Latest Updates
-
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ?
ಚಿಕನ್ ಪಾಕ್ಸ್ ಬಂದರೆ ಆರೈಕೆ ಹೀಗಿರಲಿ

ಚಿಕನ್ ಪಾಕ್ಸ್ ಬಂದಾಗ ಈ ಕೆಳಗಿನಂತೆ ಉಪಚರಿಸಿದರೆ ಬೇಗನೆ ಗುಣ ಮುಖವಾಗುವುದು.
1. ಜ್ವರ ಕಮ್ಮಿಯಾಗಲು ಮೆಡಿಕಲ್‌ನಲ್ಲಿ ದೊರೆಯುವ ಮಾತ್ರೆಗಳನ್ನು ನುಂಗುವ ಮುನ್ನ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಏಕೆಂದರೆ ಈ ಸಮಯದಲ್ಲಿ ಸ್ವ ಚಿಕಿತ್ಸೆ ಮಾಡಿಕೊಂಡರೆ ಅಡ್ಡ ಪರಿಣಾಮ ಉಂಟಾಗಬಹುದು.
2. ಈ ಕಾಯಿಲೆ ಬಂದರೆ ಸಹಿಸಲಾಸಾಧ್ಯವಾದ ತುರಿಕೆ ಉಂಟಾಗುವುದು. ಆದರೂ ಮೈಯನ್ನು ಕೆರೆಯಬಾರದು. ತುಂಬಾ ತುರಿಕೆ ಕಂಡು ಬಂದರೆ ವೈದ್ಯರನ್ನು ಕಂಡು ಔಷಧಿಯನ್ನು ತೆಗೆದುಕೊಳ್ಳುವುದು ಒಳ್ಳೆಯದು.
3. ಸಾಕಷ್ಟು ನೀರು ಮತ್ತು ಎಳನೀರು ಕುಡಿಯುವುದು ಒಳ್ಳೆಯದು.
4. ತುಂಬಾ ಮೃದುವಾದ ಆಹಾರವನ್ನು ತಿನ್ನಬೇಕು. ಬಾಯಲ್ಲಿ ಕೂಡ ಚಿಕನ್ ಪಾಕ್ಸ್ ಬಂದಿದ್ದರೆ ಖಾರ, ಹುಳಿ, ಉಪ್ಪು ಮತ್ತು ತಣ್ಣನೆಯ ಆಹಾರ ತಿನ್ನಬೇಕು.
5. ತುಂಬಾ ಸಡಿಲವಾದ ಬಟ್ಟೆಗಳನ್ನು ಧರಿಸುವುದು ಒಳ್ಳೆಯದು.
6. ತುರಿಕೆಯನ್ನು ತಡೆಯಲು ಕಲಾಮೈನ್ ಲೋಷನ್ ಹಚ್ಚಬಹುದು.
7. ಕೈ ಬೆರಳಿನಲ್ಲಿರುವ ಉಗುರುಗಳನ್ನು ಕತ್ತರಿಸಬೇಕು. ಇಲ್ಲದಿದ್ದರೆ ತುರಿಸಿ ಗಾಯವಾಗುವುದು. ಕೈ ಉಗುರು ತಾಗಿದಂತೆ ತಡೆಯಲು ಕೈಗಳಿಗೆ ಗ್ಲೌಸ್ ಹಾಕಬಹುದು.
8. ತಣ್ಣೀರಿನಿಂದ ಸ್ನಾನ ಮಾಡಿಸಬೇಕು. ತುರಿಕೆಯನ್ನು ತಡೆಯಲು ನೀರಿಗೆ ಸ್ವಲ್ಪ ಅಡುಗೆ ಸೋಡಾ ಹಾಕಿ ಸ್ನಾನ ಮಾಡಬಹುದು.
9. ಕೆಲವರಿಗೆ ಮೈಯಲ್ಲಿ ಎದ್ದ ಗುಳ್ಳೆಗಳು ಒಣಗದೆ ನೋವು ಮತ್ತು ತುರಿಕೆ ಮತ್ತಷ್ಟು ಜಾಸ್ತಿಯಾಗುವುದು. ಈ ರೀತಿಯಾದರೆ ಕೂಡಲೇ ವೈದ್ಯರನ್ನು ಕಾಣಬೇಕು.
10. ಚಿಕನ್ ಪಾಕ್ಸ್ ಗುಣಪಡಿಸಲು ಚುಚ್ಚು ಮದ್ದಿದೆ, ಅದನ್ನು ಹಾಕಿಸಿಕಂಡರೂ ಗುಣ ಮುಖವಾಗುವುದು. ಆದರೆ ಹೆಚ್ಚಿನವರು ಚಿಕನ್ ಪಾಕ್ಸ್ ಬಂದರೆ ಮನೆ ಮದ್ದು ಮಾಡುತ್ತಾರೆ. ಬೇವನ್ನು ಮನೆ ಮದ್ದಾಗಿ ಉಪಯೋಗಿಸುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
