ಅಧಿಕ ರಕ್ತದೊತ್ತಡದವರು ಇಂತಹ ಆಹಾರಗಳನ್ನು ಸೇವಿಸಬಾರದು

By: manu
Subscribe to Boldsky

ದೇಹದ ಕೆಲವೊಂದು ಅನಾರೋಗ್ಯಕರ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದೇ ಹೊರತು ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಆಗದು. ಮಧುಮೇಹ ಮತ್ತು ಅಧಿಕರಕ್ತದೊತ್ತಡ ಇದಕ್ಕೆ ಒಳ್ಳೆಯ ಉದಾಹರಣೆಯಾಗಿದೆ. ಈ ಎರಡು ರೋಗಗಳು ದೇಹವನ್ನು ಒಮ್ಮೆ ಒಕ್ಕರಿಸಿಕೊಂಡರೆ ಅದರಿಂದ ಮುಕ್ತಿ ಪಡೆಯುವುದು ಕಷ್ಟಸಾಧ್ಯ.  ಅಧಿಕ ರಕ್ತದೊತ್ತಡವೇ? ನಿಯಂತ್ರಿಸಲು ಏಲಕ್ಕಿಯೇ ಸಾಕು!

ಜೀವನಶೈಲಿ ಹಾಗೂ ಆಹಾರ ಕ್ರಮವನ್ನು ಸರಿಯಾಗಿಟ್ಟುಕೊಂಡರೆ ಇವುಗಳನ್ನು ನಿಯಂತ್ರಿಸಿ ಸಾಮಾನ್ಯ ಜೀವನ ಸಾಗಿಸಬಹುದು. ರಕ್ತದೊತ್ತಡವನ್ನು ಪತ್ತೆಹಚ್ಚಿ ಸರಿಯಾದ ಚಿಕಿತ್ಸೆ ನೀಡದೆ ಇದ್ದರೆ ಅದರಿಂದ ಹೃದಯಾಘಾತ, ಪಾರ್ಶ್ವವಾಯು, ಕಿಡ್ನಿ ವೈಫಲ್ಯ ಇತ್ಯಾದಿ ಸಮಸ್ಯೆಗಳು ಕಾಣಿಸಬಹುದು.  ಕಡಿಮೆ ರಕ್ತದೊತ್ತಡ ಸಮಸ್ಯೆಯೇ? ತಪ್ಪದೇ ಈ ಲೇಖನ ಓದಿ...

ಅಧಿಕರಕ್ತದೊತ್ತಡ ಇರುವವರು ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಪ್ರತಿದಿನವೂ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡು ಸರಿಯಾದ ರೀತಿಯ ಆಹಾರ ಕ್ರಮವನ್ನು ಪಾಲಿಸಿಕೊಂಡು ಹೋದರೆ ಒಳ್ಳೆಯದು. ಅಧಿಕ ರಕ್ತದೊತ್ತಡ ಇರುವವರು ಯಾವ ಆಹಾರಗಳನ್ನು ತಿನ್ನಲೇಬಾರದು ಎನ್ನುವ ಬಗ್ಗೆ ಬೋಲ್ಡ್ ಸ್ಕೈ ಹೇಳಿಕೊಡಲಿದೆ...

ಬ್ರೆಡ್

ಬ್ರೆಡ್

ಬ್ರೆಡ್‌ನಲ್ಲಿ ಅನಾರೋಗ್ಯಕರ ಪಿಷ್ಠವು ಇರುವ ಕಾರಣದಿಂದ ಬಿಳಿ ಅಥವಾ ಕಂದು ಬಣ್ಣದ ಬ್ರೆಡ್ ನ್ನು ಸೇವಿಸಬಾರದು. ಬ್ರೆಡ್ ನಿಂದ ರಕ್ತದೊತ್ತಡ ಹೆಚ್ಚಾಗುವುದು.

ಸಂಸ್ಕರಿತ ಮಾಂಸ

ಸಂಸ್ಕರಿತ ಮಾಂಸ

ಹೆಚ್ಚಾಗಿ ಫಾಸ್ಟ್ ಫುಡ್‌ಗಳಲ್ಲಿ ಸಂಸ್ಕರಿತ ಮಾಂಸವನ್ನು ಮಾರಾಟ ಮಾಡಲಾಗುತ್ತದೆ.ಇದರಲ್ಲಿ ಹೆಚ್ಚಿನ ಸೋಡಿಯಂ ಅಂಶವಿರುತ್ತದೆ. ಸೋಡಿಯಂ ರಕ್ತದೊತ್ತಡ ಇರುವವರಿಗೆ ಒಳ್ಳೆಯದಲ್ಲ.

ಪಿಜ್ಜಾ

ಪಿಜ್ಜಾ

ಪಿಜ್ಜಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ತಿಳಿದಿರುವ ವಿಚಾರ. ಅದರಲ್ಲೂ ರಕ್ತದೊತ್ತಡ ಇರುವ ವ್ಯಕ್ತಿಗಳಿಗಂತೂ ಇದು ಅಪಾಯಕಾರಿ. ಪಿಜ್ಜಾದಲ್ಲಿ ಹೆಚ್ಚಿನ ಕೊಬ್ಬು, ಪಿಷ್ಠ ಮತ್ತು ಉಪ್ಪು ಒಳಗೊಂಡಿರುತ್ತದೆ.ಪಿಜ್ಜಾ: ನಾಲಗೆಗೆ ರುಚಿ, ಆರೋಗ್ಯಕ್ಕೆ ಮಾತ್ರ ಮಾರಕ!

ಉಪ್ಪಿನಕಾಯಿ

ಉಪ್ಪಿನಕಾಯಿ

ಉಪ್ಪಿನಕಾಯಿ ಇದ್ದರೆ ಊಟವೂ ಹೆಚ್ಚಾಗುವುದು. ಆದರೆ ಇದು ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಅಲ್ಲ. ಉಪ್ಪಿನಕಾಯಿಯಲ್ಲಿ ಇರುವ ಹೆಚ್ಚಿನ ಸೋಡಿಯಂ ರಕ್ತದೊತ್ತಡದ ಸಮಸ್ಯೆ ಇರುವವರಿಗೆ ಹಾನಿಕರ.

ಚೈನೀಸ್ ಆಹಾರ

ಚೈನೀಸ್ ಆಹಾರ

ಅಧಿಕ ರಕ್ತದೊತ್ತಡ ಸಮಸ್ಯೆಯಿರುವವರು ನೂಡಲ್ಸ್, ಮಂಚೂರಿಯನ್ ಇತ್ಯಾದಿಗಳನ್ನು ತ್ಯಜಿಸಬೇಕು. ಇದರಿಂದ ಹೆಚ್ಚಿನ ಮಟ್ಟದ ಸೋಡಿಯಂ ಮತ್ತು ಎಂಎಸ್ ಜಿ ಒಳಗೊಂಡಿರುತ್ತದೆ.

ಕೆಂಪು ಮಾಂಸ

ಕೆಂಪು ಮಾಂಸ

ಕೆಂಪು ಮಾಂಸದಲ್ಲಿ ಕೊಬ್ಬು ಅಧಿಕವಾಗಿರುತ್ತದೆ. ಇದರಿಂದ ರಕ್ತನಾಳಗಳು ಕುಗ್ಗಿ ರಕ್ತದೊತ್ತಡದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.

 
English summary

Common Foods To Throw Out Now If You Have High BP!

If you are someone who has been suffering from high blood pressure for a while now, you would surely be taking a lot of medications, right? High blood pressure or hypertension is a condition in which the blood flows through the arteries at an abnormally high rate. Hypertension, if not treated and controlled, can lead to fatal disorders like coronary diseases, kidney failure, heart failure, stroke, etc.
Story first published: Tuesday, March 21, 2017, 23:29 [IST]
Please Wait while comments are loading...
Subscribe Newsletter