Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸರ್ವಗುಣ ಸಂಪನ್ನ- ಪಪ್ಪಾಯಿ ಹಣ್ಣಿನ ಬೀಜ
ಪಪ್ಪಾಯಿ ಹಣ್ಣಿನ ಮಹತ್ವದ ಬಗ್ಗೆ ನಮ್ಮಲ್ಲಿ ಇಂದು ಹಲವು ಮಾಹಿತಿಗಳು ಲಭ್ಯವಿವೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಬೀಜಗಳನ್ನು ಬಿಸುಡುತ್ತೇವೆ. ಇನ್ನೂ ಹೆಚ್ಚೆಂದರೆ ಅತಿಯಾಸೆ ಹೊಂದಿರುವ ಜನರು ಇದನ್ನು ಚೆನ್ನಾಗಿ ಒಣಗಿಸಿ ಕಾಳುಮೆಣಸಿನೊಂದಿಗೆ ಮಿಶ್ರಣ ಮಾಡಿ ಅದರ ಲಾಭ ಮಾಡಿಕೊಳ್ಳಲು ಬಯಸುತ್ತಾರೆ. (ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ಕಾಳುಮೆಣಸು ಬೇಡಿಕೆ ಕಳೆದುಕೊಳ್ಳಲು ಇದೇ ಪ್ರಮುಖ ಕಾರಣ). ಊಹೆಗೂ ನಿಲುಕದ ಪಪ್ಪಾಯಿಯ ಪವರ್‌ಗೆ ಬೆರಗಾಗಲೇಬೇಕು!
ಆದರೆ ವಾಸ್ತವವಾಗಿ ಪಪ್ಪಾಯಿಯ ಬೀಜವೂ ಆರೋಗ್ಯಕ್ಕೆ ಪೂರಕವಾಗಿದ್ದು ಹಲವು ರೀತಿಯಲ್ಲಿ ರಕ್ಷಣೆ ನೀಡುತ್ತದೆ. ಆದ್ದರಿಂದ ಮುಂದಿನ ಬಾರಿ ಪಪ್ಪಾಯಿ ಹಣ್ಣನ್ನು ಕತ್ತರಿಸಿದ ಬಳಿಕ ಅದರ ಕಪ್ಪು ಬೀಜಗಳನ್ನು ಎಸೆಯದೇ ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ಬಳಿಕ ಕುಟ್ಟಿ ಪುಡಿಮಾಡಿ ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿದರೆ ಸುಮಾರು ಒಂದು ವರ್ಷದವರೆಗೂ ಉಪಯೋಗಿಸಬಹುದು. ಪಪ್ಪಾಯಿಯಲ್ಲಿದೆ 6 ಪ್ರಮುಖ ಆರೋಗ್ಯಕರ ಗುಣಗಳು
ಇದರಲ್ಲಿರುವ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಗುಣಗಳು ಜೀರ್ಣವ್ಯವಸ್ಥೆ, ಮೂತ್ರಪಿಂಡ ಮತ್ತು ಯಕೃತ್‌ನ ಕ್ಷಮತೆಯನ್ನು ವಿಶೇಷವಾಗಿ ಹೆಚ್ಚಿಸುತ್ತವೆ. ಬನ್ನಿ ಕೆಳಗಿನ ಸ್ಲೈಡ್ ಶೋನಲ್ಲಿ ನೀಡಿದ ಮಾಹಿತಿಯನ್ನು ಪಡೆದ ಬಳಿಕ ನೀವೆಂದೂ ಪಪ್ಪಾಯಿ ಬೀಜವನ್ನು ಎಸೆಯಲು ಮನಸ್ಸು ಮಾಡಲಾರಿರಿ, ಮುಂದೆ ಓದಿ..

ಯಕೃತ್‌ನಲ್ಲಿ ಸಂಗ್ರಹವಾಗಿದ್ದ ಕಲ್ಮಶ ತೊಡೆಯುತ್ತದೆ (Liver Cirrhosis)
ಕೆಲವು ಕಾರಣಗಳಿಂದ ಯಕೃತ್ ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತದೆ. ಮದ್ಯಪಾನ ಇದಕ್ಕೆ ಪ್ರಮುಖ ಕಾರಣ. ಆಗ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡದೇ ಕೆಲವು ಭಾಗ ಕಲ್ಮಶದಿಂದ ತುಂಬಿಕೊಳ್ಳುತ್ತಾ ಹೋಗುತ್ತದೆ. ಇದನ್ನು ತೊಡೆಯಲು ಪ್ರತಿದಿನ ಮುಂಜಾನೆ ಒಂದು ಲೋಟ ಬೆಚ್ಚನೆಯ ನೀರಿನಲ್ಲಿ ಒಂದು ಚಿಕ್ಕ ಚಮದ ಪಪ್ಪಾಯಿ ಬೀಜದ ಪುಡಿ ಮತ್ತು ಒಂದು ಲಿಂಬೆಯ (ದೊಡ್ಡದಾದರೆ ಅರ್ಧ) ರಸ ಹಿಂಡಿ ಕುಡಿಯುತ್ತಾ ಬಂದರೆ ಎರಡು ತಿಂಗಳಲ್ಲಿಯೇ ಈ ತೊಂದರೆ ಸಾಕಷ್ಟು ಕಡಿಮೆಯಾಗುತ್ತದೆ.

ವೈರಸ್ಸುಗಳ ಮೂಲಕ ಉಂಟಾಗಿದ್ದ ಸೋಂಕು ನಿವಾರಿಸುತ್ತದೆ
ಆರೋಗ್ಯವನ್ನು ಕೆಡಿಸುವ ವಿವಿಧ ವೈರಸ್ಸುಗಳಿಗೂ ಪಪ್ಪಾಯಿ ಬೀಜದ ಪುಡಿ ರಾಮಬಾಣವಾಗಿದೆ. ಇದರ ವೈರಸ್ ನಿರೋಧಕ ಗುಣ ಹಲವಾರು ವೈರಸ್ಸುಗಳ ಧಾಳಿಯನ್ನು ತಡೆಯುತ್ತದೆ.

ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ
ದೇಹದಲ್ಲಿ ಅನಿಯಂತ್ರಿತವಾಗಿ ಕೆಲವು ಜೀವಕೋಶಗಳು ಬೆಳೆಯಲು ಕೆಲವು ಕಣಗಳು ಕಾರಣವಾಗಿವೆ. ಪಪ್ಪಾಯಿ ಬೀಜದಲ್ಲಿ ಈ ಕಣಗಳನ್ನು ಹೊಡೆದೋಡಿಸುವ ಶಕ್ತಿ ಇರುವ ಕಾರಣ ಹಲವು ಬಗೆಯ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ಇದರಲ್ಲಿ ಕರುಳು, ಸ್ತನ, ರಕ್ತ, ಶ್ವಾಸಕೋಶ ಮತ್ತು ಪ್ರೋಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಪ್ರಮುಖವಾಗಿವೆ.

ಮೂತ್ರಪಿಂಡಗಳನ್ನು ರಕ್ಷಿಸುತ್ತದೆ
ಮೂತ್ರಪಿಂಡಗಳು ಸಾಕಷ್ಟು ವಿಫಲಗೊಂಡಿದ್ದರೆ ಅದರ ಕ್ಷಮತೆಯನ್ನು ಹೆಚ್ಚಿಸಲೂ ಪಪ್ಪಾಯಿ ಬೀಜಗಳು ಉತ್ತಮವಾಗಿವೆ. ಅಲ್ಲದೇ ಮೂತ್ರಪಿಂಡಗಳು ಸ್ಥಗಿತಗೊಳ್ಳುವ ಸಂಭವವನ್ನೂ ಸಾಕಷ್ಟು ಕಡಿಮೆಗೊಳಿಸುತ್ತದೆ.

ಪರಾವಲಂಬಿ ಕ್ರಿಮಿಗಳನ್ನು ಕೊಲ್ಲುತ್ತದೆ
ಕೆಲವೊಮ್ಮೆ ಕರುಳುಗಳಲ್ಲಿರುವ ಲಾಡಿಹುಳ ಮೊದಲಾದವು ಎಷ್ಟು ಗಟ್ಟಿಯಾಗಿ ಅಂಟಿಕೊಂಡಿರುತ್ತವೆ ಎಂದರೆ ಸುಲಭವಾಗಿ ನಿವಾರಣೆ ಸಾಧ್ಯವಿಲ್ಲ. ಇದಕ್ಕೆ ಸಾಮಾನ್ಯವಾಗಿ ಮಿಲ್ಕ್ ಆಫ್ ಮೆಗ್ನೀಶಿಯಾ ಎಂಬ ದ್ರವವನ್ನು ನೀಡಲಾಗುತ್ತದೆ. ಕ್ಷಾರೀಯವಾದ ಈ ದ್ರವ ಕ್ರಿಮಿಯನ್ನು ಸಡಿಲಿಸಿ ವಿಸರ್ಜನೆ ಮೂಲಕ ದೇಹದಿಂದ ಹೊರಹಾಕುತ್ತದೆ. ಆದರೆ ಈ ದ್ರವ ಇಲ್ಲದಿದ್ದಾಗ ಪಪ್ಪಾಯಿ ಬೀಜದ ಪುಡಿ ಸೇರಿಸಿದ ಹಾಲು ಅಥವಾ ನೀರು ಸಹಾ ಇದೇ ಕೆಲಸ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ
ಪಪ್ಪಾಯಿಯಲ್ಲಿ ಪಪಾಯಿನ್ ಎಂಬ ಕಿಣ್ವವಿದ್ದು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ. ಒಟ್ಟಾರೆ ಜೀರ್ಣವ್ಯವಸ್ಥೆಯನ್ನು ಉತ್ತಮಗೊಳಿಸುತ ಜೊತೆಗೇ ಪ್ರೋಟೀನುಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲೂ ನೆರವಾಗುತ್ತದೆ.

ಸಂಧಿವಾತಕ್ಕೂ ಉತ್ತಮ
ಇದರ ಉರಿಯೂತ ನಿವಾರಕ ಗುಣ ಸಂಧಿವಾತವನ್ನು ಗುಣಪಡಿಸಲು ಮತ್ತು ಮೂಳೆಗಳು ಹೆಚ್ಚಿನ ದೃಢತೆ ಪಡೆಯಲು ನೆರವಾಗುತ್ತದೆ.



Click it and Unblock the Notifications