Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬದನೆಯೆಂಬ ಬಹುಗುಣಿ ತರಕಾರಿಯಲ್ಲಿದೆ ಅತಿ ರಹಸ್ಯ ಪ್ರಯೋಜನಗಳು
ಬಿಳಿ ಬದನೆ ಕಾಯಿ, ಗುಂಡು ಬದನೆಕಾಯಿ, ಬ್ರಿಂಜಲ್ ಮುಂತಾದ ಹೆಸರುಗಳಿಂದ ಕರೆಯಲ್ಪಡುವ ತರಕಾರಿ ಯಾರಿಗೆ ತಾನೇ ಗೊತ್ತಿಲ್ಲ. ಇದರ ಸಸ್ಯಶಾಸ್ತ್ರೀಯ ಹೆಸರು ಸೊಲನಮ್ ಮೆಲೊಂಜೆನ ಎಂದು ಇದು ನೈಟ್‍ಶೇಡ್ ಅಥವಾ ಸೊಲನೇಸ್ ಕುಟುಂಬದ ಸದಸ್ಯ ತರಕಾರಿ. ಇದೇ ಕುಟುಂಬಕ್ಕೆ ಸೇರಿದ ಮತ್ತಿತರ ತರಕಾರಿಗಳು ಎಂದರೆ ಟೊಮೇಟೊ, ಸಿಹಿ ಮೆಣಸು ಮತ್ತು ಆಲೂಗಡ್ಡೆ. ಬೆಳೆಯುವ ವಿಧಾನವನ್ನು ಅವಲಂಬಿಸಿ ಬದನೆಕಾಯಿಯಲ್ಲಿ ನಾನಾ ವಿಧದ ಆಕಾರ ಮತ್ತು ಬಣ್ಣಗಳು ಕಂಡು ಬರುತ್ತವೆ. ಬನ್ನಿ ಇವುಗಳ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಕಾಲು ಅಲ್ಲಾಡಿಸುವ ದುರಭ್ಯಾಸಕ್ಕೆ ಮ೦ಗಳ ಹಾಡುವುದು ಹೇಗೆ?

ಕಫ ನಿವಾರಿಸಲು
ಬೆಂಕಿಯಲ್ಲಿ ಸುಟ್ಟು, ಅದಕ್ಕೆ ಉಪ್ಪನ್ನು ಹಾಕಿದ ಬದನೆಕಾಯಿಯನ್ನು ತಿನ್ನುವುದರಿಂದ ನಮ್ಮ ಗಂಟಲಿನಲ್ಲಿ ತೊಂದರೆ ಕೊಡುವ ಅಧಿಕ ಕಫವನ್ನು ತೆಗೆಯಬಹುದು ಮತ್ತು ಉಸಿರಾಟ ಹಾಗು ಕೆಮ್ಮನ್ನು ಸಹ ಸುಧಾರಿಸಬಹುದು. ಇದು ಕಫ ತೆಗೆಯಲು ಬಳಸುವ ತುಂಬಾ ಪ್ರಾಚೀನ ವಿಧಾನವಾಗಿದೆ.
ವಿಟಮಿನ್‍ಗಳು ಮತ್ತು ಖನಿಜಗಳ ಗಣಿ
ಬದನೆಕಾಯಿಯಲ್ಲಿ ತಕ್ಕ ಮಟ್ಟಿಗೆ ಪ್ರೋಟಿನ್, ವಿಟಮಿನ್ ಸಿ ಮತ್ತು ಕಬ್ಬಿಣಾಂಶಗಳು ಇರುತ್ತವೆ. ಇದರ ಜೊತೆಗೆ ಕ್ಯಾಲ್ಶಿಯಂ, ಪೊಟಾಶಿಯಂ, ಫಾಸ್ಪರಸ್, ಫೊಲಿಕ್ ಆಮ್ಲ ಮತ್ತು ಬೀಟಾ ಕೆರೊಟಿನ್‍ಗಳು ಸಹ ಇರುತ್ತವೆ. ಸೂಕ್ತ ಆಹಾರ ಪದ್ಧತಿಯೇ ಎಲ್ಲಾ ರೋಗಕ್ಕೂ ರಾಮಬಾಣ!
ಒಡೆದ ತ್ವಚೆಗೆ ಪರಿಹಾರ ನೀಡುತ್ತದೆ
ಒಡೆದ ಹಿಮ್ಮಡಿ ಮತ್ತು ಸೀಳು ಬಿಟ್ಟ ಬೆರಳುಗಳಿಗೆ ಹಣ್ಣಾದ ಬದನೆಕಾಯಿಯನ್ನು ಪೆಟ್ರೋಲಿಯಂ ಜೆಲ್ಲಿ ಜೊತೆಗೆ ಬೆರೆಸಿ ಬಳಸುವುದರಿಂದ ಈ ಸಮಸ್ಯೆಯಿಂದ ಮುಕ್ತಿಯನ್ನು ಪಡೆಯಬಹುದು. ಅರ್ಧ ಕತ್ತರಿಸಿದ ಬದನೆಕಾಯಿಗೆ ಸ್ವಲ್ಪ ಅರಿಶಿಣ ಪುಡಿಯನ್ನು ಚಿಮುಕಿಸಿ ಫ್ರೈ ಪ್ಯಾನ್ ಮೇಲೆ ಕೆಲವು ಸೆಕೆಂಡುಗಳ ಕಾಲ ಉರಿದು ಅದನ್ನು ಕೀಲು ನೋವು, ಬಾವು ಮತ್ತು ಗಾಯಗಳ ಮೇಲೆ ಇಡುವುದರಿಂದ ಬಾವು ಮತ್ತು ನೋವು ಶಮನಗೊಳ್ಳುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

