Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರಾತ್ರಿ ಊಟದ ಬಳಿಕ ನೆನಪಿನಲ್ಲಿ ಒಂದೆರಡು ಬಾಳೆ ಹಣ್ಣು ತಿನ್ನಿ....
ಬಾಳೆ ಹಣ್ಣನ್ನು ರಾತ್ರಿ ಊಟದ ಬಳಿಕ ತಿಂದರೆ ಅದರಿಂದ ಜೀರ್ಣ ಕ್ರಿಯೆಗೆ ಸಮಸ್ಯೆಯಾಗುತ್ತದೆ ಎಂದು ಕೆಲವರು ವಾದಿಸುತ್ತಾರೆ. ಆದರೆ ಬಾಳೆಹಣ್ಣನ್ನು ರಾತ್ರಿ ಊಟದ ಬಳಿಕ ತಿಂದರೆ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ...
ಹಲವಾರು ರೀತಿಯ ಆರೋಗ್ಯ ಗುಣಗಳು ಹೊಂದಿರುವ ಬಾಳೆಹಣ್ಣನ್ನು ತಿಂದರೆ ದೇಹಕ್ಕೆ ತುಂಬಾ ಒಳ್ಳೆಯದು ಎಂದು ನಾವು ಹಿಂದಿನಿಂದಲೂ ಕೇಳಿಕೊಂಡು ಬಂದಿರುವಂತಹ ಮಾತು. ಬಾಳೆಹಣ್ಣಿನಲ್ಲಿರುವ ವಿಟಮಿನ್ ಹಾಗೂ ಖನಿಜಾಂಶಗಳು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆದರೆ ಬಾಳೆಹಣ್ಣನ್ನು ರಾತ್ರಿ ಊಟ ಬಳಿಕ ತಿನ್ನಬಹುದೇ ಅಥವಾ ತಿನ್ನಿಬಾರದೇ ಎನ್ನುವ ಬಗ್ಗೆ ವಾದಗಳು ನಡೆಯುತ್ತಲೇ ಇದೆ. ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!
ಬಾಳೆ ಹಣ್ಣನ್ನು ರಾತ್ರಿ ಊಟದ ಬಳಿಕ ತಿಂದರೆ ಅದರಿಂದ ಜೀರ್ಣ ಕ್ರಿಯೆಗೆ ಸಮಸ್ಯೆಯಾಗುತ್ತದೆ ಎಂದು ಕೆಲವರು ವಾದಿಸುತ್ತಾರೆ. ಆದರೆ ಬಾಳೆಹಣ್ಣನ್ನು ರಾತ್ರಿ ಊಟದ ಬಳಿಕ ತಿಂದರೆ ಅದು ಆರೋಗ್ಯಕ್ಕೆ ಒಳ್ಳೆಯದು ಎಂದು ಇನ್ನು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ. ದಿನದಲ್ಲಿ ಒಂದುವರೆ ಕಪ್ ನಷ್ಟು ಹಣ್ಣುಗಳನ್ನು ತಿನ್ನಬೇಕು ಎಂದು ತಜ್ಞರು ಹೇಳುತ್ತಾರೆ. ಸಿಪ್ಪೆಯ ಮೇಲೆ ಚುಕ್ಕೆ ಬಿದ್ದ ಬಾಳೆಹಣ್ಣಿನ ಅದ್ಭುತ ಪವರ್....
ಒಂದೆರಡು ಬಾಳೆಹಣ್ಣನ್ನು ತಿಂದರೆ ನಮ್ಮ ದೇಹಕ್ಕೆ ಬೇಕಾಗುವಂತಹ ಹೆಚ್ಚಿನ ಎಲ್ಲಾ ಪೋಷಕಾಂಶಗಳು ಲಭ್ಯವಾಗುತ್ತದೆ.
ಬಾಳೆಹಣ್ಣನ್ನು ರಾತ್ರಿ ಊಟದ ಬಳಿಕ ತಿಂದರೆ ದೇಹಕ್ಕೆ ಯಾವೆಲ್ಲಾ ಪ್ರಯೋಜನಗಳು ಸಿಗಲಿದೆ ಎನ್ನುವ ಬಗ್ಗೆ ತಿಳಿಯಲು ಈ ಲೇಖನವನ್ನು ಓದುತ್ತಾ ಹೋಗಿ....

ನಿದ್ರೆ ಸುಗಮಗೊಳಿಸುವುದು
ರಾತ್ರಿ ಊಟದ ಬಳಿಕ ಬಾಳೆಹಣ್ಣನ್ನು ತಿನ್ನುವ ಅತೀ ದೊಡ್ಡ ಉಪಯೋಗವೆಂದರೆ ನಿದ್ರೆ ಸುಗಮವಾಗುವುದು. ಸುಗಮ ನಿದ್ರೆ ಬೇಕಾಗುವಂತಹ ಮೆಲಟೊನಿನ್ ಎನ್ನುವ ಹಾರ್ಮೋನು ಬಾಳೆಹಣ್ಣನ್ನು ತಿನ್ನುವುದರಿಂದ ಹೆಚ್ಚಾಗುತ್ತದೆ.

ನಿದ್ರೆ ಸುಗಮಗೊಳಿಸುವುದು
ಇದರಿಂದ ನಿದ್ರೆಯು ಸುಖಕರವಾಗಿರುತ್ತದೆ. ಬಾಳೆಹಣ್ಣಿನಲ್ಲಿರುವ ಟ್ರಿಪ್ಟೊಫಾನ್ ಎನ್ನುವಂತಹ ಅಮಿನೋ ಆಮ್ಲವು ಮೆಲಟೊನಿನ್ ಮಟ್ಟವನ್ನು ಹೆಚ್ಚಿಸಿ ನಿದ್ರಾಹೀನತೆಯನ್ನು ಕಡಿಮೆ ಮಾಡುತ್ತದೆ.

ಪೋಷಕಾಂಶ ಸಿಗುವುದು
ನಮ್ಮ ದೈನಂದಿನ ಚಟುವಟಿಕೆಗಳಿಗಾಗಿ ದೇಹಕ್ಕೆ ಪ್ರಮುಖವಾಗಿ ಬೇಕಾಗಿರುವ ಖನಿಜಾಂಶವೆಂದರೆ ಅದು ಪೊಟಾಶಿಯಂ. ಬಾಳೆಹಣ್ಣಿನಲ್ಲಿ ಪೊಟಾಶಿಯಂ ಹೇರಳವಾಗಿದೆ. ಇದು ಅತಿಯಾದ ರಕ್ತದೊತ್ತಡವನ್ನು ದೂರವಿಡುತ್ತದೆ. ವ್ಯಕ್ತಿಯೊಬ್ಬನಿಗೆ ದಿನಕ್ಕೆ 4700 ಮಿ.ಗ್ರಾಂ. ಪೊಟಾಶಿಯಂ ಬೇಕಾಗಿದೆ.

ಪೋಷಕಾಂಶ ಸಿಗುವುದು
ಆದರೆ ಇಷ್ಟು ಪ್ರಮಾಣದ ಪೊಟಾಶಿಯಂ ನಮ್ಮ ದೇಹವನ್ನು ಸೇರುವುದಿಲ್ಲ. ದಿನದ ಅಂತ್ಯದಲ್ಲಿ ಬಾಳೆಹಣ್ಣು ಸೇವನೆ ಮಾಡುವುದರಿಂದ ಪೊಟಾಶಿಯಂನ ಕೊರತೆಯನ್ನು ನೀಗಿಸಬಹುದು. ದೇಹಕ್ಕೆ ಬೇಕಾಗಿರುವ ಮತ್ತೊಂದು ಪ್ರಮುಖ ಖನಿಜಾಂಶ ಮೆಗ್ನಿಶಿಯಂ ಕೂಡ ಬಾಳೆಹಣ್ಣಿನಲ್ಲಿರುವುದರಿಂದ ರಾತ್ರಿ ಊಟದ ಬಳಿಕ ಬಾಳೆಹಣ್ಣು ತಿನ್ನುವುದು ತುಂಬಾ ಒಳ್ಳೆಯದು.

ಸಕ್ಕರೆಗೆ ಪರ್ಯಾಯ
ರಾತ್ರಿ ಊಟದ ಬಳಿಕ ಏನಾದರೂ ಸಿಹಿ ತಿನ್ನಬೇಕು ಎನ್ನುವ ಆಸೆ ಕಾಡುತ್ತಾ ಇರುತ್ತದೆ. ಆದರೆ ರಾತ್ರಿ ವೇಳೆ ಸಿಹಿ ತಿನ್ನುವುದರಿಂದ ನಮ್ಮ ದೇಹಕ್ಕೆ ತುಂಬಾ ಹಾನಿಯನ್ನು ಉಂಟು ಮಾಡಬಹುದು.

ಸಕ್ಕರೆಗೆ ಪರ್ಯಾಯ
ಇದರಿಂದ ಸಿಹಿ ತಿನ್ನುವ ಬದಲು ಬಾಳೆಹಣ್ಣು ತಿಂದರೆ ಅದು ದೇಹಕ್ಕೆ ತುಂಬಾ ಒಳ್ಳೆಯದು. ಸಿಹಿ ತಿನ್ನುವ ಬಯಕೆಯನ್ನು ಇದು ನಿಗ್ರಹಿಸುವುದು ಮಾತ್ರವಲ್ಲದೆ ದೇಹಕ್ಕೆ ಬೇಕಾಗುವ ಪ್ರಮುಖ ಪೋಷಕಾಂಶಗಳನ್ನು ಒದಗಿಸುವುದು.

ಸ್ನಾಯು ಸೆಳೆತೆ ತಡೆಯುವುದು
ರಾತ್ರಿ ವೇಳೆ ಮಲಗಿದ್ದಾಗ ಕೆಲವೊಮ್ಮೆ ಸ್ನಾಯು ಸೆಳೆತ ಉಂಟಾಗುತ್ತದೆ. ಇದಕ್ಕೆ ಅತ್ಯುತ್ತಮ ಮನೆಮದ್ದು ಎಂದರೆ ರಾತ್ರಿ ಊಟ ಬಳಿಕ ಬಾಳೆಹಣ್ಣು ತಿನ್ನುವುದು. ಬಾಳೆಹಣ್ಣಿನಲ್ಲಿ ಪೊಟಾಶಿಯಂ ಮತ್ತು ಮೆಗ್ನಿಶಿಯಂ ಎನ್ನುವ ಎಲೆಕ್ಟ್ರೋಲೈಟ್‌ಗಳಿವೆ.

ಸ್ನಾಯು ಸೆಳೆತೆ ತಡೆಯುವುದು
ಇದು ದೇಹದಲ್ಲಿ ಎಲೆಕ್ಟ್ರೋಲೈಟ್ ಅನ್ನು ಪ್ರಮಾಣವನ್ನು ಹೆಚ್ಚಿಸಿ ಸ್ನಾಯು ಸೆಳೆತವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದೇಹದಲ್ಲಿ ಎಲೆಕ್ಟ್ರೋಲೈಟ್ ಕಡಿಮೆಯಾಗುವುದೇ ಸ್ನಾಯು ಸೆಳೆತಕ್ಕೆ ಕಾರಣವಾಗಿದೆ.

ನಾರಿನಾಂಶ ವೃದ್ಧಿಸುವುದು
ಒಳ್ಳೆಯ ಜೀರ್ಣಕ್ರಿಯೆಗೆ ಪ್ರಮುಖವಾಗಿ ನಾರಿನಾಂಶ ಬೇಕೇಬೇಕು. ನಾರಿನಾಂಶವು ಆರೋಗ್ಯಕರ ಹೃದಯಕ್ಕೆ ಒಳ್ಳೆಯದು ಮತ್ತು ಮಧುಮೇಹದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ರಾತ್ರಿ ಊಟದ ಬಳಿಕ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಬೇಕಾಗುವಂತಹ ಅತೀ ಅಗತ್ಯವಾದ ನಾರಿನಾಂಶವು ಸಿಗುವುದು.



Click it and Unblock the Notifications
