತಿ ಇದೆ

  ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ ಇದೆ. ಇದು ಒಂದು ಪ್ರಬಲ ಉಪ್ಪು. ಬಾಳೆಹಣ್ಣನ್ನು ಹೆಚ್ಚು ತಿಂದರೆ ಹೆಚ್ಚು ಪೊಟ್ಯಾಶಿಯಂ ಸಂಗ್ರಹವಾಗುತ್ತದೆ. ಆದರೆ ಇದು ಮಾರಕವಾಗಲು ಎಷ್ಟು ತಿನ್ನಬೇಕು? ಒಂದಾದ ಮೇಲೊಂದರಂತೆ ನಾನ್ನೂರು ಹಣ್ಣುಗಳನ್ನು ತಿಂದರೆ ಮಾತ್ರ ಇದು ಮಾರಕ. ಅಷ್ಟು ತಿನ್ನಲು ಸಾಧ್ಯವೇ ಇಲ್ಲವಾದುದರಿಂದ ಬಾಳೆಹಣ್ಣಿಗೆ ಹೆದರುವ ಅಗತ್ಯವಿಲ್ಲ.

  ಉಪ್ಪಿನ ಮಿತಿ

  ಉಪ್ಪಿನ ಮಿತಿ

  ಒಂದೇ ಹೊತ್ತಿನಲ್ಲಿ ಐವತ್ತು ಟೀಚಮಚದಷ್ಟು ಉಪ್ಪು ತಿಂದರೆ ಇದು ಪ್ರಾಣಾಪಾಯ ಒಡ್ಡಬಲ್ಲುದು. ಅಲ್ಲದೇ ಇದು ಅತಿ ಹೆಚ್ಚು ನೋವು ನೀಡುವ ವಿಷವೂ ಆಗಿದೆ.

  English summary

  Does Overdose Of Food Or Water Kill You?

  Does overdose of water kill you? Too much of anything is bad! Yes, even the good things may turn bad when the dosage is high. Even healthy foods can be deadly if you cross the limit. Over consumption may have negative consequences. We all know that. But some foods or substances may even kill a human being in case of over dosage. Here is a list of foods which are very deadly when you consume too much. Never make the mistake of eating too much of the below mentioned foods.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more