Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಹಿ ಬೇವಿನ ಜ್ಯೂಸ್‌ನಲ್ಲಿರುವ ಸಿಹಿ-ಸಿಹಿ ಗುಣಗಳು
ಹಾಗಲಕಾಯಿ ಮಧುಮೇಹಕ್ಕೆ ಉತ್ತಮ ಎಂದು ಆಯುರ್ವೇದ ಹೇಳುತ್ತದೆ. ಆದರೆ ಇದನ್ನು ಕಹಿ ಎಂಬ ಕಾರಣಕ್ಕೆ ಮಧುಮೇಹಿಗಳೂ ತಿನ್ನಲು ಇಷ್ಟಪಡುವುದಿಲ್ಲ. ಅಂತೆಯೇ ಬೇವು ಸಹಾ ಆರೋಗ್ಯವನ್ನು ಹಲವು ರೀತಿಯಾಗಿ ವೃದ್ಧಿಸುತ್ತದೆ. ಆದರೆ ಬೇವಿನ ಕಹಿಯಾದ ರುಚಿಯೇ ಹೆಚ್ಚಿನವರಿಗೆ ಸೇವಿಸದಿರಲು ಕಾರಣವಾಗಿದೆ. ಬೇವು ಹತ್ತಿರವಿದ್ದರೆ, ಸೊಳ್ಳೆಗಳು ದೂರ
ಅದು ಏನೇ ಇರಲಿ, ಆದರೆ ಒಂದು ಅಂತೂ ಸತ್ಯ, ಇದರ ಪ್ರಯೋಜನದ ಸಿಹಿ ಪಡೆಯಬೇಕಾದರೆ ಕೊಂಚ ಕಹಿಯನ್ನು ಸಹಿಸಲೇಬೇಕು. ಕಹಿಯಾದ ಬೇವಿನ ಸಿಹಿಯಾದ ಗುಣಗಳು ಯಾವುದು ಎಂದು ಅರಿವಾದರೆ ಈ ಕಹಿಯನ್ನು ಕುಡಿಯಲು ಮನಸ್ಸು ಒಪ್ಪಿಕೊಳ್ಳುತ್ತದೆ. ಬನ್ನಿ, ಇದರ ಸಿಹಿ ಗುಣಗಳು ಯಾವುವು ನೋಡೋಣ....

ಚರ್ಮದ ಕಾಂತಿ ಹೆಚ್ಚಿಸಲು
ಬೇವಿನಲ್ಲಿರುವ ಉರಿಯೂತ ನಿವಾರಕ ಗುಣದ ಮೂಲಕ ಮುಖದಲ್ಲಿರುವ ಮೊಡವೆಗಳನ್ನು ಬುಡಸಹಿತ, ಕಲೆಯಿಲ್ಲದೇ ನಿವಾರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಚರ್ಮದ ಕಾಂತಿ ಹೆಚ್ಚಿಸಲು ಮತ್ತು ವರ್ಣವನ್ನು ಸಹಜವರ್ಣದತ್ತ ತರಲೂ ನೆರವಾಗುತ್ತದೆ. ಬೇವು: ಕಹಿಯಾದರೂ ಸೌಂದರ್ಯದ ವಿಷಯದಲ್ಲಿ ಸಿಹಿ

ಬೇವಿನ ರಸ
ಬೇವಿನ ರಸವನ್ನು ಕುಡಿಯುವ ಮೂಲಕ ಹೊಟ್ಟೆಯಲ್ಲಿರುವ ವಿಷಕಾರಿ ವಸ್ತುಗಳು, ಕೀಟಗಳು ಮತ್ತು ಪರಾವಲಂಬಿ ಹುಳಗಳು ನಿವಾರಣೆಯಾಗುತ್ತದೆ. ಅಲ್ಲದೇ ಕೂದಲ ಬೆಳವಣಿಗೆ ಉತ್ತಮಗೊಳ್ಳುತ್ತದೆ, ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ಮಧುಮೇಹಿಗಳಿಗೆ ರಾಮಬಾಣ
ಬೇವಿನ ರಸ ಮಧುಮೇಹಿಗಳಿಗೂ ಉತ್ತಮವಾಗಿದೆ. ಪ್ರತಿದಿನ ಕೊಂಚ ಬೇವಿನ ರಸವನ್ನು ಆಹಾರದ ಮೂಲಕ ಸೇವಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆಯ ಅಂಶ ಸುಲಭವಾಗಿ ಸಮತೋಲನಕ್ಕೆ ಬರುತ್ತದೆ.

ಕಣ್ಣಿನ ಆರೋಗ್ಯಕ್ಕೆ
ಕೆಲವು ಹನಿ ಬೇವಿನ ರಸವನ್ನು ಕಣ್ಣಿಗೆ ಬಿಟ್ಟುಕೊಳ್ಳುತ್ತಾ ಬರುವ ಮೂಲಕ ಕಣ್ಣಿನ ದೃಷ್ಟಿ ಉತ್ತಮಗೊಳ್ಳುತ್ತದೆ. (ಯಾವುದಕ್ಕೂ ಮೊದಲು ವೈದ್ಯರ ಸಲಹೆ ಪಡೆಯಿರಿ) ಅಲ್ಲದೇ ಕಣ್ಣು ಕೆಂಪಗಾಗುವ ಮದ್ರಾಸ್ ಐ ಕಾಯಿಲೆಗೂ ಬೇವಿನ ರಸದ ಕೆಲವು ಹನಿಗಳನ್ನು ಬಿಟ್ಟುಕೊಂಡರೆ ಸಾಕು ಸುಲಭವಾಗಿ ಗುಣವಾಗುತ್ತದೆ.

ಚರ್ಮರೋಗದ ಸಮಸ್ಯೆಗೆ
ಬೇವಿನ ರಸದಿಂದ ಚರ್ಮವನ್ನು ನಯವಾಗಿ ಮಸಾಜ್ ಮಾಡುವ ಮೂಲಕ ಚಿಕನ್ ಪಾಕ್ಸ್ ಎಂಬ ಸಿಡುಬಿನ ಕಾಯಿಲೆಯಿಂದಾಗಿ ಮೂಡಿದ್ದ ಕಲೆಗಳು ನಿಧಾನವಾಗಿ ಮರೆಯಾಗುತ್ತವೆ. ಅಲ್ಲದೇ ಎಕ್ಸಿಮಾ ಎಂಬ ಚರ್ಮರೋಗದ ಕಲೆಗಳೂ ಮಾಯವಾಗುತ್ತವೆ. ಚಿಕನ್ ಪಾಕ್ಸ್ ಬಂದರೆ ಆರೈಕೆ ಹೀಗಿರಲಿ

ಬೇವಿನ ರಸವನ್ನು ಕುಡಿಯುವುದು ಹೇಗೆ?
ಬೇವಿನ ರಸ ಅತಿ ಕಹಿಯಾಗಿದ್ದು ಯಾರಿಗೂ ಕುಡಿಯಲು ಕಷ್ಟವೇ. ಆದರೆ ಬೇವಿನ ಸದ್ಗುಣಗಳನ್ನು ಪಡೆಯಲು ಕೆಲವು ಪರ್ಯಾಯ ವಿಧಾನಗಳಿವೆ:

ಬೇವಿನ ರಸವನ್ನು ಕುಡಿಯುವುದು ಹೇಗೆ?
1. ಬೇವಿನ ಎಲೆಗಳೊಂದಿಗೆ ನಿಮ್ಮ ಇಷ್ಟದ ಕೆಲವು ಸಾಂಬಾರವಸ್ತುಗಳನ್ನು ಸೇರಿಸಿ ಗೊಟಾಯಿಸಿ. ಉದಾಹರಣೆಗೆ ಏಲಕ್ಕಿ, ಉಪ್ಪು, ಕಲ್ಲುಪ್ಪು, ಕಾಳುಮೆಣಸು ಇತ್ಯಾದಿ. ಇದರಿಂದ ಕಹಿಯಾದ ರುಚಿ ಕೊಂಚ ಬದಲಾಗಿ ಕುಡಿಯಲು ಸಾಧ್ಯವಾಗುವಂತಿರುತ್ತದೆ. ಮಧುಮೇಹಿಗಳಲ್ಲದವರು ಬೆಲ್ಲವನ್ನೂ ಆಯ್ದುಕೊಳ್ಳಬಹುದು.

ಬೇವಿನ ರಸವನ್ನು ಕುಡಿಯುವುದು ಹೇಗೆ?
2. ಕೆಲವರಿಗೆ ಬೇವಿನ ರುಚಿಗಿಂತಲೂ ವಾಸನೆಯೇ ಇಷ್ಟವಾಗುವುದಿಲ್ಲ. ಇವರು ಬೇವಿನ ಎಲೆಗಳನ್ನು ಫ್ರಿಜ್ಜಿನಲ್ಲಿ ಸುಮಾರು ಇಪ್ಪತ್ತು ನಿಮಿಷ ಇಟ್ಟಬಳಿಕ ಅರೆದರೆ ವಾಸನೆ ಬರುವುದಿಲ್ಲ ಇಷ್ಟೂ ಸಮಯಾವಕಾಶ ಇಲ್ಲದಿದ್ದಲ್ಲಿ ಅರೆಯುವ ಸಮಯದಲ್ಲಿ ಕೆಲವು ಐಸ್ ತುಂಡುಗಳನ್ನೂ ಹಾಕಬಹುದು. ಉತ್ತಮ ಪ್ರಯೋಜನ ಪಡೆಯಲು ಗೊಟಾಯಿಸಿದ ತಕ್ಷಣವೇ ಕುಡಿಯಬೇಕು. ಅರೆದ ಮೂವತ್ತು ನಿಮಿಷಗಳ ಬಳಿಕ ಬೇವಿನ ಗುಣಗಳು ನಿಷ್ಪ್ರಯೋಜಕವಾಗುತ್ತವೆ.

ಬೇವಿನ ರಸವನ್ನು ಕುಡಿಯುವುದು ಹೇಗೆ?
3. ಬೇವು ಕಹಿಯಾದರೂ ಕುಡಿದ ಬಳಿಕ ನಾಲಿಗೆಯಲ್ಲಿ ಕಹಿ ಉಳಿಯುವುದಿಲ್ಲ. ಬದಲಿಗೆ ಕಹಿ ಕುಡಿದಾದ ಬಳಿಕ ನಾಲಿಗೆಯಲ್ಲಿ ಸಿಹಿಯಾದ ಭಾವ ಉಳಿದಿರುತ್ತದೆ.

ಬೇವಿನ ರಸವನ್ನು ಕುಡಿಯುವುದು ಹೇಗೆ?
4. ಕಹಿ ಕುಡಿಯುವಾಗ ಮೂಗಿನ ಎರಡೂ ಹೊಳ್ಳೆಗಳನ್ನು ಮುಚ್ಚಿಕೊಳ್ಳಿ. ಇದರಿಂದ ಕಹಿ ಗೊತ್ತಾಗುವುದಿಲ್ಲ. ಬೇವಿನ ಸಿಹಿ ಗುಣಗಳು ಪೂರ್ಣ ಪ್ರಮಾಣದಲ್ಲಿ ಸಿಗಬೇಕು ಎಂದಿದ್ದರೆ ಎಂದಿಗೂ ಸಕ್ಕರೆ ಬೆರೆಸಬೇಡಿ

ಬೇವಿನ ರಸವನ್ನು ಕುಡಿಯುವುದು ಹೇಗೆ?
5. ಬೇವಿನ ಕಹಿಯ ಅತ್ಯುತ್ತಮ ಪರಿಣಾಮ ಪಡೆಯಲು ಬೆಳಗ್ಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಕೊಂಚ ಉಪ್ಪು ಅಥವಾ ಕಾಳುಮೆಣಸಿನ ಪುಡಿಯನ್ನು ಸೇರಿಸಿದರೆ ಕಹಿ ಕೊಂಚ ಕಡಿಮೆಯೂ ಆಗುತ್ತದೆ ಮತ್ತು ಆರೋಗ್ಯವೂ ವೃದ್ದಿಸುತ್ತದೆ.



Click it and Unblock the Notifications
