Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗೋಮೂತ್ರ, ಇದುವೇ ಸ್ವಸ್ಥ ಜೀವನದ ಮೂಲ ಮಂತ್ರ
ಗವ್ಯಮ್ ಪವಿತ್ರಮ್ ಚ ರಸಯನಮ್ ಕ ಪಥ್ಯಮ್ ಚ ಹೃದ್ಯಮ್ ಬಲಮ್ ಬುದ್ಧಿ ಸ್ಯತ
ಆಯುಹ್ ಪ್ರದಮ್ ರಕ್ತ್ ವಿಕರ್ ಹರಿ ತ್ರಿದೋಶ್ ಹೃದ್ರೊಗ್ ವಿಶಪಹಮ್ ಸ್ಯತ
ಈ ಶ್ಲೋಕದ ಮೂಲಕ ಗೋಮೂತ್ರದ ಪ್ರಾಮುಖ್ಯತೆಯ ಬಗ್ಗೆ ವೇದಗಳಲ್ಲಿ ತಿಳಿಸಲಾಗಿದೆ. ಇದರ ಅರ್ಥ ಹೀಗಿದೆ: ಗೋಮೂತ್ರ ಪಂಚಗವ್ಯ ಒಂದು ಉತ್ತಮ ಸಿದ್ಧರಸ, ಉತ್ತಮ ಆಹಾರ, ಹೃದಯಕ್ಕೆ ಉತ್ತಮವಾದ, ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಿಸುವ, ಆಯಸ್ಸು ಹೆಚ್ಚಿಸುವ, ಪಿತ್ತವನ್ನು ಸಮತೋಲನದಲ್ಲಿರಿಸುವ, ಶ್ವಾಸ ಮತ್ತು ಮೂಗಿನೊಳಗಣ ಲೋಳೆಯನ್ನು ಉತ್ತಮವಾಗಿಸುವ, ಹೃದಯತೊಂದರೆಗಳನ್ನು ನಿವಾರಿಸುವ ಮತ್ತು ವಿಷದ ಪರಿಣಾಮವನ್ನು ಕಡಿಮೆಗೊಳಿಸುವ ಶಕ್ತಿಯುಳ್ಳದ್ದಾಗಿದೆ.
ಇಂದು ಏಡ್ಸ್ ರೋಗಕ್ಕೆ ಒಳಗಾದವರು ಪಂಚಗವ್ಯದ ಚಿಕಿತ್ಸೆಯನ್ನು ಪಡೆದು ಉತ್ತಮ ಪರಿಣಾಮವನ್ನು ಪಡೆಯುತ್ತಿದ್ದಾರೆ. ಮೈಗ್ರೇನ್ ತಲೆನೋವು ಮತ್ತು ಇತರ ಪ್ರಕಾರದ ತಲೆನೋವುಗಳಿಂದ ಸುಮಾರು ಹದಿನೈದು ವರ್ಷಗಳಿಂದ ಬಳಲುತ್ತಿದ್ದವರಿಗೆ ಗೋಮೂತ್ರದ ಚಿಕಿತ್ಸೆಯಿಂದ ಆರು ತಿಂಗಳಲ್ಲಿಯೇ ಉತ್ತಮ ಪರಿಹಾರ ದೊರಕಿದೆ. ಮಾನಸಿಕ ಒತ್ತಡ ಮತ್ತು ಸ್ಮರಣ ಶಕ್ತಿಯನ್ನು ಹೆಚ್ಚಿಸುವ ಶಕ್ತಿಯನ್ನೂ ಹೊಂದಿದೆ. ಕೆಲವು ವರ್ಷಗಳಿಂದ ಮಧ್ಯಪ್ರದೇಶದ ಇಂದೋರ್ ನಗರದಲ್ಲಿರುವ ಗೋಮೂತ್ರ ಚಿಕಿತ್ಸಾ ಮತ್ತು ಸಂಶೋಧನಾ ಕೇಂದ್ರದ ನೆರವಿನಿಂದ ಒಂದೂವರೆ ಲಕ್ಷಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ. ಹಿಂದೂಗಳು ಗೋಮಾತೆಯನ್ನು ಪೂಜಿಸಲು ಕಾರಣಗಳೇನು?
ಅದರಲ್ಲೂ ಮಲಬದ್ಧತೆಯಿಂದ ನರಳುತ್ತಿದ್ದ ರೋಗಿಗಳ ಪೈಕಿ ಶೇಖಡಾ 85 ರಿಂದ 90 ರಷ್ಟು ಜನರು ಉಪಯೋಗ ಪಡೆದಿದ್ದರೆ. ಒಂದು ಹಳೆಯ ಸುಭಾಷಿತದ ಪ್ರಕಾರ ಹೊಟ್ಟೆ ಚೆನ್ನಾಗಿದ್ದರೆ ಆರೋಗ್ಯವೂ ಚೆನ್ನಾಗಿರುತ್ತದೆ. ಗೋಮೂತ್ರದಿಂದ ಹೊಟ್ಟೆಯ ಶುದ್ಧಿ ಉತ್ತಮವಾಗುತ್ತದೆ ಹಾಗೂ ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕಲು ನೆರವಾಗುತ್ತದೆ. ವಾಸ್ತವವಾಗಿ ಮಲಬದ್ಧತೆಗಾಗಿ ನೀಡುವ ಚಿಕಿತ್ಸೆಯಿಂದ ಒಂದು ತಿಂಗಳಲ್ಲೇ ಉತ್ತಮ ಫಲ ಕಂಡುಬಂದಿದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅರಿಯೋಣ:

ಪುರಾಣಗಳ ಪ್ರಕಾರ
ಪುರಾಣಗಳಲ್ಲಿ ತಿಳಿಸಿರುವ ಪ್ರಕಾರ ಹಿಂದಿನ ಜನ್ಮದ ಫಲವನ್ನು ಇಂದಿನ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ. ಗೋಮೂತ್ರದಲ್ಲಿ ಗಂಗೆ ನೆಲೆಸಿರುತ್ತಾಳೆ ಎಂದು ಪುರಾಣದಲ್ಲಿ ತಿಳಿಸಲಾಗಿದೆ. ಗಂಗೆ ಪಾಪನಾಶಿನಿಯಾಗಿದ್ದಾಳೆ. ಗೋಮೂತ್ರ ಸೇವನೆಯ ಮೂಲಕ ಗಂಗೆಯು ಹಿಂದಿನ ಜನ್ಮದ ಪಾಪಫಲ ಮತ್ತು ವಿವಿಧ ರೋಗಗಳಿಂದ ರಕ್ಷಿಸುತ್ತಾಳೆ ಎಂದು ಪುರಾಣಗಳಲ್ಲಿ ತಿಳಿಸಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪುರಾಣಗಳ ಪ್ರಕಾರ
ಅಲ್ಲದೆ ದೇಹದಲ್ಲಿ ಭೂತಸಂಚಾರವಾದರೆ ಇದು ಗೋಮೂತ್ರದ ಮೂಲಕ ಹೊರಹೋಗುತ್ತವೆ. ಭೂತಗಳ ನಾಯಕ ಶಿವನಾಗಿದ್ದಾನೆ. ಶಿವನ ಜಟೆಯಲ್ಲಿ ಗಂಗೆ ನೆಲೆಸಿದ್ದಾಳೆ. ಗಂಗೆ ಗೋಮೂತ್ರದಲ್ಲಿಯೂ ಇದ್ದಾಳೆ. ಗೋಮೂತ್ರದ ಸೇವನೆಯಿಂದ ಭೂತಗಳಿಗೆ ಗಂಗೆ, ಮತ್ತು ಗಂಗೆಯ ಮೂಲಕ ತಮ್ಮ ನಾಯಕ ಶಿವನ ದರ್ಶನವಾಗುತ್ತದೆ. ಶಿವನ ದರ್ಶನದಿಂದ ಭೂತಗಳು ಶಾಂತವಾಗುತ್ತವೆ ಹಾಗೂ ದೇಹಕ್ಕೆ ಯಾವುದೇ ತೊಂದರೆ ನೀಡಲು ಹೆದರುತ್ತವೆ. ತನ್ಮೂಲಕ ಈ ಮೂಲಕ ಎದುರಾಗಬಹುದಾದ ರೋಗಗಳಿಂದ ಮುಕ್ತಿ ದೊರಕುತ್ತದೆ.

ಆಯುರ್ವೇದದ ಪ್ರಕಾರ
ಆಯುರ್ವೇದದ ಪ್ರಕಾರ ಎಲ್ಲಾ ರೋಗಗಳಿಗೆ ತ್ರಿದೋಶಗಳ ಸಂತುಲತೆ ಏರುಪೇರಾಗುವುದೇ ಕಾರಣ. ವಾತ ಪಿತ್ತ ಕಫ ಗಳೆಂದ ಈ ತ್ರಿದೋಶಗಳನ್ನು ಗೋಮೂತ್ರ ಸಂತುಲಿತವಾಗಿರಿಸಲು ನೆರವಾಗುವ ಮೂಲಕ ಆರೋಗ್ಯ ಉತ್ತಮವಾಗಿರಲು ನೆರವಾಗುತ್ತದೆ.

ಯಕೃತ್ತಿನ ಕ್ಷಮತೆಗೆ
ಗೋಮೂತ್ರ ಯಕೃತ್ತಿನ ಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತದ ಶುದ್ದೀಕರಣ ಉತ್ತಮಗೊಳ್ಳುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ವೃದ್ಧಾಪ್ಯವನ್ನು ನಿಯಂತ್ರಿಸುತ್ತದೆ
ನಮ್ಮ ದೇಹದಲ್ಲಿ ಅತಿ ಸೂಕ್ಷ್ಮವಾದ ಪೋಷಕಾಹಾರಗಳಿವೆ. ಇವು ನಿತ್ಯಜೀವನಕ್ಕೆ ಶಕ್ತಿ ನೀಡುತ್ತದೆ. ಆದರೆ ಮೂತ್ರದ ಮೂಲಕ ಇವು ಹೊರಹಾಕಲ್ಪಡುತ್ತವೆ. ಈ ಕೊರತೆಯಿಂದ ವೃದ್ಧಾಪ್ಯ ಶೀಘ್ರ ಆವರಿಸುತ್ತದೆ. ಗೋಮೂತ್ರ ಈ ಕೊರತೆಯನ್ನು ನೀಗಿಸುವ ಮೂಲಕ ವೃದ್ಧಾಪ್ಯ ಆವರಿಸುವುದನ್ನು ತಡವಾಗಿಸುತ್ತದೆ. ಇದೇ ಕಾರಣಕ್ಕೆ ಇದನ್ನು ಒಂದು ಸಿದ್ಧರಸ ಎಂದು ಹೇಳಲಾಗುತ್ತದೆ.

ರೋಗಗಳಿಂದ ಮುಕ್ತಿ
ಗೋಮೂತ್ರದಲ್ಲಿ ಕೆಲವು ಖನಿಜಗಳಿವೆ. ತಾಮ್ರ, ಚಿನ್ನದ ಅಂಶವಿರುವ ಉಪ್ಪು ಮೊದಲಾದವು. ಇವೆಲ್ಲವೂ ದೇಹ ಕಳೆದುಕೊಂಡ ಖನಿಜಗಳನ್ನು ಮರುತುಂಬಿಸಲು ನೆರವಾಗುತ್ತವೆ. ವಿಶೇಷವಾಗಿ ಇದರಲ್ಲಿರುವ ಚಿನ್ನದ ಅಂಶವಿರುವ ಉಪ್ಪು ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸುತ್ತದೆ.

ಹೃದಯ ಮತ್ತು ಮೆದುಳಿನ ತೊಂದರೆಗೆ ರಾಮಬಾಣ
ಮಾನಸಿಕ ಒತ್ತಡದಿಂದ ನರವ್ಯವಸ್ಥೆ ಬಾಧೆಗೊಳ್ಳುತ್ತದೆ. ಗೋಮೂತ್ರವನ್ನು ಮೇಧ್ಯ ಮತ್ತು ಹೃದ್ಯ ಎಂದೂ ಕರೆಯಲಾಗುತ್ತದೆ. ಇದರ ಅರ್ಥ ಇದು ಮೆದುಳಿಗೆ ಮತ್ತು ಹೃದಯಕ್ಕೆ ಬಲ ನೀಡುವ ದ್ರವವಾಗಿದೆ. ಆ ಪ್ರಕಾರ ಗೋಮೂತ್ರ ಹೃದಯ ಮತ್ತು ಮೆದುಳಿನ ತೊಂದರೆಗಳನ್ನು ಮತ್ತು ಹೆಚ್ಚಿನ ಮಾನಸಿಕ ಒತ್ತಡದಿಂದ ಆಗುವ ಮೆದುಳಿನ ಹಾನಿಯನ್ನು ತಡೆಗಟ್ಟುತ್ತದೆ.

ರೋಗರುಜಿನಗಳಿಂದ ಮುಕ್ತಿ
ಅಧಿಕ ಕಾಲ ಯಾವುದೇ ಔಷಧಿಯನ್ನು ಸೇವಿಸಿದರೆ ಅದರ ಕೆಲವಾದರೂ ಅನಗತ್ಯ ಅಂಶಗಳು ದೇಹದಲ್ಲಿ ಉಳಿದುಬಿಡುತ್ತವೆ. ಈ ಅಂಶಗಳು ಹಲವು ರೋಗಗಳಿಗೆ ಆಹ್ವಾನ ನೀಡುತ್ತವೆ. ಗೋಮೂತ್ರ ಈ ಕಣಗಳನ್ನು ನಿವಾರಿಸುವ ಗುಣ ಹೊಂದಿದೆ. ಪರಿಣಾಮವಾಗಿ ಈ ಮೂಲಕ ಬರಬಹುದಾದ ರೋಗಗಳಿಂದಲೂ ಮುಕ್ತಿ ದೊರಕುತ್ತದೆ.

ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ
ನಮ್ಮ ದೇಹದಲ್ಲಿ ಅಲ್ಪ ಪ್ರಮಾಣದ ವಿದ್ಯುತ್ ಸಂವಹನವಾಗಿರುತ್ತದೆ. ನಮ್ಮ ದೇಹದಲ್ಲಿರುವ ಅಲ್ಪ ಪ್ರಮಾಣದ ತಾಮ್ರದ ಕಾರಣ ಭೂಮಿಯ ಆಯಸ್ಕಾಂತೀಯ ಮತ್ತು ವಿದ್ಯುತ್ ಅಲೆಗಳು ಪ್ರವಹಿಸುತ್ತವೆ. ಗೋಮೂತ್ರದ ಮೂಲಕ ಉತ್ತಮ ಪ್ರಮಾಣದ ತಾಮ್ರ ಲಭಿಸುತ್ತದೆ. ಇದರಿಂದ ಆರೋಗ್ಯ ವೃದ್ಧಿಸುತ್ತದೆ.

ದೈಹಿಕ-ಮಾನಸಿಕ ತೊಂದರೆಗಳಿಂದ ಮುಕ್ತಿ
ಎಷ್ಟೋ ಸಲ ನಮ್ಮ ಅಂತರಂಗ ಕೆಟ್ಟ ಆಲೋಚನೆಗಳನ್ನು ನೀಡುತ್ತದೆ. ಪರಿಣಾಮವಾಗಿ ಸಂಕುಚಿತಗೊಂಡ ಮನಸ್ಸು ಪಾಪದ ಕಾರ್ಯಗಳತ್ತ ಸೆಳೆಯುತ್ತದೆ. ಇದರಿಂದ ಆರೋಗ್ಯದ ಜೊತೆಗೇ ಯೋಚನೆಗಳೂ ಕೆಡುತ್ತವೆ. ಗೋಮೂತ್ರ ನಲ್ಮೆಯ ಭಾವವನ್ನು ನೀಡುವ ಮೂಲಕ ಮನಸ್ಸಿನ ಯೋಚನೆಗಳು ಧನಾತ್ಮಕವಾಗಿರಲು ನೆರವಾಗುತ್ತವೆ. ಪರಿಣಾಮವಾಗಿ ಹಲವು ದೈಹಿಕ ಮತ್ತು ಮಾನಸಿಕ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ನಿಯಮಿತವಾಗಿ ಗೋಮೂತ್ರ ಸೇವಿಸುವ ಮೂಲಕ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ತನ್ಮೂಲಕ ಹಲವಾರು ರೋಗಗಳಿಂದ ದೇಹ ರಕ್ಷಣೆ ಪಡೆಯುತ್ತದೆ.

ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ನಿಷ್ಕ್ರಿಯಗೊಳಿಸುತ್ತದೆ
ಗೋಮೂತ್ರ ಒಂದು ಉತ್ತಮ ವಿಷನಾಶಕವಾಗಿದೆ. ಇದು ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ನಿಷ್ಕ್ರಿಯಗೊಳಿಸಿ ಹೊರಹಾಕುವ ಮೂಲಕ ದೇಹವನ್ನು ರಕ್ಷಿಸುತ್ತದೆ. ಅಲ್ಲದೆ ದೇಹಕ್ಕೆ ಹಾನಿ ಎಸಗುವ ಅಪಾಯಕಾರಿ ರಾಸಾಯನಿಕಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ ದೇಹಕ್ಕೆ ಹೆಚ್ಚಿನ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.

ಅಜೀರ್ಣದ ಸಮಸ್ಯೆಗೆ
ಸರ್ವೇ ರೋಗಃ ಹೀ ಮಂದಾಗ್ನೌ ಎಂಬ ಸುಭಾಷಿತವೊಂದಿದೆ. ಈ ಪ್ರಕಾರ ಎಲ್ಲಾ ರೋಗಗಳಿಗೆ ಮಂದಾಗ್ನಿ (ಅಥವಾ ಅಜೀರ್ಣದ ಮೂಲಕ ಪ್ರಾರಂಭವಾಗುವ) ಕಾರಣವಾಗಿದೆ. ಒಂದು ವೇಳೆ ಜೀರ್ಣ ಶಕ್ತಿ ಅಥವಾ ಜೀರ್ಣಾಗ್ನಿ ಪ್ರಬಲವಾಗಿದ್ದರೆ ಅಜೀರ್ಣದ ತೊಂದರೆ ಇರುವುದಿಲ್ಲ. ಗೋಮೂತ್ರ ಈ ಶಕ್ತಿಯನ್ನು ಹೆಚ್ಚಿಸುವ ಕ್ಷಮತೆ ಹೊಂದಿದೆ.

ಗೋಮೂತ್ರವನ್ನು ಸೇವಿಸುವ ಬಗೆ
ಗೋಮೂತ್ರವನ್ನು ಈ ಕೆಳಗೆ ನೀಡಿರುವ ಪ್ರಕಾರ ಸೇವಿಸಿದರೆ ದಿವ್ಯರೂಪದ ರೋಗನಿವಾರಕ ಶಕ್ತಿ ಲಭ್ಯವಾಗುತ್ತದೆ.ನೇರವಾದ ಸೇವನೆ
ಗೋಮೂತ್ರದಲ್ಲಿರುವ ನೀರಿನ ಅಂಶವನ್ನು ನಿವಾರಿಸಿ ಸಾಂದ್ರತೆಯನ್ನು ಹೆಚ್ಚಿಸಿ ನೋವಿರುವ ಭಾಗಕ್ಕೆ ನೇರವಾಗಿ ಹಚ್ಚುವ ಮೂಲಕ ಉತ್ತಮ ಪರಿಣಾಮ ದೊರಕುತ್ತದೆ. ದಿನಕ್ಕೆ ಕೆಲವೇ ಸಿಸಿ ಗಳಷ್ಟು ಗೋಮೂತ್ರದ ನೇರ ಸೇವನೆಯೂ ದಿವ್ಯರೂಪದ ರೋಗನಿವಾರಕ ಶಕ್ತಿ ಲಭಿಸಲು ನೆರವಾಗುತ್ತದೆ.

ಗೋಮೂತ್ರದ ಬಳಕೆ
ಒಂದು ಲೋಟ ಕುಡಿಯುವ ನೀರಿಗೆ ಕೆಲವೇ ಬಿಂದುಗಳಷ್ಟು ಗೋಮೂತ್ರ ಸೇರಿಸಿ ಮನೆಯ ಸುತ್ತಲೂ ಪ್ರೋಕ್ಷಳಿಸುವ ಮೂಲಕ ಮನೆಯ ಒಳಗೆ ದುಷ್ಟಶಕ್ತಿಗಳ ಪ್ರವೇಶ ತಡೆಯಲು ಸಾಧ್ಯ. ಪರ್ಯಾಯವಾಗಿ ಒಂದು ಬಕೆಟ್ ನೀರಿಗೆ ಕೊಂಚ ಗೋಮೂತ್ರ ಸೇರಿಸಿ ಸ್ನಾನ ಮಾಡಲು ಬಳಸಬಹುದು.



Click it and Unblock the Notifications











