For Quick Alerts
ALLOW NOTIFICATIONS  
For Daily Alerts

ಹೃದಯಕ್ಕೆ ನವಚೈತನ್ಯ ತುಂಬುವ ಕುಂಬಳಕಾಯಿ ಬೀಜ

By Manu
|

ಈಗಿನ ವೈವಿಧ್ಯದ ತಿನಿಸುಗಳ ಯುಗದಲ್ಲಿ ಹೃದಯದ ಆರೋಗ್ಯ ಕಾಪಾಡುವ ಆಲೋಚನೆಯನ್ನು ಯಾರೂ ಯೋಚಿಸುತ್ತಿಲ್ಲ. ಅಚ್ಚರಿಯೇನೆಂದರೆ ಸಾಕ್ಷರಸ್ಥರೇ ಹೃದಯದ ಆರೈಕೆಯಲ್ಲಿ ಹೆಚ್ಚಾಗಿ ಅಲಸ್ಯ ತೋರಿಸುತ್ತಿರುವುದು ಸಾಮಾನ್ಯವಾಗಿದೆ. ಎಣ್ಣೆಯುಕ್ತ ಲಘು ಉಪಹಾರಗಳು, ಕರಿದ ಆಹಾರ ಪದಾರ್ಥಗಳ ಸೇವನೆ ಮತ್ತು ಕ್ರಮವಲ್ಲದ ಆಹಾರ ಶೈಲಿಯಿಂದ ಹೃದಯ ಸಂಬಂಧಿ ಸಮಸ್ಯೆಗಳು ಉಲ್ಬಣಿಸುತ್ತವೆ.

ಈ ಆಹಾರಗಳಿಂದ ನಿಧಾನವಾಗಿ ಸಮಸ್ಯೆಗಳು ಪ್ರಾರಂಭಿಸಲಿದ್ದು, ಈ ನಿಟ್ಟಿನಲ್ಲಿ ಜಾಗೃತೆ ವಹಿಸಬೇಕಿದೆ. ಹಾಗಾಗಿ ಹೃದಯ ಸಂಬಂಧಿತ ಕಾಯಿಲೆಗೆ ಇಲ್ಲಿದೆ ಕುಂಬಳ ಬೀಜದ ಆರೋಗ್ಯಕಾರಿ ಸಲಹೆ ಹೌದು, ಸಾಮಾನ್ಯವಾಗಿ ಕುಂಬಳಕಾಯಿಯನ್ನು ದೈನಂದಿನ ಆಹಾರಪದಾರ್ಥಕ್ಕೆ ಅದರ ಬೀಜವನ್ನು ಹೊರಹಾಕಿ ಕೇವಲ ಅದರ ತಿರುಳನ್ನೇ ಆಹಾರಕ್ಕೆ ಹೆಚ್ಚಿನವರು ಬಳಸುತ್ತಾರೆ. ಆದರೆ ಅದರ ಬೀಜವೂ ಸಹ ದೇಹದ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಾಕಷ್ಟು ಜನರಿಗೆ ತಿಳಿದಿಲ್ಲ. ನೂತನ ಸಂಶೋಧನೆಯೊಂದು ಕ್ರಮವಾದ ಕುಂಬಳಕಾಯಿ ಬೀಜ ಸೇವನೆಯಿಂದ ಹೃದ್ರೋಗವನ್ನು ತಡೆಯಬಹುದು ಎಂದು ತಿಳಿಸಿದೆ. ಕುಂಬಳಕಾಯಿ ಬೀಜದಲ್ಲಿರುವ ಅದ್ಭುತ ಗುಣಗಳು

ಕುಂಬಳಕಾಯಿ ಬೀಜದ ಸತ್ವದ ಆಹಾರಗಳನ್ನು ಸೇವಿಸುವುದರಿಂದ ಹೃದಯ ಸಂಬಂಧಿ ಸಮಸ್ಯೆಗಳು ಕಡಿಮೆಯಾಗುವುದಲ್ಲದೇ ನಿಮ್ಮ ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ನೆರವಾಗುತ್ತದೆ. ಬನ್ನಿ ಕುಂಬಳ ಕಾಯಿ ಬೀಜದ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ಸುಲಭವಾಗಿ ಅನುಸರಿಸಬಹುದಾದ ಕೆಲ ಸಂಗತಿಗಳನ್ನು ನಿಮಗಾಗಿ ನೀಡಲಾಗಿದೆ. ಅದು ಯಾವುದು ಎಂಬುದನ್ನು ಮುಂದೆ ಓದಿ...

ಅನಿರೀಕ್ಷಿತ ಸ್ಟ್ರೋಕ್‌ನಿಂದ ಪಾರುಮಾಡುತ್ತದೆ

ಅನಿರೀಕ್ಷಿತ ಸ್ಟ್ರೋಕ್‌ನಿಂದ ಪಾರುಮಾಡುತ್ತದೆ

ಕುಂಬಳ ಬೀಜದಲ್ಲಿರುವ ಮೆಗ್ನೀಶಿಯಮ್ ಸತ್ವವು ರಕ್ತನಾಳಗಳನ್ನು ಶುದ್ಧೀಕರಿಸಿ, ರಕ್ತನಾಳಗಳನ್ನು ಮೃದುಗೊಳ್ಳುವಂತೆ ಮಾಡುತ್ತದೆ. ಇದರಿಂದ ಅನಿರೀಕ್ಷಿತ ಸ್ಟ್ರೋಕ್ ಉಂಟಾಗುವಿಕೆಯಿಂದ ಪಾರಾಗಬಹುದು. ಈ ಬೀಜಗಳು ನೈಟ್ರಿಕ್ ಆಮ್ಲವನ್ನು ಸಹ ಉತ್ಪತ್ತಿ ಮಾಡಲಿದ್ದು, ಇದರಿಂದ ಹೃದಯದ ಬಡಿತವನ್ನು ಸಮತೋಲನದಲ್ಲಿ ಇಡಲು ನೆರವಾಗಿ ಹೃದಯ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದಾಗಿದೆ.

ಹೃದಯಾಘಾತದ ಅಪಾಯದಿಂದ ದೂರವಿರಿಸುತ್ತದೆ

ಹೃದಯಾಘಾತದ ಅಪಾಯದಿಂದ ದೂರವಿರಿಸುತ್ತದೆ

ಮೆಗ್ನೀಶಿಯಮ್ ಕೊರತೆಯಿಂದ ಹೃದಯ ಬಡಿತದಲ್ಲಿ ಏರುಪೇರುಂಟಾಗಿ ಅನಿರೀಕ್ಷಿತ ಹೃದಯಾಘಾತವುಂಟಾಗುವ ಅಪಾಯವಿರುತ್ತದೆ. ಆದರೆ ಕುಂಬಳ ಬೀಜದ ಸೇವನೆಯಿಂದ ಹೃದಯಾಘಾತದ ಅಪಾಯದಿಂದ ದೂರವಿರಲು ಸಹಕಾರಿಯಾಗಿದೆ.ಹೃದಯಕ್ಕೆ ಪರೋಕ್ಷವಾಗಿ ನೆರವಾಗುವ ಪಾನೀಯಗಳಿವು!

ದೇಹದಲ್ಲಿ ಬೊಜ್ಜಿನ ಮಟ್ಟವನ್ನು ಸಮತೋಲನದಲ್ಲಿ ಇಡಲಿದೆ

ದೇಹದಲ್ಲಿ ಬೊಜ್ಜಿನ ಮಟ್ಟವನ್ನು ಸಮತೋಲನದಲ್ಲಿ ಇಡಲಿದೆ

ಕುಂಬಳ ಬೀಜದಲ್ಲಿರುವ ಫೈಟೋಸ್ಟೆರೊಲ್ ಸತ್ವವು ಆಹಾರದಿಂದ ಬೊಜ್ಜನ್ನು ಹೀರುವ ಗುಣವನ್ನು ನಿಯಂತ್ರಿಸುತ್ತದೆ. ಇದು ಕೇವಲ ಎಲ್ ಡಿಎಲ್ ಅನ್ನು ಮಾತ್ರ ಕಡಿಮೆಗೊಳಿಸದೆ ಒಟ್ಟಾರೆ ಬೊಜ್ಜಿನ ಪ್ರಮಾಣವು ಆರೋಗ್ಯದಲ್ಲಿರುವಂತೆ ನೋಡಿಕೊಳ್ಳುತ್ತದೆ. ಅಧ್ಯಯನಗಳ ಪ್ರಕಾರ ಕುಂಬಳ ಬೀಜವು ಹೆಚ್ ಡಿಎಲ್ ಬೋಜ್ಜಿನ ಸತ್ವವನ್ನು ಋತುಬಂಧವಾದಾನಂತರದ ಮಹಿಳೆಯರಲ್ಲಿ ಗಣನೀಯವಾಗಿ ಹೆಚ್ಚಿಸಿ ಹೃದಯ ಸಂಬಂಧಿ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತದೆ. ಈ ಬೀಜಗಳ ಸೇವನೆಯಿಂದ ರೋಗಕ್ಕೆ ಮುಕ್ತಿ

ದಿನ ನಿತ್ಯ ಆಹಾರಕ್ರಮದಲ್ಲಿ ಬಳಸಿ

ದಿನ ನಿತ್ಯ ಆಹಾರಕ್ರಮದಲ್ಲಿ ಬಳಸಿ

ಕುಂಬಳ ಬೀಜದಿಂದ ನಿಮ್ಮ ಹೃದಯದ ಆರೈಕೆಯನ್ನು ಮಾಡಬೇಕೆಂದಿದ್ದರೆ, ಈ ಬೀಜಗಳನ್ನು ನಿಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳಲು ಮರೆಯದಿರಿ. ಇದನ್ನು ಸತ್ವರಸದೊಂದಿಗೆ ಬೆರೆಸಿ ಸೇವಿಸಬಹುದು ಅಥವಾ ಪಾನೀಯ, ಲಘು ಉಪಹಾರಗಳಲ್ಲಿ ಇದರ ಪುಡಿಯನ್ನು ಬೆರೆಸಿ ಸೇವಿಸಬಹುದು.

ಹೈದಯದ ಪಾಲಿಗೆ ಸಂಜೀವಿನಿ

ಹೈದಯದ ಪಾಲಿಗೆ ಸಂಜೀವಿನಿ

ಒಟ್ಟಾರೆಯಾಗಿ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕುಂಬಳ ಬೀಜ ಸಂಜೀವಿನಿ ಯಿದ್ದಂತೆ. ಇದರ ಪ್ರಯೋಜನವನ್ನು ನೀವೂ ಹೊಂದಲಿ ಎಂಬುದೇ ನಮ್ಮ ಆಶಯ.


English summary

Amazing Health Benefits of Pumpkin Seeds

Phytosterols present in pumpkin seeds prevent the absorption of cholesterol from food. It not only lowers LDL and total cholesterol, but also helps maintain a healthy level. Also, studies have shown that these seeds work wonders in improving HDL cholesterol in post-menopausal women and reduce your risk of cardiovascular disease. To reap the heart-healthy benefits of pumpkin seeds, don’t forget to include it in your diet. You can either add it to gravies or sprinkle the powder on salad or desserts.
X
Desktop Bottom Promotion