For Quick Alerts
ALLOW NOTIFICATIONS  
For Daily Alerts

  ಪ್ಲೇಟ್ಲೆಟ್ ಸಂಖ್ಯೆ'ಯನ್ನು ಹೆಚ್ಚಿಸಲು ಬಲ ನೀಡುವ ಆಹಾರಗಳಿವು...

  By Manu
  |

  ಸೊಳ್ಳೆ ಕಚ್ಚುವ ಮೂಲಕ ಹರಡುವ ರೋಗಗಳಾದ ಡೆಂಗ್ಯೂ ಮತ್ತು ಮಲೇರಿಯಾ ಆವರಿಸಿದ ರೋಗಿಗಳ ರಕ್ತ ಪರೀಕ್ಷೆಯಲ್ಲಿ ಕಿರುಬಿಲ್ಲೆಗಳ ಅಥವಾ ಪ್ಲೇಟ್ಲೆಟ್‌‌ಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಕಂಡುಬರುತ್ತದೆ. ಒಂದು ವೇಳೆ ಸೂಕ್ತ ಚಿಕಿತ್ಸೆ ಸಕಾಲದಲ್ಲಿ ದೊರಕದೇ ಇದ್ದರೆ ಈ ರೋಗಗಳು ಮಾರಣಾಂತಿಕವಾಗಬಹುದು.

  ಈ ಕಿರುಬಿಲ್ಲೆಗಳಿಗೆ (ಪ್ಲೇಟ್ಲೆಟ್) ಸಾಮಾನ್ಯ ಸ್ಥಿತಿಯಲ್ಲಿ ಯಾವುದೇ ಕೆಲಸವಿಲ್ಲ. ಸುಮ್ಮನೇ ಇತರ ರಕ್ತಕಣಗಳೊಂದಿಗೆ ಪುಕ್ಕಟೆಯಾಗಿ ಹರಿಯುತ್ತಾ ಇರುತ್ತವೆ. ಆದರೆ ಯಾವಾಗ ಗಾಯವಾಗಿ ರಕ್ತ ಹರಿಯತೊಡಗಿತೋ, ಇವುಗಳಿಗೆ ಕೆಲಸ ಬಂದೊದಗುತ್ತದೆ.

  ಈ ಕಣಗಳು ತಕ್ಷಣ ಗಾಳಿಗೆ ಗಟ್ಟಿಯಾಗಿ ಕೈ ಕೈ ಹಿಡಿದು ತೆಳುವಾದ ಗೋಡೆಯಂತಾಗಿಬಿಡುತ್ತವೆ. ತನ್ಮೂಲಕ ರಕ್ತ ಹೊರ ಹರಿಯುವುದನ್ನು ನಿಲ್ಲಿಸಿ ರಕ್ತದ ನಷ್ಟವನ್ನು ತಡೆಯುತ್ತದೆ. ಇದನ್ನೇ ರಕ್ತ ಹೆಪ್ಪುಗಟ್ಟುವುದು ಎಂದು ಕರೆಯುತ್ತೇವೆ. ಇದು ಕೇವಲ ಗಾಯಗಳಿಗೆ ಮಾತ್ರವಲ್ಲ, ನಮ್ಮ ದೇಹದ ಒಳಗಣ ಭಾಗಗಳಲ್ಲಿ, ನರಗಳು ಒಳಗಿನಿಂದಲೇ ಘಾಸಿಗೊಂಡರೆ, ಆಂತರಿಕ ರಕ್ತಸ್ರಾವವಾದರೆ ಸಹಾ ಹೆಪ್ಪುಗಟ್ಟಿ ರಕ್ತ ಸೋರುವುದನ್ನು ನಿಲ್ಲಿಸುತ್ತದೆ.  ಡೆಂಗ್ಯೂ ಜ್ವರದ ವಿರುದ್ಧ ಹೋರಾಡುವ 10 ಸೂಪರ್ ಆಹಾರಗಳು

  ಈ ಕಿರುಬಿಲ್ಲೆಗಳ ಸಂಖ್ಯೆ ಕಡಿಮೆಯಾದಂತೆಯೇ ರಕ್ತ ಹೆಪ್ಪುಗಟ್ಟುವ ಕ್ಷಮತೆಯೂ ಕಡಿಮೆಯಾಗುತ್ತದೆ. ಇದು ಹಲವು ತೊಂದರೆಗಳಿಗೆ ಆಹ್ವಾನ ನೀಡುತ್ತದೆ. ಈ ಕಿರುಬಿಲ್ಲೆಗಳ ಸಂಖ್ಯೆ ಪ್ರತಿ ಮೈಕ್ರೋಲೀಟರ್‌ನಲ್ಲಿ 150,000 ರಿಂದ 450,000 ಇರಬೇಕು. ಇದಕ್ಕೂ ಕಡಿಮೆ ಇದ್ದರೆ thrombocytopenia ಎಂದೂ ಹೆಚ್ಚಿದ್ದರೆ thrombocytosis ಎಂದೂ ಕರೆಯಲಾಗುತ್ತದೆ. ಬನ್ನಿ, ಕಿರುಬಿಲ್ಲೆಗಳ ಸಂಖ್ಯೆಯನ್ನು ಹೆಚ್ಚಿಸುವ ಆಹಾರಗಳ ಬಗ್ಗೆ ತಿಳಿಯೋಣ: 

  ಕಿವಿ ಹಣ್ಣು

  ಕಿವಿ ಹಣ್ಣು

  ಮೂಲತಃ ಆಸ್ಟ್ರೇಲಿಯಾದ ಈ ಹುಳಿಮಿಶ್ರಿತ ಹುಳಿ ಹಣ್ಣು ಈಗ ಭಾರತದಲ್ಲಿಯೂ ಸುಲಭವಾಗಿ ಲಭ್ಯವಾಗುತ್ತಿದ್ದು ಕಿರುಬಿಲ್ಲೆಗಳ ಸಂಖ್ಯೆ ಹೆಚ್ಚಿಸಲು ಅತ್ಯಂತ ಸಮರ್ಥವಾದ ಆಹಾರವಾಗಿದೆ. ಕಿರುಬಿಲ್ಲೆ ಸಂಖ್ಯೆ ಕಡಿಮೆ ಇದ್ದವರು ದಿನಕ್ಕೆ ಕನಿಷ್ಟ ಎರಡು ಹಣ್ಣುಗಳನ್ನಾದರೂ ತಿನ್ನಬೇಕು. ಇದರೊಂದಿಗೆ ವೈದ್ಯರು ತಿಳಿಸಿರುವ ಇತರ ಔಷಧಿಗಳನ್ನೂ ಸೇವಿಸುತ್ತಾ ಇರಬೇಕು. ರಕ್ತಹೀನತೆ, ವಿಟಮಿನ್ ಬಿ ಕೊರತೆ ಇರುವ ರೋಗಿಗಳೂ ಈ ಹಣ್ಣನ್ನು ಸೇವಿಸಬಹುದು. ಅಲ್ಲದೆ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ವೈರಸ್ ಸೋಂಕುಗಳಿಂದಲೂ ರಕ್ಷಿಸುತ್ತದೆ.

  ಡ್ರ್ಯಾಗನ್ ಫ್ರೂಟ್

  ಡ್ರ್ಯಾಗನ್ ಫ್ರೂಟ್

  ಭಾರತದ ಮಾರುಕಟ್ಟೆಗೆ ಬರಲು ಇನ್ನೂ ಪ್ರಾರಂಭದ ಹಂತದಲ್ಲಿರುವ ಈ ಹಣ್ಣು ಕಿರುಬಿಲ್ಲೆ ಸಂಖ್ಯೆ ಹೆಚ್ಚಿಸಲು ಉತ್ತಮವಾಗಿದೆ. ಕಿರುಬಿಲ್ಲೆಯ ಕೊರತೆ ಇರುವ ರೋಗಿಯಲ್ಲೊಬ್ಬರಾದ ಶ್ರೀಮತಿ ಅಸುರ್ಲೇಕರ್ ರವರು ತಮಗೆ ಡೆಂಗಿ ಕಾಯಿಲೆ ಬಂದು ಕಿರುಬಿಲ್ಲೆಯ ಪ್ರಮಾಣ ಅತಿ ಕಡಿಮೆಯಾಗಿತ್ತು. ಆದರೆ ಈ ಹಣ್ಣಿನ ಸೇವನೆಯಿಂದ ಅದ್ಭುತವಾದ ಚೇತರಿಕೆ ಕಂಡುಬಂದಿದೆ ಎಂದು ತಿಳಿಸುತ್ತಾರೆ. ಡ್ರ್ಯಾಗನ್ ಹಣ್ಣಿನ ಹತ್ತು ಹಲವು ಲಾಭಗಳು

  ಮೊಟ್ಟೆಯ ಬಿಳಿಭಾಗ

  ಮೊಟ್ಟೆಯ ಬಿಳಿಭಾಗ

  ಮೊಟ್ಟೆಯ ಬಿಳಿಭಾಗದಲ್ಲಿ ಆಲ್ಬುಮಿನ್ ಎಂಬ ಕಣವಿದ್ದು ಇದು ಕಿರುಬಿಲ್ಲೆಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ರಕ್ತದ ಪ್ರಮುಖ ದ್ರವವಾದ ಪ್ಲಾಸ್ಮಾ ಪ್ರಮಾಣ ಹೆಚ್ಚಿಸಲೂ ನೆರವಾಗುತ್ತದೆ.

  ಹಾಲು ಮತ್ತು ಹಾಲಿನ ಉತ್ಪನ್ನಗಳು

  ಹಾಲು ಮತ್ತು ಹಾಲಿನ ಉತ್ಪನ್ನಗಳು

  ಹಾಲಿನಲ್ಲಿರುವ ಕ್ಯಾಲ್ಸಿಯಂ ಕಿರುಬಿಲ್ಲೆಗಳ ಸಂಖ್ಯೆಯನ್ನು ಹೆಚ್ಚಿಸಲೂ ನೆರವಾಗುತ್ತವೆ. ರೋಗಿಯ ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಇದ್ದರೆ ಕಿರುಬಿಲ್ಲೆಗಳು ಸಾಮಾನ್ಯ ಮಟ್ಟ ತಲುಪಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದರೆ ಹಾಲಿನ ಮತ್ತು ಇತರ ಉತ್ಪನ್ನಗಳನ್ನು ಸೇವಿಸುವ ಮೂಲಕ ಶೀಘ್ರವಾಗಿ ಚೇತರಿಸಿಕೊಳ್ಳಬಹುದು.

  ಪಪ್ಪಾಯಿ ಎಲೆಗಳು

  ಪಪ್ಪಾಯಿ ಎಲೆಗಳು

  ಈ ಎಲೆಗಳಲ್ಲಿ ಖೈಮೋಪಾಪಿನ್ ಮತ್ತು ಪಪಾಯಿನ್ (chymopapin, papain) ಎಂಬ ಪೋಷಕಾಂಶಗಳಿದ್ದು ಕಿರುಬಿಲ್ಲೆಯ ಸಂಖ್ಯೆ ವೃದ್ಧಿಸಲು ನೆರವಾಗುತ್ತವೆ. ಶ್ರೀಮತಿ ಅಸುರ್ಲೇಕರ್ ರವರು ಬಳಸಿ ಪ್ರಮಾಣಿಸಿರುವ ವಿಧಾನದಲ್ಲಿ ಕೊಂಚ ಪೊಪ್ಪಾಯಿ ಎಲೆಗಳನ್ನು ಚಿಕ್ಕದಾಗಿ ಕೊಚ್ಚಿ ಸುಮಾರು ಹದಿನೈದು ನಿಮಿಷ ನೀರಿನಲ್ಲಿ ಕುದಿಸಿ ಬಳಿಕ ತಣಿಸಿ ದಿನಕ್ಕೆ ಎರಡು ಲೋಟ ಕುಡಿಯುವ ಮೂಲಕವೂ ಕಿರುಬಿಲ್ಲೆಗಳ ಸಂಖ್ಯೆ ಶೀಘ್ರವಾಗಿ ಏರಿದೆ. ಡೆಂಗ್ಯೂ ಜ್ವರದ ಹತೋಟಿಗೆ ಪಪ್ಪಾಯಿ ಗಿಡದ ಎಲೆಗಳೇ ಸಾಕು

   

  English summary

  Foods that can help in increasing platelet count

  When you're suffering from vector-borne diseases like dengue and malaria, your platelet count becomes low which can be potentially fatal if it isn't treated on time. Platelets are responsible for preventing excessive blood loss during injuries by forming blood clots and attending to damaged blood vessels.
  Story first published: Friday, September 9, 2016, 7:01 [IST]
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more