Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಬೆನ್ನೇರಿ ಕಾಡುವ ವೈರಲ್ ಜ್ವರದ ರೋಗ ಲಕ್ಷಣಗಳು
ನಮ್ಮ ಜೀವನ ಶೈಲಿಯಲ್ಲಿ ಉಂಟಾಗುತ್ತಿರುವ ಬದಲಾವಣೆಗಳು ನಮ್ಮಲ್ಲಿ ಹಲವಾರು ಬದಲಾವಣೆಗಳನ್ನು ಉಂಟುಮಾಡುತ್ತವೆ. ಈ ಬದಲಾವಣೆಗಳು ಅನಿವಾರ್ಯವಾಗಿದ್ದು ಇದನ್ನು ಎದುರಿಸುವಾಗ ಯಾವುದೇ ಭಾವನೆಗಳು ನಮ್ಮಲ್ಲಿ ಉಂಟಾಗುವುದಿಲ್ಲ. ಪರಿಸರಕ್ಕೆ ತಕ್ಕಂತೆ ನಾವು ಹೊಂದಿಕೊಂಡಿರುವುದರಿಂದ ಈ ಬದಲಾವಣೆಗಳು ನಮ್ಮಲ್ಲಿ ಹೆಚ್ಚು ಪರಿಣಾಮವನ್ನು ಬೀರುವುದಿಲ್ಲ. ಆದರೆ ನಾವು ಗಮನ ನೀಡಬೇಕಾದುದೇ ಈ ಅಂಶಕ್ಕೆ ಆಗಿರುವುದರಿಂದ ಇಡಿಯ ಮಾನವ ಕುಲವೇ ಈ ಅಂಶವನ್ನು ಮರೆಯುತ್ತಿದೆ. ವೈರಲ್ ಜ್ವರ: ಮಾತ್ರೆಯ ಬದಲು, ಮನೆಮದ್ದಿಗೆ ಆದ್ಯತೆ ನೀಡಿ
ಇಂದು ಮಾನವರು ಪ್ರಾಣಾಪಾಯವಿರುವ ರೋಗಗಳಿಂದ ಬಳಲುತ್ತಿದ್ದು, ನಮ್ಮ ಹಿರಿಯರು ಈ ರೋಗಗಳ ಹೆಸರನ್ನೂ ಕೇಳಿರಲು ಸಾಧ್ಯವಿಲ್ಲ. ನಮ್ಮ ಆಧುನಕ ಜೀವನ ಪದ್ಧತಿಯು ಪ್ರಸಾದಿಸಿರುವ ಕೊಡುಗೆಗಳಾಗಿವೆ ಈ ರೋಗಗಳು. ನಮ್ಮ ವೈದ್ಯಕೀಯ ಲೋಕವು ಹಿಂದಿನ ಹಲವಾರು ವರ್ಷಗಳಿಂದ ಅಭಿವೃದ್ಧಿಯನ್ನು ಪಡೆಯುತ್ತಿದ್ದರೂ ಕೆಲವೊಂದು ರೋಗಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಇಂದಿಗೂ ಸಾಧ್ಯವಾಗುತ್ತಿಲ್ಲ. ಏಡ್ಸ್, ಕ್ಯಾನ್ಸರ್, ಮೆನಿನಿಂಗಿಟೀಸ್, ಮೊದಲಾದ ರೋಗಗಳು ವ್ಯಕ್ತಿಯ ಪ್ರಾಣಕ್ಕೆ ಅಪಾಯಕಾರಿಯಾಗಿ ಪರಿಣಮಿಸಿ ಅವರನ್ನು ಸಾವಿನ ಮನೆಗೆ ನೂಕುತ್ತಿದೆ.
ಇಂತಹುದೇ ರೋಗಗಳು ನಮ್ಮ ದೈನಂದಿನ ಜೀವನದಲ್ಲೂ ಆಗಾಗ್ಗೆ ಕಂಡುಬರುತ್ತಿದ್ದು ಇದು ಸಾಮಾನ್ಯಾಗಿ ಕಂಡರೂ ಪರಿಹಾರವ ಸಿಗದೇ ಹೊದಾಗ ಜೀವಭಕ್ಷಕನಾಗುತ್ತದೆ.ಅಂತಹ ರೋಗಗಳಲ್ಲಿ ಒಂದಾಗಿದೆ ವೈರಲ್ ಜ್ವರ. ಇತ್ತೀಚಿನ ದಿನಗಳಲ್ಲಿ ಮಾನವನ ಜೀವನವನ್ನು ಕಾಡಿಸುವಂತೆ ಈ ರೋಗ ತನ್ನ ಪ್ರಭಾವವನ್ನು ಬೀರುತ್ತಿದೆ. ಹೆಸರೇ ಹೇಳುವಂತೆ, ವೈರಸ್ಗಳ ಪ್ರಭಾವದಿಂದ ಈ ರೋಗ ಬರುತ್ತದೆ. ಎಚ್ಚರ: ಪ್ರಾಣ ಕಂಟಕ 'ಏರಿಳಿತ ಜ್ವರ'ದ ಮೂಲ ಅರಿಯಿರಿ!
ನೇರ ಲಕ್ಷಣಗಳನ್ನು ಈ ರೋಗ ಪಡೆದುಕೊಂಡಿದ್ದು ಅದನ್ನು ಸುಲಭವಾಗಿ ಕಂಡುಕೊಳ್ಳಬಹುದಾಗಿದೆ. ವಯಸ್ಕರಲ್ಲಿ ಈ ರೋಗದ ಲಕ್ಷಣಗಳು ವಿಶಿಷ್ಟವಾಗಿದ್ದು ಆಗಾಗ್ಗೆ ಇದು ಅವರನ್ನು ಕಾಡುತ್ತದೆ ಆದ್ದರಿಂದ ಜನರು ಆರಂಭದಲ್ಲಿಯೇ ಈ ರೋಗಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ. ವಯಸ್ಕರಲ್ಲಿ ಈ ರೋಗ ಉಂಟುಮಾಡುವ ರೋಗಲಕ್ಷಣಗಳನ್ನು ನಾವಿಂದು ಇಲ್ಲಿ ತಿಳಿಸುತ್ತಿದ್ದು ನೀವು ಇದನ್ನು ಕಂಡುಕೊಳ್ಳಬಹುದಾಗಿದೆ:

ತೀವ್ರ ಆಯಾಸ/ದಣಿವು
ವಯಸ್ಕರಲ್ಲಿ ಈ ರೋಗ ಉಂಟುಮಾಡುವ ರೋಗಲಕ್ಷಣವಾಗಿದೆ ದಣಿವು. ದೇಹದಲ್ಲಿ ಅಸಮತೋಲವನ್ನು ಈ ರೋಗ ಉಂಟುಮಾಡಲಿದ್ದು, ಸೋಂಕು ಆರಂಭವಾದೊಡನೆ ದಣಿವು ಸುಸ್ತು ಉಂಟಾಗುತ್ತದೆ.

ದೇಹದ ನೋವು
ಆಯಾಸ ಮತ್ತು ಏರುತ್ತಿರುವ ದೇಹದ ಉಷ್ಣತೆಯಿಂದ ದೇಹದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವೈರಲ್ ಜ್ವರದ ಲಕ್ಷಣಗಳಲ್ಲಿ ಇದೂ ಒಂದಾಗಿದ್ದು ದೇಹದ ಸ್ನಾಯುಗಳಲ್ಲಿ ಮೊದಲು ನೋವು ಉಂಟಾಗುತ್ತದೆ. ಈ ನೋವು ಮುಂದುವರಿದು ರೋಗಿಯಲ್ಲಿ ಅನಾನುಕೂಲತೆಯನ್ನುಂಟು ಮಾಡುತ್ತದೆ.

ಜ್ವರ
ವಯಸ್ಕರಲ್ಲಿ ಕಂಡುಬರುವ ವೈರಲ್ ರೋಗಲಕ್ಷಣಗಳಲ್ಲಿ ಇದು ಸಾಮಾನ್ಯವಾಗಿದೆ. ಆರಂಭದಲ್ಲಿ ಜ್ವರ ಕಡಿಮೆ ತಾಪಮಾನದಲ್ಲಿದ್ದು, ಇದು ಏರುತ್ತಾ ಹೋಗುತ್ತದೆ ಸೋಂಕನ್ನು ಈ ಏರಿಕೆ ಅವಲಂಬಿಸಿರುತ್ತದೆ. 104 ಡಿಗ್ರಿಗಳವರೆಗೆ ಜ್ವರ ಏರುವ ಸಾಧ್ಯತೆ ಇದ್ದು ವೈರಲ್ ಜ್ವರವು ರೋಗಿಯನ್ನು ನಿತ್ರಾಣಗೊಳಿಸಿಬಿಡುತ್ತದೆ.

ಕೆಮ್ಮು ಮತ್ತು ಸುರಿಯುತ್ತಿರುವ ಮೂಗು
ಸೋಂಕು ದೇಹದಲ್ಲಿ ತನ್ನ ತೀವ್ರತೆಯನ್ನು ಉಂಟುಮಾಡುತ್ತಿದೆ ಎಂದಾದಲ್ಲಿ, ಹೆಚ್ಚಿನ ಸಮಯಗಳಲ್ಲಿ ರೋಗಿಯು ಕೆಮ್ಮು ಮತ್ತು ಶೀತದಿಂದ ಬಳಲುತ್ತಾರೆ. ಈ ಸಂದರ್ಭದಲ್ಲಿ ರೋಗಿಯು ಕರವಸ್ತ್ರವನ್ನು ಬಳಸಬೇಕಾಗುತ್ತದೆ ಮತ್ತು ಇದನ್ನು ಎಲ್ಲಿಯೂ ಇಡಬಾರದು ಇಲ್ಲದಿದ್ದರೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ.

ಮುಗು ಕಟ್ಟುವುದು
ಕೆಮ್ಮು ಮತ್ತು ಶೀತದ ಪರಿಣಾಮದಿಂದ ಮೂಗು ಕಟ್ಟುವುದು ಉಂಟಾಗುತ್ತದೆ. ಹೆಚ್ಚಿನ ಉಸಿರಾಟ ಸಮಸ್ಯೆಗಳನ್ನು ಕಟ್ಟಿದ ಮೂಗು ಉಂಟುಮಾಡುತ್ತದೆ. ಇದಕ್ಕೆ ತುರ್ತು ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ಇದು ಶ್ವಾಸಕೋಶ ಕುಸಿತಕ್ಕೆ ಕಾರಣವಾಗಬಹುದು. ವೈರಲ್ ಜ್ವರ ಉಂಟಾದಾಗ ವಯಸ್ಕರನ್ನು ಕಾಡುವ ಈ ರೋಗಕ್ಕೆ ತುರ್ತು ಪರಿಹಾರವನ್ನು ಕಂಡುಕೊಳ್ಳಲೇಬೇಕಾಗುತ್ತದೆ.

ತಲೆನೋವು
ಜ್ವರ ಮತ್ತು ಮೈಕೈ ನೋವಿನಿಂದ ತಲೆನೋವು ಉಂಟಾಗುತ್ತದೆ. ರೋಗಿಗಳಲ್ಲಿ ಇದು ಅಸಮಾಧಾನವನ್ನು ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಔಷಧಗಳ ಸೇವನೆಯಿಂದ ಇದನ್ನು ನಿಯಂತ್ರಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳದೆ ತಲೆನೋವಿಗೆ ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಕಣ್ಣುಗಳಲ್ಲಿ ಅಸ್ವಸ್ಥತೆ
ಕಣ್ಣುಗಳಲ್ಲಿ ಉಂಟಾಗುವ ಅಸ್ವಸ್ಥತೆಯನ್ನು ಹೆಚ್ಚಿನ ಜನರು ಅನುಭವಿಸುತ್ತಾರೆ. ಉರಿಯುತ್ತಿರುವ ಕಣ್ಣು ಮತ್ತು ಕಣ್ಣುಗುಡ್ಡೆಗಳಲ್ಲಿ ನೋವು ಉಂಟಾಗುತ್ತದೆ. ಕಣ್ಣು ಕೆಂಪಗಾಗಿ, ಉರಿಯುತ್ತಿರುವುದು ಆಳವಾಗುತ್ತದೆ. ಈ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆಯನ್ನು ತೆಗೆದುಕೊಳ್ಳಬೇಕು.

ತ್ವಚೆಗಳಲ್ಲಿ ದದ್ದು
ವೈರಸ್ಗಳಿಂದ ಈ ಜ್ವರ ಉಂಟಾಗುವುದರಿಂದಾಗಿ, ತ್ವಚೆಯ ದದ್ದುಗಳು ಹೆಚ್ಚು ಸಾಮಾನ್ಯವಾಗಿರುತ್ತದೆ. ದದ್ದುಗಳಲ್ಲಿ ಕಿರಿಕಿರಿ ಇದ್ದು ರೋಗಿಗೆ ಉಪಟಳವನ್ನು ನೀಡುತ್ತದೆ. ವಯಸ್ಕರಲ್ಲಿ ವೈರಲ್ ಜ್ವರ ಉಂಟುಮಾಡುವ ರೋಗಲಕ್ಷಣಗಳು ಇವುಗಳಾಗಿದೆ. ಇನ್ನೂ ಕೆಲವು ಲಕ್ಷಣಗಳನ್ನು ದೇಹದಲ್ಲಿ ಈ ಜ್ವರ ಉಂಟುಮಾಡುತ್ತಿದ್ದು ತುರ್ತು ಚಿಕಿತ್ಸೆಯನ್ನು ಪಡೆದುಕೊಳ್ಳಲೇಬೇಕಾಗುತ್ತದೆ.



Click it and Unblock the Notifications