Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯಕಾರಿ ಜೀವನ ಶೈಲಿಗೆ ಪಂಚ ಸೂತ್ರ
ಇಂದು ಆರೋಗ್ಯವನ್ನು ನಮ್ಮ ಮಾನಸಿಕ ಒತ್ತಡ ನಿರ್ಧರಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಇತ್ತೀಚಿನ ಅಂಕಿ ಅಂಶಗಳು ದೃಢೀಕರಿಸುತ್ತಿವೆ. ಏಕೆಂದರೆ ಕೆಲವು ವರ್ಷಗಳ ಹಿಂದೆ ಇದ್ದ ಆರೋಗ್ಯಮಟ್ಟವನ್ನು ಇಂದಿನ ಯುವಕರಲ್ಲಿ ಕಾಣಲಾಗುತ್ತಿಲ್ಲ. ಇದಕ್ಕೆಲ್ಲಾ ಬದಲಾದ ಜೀವನಶೈಲಿ, ಹೆಚ್ಚಿದ ಮಾನಸಿಕ ಒತ್ತಡ, ಹಣದ ಮೇಲಿನ ಅಪಾರ ವ್ಯಾಮೋಹ ಇತ್ಯಾದಿ.
ಅದರಲ್ಲೂ ಮಾನಸಿಕ ಒತ್ತಡ ನಮ್ಮ ಔದ್ಯೋಗಿಕ ಮತ್ತು ವೈಯಕ್ತಿಕ ಸ್ವಾಸ್ಥ್ಯವನ್ನೇ ಏರುಪೇರು ಮಾಡುತ್ತಿದೆ. ಕಾಲೇಜಿನಲ್ಲಿದ್ದಾಗ ಕ್ರೀಡಾಪಟು, ಯೋಗಪಟುವಾಗಿದ್ದವರು ಯಾವಾಗ ಉದ್ಯೋಗ ಸೇರಿ ಹಣ ಸಂಪಾದಿಸುವ ಹಿಂದೆ ತಮ್ಮ ದಿನಚರಿಯನ್ನು ಬದಲಿಸಿಕೊಳ್ಳುತ್ತಾರೋ ಆಗ ದೈಹಿಕ ಮತ್ತು ಮಾನಸಿಕವಾಗಿ ಬದಲಾಗಿಬಿಡುತ್ತಾರೆ. ಲವಲವಿಕೆಯ ಜೀವನಶೈಲಿಗೆ 10 ಸರಳ ಸೂತ್ರ
ನಿಮಗೆ ನಿತ್ಯದಲ್ಲಿ ಹಲವು ರೀತಿಯ ಒತ್ತಡಗಳು ಎದುರಾಗುತ್ತಿವೆಯೇ? ನಿಮ್ಮ ತೂಕ ಹೆಚ್ಚಾಗಿದ್ದು ಕಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ವ್ಯಾಯಾಮ ಮಾಡಲು ಸಮಯವೇ ಇಲ್ಲವೇ? ಈ ಪ್ರಶ್ನೆಗಳಲ್ಲಿ ಒಂದಕ್ಕಾದರೂ ನಿಮ್ಮ ಉತ್ತರ ಹೌದು ಎಂದಾದರೆ ನಿಮಗೆ ನಿಮ್ಮ ದಿನಚರಿಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ವಾಸ್ತವವೆಂದರೆ ಪ್ರತಿ ವ್ಯಕ್ತಿಯೂ ತನ್ನ ಜೀವಿತಾವಧಿಯ ಮೂರರಲ್ಲಿ ಎರಡು ಭಾಗವನ್ನು ಕೆಲಸ ಮಾಡುತ್ತಾ ಅಥವಾ ಕೆಲಸದ ಬಗ್ಗೆಯೇ ಚಿಂತಿಸುತ್ತಾ ಕಾಲ ಕಳೆಯುತ್ತಾರೆ.

ಇನ್ನುಳಿದ ಸಮಯವನ್ನು ನಾವು ನಿದ್ದೆಯಲ್ಲಿ ಕಳೆಯುತ್ತೇವೆ. ಮಾನಸಿಕ ಒತ್ತಡ ಒಂದು ಹಂತದಲ್ಲಿ ನಮಗೆ ಅಗತ್ಯವಾಗಿ ಬೇಕು. ಇಲ್ಲದಿದ್ದರೆ ಜೀವನ ಕಳೆಯುವುದೇ ದುಸ್ತರವಾಗುತ್ತದೆ. ಆದರೆ ನಿಜವಾದ ಸವಾಲು ಇರುವುದು ಯಾವ ಒತ್ತಡಗಳಿಗೆ ಎಷ್ಟರ ಮಟ್ಟಿಗಿನ ಆದ್ಯತೆ ನೀಡಬೇಕು ಎಂಬುದೇ ದೊಡ್ಡ ಸವಾಲು. ಒಂದು ಸುಭಾಷಿತದ ಪ್ರಕಾರ ಚಿಕ್ಕ ಪುಟ್ಟ ಮತ್ತು ನಿಮಗೆ ಮುಖ್ಯವೆನಿಸದ ಸಂಗತಿಗಳಿಗೆ ತಲೆಕೆಡಿಸಿಕೊಳ್ಳಬೇಡಿ. ಇದನ್ನು ನಾವು ಹೆಚ್ಚಿನ ಸಂದರ್ಭದಲ್ಲಿ ಸರ್ವಥಾ ಪಾಲಿಸುತ್ತೇವೆ. ಉಸಿರಾಟದ ಪ್ರಕ್ರಿಯೆಯ ಮೂಲಕ ಆರೋಗ್ಯ ಸುಧಾರಿಸಿಕೊಳ್ಳಿ
ನಾವು ನಿತ್ಯವೂ ನಡೆಯುವ ಹಾದಿಯಲ್ಲಿ ಕಲ್ಲೊಂದು ಬಿದ್ದಿದ್ದರೂ ಅದು ನಮಗೆ ಎಲ್ಲಿಯವರೆಗೆ ಕಾಲಿಗೆ ತೊಡರಿ ಬೀಳುವುದಿಲ್ಲವೋ ಅಲ್ಲಿಯವರೆಗೆ ನಾವು ಅದನ್ನು ತೆಗೆಯಲು ಹೋಗುವುದಿಲ್ಲ. ಆದರೆ ನಮಗೆ ಅಡ್ಡವಾಗಿದ್ದು ಇತರರಿಗೂ ಅಡ್ಡವಾಗಬಹುದಲ್ಲವೇ? ಎಂಬ ಯೋಚನೆ ಬಂದರೆ ನಿಮ್ಮ ಆಲೋಚನೆಗಳು ನಿಃಸ್ವಾರ್ಥಪರ ಮತ್ತು ನೇರವಾಗಿವೆ ಎಂದೇ ಅರ್ಥ. ಇಂದಿನ ಜೀವನದಲ್ಲಿ ನಾವು ಹಣ ಸಂಪಾದಿಸುವ ಭರದಲ್ಲಿ ಎಷ್ಟೋ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ನಮಗೆ ಅರಿವೇ ಇಲ್ಲದಂತೆ ಈ ವಿಷಯಗಳು ನಮ್ಮ ದೈನಂದಿನ ಜೀವನವನ್ನು ಪ್ರಭಾವಿತೊಗೊಳಿಸಿವೆ. ಯಾರೂ ಹೇಳದ ಇಮ್ತಹ ಐದು ಗುಟ್ಟಿನ ಸಂಗತಿಗಳನ್ನು ಅರಿಯೋಣ:
ಮನಸ್ಸಿಗೆ ಮುದ ನೀಡುವ ಕೆಲಸ ಮಾಡಿ
ನಿಮ್ಮ ದೈನಂದಿನ ಕೆಲಸ ಮುಗಿದ ಬಳಿಕ ಯಾರೂ ನಿಮಗೆ ಶಹಬ್ಬಾಸ್ ಹೇಳುವುದಿಲ್ಲ. ಕೆಲಸ ಆಯ್ತು, ಸಂಬಳ ಸಿಕ್ಕಾಯ್ತಲ್ಲಾ, ಇನ್ನೇಕೆ ಶಾಬ್ಬಾಸ್ ಗಿರಿ? ಎಂದೇ ನಿಮ್ಮ ಬಾಸ್ ಉತ್ತರಿಸಬಹುದು. ಒಂದು ವೇಳೆ ನಿಮ್ಮ ಕೈಕೆಳಗೆ ಕೆಲಸಮಾಡುವವರೂ ಈ ಪ್ರಶ್ನೆ ಕೇಳಿದರೆ ನೀವೂ ಇದೇ ಉತ್ತರ ಕೊಡಬಹುದು. ಆದರೆ ಮನಸ್ಸು ಇದನ್ನು ಕೇಳುವುದಿಲ್ಲ. ಮಾಡಿದ ಕೆಲಸಕ್ಕೆ ಕೊಂಚವೇ ಶ್ಲಾಘನೆ ಅಥವಾ ಅಹ್ಲಾದ ಸಿಗಬೇಕು. ಇದು ನೆಮ್ಮದಿಗೆ ಮೂಲವಾಗಿದೆ.
ಅಂತೆಯೇ ನಿಮಗೆ ಇಷ್ಟವಾಗುವ ಕೆಲಸ ಅಥವಾ ನಿಮಗೆ ನೀವೇ ಕೊಡಬಹುದಾದ ಬಹುಮಾನವನ್ನು ಪಡೆದುಕೊಂಡು ಉಲ್ಲಾಸಪಡೆಯುವುದು ಆರೋಗ್ಯಕರ ಮಾತ್ರವಲ್ಲ ಮಾನಸಿಕ ಒತ್ತಡದಿಂದ ಪಾರಾಗಲು ಅತ್ಯುತ್ತಮವಾದ ಚಿಕಿತ್ಸೆಯೂ ಆಗಿದೆ. ಉದಾಹರಣೆಗೆ ನೆಚ್ಚಿನ ಹವ್ಯಾಸವೊಂದನ್ನು ಬೆಳೆಸಿಕೊಳ್ಳುವುದು, ಹೊಸ ವಿಷಯವೊಂದನ್ನುಕಲಿಯುವುದು, ಪುಸ್ತಕವೊಂದನ್ನು ಓದುವುದು, ಆರೋಗ್ಯ ಸರಿಪಡಿಸಿಕೊಳ್ಳಲು ಸ್ಪಾ ಅಥವಾ ಭಿನ್ನವಾದ ಚಿಕಿತ್ಸಾಕ್ರಮವನ್ನು ಅನುಸರಿಸುವುದು, ಮುಂಜಾನೆ ಬೇಗನೇ ಎದ್ದು ಕೊಂಚ ಕಾಲ ಪ್ರಕೃತಿಯೊಡನೆ ಇರುವುದು, ಒಟ್ಟಾರೆ, ನೀವು ಇದುವರೆಗೆ ಪ್ರಯತ್ನಿಸಿರದಿದ್ದ, ಆದರೆ ಯಾವಾಗಲಾದರೊಮ್ಮೆ ಪ್ರಯತ್ನಿಸಬೇಕೆಂದು ಅನ್ನಿಸಿದ ವಿಷಯವನ್ನು ಪ್ರಯತ್ನಿಸಿ. ನಿಮ್ಮ ಇಷ್ಟದ ಚಟುವಟಿಕೆ ಯಾವುದು ಎಂದು ಮನದಟ್ಟಾದರೆ ಮಾನಸಿಕ ಒತ್ತಡ ಇಲ್ಲವಾಗಿಸಲು ಇನ್ನಷ್ಟು ಸುಲಭವಾಗುತ್ತದೆ.
ಧೂಮಪಾನ ಬಿಟ್ಟುಬಿಡಿ
ಸಾಮಾನ್ಯವಾಗಿ ಧೂಮಪಾನಿಗಳು ತಾವು ಸಿಗರೇಟಿನ ವಕೀಲರಂತೆ ವರ್ತಿಸಿ ತಮ್ಮ ದುರಭ್ಯಾಸಕ್ಕೆ ನೂರಾರು ಸಮರ್ಥನೆಗಳನ್ನು ನೀಡುತ್ತಾರೆ. ಅಕ್ಕಪಕ್ಕದ ನೂರಾರು ವ್ಯಕ್ತಿಗಳನ್ನೂ ಇದುವರೆಗೆ ಅವರಿಗೆ ಏನೂ ಆಗದಿದ್ದುದನ್ನು ಉದಾಹರಿಸುತ್ತಾರೆ. ಏನೇ ಆಗಲಿ, ಇದೊಂದು ಆರೋಗ್ಯಕ್ಕೆ ಮಾರಕವಾದ ಅಭ್ಯಾಸ. ಮೊತ್ತ ಮೊದಲು ಇದರ ವಕೀಲರಾಗುವುದನ್ನು ನಿಲ್ಲಿಸಿ ಇತ್ತ ಕಡೆ ಮಾನಸಿಕವಾಗಿ ಬನ್ನಿ. ನಿಮ್ಮ ಕುಟುಂಬ ವೈದ್ಯರನ್ನು ಅಥವಾ ಈಗಾಗಲೇ ಧೂಮಪಾನವನ್ನು ಯಶಸ್ವಿಯಾಗಿ ತ್ಯಜಿಸಿದವರ ಸಲಹೆ ಪಡೆದು ಹಂತಹಂತವಾಗಿ, ವೈಜ್ಞಾನಿಕ ರೀತಿಯಲ್ಲಿ ಆರೋಗ್ಯ ಏರುಪೇರಾಗದಂತೆ ಧೂಮಪಾನದಿಂದ ಮುಕ್ತರಾಗಿ. ಒಮ್ಮೆ ಅತ್ತ ಕಡೆಯ ಏಜೆಂಟನಾಗಿದ್ದ ನಿಮ್ಮೊಳಗಿನ ಧೂಮಪಾನಿಯನ್ನು ಒದ್ದೋಡಿಸಿದಿರೋ ಜೀವನ ಇನ್ನೂ ಸಂತೋಷಕರವಾಗುತ್ತದೆ. ಮಿಶ್ರ ಆಹಾರ ಪದ್ಧತಿ ಅನುಸರಿಸಿ, ಆರೋಗ್ಯ ವೃದ್ಧಿಸಿ
ಇದುವರೆಗೆ ನಿಮಗೆ ಹೆದರಿ ಹೇಳದಿದ್ದ ನಿಮ್ಮ ಮಕ್ಕಳು, ಬಂಧು ಬಾಂಧವರು, ಆಪ್ತರು ನಿಮ್ಮ ಈ ನಿಶ್ಚಯ ಮತ್ತು ಧೂಮಪಾನ ಅಥವಾ ಇನ್ನಾವುದೇ ದುರಭ್ಯಾಸ ಇಲ್ಲದ ಜೀವನವನ್ನು ನಿಜವಾಗಿಯೂ ಕೊಂಡಾಡುತ್ತಾರೆ. ನಮ್ಮ ತಂದೆ ಮೊದಲು ಧೂಮಪಾನ ಮಾಡುತ್ತಿದ್ದರು, ಈಗ ಇಲ್ಲ ಎಂಬ ಮಾತು ಕೇಳಿದಾಗ ಮನ ಹಕ್ಕಿಯಂತೆ ಹಾರಾಡುತ್ತದೆ. ಈ ಸಂತೋಷ ನೀವು ಜೀವಮಾನವಿಡೀ ಸಿಗರೇಟು ಸೇದಿ ಸುಟ್ಟರೂ ಸಿಗದ ಆಸ್ತಿಯಾಗಿದೆ.
ಆರೋಗ್ಯಕರ ಆಹಾರಕ್ರಮ ಅನುಸರಿಸಿ
ಮಾನಸಿಕ ಒತ್ತಡಕ್ಕೆಇನ್ನೊಂದು ಕಾರಣವೆಂದರೆ ಆಹಾರಕ್ರಮದಲ್ಲಿ ಏರುಪೇರು. ಪ್ರಪ್ರಥಮವಾದ ದೊಡ್ಡ ಕಾರಣವೆಂದರೆ ಬೆಳಗ್ಗಿನ ಉಪಾಹಾರವನ್ನು ಮಾಡದೇ ಕೆಲಸಕ್ಕೆ ಹೋಗುವುದು. ನಂತರದ ಸ್ಥಾನಗಳನ್ನು ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುವುದು ಅಥವಾ ತಿನ್ನದೇ ಇರುವುದು, ಅನಾರೋಗ್ಯಕರ ಸಿದ್ಧ ಆಹಾರಗಳನ್ನು ನೆಚ್ಚಿಕೊಳ್ಳುವುದು, ನೈಸರ್ಗಿಕ ಆಹಾರಗಳನ್ನು ಕಡಿಮೆ ಮಾಡುವುದು ಇತ್ಯಾದಿ. ಉತ್ತಮ ಮಾನಸಿಕ ಆರೋಗ್ಯಕ್ಕೆ ಉತ್ತಮ ದೈಹಿಕ ಆರೋಗ್ಯ ಇರಬೇಕದುದೂ ಅವಶ್ಯವಾಗಿದೆ.
ನಿತ್ಯದ ಆಹಾರದಲ್ಲಿ ಹಸಿರು ತರಕಾರಿ, ಹಸಿಯಾಗಿ ಸೇವಿಸಬಹುದಾದ ಸೊಪ್ಪು, ಹಣ್ಣುಗಳು, ಸೂಕ್ತ ಪ್ರಮಾಣದ ಮಾಂಸ, ಹಾಲು, ಡೈರಿ ಉತ್ಪನ್ನಗಳು, ಸಾಕಷ್ಟು ನೀರು, ಹಾಲು ಇತ್ಯಾದಿಗಳು ಉತ್ತಮ ಆರೋಗ್ಯಕ್ಕೆ ಅಗತ್ಯವಾಗಿವೆ. ಕೊಂಚ ನಿಮ್ಮ ನಿತ್ಯದ ಆಹಾರಕ್ರಮವನ್ನು ಅವಲೋಕಿಸಿ ನೋಡಿದಾಗ ಇವುಗಳ ಪ್ರಮಾಣ ಕಡಿಮೆ ಇದ್ದು ಅನಾರೋಗ್ಯಕರ ಮೈದಾ ಆಧಾರಿತ ಸಿದ್ದ ಆಹಾರಗಳು ಹೆಚ್ಚಿರುವುದು ಗಮನಕ್ಕೆ ಬಂದರೆ ಇವನ್ನು ಬದಲಿಸಿಕೊಳ್ಳಲು ಮಾನಸಿಕವಾಗಿ ಒಲವು ತೋರುವುದು ಅಗತ್ಯವಾಗಿದೆ.
ದೈಹಿಕ ವ್ಯಾಯಾಮ ಮಾಡಿ
ನಿತ್ಯದ ಜಂಜಡದ ನಡುವೆ ವ್ಯಾಯಾಮಕ್ಕೆ ಸಮಯವೇ ಇಲ್ಲ ಎಂಬುದು ಹೆಚ್ಚಿನವರ ದೂರು. ಏಕೆಂದರೆ ವ್ಯಾಯಾಮಕ್ಕೆ ದಿನದ ಸುಮಾರು ಒಂದು ಘಂಟೆಯಾದರೂ ಬೇಕಾಗುತ್ತದೆ. ಈ ಒಂದು ಘಂಟೆಯನ್ನು ತರುವುದಾದರೂ ಎಲ್ಲಿಂದ? ಇದೇ ಹೆಚ್ಚಿನವರಿಗೆ ಕಾಡುವ ಪ್ರಶ್ನೆ. ಆದರೆ ನಿಮ್ಮ ದೇಹ ಮತ್ತು ಮನಸ್ಸು ವ್ಯಾಯಮವಿಲ್ಲದೇ ಇದ್ದರೆ ಹೆಚ್ಚು ಸೋಮಾರಿಯಾಗುತ್ತವೆ. ಎಷ್ಟೇ ಕೆಲಸಬಾಹುಳ್ಯವಿರಲಿ, ಮನಸ್ಸುಮಾಡಿದರೆ ವ್ಯಾಯಮ ಖಂಡಿತಾ ಸಾಧ್ಯ. ಹೆಚ್ಚಿನವರು ವ್ಯಾಯಾಮ ಎಂದರೆ ಟ್ರ್ಯಾಕ್ ಸೂಟ್ ಹಾಕಿಕೊಂಡು ಜಿಮ್‌ನಲ್ಲಿ ಮಾಡುವುದೇ ಎಂದುಕೊಂಡಿದ್ದಾರೆ. ಇಲ್ಲಿ ಹೋದರೆ ಉತ್ತಮ, ಆದರೆ ಇದಕ್ಕೂ ಉತ್ತಮವಾದ ಇನ್ನೊಂದು ವಿಧಾನವಿದೆ. ನಿಮ್ಮ ನಿತ್ಯದ ಚಟುವಟಿಕೆಗಳಲ್ಲಿಯೇ ವ್ಯಾಯಾಮದ ಅಂಶ ಸೇರಿಸುವುದು.
ಉದಾಹರಣೆಗೆ ಬೆಳಿಗ್ಗೆ ಏಳು ಗಂಟೆಗೆ ಬಸ್ ಬರುತ್ತದೆ, ಅದನ್ನು ಹತ್ತಬೇಕು ಎಂದಿದ್ದರೆ ಆರೂಮುಕ್ಕಾಲಿಗೆ ಮನೆಯಿಂದ ಹೊರಡುವ ಬದಲು ಆರೂವರೆಗೇ ಹೊರಟು ಅರ್ಧ ಗಂಟೆ ನಡೆದು ಮುಂದಿನ ಬಸ್ ಸ್ಟಾಪ್ ನಲ್ಲಿ ನಿಂತು ಬಸ್ ಹತ್ತುವುದು. ಇದರಿಂದ ಕೇವಲ ಕಾಲು ಗಂಟೆ ವಿನಿಯೋಗಿಸಿ ಮುಕ್ಕಾಲು ಗಂಟೆಯ ನಡಿಗೆ ಪಡೆದಂತಾಯಿತು. ಇದೊಂದು ಉದಾಹರಣೆಯಷ್ಟೇ, ನಿಮ್ಮ ನಿತ್ಯದ ಚಟುವಟಿಕೆಗಳನ್ನು ಕೊಂಚವೇ ಬದಲಿಸಿದರೂ ಅಸಾಧ್ಯವಾದ ವ್ಯಾಯಮವನ್ನು ಸುಲಭವಾಗಿ ಸಾಧಿಸಬಹುದು. ಇನ್ನೂ ಕೆಲವು ಉದಾಹರಣೆಗಳೆಂದರೆ ಲಿಫ್ಟ್‌ಗೆ ಕಾಯದೇ ಮೆಟ್ಟಿಲು ಹತ್ತುವುದು, ಮನೆಗೆ ಕೊಂಚದೂರವಿರುವ ಅಂಗಡಿಯಿಂದ ವಸ್ತುಗಳನ್ನು ನಡೆದೇ ಹೋಗಿ ತರುವುದು, ಮನೆಯ ಗಿಡಗಳಿಗೆ ನೀರನ್ನು ಹೊತ್ತು ತಂದು ಹಾಕುವುದು ಇತ್ಯಾದಿ.
ಆರೋಗ್ಯದ ಬಗ್ಗೆ ಶಿಕ್ಷಣ ಪಡೆಯಿರಿ
ಊಟ ಬಲ್ಲವನಿಗೆ ರೋಗವಿಲ್ಲ ಎಂಬುದು ಒಂದು ಗಾದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಆಹಾರ ಮತ್ತು ಇವುಗಳನ್ನು ಸೇವಿಸುವ ಹೊತ್ತು ಮತ್ತು ಕ್ರಮಗಳನ್ನೂ ಅನುಸರಿಸುವುದು ಅಗತ್ಯ. ಉದಾಹರಣೆಗೆ ಇತ್ತೀಚೆಗೆ ವೈದ್ಯಕೀಯ ನಿಯತಕಾಲಿಕ ಪ್ರಕಟಿಸಿದ ಪ್ರಕಾರ ಅನ್ನ ಮಧ್ಯಾಹ್ನ ಹೊತ್ತಿಗೆ ಉತ್ತಮ ಆದರೆ ರಾತ್ರಿ ಊಟಕ್ಕೆ ಉತ್ತಮವಲ್ಲ! ಈ ವಿಷಯ ಗೊತ್ತೇ ಇರದಿದ್ದ ನಾವು ಎಷ್ಟೋ ವರ್ಷಗಳಿಂದ ರಾತ್ರಿಯೂ ಅನ್ನವನ್ನೇ ಊಟ ಮಾಡಿದ ಪರಿಣಾಮವಾಗಿಯೇ ನಮ್ಮ ಸೊಂಟದ ಸುತ್ತಳತೆ ಹೆಚ್ಚಿದ್ದಿರಬಹುದು. ಇಂತಹ ಆರೋಗ್ಯಕರ ಮಾಹಿತಿಗಳನ್ನು ಅರಿತು ಆ ಪ್ರಕಾರ ಆಹಾರ ಸೇವಿಸುವ ಮೂಲಕ ಆರೋಗ್ಯವೃದ್ಧಿಸಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












