ಮಲಬದ್ಧತೆಗೆ ಬದ್ಧ ವೈರಿಗಳಾಗಿರುವ ಪ್ರಮುಖ ಆಹಾರಗಳು....

By: Jaya subramanya
Subscribe to Boldsky

ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಆರೋಗ್ಯದ ಸಂಪತ್ತು ನಮ್ಮದಾಗಿದ್ದರೆ ನಾವು ಯಾವುದೇ ಬಗೆಯಲ್ಲೂ ತಲೆಕೆಡಿಸಬೇಕಾದ ಅಗತ್ಯವಿರುವುದಿಲ್ಲ. ಆದರೆ ಇಂದು ಈ ಆರೋಗ್ಯ ಎಂಬುದೇ ಕೈಗೆಟಕದೇ ಇರುವ ಆಸ್ತಿಯಾಗಿ ಇದೀಗ ಮಾರ್ಪಟ್ಟಿದೆ. ಇಂದಿನ ಅನಾರೋಗ್ಯಕರ ಜೀವನ ಶೈಲಿ ನಮ್ಮನ್ನು ಹೆಚ್ಚು ಹೆಚ್ಚು ರೋಗಿಗಳನ್ನಾಗಿ ಮಾರ್ಪಡಿಸುತ್ತಿದೆ. ಮಲಬದ್ಧತೆ ಸಮಸ್ಯೆಗೆ 'ಆಲೀವ್ ಎಣ್ಣೆ'ಯೇ ದಿವ್ಯೌಷಧ

ಬೊಜ್ಜು, ದೈಹಿಕ ದಾರ್ಢ್ಯತೆ, ಅಸ್ತಮಾ, ರಕ್ತದೊತ್ತಡ, ಸಕ್ಕರೆ ಕಾಯಿಲೆ ಈಗೀಗ ಹೆಚ್ಚು ಪ್ರಮಾಣದಲ್ಲಿ ಹಿರಿಯರನ್ನು ಮಾತ್ರವಲ್ಲದೆ ಯುವ ಜನರನ್ನು ಕಾಡುತ್ತಿದೆ. ಈಗ ಇದರ ಸಾಲಿಗೆ ಮಲಬದ್ಧತೆ ಕೂಡ ಪ್ರಮುಖ ರೋಗವಾಗಿ ಬಳಲಿಸುತ್ತಿದೆ ಎಂದರೂ ತಪ್ಪಾಗಲಾರದು. ನಿಮ್ಮ ದೇಹದಲ್ಲಿ ಹೆಚ್ಚುವರಿ ಸ್ವಾಸ್ಥ್ಯ ಸಂಬಂಧಿ ಕಾಯಿಲೆಗಳು ನಮ್ಮನ್ನು ಕಾಡುತ್ತಿದೆ ಎಂದಾದಲ್ಲಿ ಇದಕ್ಕೆ ಕಾರಣ ರಾಸಾಯನಿಕ ಅಂಶಗಳು ದೇಹದಿಂದ ಬಿಡುಗಡೆಯಾಗದೇ ಇರುವುದಾಗಿದೆ. ಮಕ್ಕಳಲ್ಲಿ ಕಾಣಿಸುವ ಮಲಬದ್ಧತೆಗೆ ಒಂದಿಷ್ಟು ಸರಳ ಪರಿಹಾರ

ಪ್ರತೀದಿನ ದೇಹದಿಂದ ವಿಷಕಾರಿ ಅಂಶಗಳನ್ನು ವಿಸರ್ಜಿಸುವುದು ದೈನಂದಿನ ಪ್ರಕ್ರಿಯೆ ಎಂದೆನಿಸಿದ್ದು, ಈ ಕ್ರಿಯೆ ನಿಮ್ಮಲ್ಲಿ ನಡೆಯುತ್ತಿಲ್ಲ ಎಂದಾದಲ್ಲಿ ನೀವು ಸೇವಿಸುತ್ತಿರುವ ಆಹಾರ ಮತ್ತು ಅನುಸರಿಸುತ್ತಿರುವ ಚಟುವಟಿಕೆಗಳಲ್ಲಿ ಲೋಪದೋಷವಿದೆ ಎಂಬುದು ಪ್ರಮುಖವಾಗಿದೆ. ಹೆಚ್ಚು ಪ್ರಮಾಣದಲ್ಲಿ ನೀರು ಸೇವನೆ ಮಾಡದೇ ಇರುವುದು ಹೆಚ್ಚು ಘನರೂಪದ ಆಹಾರ ಸೇವನೆ ಇವೇ ಮೊದಲಾದವಗಳು ಮಲಬದ್ಧತೆ ಸಮಸ್ಯೆಯನ್ನು ಉಂಟುಮಾಡಲಿವೆ. ಮಲಬದ್ಧತೆ ನಿವಾರಣೆಗೆ ಇಲ್ಲಿದೆ ನೋಡಿ ನೈಸರ್ಗಿಕ ಜ್ಯೂಸ್ 

ಅಂತೆಯೇ ಕೆಲವೊಂದು ಆಹಾರ ವಿಧಾನಗಳನ್ನು ನೀವು ತ್ಯಜಿಸದೇ ಹೋದರೆ ಕೂಡ ಮಲಬದ್ಧತೆ ವಿಪರೀತ ಸಮಸ್ಯೆಯಾಗಿ ನಿಮ್ಮನ್ನು ಕಾಡಬಹುದಾಗಿದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ನೀವು ಸೇವಿಸದೇ ಬಾರದ ಆಹಾರಗಳೇನು ಎಂಬುದರ ಮೇಲೆ ಬೆಳಕು ಚೆಲ್ಲುತ್ತಿದ್ದೇವೆ....  

ಫಾಸ್ಟ್ ಫುಡ್ಸ್

ಫಾಸ್ಟ್ ಫುಡ್ಸ್

ನೀವು ಸೇವಿಸದೇ ಬಾರದೇ ಇರುವ ಆಹಾರವೆಂದರೆ ಅದು ಫಾಸ್ಟ್ ಫುಡ್ ಆಗಿದೆ. ಇದು ಹೆಚ್ಚುವರಿ ಕೊಬ್ಬಿನ ಅಂಶಗಳನ್ನು ಒಳಗೊಂಡಿದ್ದು ನಾರಿನಂಶ ಇದರಲ್ಲಿ ಕಡಿಮೆ ಇರುತ್ತದೆ. ಇದು ಹೆಚ್ಚುವರಿ ಪ್ರಮಾಣದ ಉಪ್ಪನ್ನು ಒಳಗೊಂಡಿರುತ್ತದೆ. ಇದು ಮಲವನ್ನು ಹೊರಹಾಕುವಲ್ಲಿ ತಡೆಯನ್ನುಂಟು ಮಾಡಿ ಮಲಬದ್ಧತೆಯನ್ನು ಉಂಟುಮಾಡಲಿದೆ.

ಹಾಲಿನ ಉತ್ಪನ್ನಗಳು

ಹಾಲಿನ ಉತ್ಪನ್ನಗಳು

ಐಸ್ ಕ್ರೀಮ್, ಹಾಲು ಮತ್ತು ಚೀಸ್ ನಿಮ್ಮಲ್ಲಿ ಮಲಬದ್ಧತೆಯನ್ನು ಉಂಟುಮಾಡಲಿದೆ. ಇದನ್ನು ಹೆಚ್ಚುವರಿ ಪ್ರಮಾಣದಲ್ಲಿ ಎಂದಿಗೂ ಸೇವಿಸಲು ಹೋಗದಿರಿ. ಅಂತೆಯೇ ಹಾಲಿನ ಉತ್ಪನ್ನವಾದ ಮೊಸರು ನಿಮ್ಮ ಹೊಟ್ಟೆಗೆ ಹಿತಕಾರಿ ಎಂದೆನಿಸಿದ್ದು ಇದು ಮಲಬದ್ಧತೆಯನ್ನು ನಿವಾರಿಸಲಿದೆ ಮತ್ತು ಮೊಸರು ಆರೋಗ್ಯಕಾರಿ ಬ್ಯಾಕ್ಟೀರಿಯಾವನ್ನು ಒಳಗೊಂಡಿದೆ.

ಕ್ಯಾಂಡಿ

ಕ್ಯಾಂಡಿ

ಹೆಚ್ಚು ಪ್ರಮಾಣದಲ್ಲಿ ಕ್ಯಾಂಡಿಯನ್ನು ಸೇವಿಸುವುದು ಕೂಡ ಮಲಬದ್ಧತೆಯನ್ನು ಉಂಟುಮಾಡಲಿದೆ. ಇದು ಸಕ್ಕರೆಯನ್ನು ಒಳಗೊಂಡಿರುವುದರಿಂದ ಮತ್ತು ನಾರಿನಂಶ ಈ ಆಹಾರಗಳಲ್ಲಿ ಕಡಿಮೆ ಇರುವುದರಿಂದ ಮಲಬದ್ಧತೆ ಉಂಟಾಗಲಿದೆ.

ಕೇಕ್

ಕೇಕ್

ಕೇಕ್ ಮತ್ತು ಪೇಸ್ಟ್ರಿಗಳಂತಹ ಬೇಕರಿ ಕರಿದ ತಿಂಡಿಗಳು ಮಲಬದ್ಧತೆಯನ್ನು ಉಂಟುಮಾಡಲಿದೆ. ಇದರಲ್ಲಿ ನಾರಿನಂಶ ಕಡಿಮೆ ಇದ್ದು ಸಕ್ಕರೆ ಅತ್ಯಧಿಕವಾಗಿರುತ್ತದೆ.

ಹಸಿ ಬಾಳೆಹಣ್ಣು

ಹಸಿ ಬಾಳೆಹಣ್ಣು

ಹಸಿ ಬಾಳೆಹಣ್ಣು ಕೂಡ ಮಲಬದ್ಧತೆಯನ್ನು ಉಂಟುಮಾಡಲಿದ್ದು ಬದಲಿಗೆ ಹಣ್ಣಾದ ಬಾಳೆಹಣ್ಣನ್ನು ಸೇವಿಸಿ ಮಲಬದ್ಧತೆಯನ್ನು ನಿಮಗೆ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಹಸಿ ಬಾಳೆಹಣ್ಣಿನಲ್ಲಿ ಟ್ಯಾನಿನ್ ಎಂಬ ಅಂಶವಿದ್ದು ಇದು ಕಹಿ ಅಂಶವನ್ನು ಒಳಗೊಂಡಿದೆ. ಇದು ಮಲಬದ್ಧತೆಯನ್ನು ಉಂಟುಮಾಡಲಿದೆ.

 
English summary

Be Careful Of These Foods It Makes You Constipated

Today, here in this article we shall talk about certain foods that will make you constipated. These are certain regular foods that we consume on a daily basis. Hence, if you suffer from constipation, make sure to take these foods into account.
Please Wait while comments are loading...
Subscribe Newsletter