For Quick Alerts
ALLOW NOTIFICATIONS  
For Daily Alerts

ರಣಬಿಸಿಲಿನ ದಾಹವನ್ನು ತಣಿಸುವ ಸೌತೆಕಾಯಿ ಜ್ಯೂಸ್

By Manu
|

ಬೇಸಿಗೆಯಲ್ಲಿ ಕುಡಿಯಲು ಲಿಂಬೆ ಶರಬತ್ತು ಉತ್ತಮ ಪಾನೀಯವಾದರೆ ತಿನ್ನಲು ಎಳೆಸೌತೆಕಾಯಿಯೇ ಉತ್ತಮ. ಸೌತೆಕಾಯಿಗೆ ಬೇಸಿಗೆಯ ತರಕಾರಿ ಎಂಬ ಅನ್ವರ್ಥನಾಮವೂ ಇದೆ. ಇಡಿಯ ವರ್ಶ ಲಭ್ಯವಿರುವ ಈ ತರಕಾರಿಯನ್ನು ನಿತ್ಯವೂ ಸೇವಿಸುವುದು ಆರೋಗ್ಯಕರ. ವಿಶೇಷವಾಗಿ ಬೇಸಿಗೆಯಲ್ಲಿ ಸೌತೆಯ ಸೇವನೆಯಿಂದ ಆರೋಗ್ಯಕ್ಕೆ ಹಲವು ವಿಧದ ಪ್ರಯೋಜನಗಳಿವೆ. ಸೌತೆಯಲ್ಲಿ ಪುಷ್ಕಳ ನೀರಿನ ಹೊರತಾಗಿ ಉತ್ತಮ ಪ್ರಮಾಣದಲ್ಲಿ ವಿಟಮಿನ್‌ಗಳು ಮತ್ತು ಇತರ ಪೋಷಕಾಂಶಗಳೂ ಇವೆ. ರಣಬಿಸಿಲಿನ ದಾಹವನ್ನು ತಣಿಸುವ ಸೌತೆಕಾಯಿ-ಶು೦ಠಿ ಜ್ಯೂಸ್!

ಬೇಸಿಗೆಯಲ್ಲಿ ಈ ನೀರು ಮತ್ತು ಇತರ ಪೋಷಕಾಂಶಗಳು ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುತ್ತವೆ. ಅಲ್ಲದೇ ಬೇಸಿಗೆಯಲ್ಲಿ ಸ್ನಾಯುಗಳು, ಅದರಲ್ಲೂ ಮೂಳೆಗಳಿಗೆ ಅಂಟಿಕೊಂಡಿದ್ದು ಮೂಳೆಗಳು ಚಲಿಸಲು ನೆರವಾಗುವ ಸ್ನಾಯುಗಳಲ್ಲಿ ಸಿಲಿಕಾ ಎಂಬ ಖನಿಜದ ಕೊರತೆಯಿಂದ ಬಳಲಿಕೆಯುಂಟಾಗುತ್ತದೆ. ಸೌತೆಕಾಯಿ ಈ ಕೊರತೆಯನ್ನು ಸಮರ್ಥವಾಗಿ ಪೂರೈಸುವ ಮೂಲಕ ಬೇಸಿಗೆಯ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.

ಒಂದು ವೇಳೆ ಈ ತರಕಾರಿಯನ್ನು ಕೊಚ್ಚಿ ನೀರಿನಲ್ಲಿ ಸೇರಿಸಿ ಈ ನೀರನ್ನು ಕುಡಿದರೆ ದೇಹದ ರೋಗ ನಿರೋಧಕ ಶಕ್ತಿ ಇನ್ನಷ್ಟು ಹೆಚ್ಚುತ್ತದೆ ಹಾಗೂ ಬೇಸಿಗೆಯ ಝಳದಿಂದ ದೇಹದ ಚೈತನ್ಯ ನಶಿಸದಂತೆ ಕಾಪಾಡುತ್ತದೆ. ಈ ನೀರನ್ನು ತಯಾರಿಸಲು ಹೆಚ್ಚು ಕಷ್ಟ ಪಡಬೇಕಾಗಿಲ್ಲ. ಕೆಲವು ಎಳೆ ಸೌತೆಕಾಯಿಗಳ ತುದಿಭಾಗವನ್ನು ನಿವಾರಿಸಿ ಉದ್ದಕ್ಕೆ ಹಲವು ತುಂಡುಗಳಾಗುವಂತೆ ಸೀಳಿ ಕುಡಿಯುವ ನೀರಿನ ಬಾಟಲಿ ಅಥವಾ ಜಗ್‌ನಲ್ಲಿ ಮುಳುಗಿಸಿಡಿ. ಇಡೀ ರಾತ್ರಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಈ ತುಂಡುಗಳನ್ನು ನಿವಾರಿಸಿ ಇಡಿಯ ದಿನ ಕೊಂಚಕೊಂಚವಾಗಿ ಕುಡಿಯುತ್ತಾ ಇರಿ. ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

ಇದರಿಂದ ಬೇಸಿಗೆಯಲ್ಲಿ ದೇಹ ಕಳೆದುಕೊಂಡಿದ್ದ ನೀರು ಮತ್ತು ಇತರ ಪೋಷಕಾಂಶ ಖನಿಜಗಳನ್ನು ದೇಹ ಮತ್ತೆ ಪಡೆದುಕೊಳ್ಳುತ್ತದೆ. ದೇಹವನ್ನು ತಂಪಾಗಿರಿಸುವುದು ಮಾತ್ರವಲ್ಲದೇ ಇನ್ನೂ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ ಮುಂದೆ ಓದಿ...

ದೇಹದಲ್ಲಿ ನೀರಿನ ಅಂಶದ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ

ದೇಹದಲ್ಲಿ ನೀರಿನ ಅಂಶದ ಕೊರತೆಯಾಗದಂತೆ ನೋಡಿಕೊಳ್ಳುತ್ತದೆ

ಸೌತೆ ನೆನೆಸಿದ ನೀರನ್ನು ದಿನವಿಡೀ ಕುಡಿಯುವ ಮೂಲಕ ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಬಹುದು. ದೇಹದ ತಾಪಮಾನ, ಹೃದಯ ಬಡಿತ, ರಕ್ತಪರಿಲನೆ, ವಿಷಕಾರಿ ವಸ್ತುಗಳನ್ನು ಹೊರಹಾಕಲು ಮೊದಲಾದ ಹಲವು ಕಾರ್ಯಗಳಿಗೆ ನೀರು ಅಗತ್ಯ. ಬೇಸಿಗೆಯಲ್ಲಿ ಹೆಚ್ಚು ಬೆವರುವ ಮೂಲಕ ಕಳೆದುಕೊಳ್ಳುವ ನೀರಿನ ಮೂಲಕ ಎದುರಾಗಬಹುದಾಗಿದ್ದ ಈ ತೊಂದರೆಗಳನ್ನು ಸೌತೆ ಸಮರ್ಥವಾಗಿ ನಿಭಾಯಿಸುತ್ತದೆ.

ಅಗತ್ಯಕ್ಕೂ ಕೊಂಚ ಹೆಚ್ಚಿನ ವಿಟಮಿನ್ನುಗಳ ಪೂರೈಕೆ

ಅಗತ್ಯಕ್ಕೂ ಕೊಂಚ ಹೆಚ್ಚಿನ ವಿಟಮಿನ್ನುಗಳ ಪೂರೈಕೆ

ಬರೆಯ ನೀರು ಕುಡಿದರೆ ಬೇಸಿಗೆಯಲ್ಲಿ ನೀರಿನ ಕೊರತೆಯನ್ನು ಪೂರೈಸಿಕೊಳ್ಳಬಹುದು. ಆದರೆ ನೀರಿನಲಲ್ಲಿ ವಿಟಮಿನ್ನು ಅಥವಾ ಖನಿಜಗಳಿಲ್ಲದ ಕಾರಣ ದೇಹ ಸೊರಗುತ್ತದೆ. ನೀರಿನ ಬದಲಿಗೆ ಸೌತೆ ನೆನೆಸಿದ ನೀರನ್ನು ದಿನವಿಡೀ ಕುಡಿಯುವ ಮೂಲಕ ಉತ್ತಮ ಪ್ರಮಾಣದ ವಿಟಮಿನ್ ಎ ಮತ್ತು ಸಿ ಹಾಗೂ ಇತರ ಉಪಯುಕ್ತ ಖನಿಜಗಳು ದೇಹಕ್ಕೆ ಲಭ್ಯವಾಗುತ್ತದೆ. ಇದರ ಮೂಲಕ ಬೇಸಿಗೆಯ ಬಿರುಬಿಸಿಲಿನಲ್ಲಿಯೂ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ.

ಹೃದಯದ ಒತ್ತಡವನ್ನು ಸಮರ್ಪಕವಾಗಿಸುತ್ತದೆ

ಹೃದಯದ ಒತ್ತಡವನ್ನು ಸಮರ್ಪಕವಾಗಿಸುತ್ತದೆ

ಅಧಿಕ ರಕ್ತದೊತ್ತಡ ಯಾವತ್ತಿಗೂ ಅಪಾಯಕರವೇ! ಈ ತೊಂದರೆ ಇದ್ದವರಿಗೆ ಬೇಸಿಗೆಯಲ್ಲಿ ಇತರ ತೊಂದರೆಗಳೂ ಹೆಚ್ಚು ಕಾಡಬಹುದು. ಹೃದಯಾಘಾತ ಮತ್ತು ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆ ಬೇಸಿಗೆಯ ಬಿಸಿಯಲ್ಲಿ ಇನ್ನಷ್ಟು ಹೆಚ್ಚುತ್ತವೆ. ಆದರೆ ಸೌತೆ ನೆನೆಸಿದ ನೀರನ್ನು ದಿನವಿಡೀ ಕುಡಿಯುವ ಮೂಲಕ ರಕ್ತದ ಒತ್ತಡವನ್ನು ಸಮರ್ಪಕವಾಗಿರಿಸಲು ಸಾಧ್ಯವಾಗುತ್ತದೆ. ಸೌತೆಯಲ್ಲಿರುವ ಪೊಟ್ಯಾಶಿಯಂ 4% DV (4% daily value) ಅಂದರೆ ಒಂದು ದಿನದ ಸಾಮಾನ್ಯ ಚಟುವಟಿಕೆಗೆ ಅಗತ್ಯವಾದ ಪ್ರಮಾಣಕ್ಕೆ ಅನುಗುಣವಾಗಿ ಸೌತೆಯಲ್ಲಿ ಪೊಟ್ಯಾಶಿಯಂ ಇದೆ. ಇದು ಹೃದಯದ ಒತ್ತಡವನ್ನು ಕಡಿಮೆಗೊಳಿಸಿ ಹೃದಯ ಸಂಬಂಧಿ ತೊಂದರೆಗಳ ಸಾಧ್ಯತೆಯನ್ನು ತಗ್ಗಿಸುತ್ತದೆ.

ಹಸಿವನ್ನು ನೀಗಿಸುತ್ತದೆ

ಹಸಿವನ್ನು ನೀಗಿಸುತ್ತದೆ

ಸೌತೆಯಲ್ಲಿ ಕ್ಯಾಲೋರಿಗಳು ಇಲ್ಲದೇ ಇರುವ ಕಾರಣ ಹಸಿವಾದಾಗಲೆಲ್ಲಾ ತಿನ್ನಲು ಅತ್ಯಂತ ಸಮರ್ಪಕ ಆಹಾರವಾಗಿದೆ. ಇದು ತೂಕವನ್ನು ಏರಿಸಲು ನೆರವಾಗದ ಕಾರಣ ಸ್ಥೂಲದೇಹಿಗಳೂ ತಿನ್ನಬಹುದು. ಸಾಮಾನ್ಯವಾಗಿ ದಿನವಿಡೀ ಮನಸ್ಸು ತಾಳಲಾರದೇ ಅದೂ ಇದೂ ತಿನ್ನುವ ಮೂಲಕವೇ ಸ್ಥೂಲಕಾಯ ಆವರಿಸಿದೆ. ಸ್ಥೂಲದೇಹಿಗಳು ಯಾವಾಗ ತಮಗೆ ತಿನ್ನುವ ಮನಸ್ಸಾಯಿತೋ ಆಗೆಲ್ಲಾ ಸೌತೆಯ ಕೆಲವು ತುಂಡುಗಳನ್ನು ತಿನ್ನುವುದರ ಮೂಲಕ ತೂಕ ಹೆಚ್ಚದೇ ಅನಾರೋಗ್ಯಕರ ಆಹಾರ ತಿನ್ನದೇ ಇರಲು ಪ್ರೋತ್ಸಾಹಿಸುತ್ತದೆ.

ಚರ್ಮದ ಆರೈಕೆ ಮಾಡುತ್ತದೆ

ಚರ್ಮದ ಆರೈಕೆ ಮಾಡುತ್ತದೆ

ದಿನವಿಡೀ ಸೌತೆ ನೆನೆಸಿದ ನೀರನ್ನು ಕುಡಿಯುವ ಮೂಲಕ ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ದೊರಕುತ್ತದೆ ಹಾಗೂ ಕಾಂತಿ ಹೆಚ್ಚಲು ಸಾಧ್ಯವಾಗುತ್ತದೆ. ಕೇವಲ ನೀರು ಕುಡಿಯುವುದಕ್ಕಿಂತಲೂ ಹೆಚ್ಚಿನ ಲಾಭಗಳನ್ನು ಈ ಸೌತೆ ನೀರು ನೀಡುತ್ತದೆ. ಇದರಲ್ಲಿ ಚರ್ಮದ ಕಾಂತಿ ಹೆಚ್ಚುವುದು, ಮತ್ತು ಕಲೆಯಿಲ್ಲದ ಚರ್ಮ ಬೆಳೆಯಲೂ ನೆರವಾಗುತ್ತದೆ. ಸೌತೆಯಲ್ಲಿರುವ ಸಿಲಿಕಾ ಹೆಚ್ಚಿನ ಪ್ರಯೋಜನಗಳನ್ನು ಚರ್ಮಕ್ಕೆ ನೀಡುತ್ತದೆ.

ಸ್ನಾಯುಗಳು ಸುಸ್ಥಿತಿಯಲ್ಲಿರುವಂತೆ ಮಾಡುತ್ತದೆ

ಸ್ನಾಯುಗಳು ಸುಸ್ಥಿತಿಯಲ್ಲಿರುವಂತೆ ಮಾಡುತ್ತದೆ

ಸೌತೆಕಾಯಿಯಲ್ಲಿರುವ ಸಿಲಿಕಾ ಚರ್ಮದ ಜೊತೆಗೇ ಸ್ನಾಯುಗಳಿಗೂ ಅಗತ್ಯವಾದ ಪೋಷಕಾಂಶವಾಗಿದೆ. ಇದು ಸ್ನಾಯುಗಳ ಬೆಳವಣಿಗೆಗೆ ಮತ್ತು ಹೆಚ್ಚಿನ ದೃಢತೆಗೆ ಸಹಕರಿಸುತ್ತದೆ. ಸೌತೆ ನೆನೆಸಿದ ನೀರನ್ನು ದಿನವಿಡೀ ಕುಡಿಯುವ ಮೂಲಕ ಸ್ನಾಯುಗಳಿಗೆ ಯಾವುದೇ ಪೋಷಕಾಂಶದ ಕೊರತೆಯಾಗದೇ ಇಡಿಯ ದಿನದ ಚಟುವಟಿಕೆಗಳನ್ನು ದಣಿವಿಲ್ಲದೇ ನಿರ್ವಹಿಸಲು ಸಾಧ್ಯವಾಗುತ್ತದೆ.

ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ

ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ

ಸೌತೆಕಾಯಿಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಫ್ರೀ ರ್‍ಯಾಡಿಕಲ್ ಎಂಬ ವಿಷಕಾರಿ ವಸ್ತುಗಳ ಪ್ರಭಾವವನ್ನು ತಡೆಯಲು ಸಮರ್ಥವಾಗಿವೆ. ಇವು ಕ್ಯಾನ್ಸರ್ ಬರುವುದನ್ನು ತಡೆಯುವುದರ ಜೊತೆಗೇ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳನ್ನು ನಿವಾರಿಸಲೂ ನೆರವಾಗುತ್ತವೆ.

English summary

Health Benefits Of Drinking Cucumber Water during summer

Cucumbers are traditionally known as a summer vegetable. They are good for the health and should be a must add veggie to your daily diet when the temperatures outside are soaring high. Cucumbers are filled with nutrients and vitamins. Moreover, this green vegetable has a lot of water content that will help you to stay hydrated in the hot season.
X
Desktop Bottom Promotion