Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಊಟದ ತಟ್ಟೆಯ ಪಕ್ಕ ಇರಲಿ, ಒಂದು ತುಂಡು ಸೌತೆಕಾಯಿ
ಕೆಲವರಿಗೆ ಊಟದ ನಡುವೆ ಹಸಿ ಸೌತೆಯ ತುಂಡುಗಳನ್ನು ಜಗಿಯುವ ಅಭ್ಯಾಸವಿರುತ್ತದೆ. ಇನ್ನೂ ಕೆಲವರಿಗೆ ಕ್ಯಾರೆಟ್ ಈರುಳ್ಳಿಗಳನ್ನು ಜಗಿಯುವ ಅಭ್ಯಾಸವಿರುತ್ತದೆ. ಹಲವರಿಗೆ ವಿವಿಧ ತರಕಾರಿಗಳ ಮಿಶ್ರಣವನ್ನು ಜಗಿಯುವ ಅಭ್ಯಾಸವಿರುತ್ತದೆ. ಆದರೆ ಇವೆಲ್ಲದರ ಹೊರತಾಗಿ ಸೌತೆಕಾಯಿಯನ್ನು ನಿತ್ಯವೂ ಸೇವಿಸುವುದರಿಂದ ಇದರಲ್ಲಿರುವ ವಿವಿಧ ಪೋಷಕಾಂಶಗಳು ದೇಹಕ್ಕೆ ವಿವಿಧ ರೀತಿಯಲ್ಲಿ ಉಪಕಾರವನ್ನು ಮಾಡುತ್ತವೆ. ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!
ವಿಶೇಷವಾಗಿ ಚರ್ಮಕ್ಕೆ ಇದು ನೀಡುವ ಪೋಷಣೆಯ ಕಾರಣದಿಂದ ಸೌಂದರ್ಯವರ್ಧನೆಗಾಗಿ ಲೇಪನದಂತೆ ಬಳಸುವ ಜೊತೆಗೇ ಆಹಾರದ ಮೂಲಕ ಸೇವಿಸುವುದರಿಂದ ಚರ್ಮಕ್ಕೆ ಒಳಗಿನಿಂದ ಹೆಚ್ಚಿನ ಪೋಷಣೆ ಲಭ್ಯವಾಗುತ್ತದೆ. ಚರ್ಮಕ್ಕೆ ಸಹಜವರ್ಣ ದೊರಕುವ ಜೊತೆಗೇ ಕೂದಲಿಗೂ ಉತ್ತಮ ಪೋಷಣೆ ದೊರಕುತ್ತದೆ. ಇದೇ ಕಾರಣಕ್ಕೆ ಪ್ರತಿದಿನ ಸೌತೆಕಾಯಿಯನ್ನು ನಿತ್ಯವೂ ಸಾಲಾಡ್ ರೂಪದಲ್ಲಿ ಸೇವಿಸುವುದು ಅಗತ್ಯವಾಗಿದೆ. ದೇಹಕ್ಕೆ ತಂಪುಣಿಸುವ ಸೌತೆಕಾಯಿ ಜ್ಯೂಸ್‌ನ ಕರಾಮತ್ತೇನು?
ಇದರ ಪರಿಣಾಮವನ್ನು ಪಡೆಯಲು ಹಸಿಯಾಗಿ ತಿನ್ನುವುದು ಉತ್ತಮವಾದರೂ ಜ್ಯೂಸ್ ಮಾಡಿಕೊಂಡೂ ಕುಡಿಯಬಹುದು. ಬನ್ನಿ, ಸೌತೆಯ ನಿಯಮಿತ ಮತ್ತು ನಿತ್ಯದ ಸೇವನೆಯಿಂದ ಆರೋಗ್ಯಕ್ಕೆ ಯಾವ ಯಾವ ರೀತಿಯಲ್ಲಿ ಪ್ರಯೋಜನವಾಗುತ್ತದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ
ಬಾಯಿಯಲ್ಲಿ ದುರ್ವಾಸನೆಯಿದ್ದರೆ ಒಂದು ಎಳೆಸೌತೆಯ ಬಿಲ್ಲೆಯನ್ನು ನಾಲಿಗೆಯ ಮೇಲಿಟ್ಟು ಕೆಲವು ನಿಮಿಷ ಹಾಗೇ ಬಿಡಿ. ಬಳಿಕ ಇದನ್ನು ಉಗಿದು ಬಾಯಿಯನ್ನು ತಣ್ಣೀರಿನಿಂದ ಮುಕ್ಕಳಿಸಿ. ಇದರಿಂದ ಬಾಯಿಯ ದುರ್ವಾಸನೆ ದೂರವಾಗುತ್ತದೆ.

ತಲೆನೋವು ಕಡಿಮೆಯಾಗುತ್ತದೆ
ಸಾಮಾನ್ಯವಾಗಿ ರಾತ್ರಿಯ ಪಾರ್ಟಿಯ ಬಳಿಕ ಬೆಳಿಗ್ಗೆದ್ದಾಗ ತಲೆನೋವು ಆವರಿಸುತ್ತಿದ್ದರೆ ಇದಕ್ಕೆ ರಾತ್ರಿಯ ಊಟ ಭಾರಿಯಾಗಿರುವುದು ಕಾರಣವಾಗಿರಬಹುದು. ಆದ್ದರಿಂದ ರಾತ್ರಿ ಊಟದ ಬಳಿಕ ಕೆಲವು ಸೌತೆಕಾಯಿಯ ಬಿಲ್ಲೆಗಳನ್ನು ಅಗಿದು ಮಲಗಿ. ಇದರಿಂದ ಉತ್ತಮ ನಿದ್ದೆ ಬರುವ ಜೊತೆಗೇ ಬೆಳಿಗ್ಗೆದ್ದಾಗ ತಾಜಾತನದಿಂದಿರಲು ನೆರವಾಗುತ್ತದೆ. ಇದರಲ್ಲಿರುವ ಎಲೆಕ್ಟ್ರೋಲೈಟುಗಳು, ವಿಟಮಿನ್ನು ಮತ್ತು ಸಕ್ಕರೆ ಇದಕ್ಕೆ ನೆರವಾಗುತ್ತವೆ.

ತೂಕ ಇಳಿಸಲು ನೆರವಾಗುತ್ತದೆ
ಮುಖದ ಮೇಲೆ ನವಿರಾದ ನೆರಿಗೆಗಳು ಮೂಡಿದ್ದರೆ ಒಂದು ಸೌತೆಯ ಬಿಲ್ಲೆಯನ್ನು ನೆರಿಗೆಗಳಿರುವಲ್ಲಿ ಉಜ್ಜಿ. ಇದರಿಂದ ಚರ್ಮ ಸಹಜವರ್ಣ ಪಡೆಯಲು ನೆರವಾಗುತ್ತದೆ. ನಿತ್ಯವೂ ಸೌತೆಯ ಜ್ಯೂಸ್ ಕುಡಿಯುವ ಮೂಲಕ ತೂಕ ಇಳಿಸಲೂ ನೆರವಾಗುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ
ಕೆಲವು ಸಂಶೋಧನೆಗಳ ಮೂಲಕ ಮಲಬದ್ಧತೆಗೆ ಸೌತೆಕಾಯಿ ಉತ್ತಮ ಪರಿಹಾರ ಎಂದು ಕಂಡುಕೊಳ್ಳಲಾಗಿದೆ. ಪ್ರತಿ ಊಟದಲ್ಲಿ ಹಸಿ ಸೌತೆಕಾಯಿಯ ಕೆಲವು ತುಂಡುಗಳನ್ನು ತಿನ್ನುವ ಮೂಲಕ ಮಲಬದ್ಧತೆಯಾಗದಿರುವಂತೆ ನೋಡಿಕೊಳ್ಳಬಹುದು.

ಅಧಿಕ ರಕ್ತದೊತ್ತಡ ಕಡಿಮೆ ಮಾಡುತ್ತದೆ
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಸೌತೆಕಾಯಿ ಒಂದು ಔಷಧಿಯಂತಿದೆ. ಈ ತೊಂದರೆ ಇರುವವರು ಊಟದ ನಡುವೆ ಕೊಂಚ ಸೌತೆಬಿಲ್ಲೆಗಳನ್ನು ಸೇವಿಸುವ ಮೂಲಕ ಉತ್ತಮ ಪರಿಹಾರ ಪಡೆಯಬಹುದು.

ದೇಹದಲ್ಲಿ ಶಕ್ತಿ ಹೆಚ್ಚಿಸುತ್ತದೆ
ಮಧ್ಯಾಹ್ನದ ಬಳಿಕ ಎದುರಾಗುವ ಬಳಲಿಕೆಯಿಂದ ಪಾರಾಗಲು ಕಾಫಿ ಕುಡಿಯುವ ಬದಲು ಒಂದು ಎಳೆ ಸೌತೆಯನ್ನು ಅಗಿದು ತಿನ್ನಿ. ಇದರಲ್ಲಿರುವ ವಿಟಮಿನ್ನುಗಳು ಮತ್ತು ಕಾರ್ಬೋಹೈಡ್ರೇಟುಗಳು ತಕ್ಷಣವೇ ರಕ್ತಕ್ಕೆ ಲಭ್ಯವಾಗಿ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ.



Click it and Unblock the Notifications
