Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ದಿನಕ್ಕೊಂದು 'ಕೆಂಪು ಬಾಳೆಹಣ್ಣು' ಸೇವಿಸಿ, ಆರೋಗ್ಯ ಪಡೆಯಿರಿ
ಕೆಂಪು ಬಾಳೆ ಅಥವಾ ಕೆಂದಾಳೆ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಸಿಗುವುದಿಲ್ಲ. ಏಕೆಂದರೆ ಜನರಲ್ಲಿ ಕೆಂಪಗಿಂತ ಹಳದಿ ಬಾಳೆಹಣ್ಣೇ ಉತ್ತಮ ಎಂಬ ಭಾವನೆ ಬೇರೂರಿಬಿಟ್ಟಿದೆ. ಇನ್ನೊಂದು ಕಾರಣವೆಂದರೆ ಇದನ್ನು ಬೆಳೆಯಲು ಕೃಷಿಕರು ಹೆಚ್ಚಿನ ಶ್ರಮ ಪಡಬೇಕಾಗುತ್ತದೆ. ಇಷ್ಟೇ ಶ್ರಮದಲ್ಲಿ ಹಳದಿ ಬಾಳೆ ಬೆಳೆದರೆ ಹಣ ಸಿಗುವ ಸಾಧ್ಯತೆ ಹೆಚ್ಚಿರುವ ಕಾರಣ ಮಾರುಕಟ್ಟೆಯಲ್ಲಿ ಈ ಬಾಳೆ ಇದುವರೆಗೆ ಕಂಡುಬರುತ್ತಿದ್ದಿಲ್ಲ. ಆದರೆ ಈಗ ಈ ಬಾಳೆಯಲ್ಲಿರುವ ಪೋಷಕಾಂಶಗಳು ಹಳದಿ ಬಾಳೆಗಿಂತಲೂ ಉತ್ತಮ ಎಂದು ಕಂಡುಕೊಂಡ ಬಳಿಕ ನಿಧಾನವಾಗಿ ಗ್ರಾಹಕರು ಇತ್ತ ಒಲವು ತೋರುತ್ತಿದ್ದಾರೆ. ಹಣ್ಣು ಹಣ್ಣಾದ ಬಾಳೆಹಣ್ಣು, ಸೌಂದರ್ಯದ ಗಣಿ
ವಿಶೇಷವಾಗಿ ಈ ಬಾಳೆಯಲ್ಲಿ ವಿಟಮಿನ್ ಸಿ ಮತ್ತು ಬೀಟಾ ಕ್ಯಾರೋಟೀನುಗಳು ಹಳದಿ ಬಾಳೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿವೆ. ರಕ್ತನಾಳಗಳು ಸೆಡೆತಕ್ಕೊಳಗಾಗುವ ಸಾಧ್ಯತೆಯನ್ನು ತಡೆಯಲು ಈ ಬೀಟಾ ಕ್ಯಾರೋಟೀನುಗಳು ಅಗತ್ಯವಾಗಿವೆ. ಅಲ್ಲದೇ ಹಲವು ಬಗೆಯ ಕ್ಯಾನ್ಸರ್ ಮತ್ತು ಹೃದಯದ ತೊಂದರೆಗಳನ್ನು ಬರದಂತೆ ರಕ್ಷಿಸುತ್ತದೆ. ಹಲವು ಆರೋಗ್ಯ ತಜ್ಞರ ಪ್ರಕಾರ ನಿತ್ಯವೂ ಬೀಟಾ ಕ್ಯಾರೋಟೀನ್ ಇರುವ ಆಹಾರಗಳನ್ನು ಸೇವಿಸುವ ಮೂಲಕ ಹೃದಯದ ಕ್ಷಮತೆ ಹೆಚ್ಚಿಸುವ ಸಹಿತ ಹಲವು ರೀತಿಯಲ್ಲಿ ಆರೋಗ್ಯಕರವಾಗಿದೆ. ಬಾಳೆಹಣ್ಣು: ಆರೋಗ್ಯಕ್ಕೂ ಸೈ, ಕೂದಲಿನ ಸೌಂದರ್ಯಕ್ಕೂ ಜೈ
ಜೀರ್ಣಾಂಗಗಳಲ್ಲಿ ಈ ಬೀಟಾ ಕ್ಯಾರೋಟಿನ್ ವಿಭಜನೆಗೊಂಡು ವಿಟಮಿನ್ ಎ ಆಗಿ ಪರಿವರ್ತಿತವಾಗುತ್ತದೆ. ಇದು ಚರ್ಮ, ಕಣ್ಣಿನ ದೃಷ್ಟಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ದೇಹದ ಜೀರ್ಣಾಂಗಗಳಲ್ಲಿ ಉರಿಯೂತವಾಗದಂತೆ ತಡೆಯುತ್ತದೆ. ಅಲ್ಲದೇ ಇದರಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಪ್ರತಿದಿನದ ಅಗತ್ಯದ 16% ಪ್ರಮಾಣವನ್ನು ಒಂದೇ ಬಾಳೆಹಣ್ಣು ಪೂರೈಸುತ್ತದೆ. ನಿತ್ಯವೂ ಕೆಂಪು ಬಾಳೆ ತಿನ್ನುತ್ತಿದ್ದರೆ ಟೈಪ್ 2 ಮಧುಮೇಹ ಆವರಿಸುವ ಸಾಧ್ಯತೆಯೂ ಮುಂದೂಡಲ್ಪಡುತ್ತದೆ. ಈ ಬಾಳೆಯ ಉತ್ತಮ ಗುಣಗಳನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಕೆಳಗಿನ ಸ್ಲೈಡ್ ಷೋ ಮೂಲಕ ಪ್ರಸ್ತುತಪಡಿಸಲು ಹರ್ಷಿಸುತ್ತದೆ..

ಮೂತ್ರಪಿಂಡದಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ
ಕೆಂದಾಳೆಯಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದ್ದು ಇದು ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೇ ಹೃದಯದ ತೊಂದರೆ ಮತ್ತು ಕ್ಯಾನ್ಸರ್ ಆವರಿಸುವುದನ್ನೂ ತಡೆಯುತ್ತದೆ. ಆಹಾರದ ಮೂಲಕ ಸೇವಿಸುವ ಕ್ಯಾಲ್ಸಿಯಂ ಪ್ರಮಾಣವನ್ನು ಮೂಳೆಗಳು ಹೀರಿಕೊಳ್ಳಲು ನೆರವಾಗುವ ಮೂಲಕ ಮೂಳೆಗಳ ದೃಢತೆ ಹೆಚ್ಚಿಸಲು ಸಹಕರಿಸುತ್ತದೆ.

ತೂಕ ಇಳಿಸಲು ನೆರವಾಗುತ್ತದೆ
ಕೆಂದಾಳೆಯಲ್ಲಿ ಇತರ ಹಣ್ಣುಗಳಿಗೆ ಹೋಲಿಸಿದರೆ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಪ್ರಮಾಣದ ನಾರು ಇದೆ. ಇದರಿಂದಾಗಿ ಕೆಲವು ಬಾಳೆಹಣ್ಣುಗಳನ್ನು ತಿಂದ ಬಳಿಕ ಹೊಟ್ಟೆ ತುಂಬಿದಂತಾಗಿ ಅನವಶ್ಯಕ ಆಹಾರಗಳನ್ನು ತಿನ್ನುವುದರಿಂದ ತಪ್ಪಿದಂತಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತೂಕ ಇಳಿಸಲು ನೆರವಾಗುತ್ತದೆ
ಇದರ ನಾರುಗಳನ್ನು ಜೀರ್ಣಿಸಲು ಹೆಚ್ಚಿನ ಕೊಬ್ಬು ಬಳಕೆಯಾಗುತ್ತದೆ. ಎರಡೂ ಕಡೆಗಳಿಂದ ಕೊಬ್ಬಿನ ಬಳಕೆ ಅನಿವಾರ್ಯವಾದ ಕಾರಣ ತೂಕ ಇಳಿಯಲು ನೆರವಾಗುತ್ತದೆ. ನಿತ್ಯದ ಸೇವನೆಯ ಮೂಲಕ ತೂಕ ಇಳಿಕೆಯನ್ನು ಇನ್ನಷ್ಟು ಶೀಘ್ರವಾಗಿ ಮತ್ತು ಆರೋಗ್ಯಕರವಾಗಿ ಸಾಧಿಸಬಹುದು.

ರಕ್ತವನ್ನು ಶುದ್ಧೀಕರಿಸುತ್ತದೆ
ಇದರಲ್ಲಿ ವಿವಿಧ ವಿಟಮಿನ್ನುಗಳು ಮತ್ತು ಆಂಟಿ ಆಕ್ಸಿಡೆಂಟುಗಳಿದ್ದು ಇವು ರಕ್ತದಲ್ಲಿ ಹೀಮೋಗ್ಲೋಬಿನ್ ಕಣಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಮೂಲಕ ಆರೋಗ್ಯ ವೃದ್ಧಿಸುತ್ತದೆ ಮತ್ತು ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಆರೋಗ್ಯಕರ ಮಟ್ಟದಲ್ಲಿರುವಂತೆ ನೋಡಿಕೊಳ್ಳಲೂ ಸಹಕರಿಸುತ್ತದೆ. ಇದರಲ್ಲಿ ದಿನದ ಅಗತ್ಯದ ವಿಟಮಿನ್ B6 ಇದ್ದು ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಅತಿ ಸೂಕ್ತವಾದ ಆಹಾರವಾಗಿದೆ.

ತಕ್ಷಣದ ಶಕ್ತಿ ನೀಡುತ್ತದೆ
ಇದರಲ್ಲಿರುವ ಪೋಷಕಾಂಶಗಳು ಶೀಘ್ರವಾಗಿ ಸಕ್ಕರೆಯನ್ನು ರಕ್ತಕ್ಕೆ ಬಿಡುಗಡೆ ಮಾಡಿ ಶಕ್ತಿಯಾಗಿ ಪರಿವರ್ತಿಸುವ ಕಾರಣ ದಿನದ ಚಟುವಟಿಕೆಯಲ್ಲಿ ಕುಂದಾಗದಂತೆ ನೋಡಿಕೊಳ್ಳುತ್ತದೆ. ಹೆಚ್ಚನ ಸಂದರ್ಭಗಳಲ್ಲಿ ಬೆಳಗ್ಗಿನ ಉಪಾಹಾರ ಇಲ್ಲದೇ ಅಥವಾ ಅನಾರೋಗ್ಯಕರ ಉಪಾಹಾರಗಳನ್ನು ಸೇವಿಸಿ ಕೆಲಸಕ್ಕೆ ಬಂದಿರುವವರಲ್ಲಿ ಕೆಲವೇ ಸಮಯದಲ್ಲಿ ಉತ್ಸಾಹ ಉಡುಗಿ ಹೋಗುವುದನ್ನು ಕಾಣಬಹುದು. ಇವರು ಕೆಲಸ ಪ್ರಾರಂಭಿಸುವ ಮೊದಲು ಒಂದು ಕೆಂದಾಳೆ ಸೇವಿಸಿದರೆ ಮದ್ಯಾಹ್ನದವರೆಗೂ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ.

ಎದೆಯುರಿಯನ್ನು ಕಡಿಮೆಮಾಡುತ್ತದೆ
ಕೆಂದಾಳೆಯ ನಿಯಮಿತ ಸೇವನೆಯಿಂದ ಎದೆಯುರಿ ಕಡಿಮೆಯಾಗುತ್ತದೆ. ಇದರಲ್ಲಿರುವ ಪೋಷಕಾಂಶಗಳು ಈ ಉರಿಯನ್ನು ತಗ್ಗಿಸಿ ಆರಾಮ ನೀಡುವ ಕಾರಣ ಎದೆಯುರಿ, ಹುಳಿತೇಗು, ಹೊಟ್ಟೆಯಲ್ಲಿ ಉರಿ ಮೊದಲಾದ ತೊಂದರೆ ಇರುವವರು ನಿತ್ಯವೂ ಸೇವಿಸುವುದು ಉತ್ತಮ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಎದೆಯುರಿಯನ್ನು ಕಡಿಮೆಮಾಡುತ್ತದೆ
ಇದರಲ್ಲಿರುವ ನೈಸರ್ಗಿಕ ಅಂಟಾಸಿಡ್ (ಒಂದು ಬಗೆಯ ಪತ್ಯಾಮ್ಲ) ಹೊಟ್ಟೆಯುರಿಗೆ ಕಾರಣವಾದ ಅಮ್ಲಗಳ ಪ್ರಬಲತೆಯನ್ನು ಕಡಿಮೆ ಮಾಡುವ ಗುಣ ಹೊಂದಿದೆ. ಆದ್ದರಿಂದ ಊಟದ ಬಳಿಕ ಒಂದು ಕೆಂದಾಳೆಯನ್ನು ತಿನ್ನುವುದರಿಂದ ಈ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.ಆದ್ದರಿಂದ ಮುಂದೆ ಮಾರುಕಟ್ಟೆಗೆ ಹೋದಾಗ ಕೆಂದಾಳೆ ಕಂಡುಬಂದರೆ, ಕೊಂಚ ದುಬಾರಿಯಾದರೂ ಚಿಂತಿಲ್ಲ, ಖಂಡಿತಾ ಕೊಂಡು ತನ್ನಿ.



Click it and Unblock the Notifications








