Latest Updates
-
ಡೆಂಗ್ಯೂ ಭೀತಿ: ನಿಮ್ಮ ಬಾಲ್ಕನಿಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಲು 10 ನಿಮಿಷದ ಸಿಂಪಲ್ ಟಿಪ್ಸ್! -
ಮುಂಬೈನಲ್ಲಿ ತೀವ್ರ ಬಿಸಿಲು: IMD ಯಿಂದ ಹಳದಿ ಎಚ್ಚರಿಕೆ; ಆರೋಗ್ಯ ಕಾಪಾಡಿಕೊಳ್ಳಲು ಈ ಮುನ್ನೆಚ್ಚರಿಕೆ ಅಗತ್ಯ! -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ಅತಿ ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ 72 ಗಂಟೆಗಳ ಪ್ಲಾನ್ ಫಾಲೋ ಮಾಡಿ! -
ದೆಹಲಿ ವಾಯು ಮಾಲಿನ್ಯ: AQI ಏರಿಕೆ, ಹೊರಗೆ ಹೋಗುವ ಮುನ್ನ ಈ ಮಾಸ್ಕ್ ಧರಿಸುವುದು ಕಡ್ಡಾಯ! -
ವಿಶ್ವ ಶಿಕ್ಷಕರ ದಿನ: ಶಿಕ್ಷಕರಿಗೆ ಗೌರವ ಸಲ್ಲಿಸುವಾಗ ಪೋಷಕರು ಪಾಲಿಸಬೇಕಾದ ಶಿಷ್ಟಾಚಾರಗಳೇನು? -
ಕೇರಳ-ತಮಿಳುನಾಡು ಮಳೆ ಅಲರ್ಟ್: ನಿಮ್ಮ ಮನೆ ಮತ್ತು ಕಾರನ್ನು ಸುರಕ್ಷಿತವಾಗಿಡಲು ಈ 5 ತಕ್ಷಣದ ಕ್ರಮಗಳನ್ನು ಕೈಗೊಳ್ಳಿ! -
ಜಿಮ್ಗೆ ಹೋಗುವವರೇ ಎಚ್ಚರ! ಪ್ರೊಟೀನ್ ಸಪ್ಲಿಮೆಂಟ್ಸ್ ಮೇಲೆ FDA ದಾಳಿ, ನಕಲಿ ಉತ್ಪನ್ನ ಪತ್ತೆಹಚ್ಚುವುದು ಹೇಗೆ? -
ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್: ಭಾರತದ ಗೆಲುವಿನ ಸಂಭ್ರಮಕ್ಕೆ ಇಲ್ಲಿದೆ ವೈರಲ್ ಮೀಮ್ಸ್ ಮತ್ತು ಸೇಫ್ ಸೆಲೆಬ್ರೇಷನ್ ಗೈಡ್! -
ಕೋಲ್ಕತ್ತಾದಲ್ಲಿ ಕಳಪೆ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಸುರಕ್ಷಿತ ಸಮಯ ಮತ್ತು ಮಾರ್ಗಗಳನ್ನು ತಪ್ಪದೇ ತಿಳಿಯಿರಿ -
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್!
ಈ ಬೀಜಗಳ ಸೇವನೆಯಿಂದ ರೋಗಕ್ಕೆ ಮುಕ್ತಿ

ನಾರಿನಂಶ, ವಿಟಮಿನ್, ಪ್ರೊಟೀನ್, ಮಿನರಲ್, ತಾಮ್ರಾಂಶ ಮತ್ತು ಇನ್ನಿತರ ಪೋಷಕಾಂಶ ತುಂಬಿರುವ, ಮನೆಯಲ್ಲೇ ಇರುವ ಈ ಬೀಜಗಳು ನಿಮ್ಮ ಡಯಟ್ ಗೂ ಹೆಚ್ಚು ಅವಶ್ಯಕ. ರಕ್ತದಲ್ಲಿನ ಅನಧಿಕೃತ ಕೊಬ್ಬನ್ನು ಕರಗಿಸುವುದರಲ್ಲಿ ಇವುಗಳು ಪರಿಣಾಮಕಾರಿ.
ಆರೋಗ್ಯಕ್ಕೆ ಪೂರಕವಾಗಿರುವ ಬೀಜಗಳು ಯಾವುವು?
ಎಳ್ಳು: ಕ್ಯಾಲ್ಸಿಯಂ, ತಾಮ್ರಾಂಶ, ಫೈಬರ್, ಮ್ಯಾಗ್ನೀಶಿಯಂ, ಕಬ್ಬಿಣಾಂಶ ಹೆಚ್ಚಿರುವ ಎಳ್ಳು ಆರೋಗ್ಯಕ್ಕೆ ಹೆಸರುವಾಸಿ. ಕೊಲೆಸ್ಟಾಲ್ ವಿರುದ್ಧ ಹೋರಾಡುವ ಲೆಗ್ನಾಸ್ ಎಂಬ ಅಂಶ ಎಳ್ಳಿನಲ್ಲಿದೆ. ರಕ್ತದೊತ್ತಡವನ್ನು ನಿಯಂತ್ರಿಸುವ ಗುಣವಿರುವ ಎಳ್ಳು ಅಸ್ತಮ ಮತ್ತು ಮೈಗ್ರೇನ್ ಬರುವುದನ್ನೂ ಕೂಡ ತಡೆಯುತ್ತದೆ.
ಸೂರ್ಯ ಕಾಂತಿ: ಡಯಟ್ ಮಾಡುವವರಿಗೆ ಸೂರ್ಯಕಾಂತಿ ಬೀಜ ತುಂಬಾ ಅವಶ್ಯಕ. ನಾರಿನಂಶ ಮತ್ತು ವಿಟಮಿನ್ ಇ, ಸೆಲೆನಿಯಂ ಹಾಗೂ ತಾಮ್ರಾಂಶ ಅಧಿಕವಿರುವ ಈ ಬೀಜ ಹೃದಯದ ತೊಂದರೆಗಳನ್ನು ನಿವಾರಿಸುತ್ತದೆ. ಕ್ಯಾನ್ಸರ್ ವಿರುದ್ಧ ಹೋರಾಡುವುದಲ್ಲದೆ, ಮಹಿಳೆಯರಿಗೆ ಅತ್ಯವಶ್ಯಕವಾಗಿರುವ ಪೋಷಕಾಂಶವನ್ನು ನೀಡುತ್ತದೆ.
ಕುಂಬಳಬೀಜ: ಸಂಶೋಧಕರ ಪ್ರಕಾರ, ಕುಂಬಳ ಬೀಜ ತಿನ್ನುವುದರಿಂದ ಕ್ಯಾನ್ಸರ್ ಹುಟ್ಟು ಮತ್ತು ಬೆಳವಣಿಗೆಯನ್ನು ತಡೆಯಬಹುದು. ಇದರಲ್ಲಿರುವ ಕ್ಯಾರೊಟೆನೈಡ್ಸ್ ಎಂಬ ಅತ್ಯಧಿಕ ಅಂಶ ಆರೋಗ್ಯಕ್ಕೆ ಪೂರಕ. ಇದರ ಸೇವನೆಯಿಂದ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸಿಕೊಳ್ಳಬಹುದು. ಹಾಗೆಯೇ ಇದರಲ್ಲಿನ ಫೈಟೊಸ್ಟೆರೊಲ್ಸ್, ಕೊಲೆಸ್ಟ್ರಾಲ್ ನಿಯಂತ್ರಿಸುವಲ್ಲೂ ಪರಿಣಾಮಕಾರಿ. ಒಮೆಗ 3 ಫ್ಯಾಟಿ ಆಸಿಡ್ಸ್ ತುಂಬಿರುವ ಕುಂಬಳ ಬೀಜ ತಿಂದರೆ ಕಾಯಿಲೆಗಳು ದೂರವುಳಿಯುತ್ತವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
