For Quick Alerts
ALLOW NOTIFICATIONS  
For Daily Alerts

  ರಾತ್ರಿ ಹೊತ್ತು ತಿಂಡಿ ತಿನ್ನುವ ಅಭ್ಯಾಸವನ್ನು ಇಂದೇ ನಿಲ್ಲಿಸಿ!

  By Hemanth
  |

  ರಾತ್ರಿ ಹೊತ್ತು ಊಟದ ಮೊದಲು ಅಥವಾ ಬಳಿಕ ಏನಾದರೂ ತಿನ್ನಬೇಕು ಎಂದು ಅನಿಸುವುದು ಸಹಜ. ಇದಕ್ಕಾಗಿ ಏನಾದರೂ ಕರಿದ ತಿಂಡಿ ಅಥವಾ ಬೇರೆ ಏನಾದರೂ ಫಾಸ್ಟ್ ಫುಡ್ ತರಿಸಿಕೊಂಡು ತಿನ್ನುತ್ತೇವೆ. ರಾತ್ರಿ ವೇಳೆ ತಿಂಡಿ ತಿನ್ನುವುದು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದೆ. ರಾತ್ರಿ ವೇಳೆ ತಿಂಡಿ ತಿನ್ನುವುದರಲ್ಲಿ ಯಾವುದೇ ತಪ್ಪು ಇಲ್ಲ.

  ಆದರೆ ಆರೋಗ್ಯಕ್ಕೆ ಹಾನಿ ಉಂಟು ಮಾಡುವಂತಹ ಕೆಲವೊಂದು ತಿಂಡಿಗಳನ್ನು ತಿನ್ನುವುದರಿಂದ ಅದು ದೇಹದ ತೂಕವನ್ನು ಹೆಚ್ಚಿಸುತ್ತದೆ. ಇದರಿಂದ ಹಲವಾರು ರೀತಿಯ ರೋಗಗಳಿಗೆ ನಿಮ್ಮ ದೇಹವು ಆಶ್ರಯತಾಣವಾಗಬಹುದು.

  Curb Snacking
   

  ಬೆಳಿಗ್ಗಿನ ಉಪಹಾರವನ್ನು ಸರಿಯಾದ ರೀತಿಯಲ್ಲಿ ಮಾಡುವುದರಿಂದ ರಾತ್ರಿ ವೇಳೆ ತಿಂಡಿ ತಿನ್ನುವಂತಹ ಸನ್ನಿವೇಶವನ್ನು ತಪ್ಪಿಸಬಹುದಾಗಿದೆ ಎಂದು ಅಧ್ಯಯನಗಳು ಹೇಳುತ್ತವೆ. ಪ್ರೋಟೀನ್ ಮತ್ತು ನಾರಿನಾಂಶದಿಂದ ಸಮೃದ್ಧವಾಗಿರುವ ಉಪಹಾರವನ್ನು ಸೇವಿಸಿ. ಉಪಹಾರದಲ್ಲಿ ಕಾರ್ಬೋಹೈಡ್ರೆಟ್ಸ್ ಮತ್ತು ಕೊಬ್ಬಿನ ಅಂಶವನ್ನು ಕಡಿಮೆಯಿರಲಿ.

  ಹೊಟ್ಟೆ ತುಂಬಾ ಬೆಳಿಗ್ಗಿನ ಉಪಹಾರ ಸೇವಿಸಿದರೆ ಆಗಾಗ ಸಿಹಿ ತಿನ್ನಬೇಕೆನ್ನುವ ನಿಮ್ಮ ಬಯಕೆಗೆ ಕಡಿವಾಣ ಬೀಳಲಿದೆ. ಆರೋಗ್ಯಕರ ಉಪಹಾರವು ದಿನದ ಶಕ್ತಿಯನ್ನು ಒದಗಿಸಿ ರಾತ್ರಿ ವೇಳೆ ತಿಂಡಿ ತಿನ್ನುವುದನ್ನು ನಿಯಂತ್ರಿಸಲಿದೆ.   ರಾತ್ರಿಯ ಹೊತ್ತು ಇಂತಹ ಆಹಾರದ ಕಡೆ ಕಣ್ಣೆತ್ತಿಯೂ ನೋಡಬೇಡಿ!    

  Curb Snacking
   

  ರಾತ್ರಿ ವೇಳೆ ತಿಂಡಿ ತಿನ್ನುವ ಅಭ್ಯಾಸವನ್ನು ನಿಲ್ಲಿಸಬೇಕೆಂದರೆ ದಿನಪೂರ್ತಿ ಸರಿಯಾಗಿ ತಿನ್ನಬೇಕು. ನಿಮ್ಮ ಊಟವು ಸಂಪೂರ್ಣವಾಗಿರಬೇಕು. ಇಲ್ಲವೆಂದಾದರೆ ನೀವು ಆಹಾರಕ್ಕಾಗಿ ಹಾತೊರೆಯುವಂತೆ ಮಾಡುತ್ತದೆ. ಸರಿಯಾದ ಆಹಾರವನ್ನು ಸೇವಿಸದೆ ಇದ್ದಾಗ ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ.  

  Curb Snacking
   

  ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ. ಇದರಿಂದ ರಾತ್ರಿ ಊಟ ಸರಿಯಾಗಿರಲಿ. ಹೊಟ್ಟೆಯು ಸಂಪೂರ್ಣವಾಗಿ ತುಂಬಿರಲಿ. ಹೊಟ್ಟೆ ಖಾಲಿ ಇದ್ದರೆ ಅರ್ಧ ರಾತ್ರಿಯಲ್ಲಿ ಎದ್ದು ತಿಂಡಿ ತಿನ್ನಬೇಕಾಗುತ್ತದೆ. ಮಲಗುವ ಮೊದಲು ಪೂರ್ಣ ಪ್ರಮಾಣದ ರಾತ್ರಿ ಊಟ ಮಾಡಿ.     

  ರಾತ್ರಿ ಊಟದ ಬಳಿಕ ಅಡುಗೆ ಮನೆಯಲ್ಲಿ ತಿರುಗಾಡಬೇಡಿ. ಊಟದ ಸ್ವಲ್ಪ ಹೊತ್ತಿನ ಬಳಿಕ ಮಲಗಲು ಹೋಗಿ. ಪುಸ್ತಕ ಓದಿ, ಸಂಗಾತಿಯೊಂದಿಗೆ ಮಾತನಾಡಿ ಅಥವಾ ಧ್ಯಾನ ಮಾಡಿ. ಇದರಿಂದ ನಿಮ್ಮ ಗಮನವು ಬೇರೆ ಕಡೆಗೆ ಸಾಗಿ ತಿಂಡಿ ತಿನ್ನುವಂತಹ ಸಂದರ್ಭವು ತಪ್ಪಬಹುದು.  

  Curb Snacking
   

  ಇಷ್ಟಾಗಿಯೂ ನಿಮಗೆ ತಿಂಡಿ ತಿನ್ನಲೇಬೇಕು ಎಂದಾದರೆ ಸರಿಯಾದ ತಿಂಡಿ ತಿನ್ನಿ. ಕುಕ್ಕೀಸ್‌ಗಳನ್ನು ತಿನ್ನಲೇಬೇಡಿ. ಕ್ಯಾಲೋರಿ ಅಧಿಕವಾಗಿರುವ ಆಹಾರವನ್ನು ಕೂಡ ದೂರವಿಡಿ. ಹೆಚ್ಚಿನ ಕ್ಯಾಲೋರಿ ಸೇವನೆಯಿಂದಾಗಿ ನಿಮಗೆ ಅಜೀರ್ಣ ಉಂಟಾಗಬಹುದು. ಬಾಳೆಹಣ್ಣು ಸೇವನೆ ಮಾಡುವುದು ತುಂಬಾ ಒಳ್ಳೆಯದು. ಇದು ಹೊಟ್ಟೆಯನ್ನು ತುಂಬಿಸುವುದು ಮಾತ್ರವಲ್ಲದೆ ಅದರಲ್ಲಿರುವ ಪೊಟಾಶಿಯಂ ಸರಿಯಾಗಿ ನಿದ್ರೆ ಮಾಡಲು ನೆರವಾಗುವುದು.

  English summary

  Tips to Help You Curb Snacking

  Nighttime snacking has become very common nowadays. There is nothing wrong with nighttime snacking but the problem lies in the fact that you end up consuming the wrong type of foods during this time that not only add to your weight, but also affect your body in the wrong way.
  Story first published: Saturday, September 24, 2016, 23:43 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more