Latest Updates
-
ಸಂಬಂಧಗಳ ಆತಂಕ ಕಾಡ್ತಿದೆಯಾ? ನೆಮ್ಮದಿ ನೀಡುವ ಉಚಿತ ಸಹಾಯವಾಣಿಗಳು -
IMD ಮಳೆ ಮುನ್ಸೂಚನೆ: ಬಾಲ್ಕನಿ ಸುರಕ್ಷತೆಗೆ ಈ ಕ್ರಮಗಳನ್ನು ಪಾಲಿಸಿ -
ಆರೋಗ್ಯಕರ ಆಹಾರ ಪದ್ಧತಿ: ಬೇಸಿಗೆಯಲ್ಲಿ ಲವಲವಿಕೆಯಿಂದ ಇರಲು ಹೀಗೆ ಮಾಡಿ -
ಅನುಷ್ಕಾ ಶರ್ಮಾ ಸ್ಟೇಡಿಯಂ-ಕೋರ್ ಲುಕ್: ಕ್ರಿಕೆಟ್ ಸೀಸನ್ನ ಹೊಸ ಕ್ರೇಜ್ -
ಇಂದಿನ ರಾಶಿ ಭವಿಷ್ಯ: ನಿಮ್ಮ ಜೀವನದಲ್ಲಿ ಕಾದಿದೆ ಅಚ್ಚರಿಯ ಬದಲಾವಣೆ! -
ಅಹಮದಾಬಾದ್ ದೋಸೆ ಹಿಟ್ಟಿನ ಆತಂಕ: ನಿಮ್ಮ ಮಕ್ಕಳ ಆರೋಗ್ಯಕ್ಕೆ ಈ ಎಚ್ಚರಿಕೆ ಅಗತ್ಯ! -
ಫಿಟ್ನೆಸ್ ಕ್ರೇಜ್: ಮನೆಯಲ್ಲೇ ಫಿಟ್ ಆಗಿರೋದು ಹೇಗೆ? -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ!
ಕೇಳಿ ಇಲ್ಲಿ, ಮೂಲಂಗಿ ಎಂದಾಕ್ಷಣ ಮುಖ ಸಿಂಡರಿಸಬೇಡಿ!
ಹೋಟೆಲುಗಳಲ್ಲಿ ಮಾಡುವ ಸಾಂಬಾರ್‌ನಲ್ಲಿ ಅತ್ಯಂತ ಸಾಮಾನ್ಯವಾದ ತರಕಾರಿ ಎಂದರೆ ಮೂಲಂಗಿ. ಏಕೆಂದರೆ ಮೂಲಂಗಿ ಅಗ್ಗವೂ, ಸ್ವಚ್ಛಗೊಳಿಸಲು ಹೆಚ್ಚು ಶ್ರಮ ತೆಗೆದುಕೊಳ್ಳದಂತಹದ್ದೂ, ತುಂಡುಮಾಡಲು ಸುಲಭವೂ, ಬೇಗನೇ ಬೇಯುವಂತಹದ್ದೂ, ಸಾಂಬಾರಿನ ರುಚಿ ಹೆಚ್ಚಿಸುವಂತಹದ್ದೂ ಆಗಿದ್ದು ಈ ಕಾರಣಗಳಿಂದಾಗಿ ಹೋಟೆಲಿನವರಿಗೆ ಹೆಚ್ಚು ಅಚ್ಚುಮೆಚ್ಚಿನದ್ದಾಗಿದೆ.
ಮನೆಗಳಲ್ಲಿಯೂ ಮೂಲಂಗಿಯನ್ನು ಸಾಂಬಾರ್, ಪಲ್ಯಗಳನ್ನು ಮಾಡಲು ಉಪಯೋಗಿಸುತ್ತಾರೆ. ಇದು ಬಿಳಿ, ಕೆಂಪು ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಿರುವ ಕಾರಣ ಖಾದ್ಯದಲ್ಲಿ ಕೊಂಚ ವೈವಿಧ್ಯತೆಯನ್ನೂ ಪಡೆಯಬಹುದು. ಇದು ಕೊಂಚ ಖಾರವಾಗಿದ್ದರೂ ಹಸಿಯಾಗಿ ತಿನ್ನಬಹುದಾದ ತರಕಾರಿಯಾಗಿದ್ದು ನಿತ್ಯವೂ ಸಾಲಾಡ್ ನಲ್ಲಿ ಸೇರಿಸಿಕೊಳ್ಳಬಹುದು. ಸರಳ ತಯಾರಿಕೆಯ ಹರಿಕಾರ ಮೂಲಂಗಿ ಸಾಂಬಾರ್
ಇದರ ಗಡ್ಡೆ ಮತ್ತು ಎಲೆಗಳನ್ನು ಸಹಾ ಸಾರಿನಲ್ಲಿ, ಪಲ್ಯದಲ್ಲಿ ಬಳಸಿಕೊಳ್ಳಬಹುದು. ಮೂಲಂಗಿಯಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ, ರೈಬೋಫ್ಲೇವಿನ್, ತಾಮ್ರ, ವಿಟಮಿನ್ ಬಿ6, ಮ್ಯಾಂಗನೀಸ್ ಮತ್ತು ಕ್ಯಾಲ್ಸಿಯಂ ಸಹಾ ಇವೆ. ಇದರಲ್ಲಿರುವ ಉತ್ತಮ ಪ್ರಮಾಣದ ಕರಗುವ ಮತ್ತು ಕರಗದ ನಾರು ಜೀರ್ಣಕ್ರಿಯೆಯಲ್ಲಿ ಸಹಕರಿಸುವ ಮೂಲಕ ಇದೊಂದು ಉತ್ತಮವಾದ ತರಕಾರಿಯಾಗಿದೆ.
ಆದರೆ ಇದರ ಉತ್ತಮ ಗುಣಗಳ ಪಟ್ಟಿ ಇಲ್ಲಿಗೇ ಮುಗಿಯುವುದಿಲ್ಲ. ಹಸಿಯಾಗಿ ನಿತ್ಯವೂ ಸೇವಿಸುವ ಮೂಲಕ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳಿವೆ. ಇದು ಕೊಂಚ ಖಾರವಾದುದರಿಂದ ಊಟದ ನಡುವೆ ಮೆಣಸಿನ ಬದಲಿಗೆ ತಿನ್ನಲು ಉಪಯೋಗಿಸಬಹುದು. ಅಲ್ಲದೇ ಹಸಿ ಮೂಲಂಗಿಯ ಸೇವನೆಯಿಂದ ಕಾಮಾಲೆ, ಮೂತ್ರನಾಳದ ಸೋಂಕು, ಮಲಬದ್ಧತೆ ಮೊದಲಾದವುಗಳನ್ನು ಕಡಿಮೆಗೊಳಿಸುತ್ತದೆ.
ಅಲ್ಲದೇ ಹೃದಯದ ಕ್ಷಮತೆಯನ್ನು ಹೆಚ್ಚಿಸುವುದು, ರಕ್ತವನ್ನು ಶುದ್ಧೀಕರಿಸುವುದು, ಜೀರ್ಣಕ್ರಿಯೆಯಲ್ಲಿ ಸಹಕರಿಸುವುದು, ದೇಹಕ್ಕೆ ಹಾನಿಕರವಾದ ಅಗತ್ಯಕ್ಕೂಹೆಚ್ಚಿನ ಪ್ರಮಾಣದ ಬಿಲಿರುಬಿನ್ (bilirubin) ಎಂಬ ಪೋಷಕಾಂಶವನ್ನು ವಿಸರ್ಜಿಸುವುದು, ರಕ್ತದಲ್ಲಿ ಸಕ್ಕರೆಯ ಮಟ್ಟ ಸೂಕ್ತವಾಗಿರುವಂತೆ ನೋಡಿಕೊಳ್ಳುವುದು ಇತ್ಯಾದಿ ಪ್ರಯೋಜನಗಳಿವೆ. ಇದುವರೆಗೆ ಈ ಬಗ್ಗೆ ತಿಳಿದಿರದ ಮೂಲಂಗಿಯಿಂದ ಪಡೆಯಬಹುದಾದ ಪ್ರಯೋಜನಗಳನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತದೆ..

ಕಾಮಾಲೆ ರೋಗಕ್ಕೆ ಮದ್ದು
ಕಾಮಾಲೆ ರೋಗವಿದ್ದವರಿಗೆ ಮೂಲಂಗಿ ಒಂದು ಅತಿ ಸೂಕ್ತವಾದ ಆಹಾರವಾಗಿದೆ. ಇದರ ವಿಷಕಾರಿ ವಸ್ತುಗಳನ್ನು ನಿವಾರಿಸುವ ಗುಣ ಯಕೃತ್‌ನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ರಕ್ತವನ್ನು ಶುದ್ದೀಕರಿಸುವ ಮೂಲಕ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು ಮತ್ತು ತ್ಯಾಜ್ಯಗಳನ್ನು ಹೊರಹಾಕಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಾಮಾಲೆ ರೋಗಕ್ಕೆ ಮದ್ದು
ಅಲ್ಲದೇ ಕಾಮಾಲೆ ರೋಗಿಗಳು ಅನುಭವಿಸುವ ಕೆಂಪುರಕ್ತಕಣಗಳ ನಾಶವನ್ನೂ ತಡೆದು ಕಾಮಾಲೆ ರೋಗವನ್ನು ಶೀಘ್ರವಾಗಿ ತಹಬಂದಿಗೆ ತರಲು ನೆರವಾಗುತ್ತದೆ.

ಮೂಲವ್ಯಾಧಿಗೆ ಸುಲಭ ಮದ್ದು
ಸಾಮಾನ್ಯವಾಗಿ ಮಲಬದ್ದತೆಯಿಂದ ಮೂಲವ್ಯಾಧಿಯ ಸಾಧ್ಯತೆ ಹೆಚ್ಚುತ್ತದೆ. ಇದಕ್ಕೆ ಪ್ರಮುಖ ಕಾರಣ ನಾರು ಇಲ್ಲದ ಆಹಾರ ಸೇವನೆ. ಮೈದಾಹಿಟ್ಟಿನಲ್ಲಿ ನಾರು ಇಲ್ಲದೇ ಇರುವ ಕಾರಣ ಮೈದಾ ಆಧಾರಿತ ಆಹಾರಗಳನ್ನು ಸೇವಿಸುವ ಮೂಲಕ ಮಲಬದ್ದತೆಯೂ ಹೆಚ್ಚುತ್ತದೆ. ಆದ್ದರಿಂದ ನಾರು ಹೆಚ್ಚಿರುವ ಆಹಾರ ಸೇವಿಸುವುದೇ ಜಾಣತನ.

ಮೂಲವ್ಯಾಧಿಗೆ ಸುಲಭ ಮದ್ದು
ಒಂದು ವೇಳೆ ಮೂಲವ್ಯಾಧಿ ಈಗಾಗಲೇ ಪ್ರಾರಂಭವಾಗಿದ್ದರೆ ಇದನ್ನು ಸರಿಪಡಿಸಲು ಹೆಚ್ಚಿನ ಒತ್ತಡ ನೀಡದ ಆಹಾರ ವಿಸರ್ಜನೆಗೊಳ್ಳಬೇಕು. ಇದಕ್ಕೆ ಕರಗದ ನಾರು ಇರುವ ಆಹಾರ ಸೂಕ್ತ. ಇದರಿಂದ ನೈಸರ್ಗಿಕವಾಗಿ ಮೂಲವ್ಯಾಧಿ ಮತ್ತು ಮೊಳೆಯ ತೊಂದರೆಯನ್ನು ದೇಹವೇ ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಮೂಲಂಗಿಯನ್ನೇ ಹೆಚ್ಚಾಗಿ ತಿಂದರೆ ಮೂಲವ್ಯಾಧಿಯೂ ಕಡಿಮೆಯಾಗುತ್ತದೆ ಹಾಗೂ ಜೀರ್ಣಶಕ್ತಿಯೂ ಉತ್ತಮಗೊಳ್ಳುತ್ತದೆ.

ಮೂತ್ರನಾಳದ ಸೋಂಕು ನಿವಾರಿಸುತ್ತದೆ
ಮೂಲಂಗಿ ಒಂದು ಉತ್ತಮವಾದ ಮೂತ್ರವರ್ಧಕವಾಗಿದ್ದು ಮೂತ್ರದ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ. ವಿಶೇಷವಾಗಿ ಮೂಲಂಗಿಯ ರಸ ಮೂತ್ರಕೋಶ ಮತ್ತು ಮೂತ್ರನಾಳದ ಸೋಂಕು ನಿವಾರಿಸುವ ಗುಣ ಹೊಂದಿದೆ. ಅದರಲ್ಲೂ ಮೂತ್ರದಲ್ಲಿ ಸೋಂಕುಕಾರಕ ಕಣಗಳು ಹೆಚ್ಚಾಗಿ ಉರಿ ತರಿಸುವ ಸಂದರ್ಭದಲ್ಲಿ ಮೂಲಂಗಿ ರಸವನ್ನು ದಿನಕ್ಕೆ ಮೂರು ಬಾರಿ ಕುಡಿಯುವ ಮೂಲಕ ಒಂದೇ ದಿನದಲ್ಲಿ ಕಡಿಮೆಗೊಳಿಸಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮೂತ್ರನಾಳದ ಸೋಂಕು ನಿವಾರಿಸುತ್ತದೆ
ಅಲ್ಲದೇ ಇದರ ಮೂತ್ರವನ್ನು ಶುದ್ಧೀಕರಿಸುವ ಗುಣದ ಕಾರಣ ಮೂತ್ರಪಿಂಡಗಳ ಮೇಲಿನ ಭಾರ ಕಡಿಮೆಯಾಗಿ ಮೂತ್ರಪಿಂಡಗಳ ಕ್ಷಮತೆಯೂ ಹೆಚ್ಚುತ್ತದೆ ಹಾಗೂ ಮೂತ್ರಪಿಂಡಗಳೂ ಶುದ್ಧಗೊಳ್ಳಲು ಸಾಧ್ಯವಾಗುತ್ತದೆ.

ತೂಕ ಇಳಿಸಲು ನೆರವಾಗುತ್ತದೆ
ಮೂಲಂಗಿಯಲ್ಲಿ ಪೋಷಕಾಂಶಗಳ ಪ್ರಮಾಣ ಹೆಚ್ಚಾಗಿದ್ದರೂ ಕ್ಯಾಲೋರಿಗಳು ಕಡಿಮೆ ಇರುವ ಕಾರಣ ತೂಕವನ್ನು ಹೆಚ್ಚಿಸದಿರುವ ಆಹಾರಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತೂಕ ಇಳಿಸಲು ನೆರವಾಗುತ್ತದೆ
ಅಲ್ಲದೇ ಇದರಲ್ಲಿ ಕಡಿಮೆ ಇರುವ ಕಾರ್ಬೋಹೈಡ್ರೇಟುಗಳು ಮತ್ತು ನಿಧಾನವಾಗಿ ರಕ್ತಕ್ಕೆ ಸೇರಿಸುವ ಗುಣದ ಕಾರಣ ಊಟದ ಬಳಿಕ ಬಹಳಹೊತ್ತಿನವರೆಗೆ ಹಸಿವಾಗದೇ ಇರುವ ಮೂಲಕ ಅನಗತ್ಯ ಆಹಾರವನ್ನು ಸೇವಿಸುವುದು ತಡೆದಂತಾಗುತ್ತದೆ. ಇದು ಸಹಾ ಅನಗತ್ಯ ತೂಕ ಏರಿಕೆಯಿಂದ ತಡೆಯುತ್ತದೆ.

ಹೃದಯ ಸಂಬಂಧಿ ತೊಂದರೆಗಳ ಚಿಕಿತ್ಸೆಗೆ ನೆರವಾಗುತ್ತದೆ
ಹೃದಯ ಸಂಬಂಧಿ ತೊಂದರೆಗಳಿಗೆ ಸೂಕ್ತ ಪರಿಹಾರ ನೀಡಬಲ್ಲ ಆಂಥೋಸಯಾನಿನ್ (anthocyanin) ಎಂಬ ಪೋಷಕಾಂಶ ಮೂಲಂಗಿಯಲ್ಲಿ ಹೇರಳವಾಗಿದ್ದು ಇದರ ನಿಯಮಿತ ಸೇವನೆಯಿಂದ ಹೃದಯ ಸಂಬಂಧಿ ತೊಂದರೆಗಳಿಗೆ ನೀಡುವ ಚಿಕಿತ್ಸೆಗಳಿಗೆ ಉತ್ತಮ ಬೆಂಬಲ ದೊರಕುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಹೃದಯ ಸಂಬಂಧಿ ತೊಂದರೆಗಳ ಚಿಕಿತ್ಸೆಗೆ ನೆರವಾಗುತ್ತದೆ
ಅಲ್ಲದೇ ಮೂಲಂಗಿಯ ಉರಿಯೂತ ನಿವಾರಕ ಮತ್ತು ಕ್ಯಾನ್ಸರ್ ನಿವಾರಕ ಗುಣ ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆಯನ್ನು ಉತ್ತಮಗೊಳಿಸಲೂ ನೆರವಾಗುತ್ತದೆ.

ಅಧಿಕ ರಕ್ತದೊತ್ತಡ ಕಡಿಮೆಗೊಳಿಸಲು ನೆರವಾಗುತ್ತದೆ
ಮೂಲಂಗಿಯಲ್ಲಿ ಪೊಟ್ಯಾಶಿಯಂ ಅತಿ ಹೆಚ್ಚಿನ ಪ್ರಮಾಣದಲ್ಲಿರುವುದು ರಕ್ತದೊತ್ತಡ ಕಡಿಮೆಗೊಳಿಸಲು ಉತ್ತಮವಾಗಿದೆ. ಪೊಟ್ಯಾಶಿಯಂ ರಕ್ತನಾಳಗಳನ್ನು ಸಡಿಲಗೊಳಿಸಿ ರಕ್ತವನ್ನು ಸುಗಮವಾಗಿ ಹರಿಯಲು ನೆರವಾಗುವ ಮೂಲಕ ಅಧಿಕ ರಕ್ತದೊತ್ತಡದ ತೊಂದರೆ ಇರುವವರಿಗೆ ಮೂಲಂಗಿ ಆಹಾರಕ್ಕಿಂತಲೂ ಔಷಧಿಯ ರೂಪದಲ್ಲಿ ಹೆಚ್ಚು ಅನುಕೂಲಕರವಾಗಿದೆ.



Click it and Unblock the Notifications




