Latest Updates
-
ಹೀಟ್ವೇವ್ ಅಲರ್ಟ್: ಬಿಸಿಲ ಬೇಗೆಯಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ಡೇಟಿಂಗ್ ಪ್ಲಾನ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಗಾಳಿಯ ಅಬ್ಬರ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಉಪಾಯಗಳು -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಆಹಾರ ಕ್ರಮ ಪಾಲಿಸಿ -
ಫ್ಯಾಶನ್ ರೆವಲ್ಯೂಷನ್ ಡೇ: ಬಟ್ಟೆಯನ್ನು ಉಲ್ಟಾ ಧರಿಸಿ ಫೋಟೋ ಹಾಕುತ್ತಿರುವುದೇಕೆ? ಈ ಟ್ರೆಂಡ್ ಹಿಂದಿದೆ ದೊಡ್ಡ ಕಥೆ! -
ಬಿಸಿಲ ಅಲೆ: ಸುಡುವ ಬಿಸಿಲಿನಲ್ಲಿ ವ್ಯಾಯಾಮ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಉತ್ತರ ಭಾರತದ ಬಿಸಿಲ ಬೇಗೆ: ಮದುವೆ ಶಾಸ್ತ್ರಗಳೆಲ್ಲಾ ಈಗ ಸೂರ್ಯ ಮುಳುಗಿದ ಮೇಲೆ! -
ಬಿಸಿಗಾಳಿಯ ಆರ್ಭಟ: ನಿಮ್ಮ ಮನೆಯನ್ನು ಫ್ರಿಡ್ಜ್ನಂತೆ ತಂಪಾಗಿಡಲು ಇಲ್ಲಿವೆ ಅದ್ಭುತ ದೇಸಿ ಟಿಪ್ಸ್! -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ಹೊಡೆತದಿಂದ ಪಾರಾಗಲು ಮನೆಯಲ್ಲೇ ತಯಾರಿಸಿ ಈ ಜೀವ ರಕ್ಷಕ ಪಾನೀಯ! -
ಬಿಸಿಗಾಳಿಯ ಆರ್ಭಟ: ಸುಡುವ ಬಿಸಿಲಿನಿಂದ ಪಾರಾಗಲು ನೀವು ಮಾಡಲೇಬೇಕಾದ ಬದಲಾವಣೆಗಳೇನು?
ಸತತ 15 ದಿನ ಎಳೆನೀರು ಕುಡಿಯಿರಿ-ಆರೋಗ್ಯ ಪಡೆಯಿರಿ
ಎಳನೀರು ಅಥವಾ ಎಳೆನೀರು ಸೇವನೆಯೂ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ದಿನಕ್ಕೊಂದು ಎಳನೀರನ್ನು ಕುಡಿಯುವ ಮೂಲಕ ಮೂತ್ರ ವರ್ಧಿಸುವ ಮೂಲಕ ದೇಹದ ಕಲ್ಮಶಗಳು ಹೊರಹಾಕಲ್ಪಟ್ಟು ಆರೋಗ್ಯ ಉತ್ತಮಗೊಳ್ಳುತ್ತದೆ.
ಕಾಯಿತುರಿ ಇಲ್ಲದ ದಕ್ಷಿಣ ಭಾರತೀಯ ಅಡುಗೆ ತುಂಬಾ ಕಡಿಮೆ. ಕಾಯಿ ತುರಿ ಹೇಗೆ ಆರೋಗ್ಯಕರವೋ ಅಂತೆಯೇ ಎಳನೀರಿನ ಅಥವಾ ಎಳೆನೀರು ಸೇವನೆಯೂ ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತದೆ. ದಿನಕ್ಕೊಂದು ಎಳನೀರನ್ನು ಕುಡಿಯುವ ಮೂಲಕ ಮೂತ್ರ ವರ್ಧಿಸುವ ಮೂಲಕ ದೇಹದ ಕಲ್ಮಶಗಳು ಹೊರಹಾಕಲ್ಪಟ್ಟು ಆರೋಗ್ಯ ಉತ್ತಮಗೊಳ್ಳುತ್ತದೆ.
ಆದರೆ ಸತತವಾಗಿ ಹದಿನೈದು ದಿನಗಳ ಕಾಲ ಒಂದು ದಿನವೂ ಬಿಡದೇ ಎಳೆನೀರು ಕುಡಿಯುವ ಯಾವ ರೀತಿಯ ಪ್ರಯೋಜನಗಳಿವೆ ಗೊತ್ತೇ? ಎಳನೀರು ನಿಸರ್ಗ ನೀಡಿರುವ ಒಂದು ಅದ್ಭುತ ದ್ರವವಾಗಿದ್ದು ಇದರಲ್ಲಿ ಹಲವಾರು ಪೋಷಕಾಂಶಗಳಿವೆ.
ವಿಟಮಿನ್ ಕೆ, ಎಲೆಕ್ಟ್ರೋಲೈಟುಗಳು, ಪೊಟ್ಯಾಶಿಯಂ, ಸೋಡಿಯಂ, ವಿಟಮಿನ್ ಸಿ ಮೊದಲಾದ ಅಗತ್ಯ ಪೋಷಕಾಂಶಗಳಿದ್ದು ಆರೋಗ್ಯವನ್ನು ವೃದ್ಧಿಸುವಲ್ಲಿ ಹಲವು ರೀತಿಯಲ್ಲಿ ನೆರವು ನೀಡುತ್ತದೆ. ಬನ್ನಿ, ಹದಿನೈದು ದಿನ ಸತತವಾಗಿ ಎಳನೀರು ಕುಡಿದೇ ನೋಡೋಣ....

ಕಲ್ಮಶಗಳನ್ನು ಹೊರಹಾಕುತ್ತದೆ
ನಮ್ಮ ದೇಹದ ಎಲ್ಲಾ ಅಂಗಗಳ ಮೂಲಕ ಸಾಗಬಲ್ಲ ಕ್ಷಮತೆ ಇರುವ ಎಳನೀರು ದೇಹದ ಎಲ್ಲಾ ಅಂಗಗಳನ್ನು ಈ ಮೂಲಕ ಸ್ವಚ್ಛಗೊಳಿಸಿ ಹಳೆಯ ಕಲ್ಮಶಗಳನ್ನು ನಿವಾರಿಸುತ್ತದೆ. ನಿತ್ಯವೂ ಕೊಂಚಕೊಂಚವಾಗಿ ಮೂತ್ರದ ಮೂಲಕ ಈ ಕಲ್ಮಶಗಳನ್ನು ನಿವಾರಿಸುತ್ತಾ ಹಿಂದೆಂದೂ ಇಲ್ಲದಂತೆ ಕಲ್ಮಶಗಳನ್ನು ನಿವಾರಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ
ಹದಿನೈದು ದಿನ ಸತತವಾಗಿ ಎಳೆನೀರು ಕುಡಿಯುವ ಮೂಲಕ ಅಧಿಕ ರಕ್ತದೊತ್ತಡ ನಿಧಾನವಾಗಿ ಸಾಮಾನ್ಯ ಮಟ್ಟಕ್ಕೆ ಇಳಿಯುತ್ತದೆ. ಪೆಡಸಾಗಿದ್ದ ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತಸಂಚಾರವನ್ನು ಸುಲಲಿತಗೊಳಿಸಲು ಎಳನೀರು ನೆರವಾಗುತ್ತದೆ.

ಎದೆಯುರಿಯನ್ನು ಕಡಿಮೆಗೊಳಿಸುತ್ತದೆ
ಹೊಟ್ಟೆ ಮತ್ತು ಕರುಳುಗಳಲ್ಲಿ ಅಜೀರ್ಣತೆಯ ಕಾರಣ ಎದುರಾಗಿದ್ದ ಆಮ್ಲೀಯತೆ ಮತ್ತು ಈ ಮೂಲಕ ಎದುರಾಗಿದ್ದ ಹೊಟ್ಟೆಯುರಿಯನ್ನು ಕಡಿಮೆಗೊಳಿಸುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ
ಮಧುಮೇಹಿಗಳು ಸತತವಾಗಿ ಹದಿನೈದು ದಿನಗಳ ಕಾಲ ಎಳನೀರನ್ನು ಕುಡಿಯುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಹಾಗೂ ತನ್ಮೂಲಕ ಮಧುಮೇಹವನ್ನು ನಿಯಂತ್ರಿಸಲೂ ಸಾಧ್ಯವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ
ಪ್ರತಿದಿನ ಎಳೆನೀರನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿ ಒಂದು ಘಂಟೆಯ ಬಳಿಕ ಉಪಾಹಾರ ಸೇವಿಸುವ ಮೂಲಕ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ತನ್ಮೂಲಕ ದೇಹದ ಹೆಚ್ಚುವರಿ ತೂಕವನ್ನುಶೀಘ್ರವಾಗಿ ಕಳೆದುಕೊಳ್ಳಲು ನೆರವಾಗುತ್ತದೆ.

ಉತ್ತಮ ಕಾಮೋತ್ತೇಜಕವಾಗಿದೆ
ಎಳೆನೀರಿನ ಸೇವನೆಯಿಂದ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಇದು ಜನನೇಂದ್ರಿಯಗಳಿಗೆ ಧಾವಿಸುವ ರಕ್ತದ ಪ್ರಮಾಣವನ್ನೂ ಹೆಚ್ಚಿಸುವ ಮೂಲಕ ಕಾಮೋತ್ತೇಜನೆಯನ್ನು ತಕ್ಕ ಮಟ್ಟಿಗೆ ಹೆಚ್ಚಿಸುತ್ತದೆ.

ಮೂಳೆಗಳು ಟೊಳ್ಳಾಗುವುದನ್ನು ತಪ್ಪಿಸುತ್ತದೆ
ಎಳೆನೀರನ್ನು ಸತತವಾಗಿ ಹದಿನೈದು ದಿನಗಳ ಕಾಲ ಕುಡಿಯುವ ಮೂಲಕ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಶಿಥಿಲವಾಗುವ osteoporosis ಎಂಬ ಸ್ಥಿತಿಯನ್ನು ತಪ್ಪಿಸುತ್ತದೆ.



Click it and Unblock the Notifications