For Quick Alerts
ALLOW NOTIFICATIONS  
For Daily Alerts

  ಲವಲವಿಕೆಯ ಆರೋಗ್ಯಕ್ಕೆ, 20 ನಿಮಿಷ ಚಪ್ಪಾಳೆ ತಟ್ಟಿ ಸಾಕು!

  By Manasa K M
  |

  ಚಪ್ಪಾಳೆ ತಟ್ಟುವುದು ಪ್ರೋತ್ಸಾಹಿಸುವ ಒಂದು ಅತ್ಯುತ್ತಮ ವಿಧಾನ. ಇದರಿಂದ ನಾವು ಇನ್ನೊಬ್ಬರ ಕಲೆಯನ್ನು ಗುರುತಿಸಿ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತೇವೆ ಎಂಬುದು ತಿಳಿದ ವಿಷಯ. ಹಾಗೆಯೇ ಇದರಿಂದ ನಮಗೂ ಬಹಳ ಉಪಯೊಗಗಳು ಇವೆ ಎಂಬುದು ಒಂದು ಆಶ್ಚರ್ಯಕರ ವಿಷಯ. ನಿಜ, ಚಪ್ಪಾಳೆ ತಟ್ಟುವುದರಿಂದ ನಮ್ಮ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಬಹಳ ಅಧ್ಯಯನಗಳು ಹೇಳುತ್ತವೆ. ಕೆಲವೊಂದನ್ನು ನಾವು ಸರಳವಾಗಿ ಸಮೀಕ್ಷಿಸೋಣ.

  Health benefits of clapping that will surprise you
   

  ಎಲ್ಲಕ್ಕೂ ಮೊದಲು ನಾವು ಚಪ್ಪಾಳೆ ಯಾವಾಗ ತಟ್ಟುತ್ತೇವೆ ಹೇಳಿ? ಒಬ್ಬರನ್ನು ಪ್ರೋತ್ಸಾಹಿಸಲು, ಯಾರನ್ನಾದರೂ ದೂರದಿಂದ ಕರೆಯಲು, ಹಾಡು ಭಜನೆ ಹೇಳಲು, ಒಂದು ಕಾರ್ಯಕ್ರಮವನ್ನು ಸಮಾರೋಪಿಸಲು, ಇತ್ಯಾದಿ. ಚಿಕ್ಕ ಮಕ್ಕಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಲೂ ಚಪ್ಪಾಳೆ ತಟ್ಟುತ್ತಾರೆ.

  ನಮ್ಮ ಶಾಲೆಯ ದಿನಗಳಲ್ಲೂ ನಾವು ಕೆಲವು ಹಾಡುಗಳನ್ನು ಹಾಡುವಾಗ ಹಾಗೂ ನಮ್ಮ ಪಿ ಟಿ ಪೀರಿಯಡ್ನಲ್ಲಿ ಡ್ರಿಲ್ ಹಾಗೂ ವ್ಯಾಯಾಮ ಮುಗಿದ ಕೂಡಲೇ ಒಂದು ಲಯಬದ್ಧವಾದ ನಮೋನೆಯಲ್ಲಿ ಚಪ್ಪಾಳೆ ತಟ್ಟುತ್ತಿದ್ದೆವು. ಈ ಮೇಲೆ ನೋಡಿದ ಕಾರಣಗಳನ್ನು ಹೊರತುಪಡಿಸಿ ಕೆಲವರು ಬೆಳಗಿನ ಜಾವದ ತಮ್ಮ ವಾಕಿಂಗ್ನಲ್ಲಿ, ವ್ಯಾಯಾಮದ ಒಂದು ಭಾಗವಾಗಿ ಚಪ್ಪಾಳೆ ತಟ್ಟುತ್ತಿರುತ್ತಾರೆ. ಚಪ್ಪಾಳೆ ತಟ್ಟುವುದು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೋ ನೋಡೋಣ.

  clapping
   

  ಆಲಸ್ಯಕ್ಕೆ ಒಳ್ಳೆಯ ಮದ್ದು

  ಚಪ್ಪಾಳೆ ತಟ್ಟುವುದರಿಂದ ನಾವು ಆಲಸ್ಯದಿಂದ ಮಲಗಿರುವ ನಮ್ಮ ದೇಹದ ಕಣಗಳನ್ನು ಹೊಡೆದು ಎಬ್ಬಿಸಿದಂತೆ. ಮುಂಜಾನೆ ಇನ್ನೂ ನಿದ್ದೆಯಿಂದ ಸಂಪೂರ್ಣವಾಗಿ ಎಚ್ಚರವಾಗದ ದೇಹವನ್ನು ಚಪ್ಪಾಳೆಯು ತನ್ನ ಶಬ್ದದಿಂದ ಹಾಗೂ ತಟ್ಟುವಾಗ ಆಗುವ ಬಿರುಸಿನ ಚಲನೆಯಿಂದ ಎಚ್ಚರಿಸುತ್ತದೆ. ಕೆಲವು ಬಾರಿ ನಾವು ಯಾವುದಾದರೂ ಕಾರ್ಯಕ್ರಮದಲ್ಲಿ ಅಥವಾ ಸಭೆಯಲ್ಲಿ ಆಲಸ್ಯದಿಂದ ಮಂಪರಿನಲ್ಲಿ ಇರುವಾಗ ಇತರರು ಹಾಗೂ ನಾವು ತಟ್ಟುವ ಚಪ್ಪಾಳೆ ನಮ್ಮನ್ನು ಥಟ್ಟನೆ ಚುರುಕಾಗಿಸುತ್ತದೆ.         ಚಪ್ಪಾಳೆ ತಟ್ಟಿ ಕಾಯಿಲೆಯಿಂದ ದೂರವಿರಿ!

  ಮೆದುಳಿನ ಚುರುಕುತನಕ್ಕೆ

  ಚಪ್ಪಾಳೆ ತಟ್ಟುವುದರಿಂದ ನಮ್ಮ ಕೈಗಳಲ್ಲಿ ಇರುವ ನರಗಳು ಹಾಗೂ ನಮ್ಮ ಮೆದುಳಿನ ಸಂವೇದನಾ ಗ್ರಾಹಕಗಳು ಸಕ್ರಿಯಗೊಳುತ್ತವೆ. ಇದರಿಂದ ನಮ್ಮ ಮೆದುಳು ಚುರುಕಾಗುತ್ತದೆ. ಇದರಿಂದಾಗಿ ನಮ್ಮ ದೇಹದ ಅನೇಕ ಭಾಗಗಳು ಕ್ರಿಯಾಶೀಲವಾಗುತ್ತವೆ. ಹೀಗಾಗಿ ನಿಂತಲ್ಲಿಯೇ ನಾವು ನಮ್ಮ ದೈಹಿಕ ವ್ಯಾಯಾಮಕ್ಕೆ ಒಂದು ವ್ಯತ್ಯಾಸದ ಸ್ಪರ್ಶ ಕೊಡುತ್ತೇವೆ.

  clapping
   

  "ಆಕ್ಕ್ಯೂ ಪ್ರೆಶರ್‌ನಂತೆಯೇ ಕಾರ್ಯ ನಿರ್ವಹಿಸುತ್ತದೆ

  "ಆಕ್ಕ್ಯೂ ಪ್ರೆಶರ್" ಎನ್ನುವ ಒಂದು ಪುರಾತನ ವೈದ್ಯಕೀಯ ವಿಧಾನವೇ ಇದೆ. ಇದರಲ್ಲಿ ಮುಖ್ಯವಾಗಿ ನಾವು ನಮ್ಮ ದೇಹದಲ್ಲಿರುವ "ಪ್ರೆಶರ್ ಪಾಯಂಟ್ಸ್" ಎಂದರೆ ಪ್ರಭಾವಿ ಬಿಂದುಗಳನ್ನು ಒತ್ತಿ ಅದರಿಂದ ನಾವು ನಮ್ಮ ದೇಹದ ಬಹಳ ವ್ಯಾದ್ಧಿಗಳನ್ನು ನಿವಾರಿಸಬಹುದಾಗಿದೆ. ಚಪ್ಪಳೆಯೂ ಒಂದು ರೀತಿಯಲ್ಲಿ ಹೀಗೆಯೇ ಕೆಲಸ ಮಾಡುತ್ತದೆ.

  ದೇಹದ ಆರೋಗ್ಯ ವೃದ್ಧಿಗೆ

  ನಾವು ಚಪ್ಪಾಳೆ ತಟ್ಟುವಾಗ ಬಿರುಸಿನಿಂದ ಎರಡು ಕೈಗಳನ್ನು ತಟ್ಟುವಾಗ ನಮ್ಮ ಅಂಗೈ ಹಾಗೂ ಬೆರಳುಗಳ "ಪ್ರೆಶರ್ ಪಾಯಂಟ್ಸ್" ಸಕ್ರಿಯಗೊಳ್ಳುತ್ತವೆ. ಇದರಲ್ಲಿ ವಿಸ್ಮಯಕಾರಿ ಅಂಶವೆಂದರೆ ನಮ್ಮ ದೇಹದ ಎಲ್ಲ ಮುಖ್ಯಭಾಗಗಳಾದ ಮೆದುಳು, ಹಣೆ, ಕಣ್ಣು, ಮೂಗು, ಗಂಟಲು, ಶ್ವಾಸಕೋಶ, ಹೊಟ್ಟೆ, ಹೃದಯ, ಯಕೃತ್, ಗರ್ಭಕೋಶ, ಕರುಳು, ಕಾಲು ಇತ್ಯಾದಿ ಎಲ್ಲ ಅಂಗಗಳಿಗೆ ಸೇರುವ "ಪ್ರೆಶರ್ ಪಾಯಂಟ್ಸ್" ನಮ್ಮ ಅಂಗೈ ಹಾಗೂ ಬೆರಳಿನಲ್ಲಿ ಇವೆ. 

  clapping
   

  ಹೀಗಾಗಿ ನಾವು ಚಪ್ಪಾಳೆ ತಟ್ಟುವಾಗ ಈ ಎಲ್ಲ ಪ್ರೆಶರ್ ಪಾಯಂಟ್ಸ್ ಒತ್ತಿಕೊಳುತ್ತವೆ. ಹೀಗಾಗಿ ನಮ್ಮ ದೇಹದ ಒಟ್ಟಾರೆ ಆರೋಗ್ಯ ವೃದ್ಧಿಗೆ ಚಪ್ಪಾಳೆ ಸಹಕಾರಿ. ನಮಗೆ ತಿಳಿದೋ ತಿಳಿಯದೆಯೋ ನಾವು ನಮ್ಮ ಕತ್ತು ನೋವು ಅಥವಾ ಸೊಂಟ ನೋವನ್ನು ಚಪ್ಪಾಳೆ ತಟ್ಟುತ್ತಲೆ ನಿಯಂತ್ರಣದಲ್ಲಿ ಇಟ್ಟಿರಬಹುದು.

  ರಕ್ತ ಸಂಚಾರ-ರಕ್ತದ ಒತ್ತಡ ನಿಯಂತ್ರಣಕ್ಕೆ ಸಹಕಾರಿ

  ಚಪ್ಪಾಳೆ ತಟ್ಟುವುದು ರಕ್ತ ಸಂಚಾರ ಹಾಗೂ ರಕ್ತದ ಒತ್ತಡ ನಿಯಂತ್ರಣಕ್ಕೂ ಸಹಕಾರಿ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ರಕ್ತದ ಒತ್ತಡ ನಿಯಂತ್ರಣದಲ್ಲಿ ಇದ್ದರೆ ಇದರಿಂದ ನಮ್ಮ ಹೃದಯ ಹಾಗೂ ಇತರ ಅನೇಕ ಭಾಗಗಳು ಆರೋಗ್ಯವಾಗಿ ಇರುತ್ತವೆ ಎಂದು ಹೇಳುವ ಅಗತ್ಯವಿಲ್ಲ ಅಲ್ಲವೇ.    ರಕ್ತ ಸಂಚಾರದಲ್ಲಿ ಏರುಪೇರು-ಇವೇ 12 ಮುನ್ಸೂಚನೆಗಳು

  ನಗು ಎಂಬುದು ಸಮಗ್ರ ಆರೋಗ್ಯದ ರಹಸ್ಯ ಕೈಕೀಲಿ. ನಗುವಾಗ ಚಪ್ಪಾಳೆ ತಟ್ಟುತ್ತಾ ನಗುವುದರಿಂದ ನಾವು ನಮ್ಮ ಒಟ್ಟಾರೆ ಆರೋಗ್ಯವನ್ನು ಇಮ್ಮಡಿಯಾಗಿ ವೃದ್ದಿಸಿಕೊಳ್ಳುತ್ತೇವೆ. ಹೀಗಾಗಿಯೇ ನಗರಗಳ ಅನೇಕ  ಉದ್ಯಾನವನಗಳಲ್ಲಿ ಹಾಗೂ ಜಾಗಿಂಗ್ ಟ್ರಾಕ್ನಲ್ಲಿ ಅನೇಕರು ಗುಂಪು ಗುಂಪಾಗಿ ನಿಂತು ಗಹಗಹಿಸಿ ನಗುತ್ತಾ ಚಪ್ಪಾಳೆ ತಟ್ಟುತಿರುತ್ತಾರೆ.

  clapping
   

  ಏಕಾಗ್ರತೆಯನ್ನು ಹೆಚ್ಚಿಸುತ್ತುದೆ

  ಚಪ್ಪಳೆಯನ್ನು ತಟ್ಟುವಾಗ ನಾವು ಲಯಬದ್ಧವಾಗಿ ತಾಳ ಹಾಕುತ್ತೇವೆ. ಈ ಶಬ್ದವು ಕೂಡ ನಮಗೆ ಬಹಳ ಉಪಯೋಗಿಯಾಗಿದೆ. ಈ ಲಯಬದ್ಧವಾಗಿ ಪುನರಾವರ್ತಿಯಾಗುವ ಶಬ್ದವು ನಮ್ಮಲ್ಲಿ ಒಂದು ವಿಧವಾದ ಶಿಸ್ತನ್ನು ಉಂಟು ಮಾಡುತ್ತದೆ. ಇದರಿಂದ ನಮ್ಮ ಏಕಾಗ್ರತೆಯು ಹೆಚ್ಚುತ್ತದೆ.      ಏಕಾಗ್ರತೆಯನ್ನು ಹೆಚ್ಚಿಸಲು 20 ಮಾರ್ಗಗಳು

  ಹೀಗಾಗಿಯೇ ನಾವು ದೇವಸ್ಥಾನಗಳಲ್ಲಿ ಭಜನೆ ಮಾಡುವಾಗ ತಾಳಕ್ಕೆ ತಕ್ಕಂತೆ ಚಪ್ಪಾಳೆ ತಟ್ಟುತ್ತೇವೆ. ಇದರಿಂದ ಕ್ರಮೇಣ ನಮ್ಮ ಮನಸ್ಸು ಶಿಸ್ತಿನಿಂದ ಭಜನೆಯಲ್ಲಿ ಏಕಾಗ್ರಗೊಂಡು ತಲ್ಲಿನವಾಗುತ್ತದೆ. ಇದರ ಮಹತ್ವ ಅರಿತು ಏನೋ ನಮ್ಮ ಪೂರ್ವಿಕರು ಭಜನೆಯ ಜೊತೆಗೆ ಚಪ್ಪಾಳೆಯನ್ನು ಸೇರಿಸಿ ನಮ್ಮನ್ನು ಸುಲಭವಾಗಿ ಬಾಹ್ಯ ಜಗತ್ತನ್ನು ಮರೆತು ದೇವರನಾಮ ಹಾಡುವಂತೆ ಮಾಡಿದ್ದು.

  ಇಷ್ಟೆಲ್ಲ ಓದಿದ ಮೇಲೆ ಚಪ್ಪಾಳೆಯ ಬಗ್ಗೆ ಒಂದು ಬೇರೆಯದೇ ಆದ ಅಭಿಪ್ರಾಯ ಬಂದಿದೆಯೇ. ನಿಜವೇ ಅಲ್ಲವೇ ಮತ್ತೆ. ಇನ್ನೇನು ತಡ, ಇಷ್ಟು ದಿನ ಬೇರೆಯವರಿಗಾಗಿ ಚಪ್ಪಾಳೆ ತಟ್ಟಿದೆವು. ಇನ್ನೂ ನಮಗಾಗಿಯೂ ಸಹ ಚಪ್ಪಾಳೆ ತಟ್ಟಲು ಪ್ರಾರಂಭಿಸೋಣ. ಇದರಿಂದ ಇತರರನ್ನು ಪ್ರೋತ್ಸಾಹಿಸಿದಂತೆಯೂ ಆಯಿತು ಹಾಗೆಯೇ ನಮ್ಮ ಆರೋಗ್ಯ ವೃದ್ಧಿಯೂ ಆಯಿತು.

  English summary

  Health benefits of clapping that will surprise you

  When you are happy and you know it, clap your hands and embrace good health - Here are the health benefits of clapping that will surprise you.
  Story first published: Thursday, September 1, 2016, 13:33 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more