For Quick Alerts
ALLOW NOTIFICATIONS  
For Daily Alerts

ತುಳಸಿ-ಅರಿಶಿನ ಬೆರೆಸಿದ ನೀರಿನಲ್ಲಿದೆ ಹತ್ತಾರು ಲಾಭ!

By Arshad
|

ನಮ್ಮ ಆರೋಗ್ಯವನ್ನು ವೃದ್ಧಿಸುವ ಹಲವಾರು ಔಷಧಿಗಳು ನಮ್ಮ ಅಡುಗೆ ಮನೆಯಲ್ಲಿಯೇ ಇವೆ. ಕೆಲವಂತೂ ಎಷ್ಟು ಪ್ರಬಲ ಎಂದರೆ ದುಬಾರಿ ಔಷಧಿಗಳು ನೀಡದ ಪೋಷಕಾಂಶ, ಖನಿಜಗಳನ್ನು ಇವು ಸುಲಭವಾಗಿ ಮತ್ತು ಅಗ್ಗವಾಗಿ ನೀಡುತ್ತವೆ. ಇದರಿಂದ ಹಲವಾರು ಕಾಯಿಲೆಗಳ ವಿರುದ್ಧ ರೋಗ ನಿರೋಧಕಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಹಲವಾರು ತೊಂದರೆಗಳಿಂದಲೂ ರಕ್ಷಿಸುತ್ತದೆ. ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ಇವುಗಳಲ್ಲಿ ಅತಿ ಹೆಚ್ಚಿನ ಔಷಧೀಯ ಗುಣಗಳಿರುವ ಅರಿಶಿನ ಮತ್ತು ತುಳಸಿಯನ್ನು ಪ್ರತಿದಿನ ಮುಂಜಾನೆ ಕುಡಿದರೆ ಹಲವು ರೀತಿಯಲ್ಲಿ ಆರೋಗ್ಯ ವೃದ್ಧಿಸುತ್ತದೆ. ಇದಕ್ಕಾಗಿ ಒಂದುಕಪ್ ನೀರನ್ನು ಬಿಸಿಮಾಡಿ ಇದಕ್ಕೆ ಕೆಲವು ತುಳಸಿ ಎಲೆಗಳು ಮತ್ತು ಒಂದು ಚಿಕ್ಕಚಮಚ ಅರಿಶಿನಪುಡಿಯನ್ನು ಸೇರಿಸಿ ಕುದಿಸಿ. ನೀರು ಕುದಿಯಲು ಪ್ರಾರಂಭಿಸಿದ ಬಳಿಕ ಉರಿ ಆರಿಸಿ ತಣಿಸಿ. ಸರ್ವಗುಣ ಸಂಪನ್ನ ಅರಿಶಿನ ಎಂಬ ಸಂಜೀವಿನಿ

ಕೊಂಚ ಹೊತ್ತಿನ ಬಳಿಕ ಇದನ್ನು ಸೋಸಿ ಉಗುರುಬೆಚ್ಚಗೆ ಕುಡಿಯಿರಿ. ಬನ್ನಿ, ಈ ಅದ್ಭುತ ಪೇಯವನ್ನು ಪ್ರತಿದಿನ ಮುಂಜಾನೆ ಪ್ರಥಮ ಆಹಾರವಾಗಿ ಸೇವಿಸುವ ಪ್ರಯೋಜನಗಳನ್ನು ಈಗ ನೋಡೋಣ....

ಕೆಮ್ಮು ನಿವಾರಿಸುತ್ತದೆ

ಕೆಮ್ಮು ನಿವಾರಿಸುತ್ತದೆ

ಅರಿಶಿನ ಮತ್ತು ತುಳಸಿಯ ಮಿಶ್ರಣದ ನೀರು ಕೆಮ್ಮು ನಿವಾರಿಸಲು ಅತ್ಯುತ್ತಮ ಔಷಧಿಯಾಗಿದೆ. ವಿಶೇಷವಾಗಿ ಗಂಟಲಿನಲ್ಲಿನ ಉರಿಯೂತ ನಿವಾರಿಸಿ ಕಫವನ್ನು ಸಡಿಲಗೊಳಿಸಿ ಸುಲಭವಾಗಿ ವಿಸರ್ಜನೆಗೊಳ್ಳಲು ನೆರವಾಗುತ್ತದೆ.ಕೆಮ್ಮಿನ ನಿವಾರಣೆಗೆ ಅತಿ ಸೂಕ್ತವಾಗಿರುವ 15 ಸಲಹೆಗಳು

ಅಸ್ತಮಾವನ್ನು ಗುಣಪಡಿಸುತ್ತದೆ

ಅಸ್ತಮಾವನ್ನು ಗುಣಪಡಿಸುತ್ತದೆ

ಅಸ್ತಮಾ ರೋಗವನ್ನು ಸೋಲಿಸುವ ಪವರ್ ಫುಲ್ ಮನೆಮದ್ದುಗಳು

ಮೂತ್ರಪಿಂಡಗಳಲ್ಲಿನ ಕಲ್ಮಶ ನಿವಾರಿಸುತ್ತದೆ

ಮೂತ್ರಪಿಂಡಗಳಲ್ಲಿನ ಕಲ್ಮಶ ನಿವಾರಿಸುತ್ತದೆ

ಈ ಅದ್ಭುತ ಪೇಯದ ಸೇವನೆಯಿಂದ ಮೂತ್ರಪಿಂಡಗಳಲ್ಲಿ ಸಂಗ್ರಹಗೊಂಡಿದ್ದ ಕಲ್ಮಶಗಳು ನಿವಾರಣೆಯಾಗುತ್ತವೆ. ಪರಿಣಾಮವಾಗಿ ಮೂತ್ರಪಿಂಡಗಳು ಹೆಚ್ಚು ಕ್ಷಮತೆಯಿಂದ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಹಾಗೂ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗುವ ಸಂಭವ ಕಡಿಮೆಯಾಗುತ್ತದೆ.

 ಒತ್ತಡ ನಿವಾರಣೆಯಾಗುತ್ತದೆ

ಒತ್ತಡ ನಿವಾರಣೆಯಾಗುತ್ತದೆ

ಈ ನೈಸರ್ಗಿಕ ಪೇಯವನ್ನು ನಿತ್ಯದ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ಪೆಡಸಾಗಿದ್ದ ನೆರಗಳು ಸಡಿಲಗೊಳ್ಳುತ್ತವೆ ಹಾಗೂ ರಕ್ತಸಂಚಾರ ಸುಗಮಗೊಳ್ಳುತ್ತದೆ. ವಿಶೇಷವಾಗಿ ಮೆದುಳಿಗೆ ಹರಿಯುವ ರಕ್ತದಲ್ಲಿ ಹೆಚ್ಚಳವಾಗುವ ಮೂಲಕ ನಿರಾಳತೆ ಲಭ್ಯವಾಗುತ್ತದೆ.

ಮಲಬದ್ಧತೆ ನಿವಾರಿಸುತ್ತದೆ

ಮಲಬದ್ಧತೆ ನಿವಾರಿಸುತ್ತದೆ

ಈ ಪೇಯ ಕರುಳುಗಳಲ್ಲಿ ಜೀರ್ಣಗೊಂಡ ಆಹಾರದ ಚಲನೆಯನ್ನು ಸುಲಭವಾಗಿಸಿ ತ್ಯಾಜ್ಯಗಳು ಸುಲಭವಾಗಿ ವಿಸರ್ಜಿಸಲು ನೆರವಾಗುತ್ತದೆ. ಪರಿಣಾಮವಾಗಿ ಮಲಬದ್ಧತೆಯ ತೊಂದರೆ ಇಲ್ಲವಾಗುತ್ತದೆ.

ಹೊಟ್ಟೆಯುರಿಯನ್ನು ಕಡಿಮೆ ಮಾಡುತ್ತದೆ

ಹೊಟ್ಟೆಯುರಿಯನ್ನು ಕಡಿಮೆ ಮಾಡುತ್ತದೆ

ಈ ಪೇಯ ಒಂದು ಅತ್ಯುತ್ತಮ ಉರಿಯೂತ ನಿವಾರಕವಾಗಿದ್ದು ವಿಶೇಷವಾಗಿ ಜೀರ್ಣಾಂಗಗಳ ಒಳಭಾಗದಲ್ಲಿ ಆಮ್ಲೀಯತೆಯ ಪ್ರಭಾವವನ್ನು ಕಡಿಮೆಗೊಳಿಸುತ್ತದೆ. ಈ ಪೇಯ ಕೊಂಚ ಕ್ಷಾರೀಯವಾಗಿರುವ ಕಾರಣ ಆಮ್ಲೀಯವಾಗಿರುವ ಜಠರರಸ ಕೊಂಚ ತಟಸ್ಥವಾಗುತ್ತದೆ. ಪರಿಣಾಮವಾಗಿ ಹೊಟ್ಟೆಯುರಿ, ಎದೆಯುರಿ, ಹುಳಿತೇಗು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.

ಜೀರ್ಣಶಕ್ತಿ ಹೆಚ್ಚಿಸುತ್ತದೆ

ಜೀರ್ಣಶಕ್ತಿ ಹೆಚ್ಚಿಸುತ್ತದೆ

ಈ ಪೇಯದ ಸೇವನೆಯಿಂದ ಜಠರರಸದ ಉತ್ಪತ್ತಿ ಹೆಚ್ಚುತ್ತದೆ. ತನ್ಮೂಲಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

ತಲೆನೋವು ಕಡಿಮೆಗೊಳಿಸುತ್ತದೆ

ತಲೆನೋವು ಕಡಿಮೆಗೊಳಿಸುತ್ತದೆ

ಈ ಅದ್ಭುತ ಪೇಯದ ನಿತ್ಯದ ಸೇವನೆಯಿಂದ ಸೈನಸ್ ಅಥವಾ ಕುಹರದ ಸೋಂಕಿನಿಂದ ಎದುರಾಗಿದ್ದ ಹಾಗೂ ಒತ್ತಡದ ಕಾರಣ ಎದುರಾಗಿದ್ದ ತಲೆನೋವಿನಿಂದ ಪಾರಾಗಬಹುದು.

ವಿವಿಧ ಅಲರ್ಜಿಗಳಿಂದ ರಕ್ಷಿಸುತ್ತದೆ

ವಿವಿಧ ಅಲರ್ಜಿಗಳಿಂದ ರಕ್ಷಿಸುತ್ತದೆ

ಈ ಅದ್ಭುತ ಪೇಯದ ನಿತ್ಯದ ಸೇವನೆಯಿಂದ ರಕ್ತ ಶುದ್ಧೀಕರಣಗೊಳ್ಳುತ್ತದೆ. ಇದರಿಂದ ಹಲವು ವಿಧದ ಅಲರ್ಜಿಗಳು ಇಲ್ಲವಾಗುತ್ತವೆ.

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಕೊಲೆಸ್ಟ್ರಾಲ್ ಕಡಿಮೆಗೊಳಿಸುತ್ತದೆ

ಈ ಪೇಯದಲ್ಲಿರುವ ಪೋಷಕಾಂಶಗಳು ರಕ್ತಕ್ಕೆ ಸೇರಿದ ಬಳಿಕ ಅಂಗಾಂಶದಲ್ಲಿ ಸೇರಿದ್ದ ಕೊಬ್ಬಿನ ಕಣಗಳನ್ನು ಕರಗಿಸಿ ನಿವಾರಿಸುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಆರೋಗ್ಯಕರ ಮಟ್ಟಕ್ಕಿಳಿಸುತ್ತದೆ.

English summary

Drink tulsi water with turmeric every morning

Did you know that the mixture of tulsi and turmeric come with a number of health benefits? Just heat some water in a pan, add a few leaves of tulsi (basil) and a teaspoon of turmeric to the pan, turn off the heat, pour the mixture into a cup, your drink is now ready. Have a look at the benefits of tulsi and haldi mixture, here.
X
Desktop Bottom Promotion