For Quick Alerts
ALLOW NOTIFICATIONS  
For Daily Alerts

ಶತಾಯುಷಿ ಅಜ್ಜ ಅಜ್ಜಿಯರ ದೀರ್ಘಾಯುಷ್ಯದ ಗುಟ್ಟೇನು?

By Hemanth
|

ಈಗಲೂ ಹಿಂದಿನ ಕಾಲದವರನ್ನು ನೋಡಿದರೆ ಅವರಂತೆ ನಾವು ಕೂಡ ಇರಬಾರದೇ ಎಂದು ಅನಿಸುವುದುಂಟು. ಯಾಕೆಂದರೆ ಅಂತಹ ಮೈಕಟ್ಟು, 70 ದಾಟಿದರೂ ಚಟುವಟಿಕೆಯಿಂದ ಇರುವ ದೇಹ ಹೀಗೆ ಹಲವಾರು ವಿಷಯಗಳು ನಮ್ಮನ್ನು ಸೆಳೆಯುತ್ತದೆ. ಇಂತಹ ದೇಹ ಮತ್ತು ಚಟುವಟಿಕೆಗೆ ಕಾರಣ ಅವರು ಹಿಂದಿನಿಂದ ಪಾಲಿಸಿಕೊಂಡು ಬಂದಿರುವಂತಹ ಆರೋಗ್ಯ ಅಭ್ಯಾಸಗಳು. ಸರಿಯಾದ ವೈದ್ಯಕೀಯ ವ್ಯವಸ್ಥೆಗಳು ಇಲ್ಲದ ಕಾಲದಲ್ಲಿಯೂ ಅವರು ತಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡಿದ್ದಾರೆ. ಪ್ರತಿನಿತ್ಯ ವೇದ ಮಂತ್ರ ಪಠಿಸಿ, ದೀರ್ಘಾಯುಷ್ಯ ಪಡೆಯಿರಿ

ಇದರಿಂದಾಗಿ ಹಿಂದಿನವರು ನೂರು ವರ್ಷ ಬದುಕುತ್ತಿದ್ದರು. ಆದರೆ ಈಗ 60-70 ವರ್ಷವಾಗುತ್ತಿದ್ದಂತೆ ಯಮಲೋಕ ಸೇರುತ್ತಾರೆ. 70ಕ್ಕಿಂತ ಹೆಚ್ಚು ಬದುಕಿದರೂ ಅವರು ಆರೋಗ್ಯದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಇರುತ್ತಾರೆ. ದಶಕಗಳಿಂದ ಹಲವಾರು ಬದಲಾವಣೆಗಳು ಆಗಿವೆ. ತಂತ್ರಜ್ಞಾನವು ತುಂಬಾ ಮುಂದುವರಿದಿದೆ. ಇಂತಹ ಸಮಯದಲ್ಲಿ ಮಾನವನ ಆಯಸ್ಸು ಮಾತ್ರ ಕಿರಿದಾಗುತ್ತಿದೆ. ಆದರೆ ನೂರು ವರ್ಷಗಳ ಕಾಲ ಬದುಕಿದ ಬುಡಕಟ್ಟು ಜನಾಂಗಗಳ ಗುಟ್ಟಿನ ಬಗ್ಗೆ ತಿಳಿದುಕೊಳ್ಳುವ.... ಲವಲವಿಕೆಯ ಜೀವನ ಶೈಲಿಗೆ ಪ್ರೋಟೀನ್‌ಯುಕ್ತ ಆಹಾರಗಳು...

ಆಹಾರವೇ ಮದ್ದಾಗಿತ್ತು

ಆಹಾರವೇ ಮದ್ದಾಗಿತ್ತು

ಹಿಂದಿನ ಬುಡಕಟ್ಟು ಜನಾಂಗದವರು ಹೆಚ್ಚಾಗಿ ದಿನಕ್ಕೆ ಎರಡೇ ಹೊತ್ತು ಊಟ ಮಾಡುತ್ತಿದ್ದರು. ಬೆಳಗ್ಗೆ ಬೇಗ ಎದ್ದು ಕಠಿಣ ಪರಿಶ್ರಮ ಪಡುತ್ತಿದ್ದರು. ಅವರು ಮಧ್ಯಾಹ್ನದ ವೇಳೆ ಮೊದಲ ಊಟ ಮಾಡುತ್ತಿದ್ದರು. ಅವರು ಸಂಸ್ಕರಿಸಿದ ಧಾನ್ಯಗಳನ್ನು ತಿನ್ನುತ್ತಿರಲಿಲ್ಲ. ಇಡೀ ಧಾನ್ಯಗಳನ್ನು ತಿನ್ನುತ್ತಿದ್ದ ಕಾರಣ ಅವರ ಜೀರ್ಣಾಂಗ ವ್ಯವಸ್ಥೆಯು ಸರಿಯಾಗಿ ಇರುತ್ತಿತ್ತು. ಅವರು ಅತಿಯಾಗಿ ತಿನ್ನುತ್ತಾ ಇರಲಿಲ್ಲ. ದೇಹಕ್ಕೆ ಬೇಕಾದಷ್ಟೇ ತಿನ್ನುತ್ತಿದ್ದ ಅವರು ಆಹಾರವನ್ನೇ ಔಷಧಿಯನ್ನಾಗಿ ಮಾಡಿಕೊಂಡಿದ್ದರು.

ಗುಣಮಟ್ಟದ ಆಹಾರ, ಗಾಳಿ ಮತ್ತು ನೀರು

ಗುಣಮಟ್ಟದ ಆಹಾರ, ಗಾಳಿ ಮತ್ತು ನೀರು

ಅವರು ಬಳಸುತ್ತಿದ್ದ ಆಹಾರಗಳಲ್ಲಿ ಯಾವುದೇ ರೀತಿಯ ಕೀಟನಾಶಗಳು ಮತ್ತು ರಾಸಾಯನಿಕಗಳು ಇರುತ್ತಿರಲಿಲ್ಲ. ಅವರು ತಿನ್ನುತ್ತಿದ್ದ ಪ್ರತಿಯೊಂದು ಆಹಾರವು ಸಾವಯವವಾಗಿರುತ್ತಿತ್ತು. ನೀರು ಮತ್ತು ಗಾಳಿ ಪರಿಶುದ್ಧವಾಗಿತ್ತು.

ಮಾಂಸ ಕಡಿಮೆ ಬಳಕೆ

ಮಾಂಸ ಕಡಿಮೆ ಬಳಕೆ

ಅವರು ಮಾಂಸವನ್ನು ತುಂಬಾ ಕಡಿಮೆ ತಿನ್ನುತ್ತಿದ್ದರು. ವಾರದಲ್ಲಿ ಒಂದು ಸಲ ಮಾಂಸ ತಿನ್ನುತ್ತಿದ್ದರು. ಅವರು ಹೆಚ್ಚಾಗಿ ಆಹಾರದಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಬಳಕೆ ಮಾಡುತ್ತಿದ್ದರು. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ.

ಕ್ಯಾನ್ಸರ್

ಕ್ಯಾನ್ಸರ್

ಅವರು ಜರದಾರು ಬೀಜಗಳನ್ನು ಸೇವನೆ ಮಾಡುತ್ತಿದ್ದರು. ಇವುಗಳಿಗೆ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಶಕ್ತಿಯಿದೆ ಎಂದು ನಂಬಲಾಗಿದೆ. ಹಿಂದಿನ ಕಾಲದಲ್ಲಿ ಕ್ಯಾನ್ಸರ್ ತುಂಬಾ ಕಡಿಮೆಯಿತ್ತು ಎಂದು ಹಲವಾರು ಮೂಲಗಳು ಹೇಳಿವೆ.

ಹೊಟ್ಟೆಯ ಆರೋಗ್ಯ

ಹೊಟ್ಟೆಯ ಆರೋಗ್ಯ

ಆಹಾರ ಕ್ರಮದಲ್ಲಿ ದಿನಾಲೂ ಮೊಸರನ್ನು ಸೇವನೆ ಮಾಡುತ್ತಿದ್ದ ಕಾರಣ ಅವರ ಹೊಟ್ಟೆಯ ಆರೋಗ್ಯ ತುಂಬಾ ಒಳ್ಳೆಯದಿತ್ತು. ಮೊಸರು ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ.

ಕೆಲಸ ಕಾರ್ಯ

ಕೆಲಸ ಕಾರ್ಯ

ಅವರು ಹೆಚ್ಚಿನ ಸಮಯ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದರು. ಇದರಿಂದ ಅವರು ಚಟುವಟಿಕೆಯಿಂದ ಹಾಗೂ ಸೂರ್ಯನ ಬೆಳಕು ಅವರ ದೇಹಕ್ಕೆ ಸಿಗುತ್ತಿತ್ತು. ಅವರು ತುಂಬಾ ದೂರ ನಡೆಯುತ್ತಿದ್ದರು.

ಒತ್ತಡಕ್ಕೆ ಧ್ಯಾನದ ಮೊರೆ....

ಒತ್ತಡಕ್ಕೆ ಧ್ಯಾನದ ಮೊರೆ....

ಅವರು ದೇಹದ ಒಳಗಿನ ಶಕ್ತಿಯ ಮೇಲೆ ನಂಬಿಕೆಯನ್ನಿರಿಸಿದ್ದರು. ದೇಹಕ್ಕೆ ಏನು ಬೇಕೆಂದು ಅವರು ಕೇಳುತ್ತಲಿದ್ದರು. ಅವರು ಒತ್ತಡವನ್ನು ಧ್ಯಾನದ ಮೂಲಕ ಹೋಗಲಾಡಿಸುತ್ತಿದ್ದರು. ಅವರು ಉತ್ತರಕ್ಕಾಗಿ ಪ್ರಕೃತಿಯ ಮೊರೆ ಹೋಗುತ್ತಿದ್ದರು. ಅವರಿಗೆ ಒತ್ತಡ ಮತ್ತು ಕಲುಷಿತ ವಾತಾವರಣ ಏನೆಂದೇ ತಿಳಿದಿರಲಿಲ್ಲ.

English summary

How Ancient Indians Managed To Live Long

The health habits of ancient Indians helped them live longer than us. In fact, those who lived in villages had almost no access to health facilities but many tribes of those days lived longer than 100 years.Today, the average life expectancy is between 60-70 years. Even though people lived till 70, they are battling with many health issues.
X
Desktop Bottom Promotion