Latest Updates
-
ಜನ್ಮಾಷ್ಟಮಿ ಉಪವಾಸ: ಹಬ್ಬದ ಸಂಭ್ರಮದ ನಡುವೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಕಜರಿ ತೀಜ್ 2026: ಉಪವಾಸದ ದಿನ ಆರೋಗ್ಯ ಮತ್ತು ಸಂಗಾತಿಯೊಂದಿಗೆ ಸುಗಮ ಸಂವಹನಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಇಂದೇ ಕೊನೆಯ ಅವಕಾಶ: ಎಲ್ಪಿಜಿ ಇ-ಕೆವೈಸಿ ಮಾಡದಿದ್ದರೆ ಸಿಲಿಂಡರ್ ದರ ಏರಿಕೆ ಖಚಿತ! -
ಈರುಳ್ಳಿ ಬೆಲೆ ಏರಿಕೆ: ಅಡುಗೆಮನೆ ಬಜೆಟ್ ಉಳಿಸಿ, ಈರುಳ್ಳಿ ಇಲ್ಲದೆಯೂ ರುಚಿಕರ ಹೈ-ಪ್ರೋಟೀನ್ ಊಟ ಮಾಡಿ! -
#5DayWeekandFairPLI ಟ್ರೆಂಡ್: ಬ್ಯಾಂಕ್ ಮತ್ತು ಐಟಿ ಉದ್ಯೋಗಿಗಳ ಆಕ್ರೋಶ, 5 ದಿನದ ಕೆಲಸಕ್ಕೆ ಸಿಗುತ್ತಾ ಮನ್ನಣೆ? -
ಮಕ್ಕಳಿಗಾಗಿ ದಾಂಪತ್ಯ ಉಳಿಸಿಕೊಳ್ಳಬೇಕೇ? ಜೀನತ್ ಅಮಾನ್ ಅವರ ವೈರಲ್ ಸಲಹೆ ಮತ್ತು ಪೋಷಕರಿಗೆ ಮಹತ್ವದ ಪಾಠ -
ಇಂದು ಬೆಂಗಳೂರಿನಲ್ಲಿ ಪವರ್ ಕಟ್: ವೈಟ್ಫೀಲ್ಡ್, ಪೀಣ್ಯ, ಮಲ್ಲೇಶ್ವರಂ ಸೇರಿ ಪ್ರಮುಖ ಏರಿಯಾಗಳ ಪಟ್ಟಿ ಇಲ್ಲಿದೆ -
ಇನ್ಮುಂದೆ ಬಿಸ್ಕತ್ತು, ಕೂಲ್ ಡ್ರಿಂಕ್ಸ್ ಮೇಲೆ ಕೆಂಪು ಎಚ್ಚರಿಕೆ ಲೇಬಲ್: FSSAI ಹೊಸ ನಿಯಮವೇನು? -
ಮುಂಬೈ ಲೋಕಲ್ ರೈಲು ಪ್ರಯಾಣಿಕರೇ ಗಮನಿಸಿ: ಇಂದು ಮೆಗಾ ಬ್ಲಾಕ್, ಯಾವ ಮಾರ್ಗದಲ್ಲಿ ಸಂಚಾರ ಸ್ಥಗಿತ? -
ರಾಷ್ಟ್ರೀಯ ಪೋಷಕಾಂಶ ವಾರ: ಕನ್ನಡಿಗರ ಆರೋಗ್ಯಕ್ಕಾಗಿ 7 ದಿನಗಳ ಸಿಂಪಲ್ ಡಯಟ್ ಮತ್ತು ವ್ಯಾಯಾಮ ಪ್ಲಾನ್!
ಯಮಯಾತನೆ ನೀಡುವ ಮೈ, ಕೈ ನೋವನ್ನು ಮಟ್ಟಹಾಕುವುದು ಹೇಗೆ?
ಕೆಲವೊಮ್ಮೆ ದೇಹಕ್ಕೆ ಅತಿಯಾಗಿ ತೊಂದರೆ ಕೊಡುವ ಸಾಮಾನ್ಯ ಕಾಯಿಲೆಗಳು ವೈದ್ಯರ ಗುಳಿಗೆಗಳಿಗೆ ಬಗ್ಗುವುದೇ ಇಲ್ಲ. ಈ ಕಾಯಿಲೆಗೆ ಕಾರಣವಾದ ವೈರಸ್ಸು ಬ್ಯಾಕ್ಟೀರಿಯಾಗಳು ಈ ಔಷಧಿಯನ್ನು ಜೀರ್ಣಿಸಿಕೊಳ್ಳುವ ಗುಣವನ್ನು ಪಡೆದಿರಬಹುದು.,,! ವಯಸ್ಸು 30 ದಾಟಿದರೆ ಸಾಕು ಮೈಕೈ ನೋವು, ಸಂದಿ ನೋವು ಮುಂತಾದ ತೊಂದರೆ ಕಾಣಿಸಿಕೊಳ್ಳುವುದು ಸಹಜ. ಈ ರೀತಿಯ ತೊಂದರೆಗಳು ನಾನಾ ಕಾರಣಗಳಿಂದ ಉಂಟಾಗಬಹುದು.
ಆರೋಗ್ಯಕರವಾದ ಆಹಾರವು ನಿಮ್ಮ ನೋವನ್ನು ನಿವಾರಿಸುವುದರ ಜೊತೆಗೆ ಮುಂದೆ ಬರುವ ನೋವನ್ನು ಸಹ ನಿವಾರಿಸುತ್ತದೆ. ಅದಕ್ಕಾಗಿ ಹಲವಾರು ಆಹಾರ ಪದಾರ್ಥಗಳು ನಮ್ಮ ನಡುವೆ ದೊರೆಯುತ್ತವೆ ಎಂಬುದು ಸಂತಸದ ವಿಚಾರ. ಈ ಆಹಾರ ಪದಾರ್ಥಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ನಾವು ನೋವನ್ನು ಮತ್ತು ಒತ್ತಡವನ್ನು ನಿವಾರಿಸಿಕೊಳ್ಳಬಹುದು. ಅಂತಹ ಆಹಾರಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ ಓದಿ ತಿಳಿದುಕೊಳ್ಳಿ. ವೈದ್ಯ ಲೋಕವನ್ನು ಅಚ್ಚರಿಗೊಳಿಸುವ ಹಳ್ಳಿ ಮದ್ದಿನ ಕಮಾಲು

ಪುದಿನಾ
ಪುದಿನಾವನ್ನು ಅಗಿಯುವುದರಿಂದ ಉಸಿರಿನ ದುರ್ವಾಸನೆಯನ್ನು ತಡೆಯಬಹುದು. ಇದರ ಜೊತೆಗೆ ಸ್ನಾಯುಗಳಲ್ಲಿನ ಸಮಸ್ಯೆಗಳಿಗೆ ಮತ್ತು ರೋಗಗಳಿಗು ಸಹ ಇದು ರಾಮಬಾಣ. ಪುದಿನಾ ಎಣ್ಣೆಯು ತಲೆನೋವಿಗೆ ಅತ್ಯುತ್ತಮ ಔಷಧಿ, ಹಾಗಾಗಿ ಇದನ್ನು ಗಿಡಮೂಲಿಕೆಯ ಅಸ್ಪಿರಿನ್ ಎಂದು ಕರೆಯುತ್ತಾರೆ. ಪುದೀನಾ ಎಲೆಗಳ ಸೇವನೆ ಆರೋಗ್ಯಕ್ಕೆ ಅತ್ಯುತ್ತಮ ಹೇಗೆ?

ಮೊಸರು
ಹೊಟ್ಟೆಗೆ ಸಂಬಂಧಿಸಿದ ನೋವಿರಲಿ ಅಥವಾ ಅಸಿಡಿಟಿಯಿರಲಿ ಮೊಸರು ಮೊಸರು ಅತ್ಯುತ್ತಮ ಪರಿಹಾರ. ಇದನ್ನು ನಿಮ್ಮ ಆಹಾರದ ಜೊತೆಗೆ ಸೇವಿಸಬಹುದು ಅಥವಾ ಪ್ರತ್ಯೇಕವಾಗಿ ಸೇವಿಸಬಹುದು. ಈ ವಿಚಾರ ನಿಮ್ಮ ವಿವೇಚನೆಗೆ ಬಿಟ್ಟಿದ್ದು. ಮೊಸರೆಂಬ ಅಮೃತದಲ್ಲಿದೆ ಆರೋಗ್ಯಕಾರಿ 11 ಅಂಶಗಳು

ಕಾಫಿ
ಕಾಫಿಯಲ್ಲಿ ಯಥೇಚ್ಛವಾಗಿ ಅಂಟಿ ಆಕ್ಸಿಡೆಂಟ್‍ಗಳು ಇವೆ. ಇದರ ಪ್ರಮಾಣವು ಒಂದು ಕಪ್ ಚೆರ್ರಿಗಳಿಗಿಂತ ಹೆಚ್ಚು. ಹಾಗಾಗಿ ಕಾಫಿಯು ಒಂದು ಅತ್ಯುತ್ತಮವಾದ ನೋವು ನಿವಾರಕವೆನ್ನಬಹುದು. ಕಾಫಿಯನ್ನು ತೀವ್ರತರವಾದ ತಲೆನೋವು ಅಥವಾ ಮೈಗ್ರೇನ್ ಸಮಸ್ಯೆಗಳಲ್ಲಿ ನೋವು ನಿವಾರಕವನ್ನಾಗಿ ಬಳಸುತ್ತಾರೆ. ತಲೆ ನೋವಿನಿಂದ ಪಾರಾಗಲು ಕಾಫಿ ಏಕೆ ಬೇಕಾಗುತ್ತದೆ ಎಂದು ತಿಳಿಯಿತಲ್ಲವೇ. ಒಂದು ಕಪ್ ಕಾಫಿಗೆ ಆರ್ಡರ್ ಮಾಡಿ ತಲೆನೋವೇಕೆ?

ಆಲೀವ್ ಎಣ್ಣೆ
ಆಲೀವ್ ಎಣ್ಣೆ ಅಡುಗೆ ಮಾಡಲು ಬಳಸಿದರೆ ಇದರಿಂದ ದೇಹ ಕೊಲೆಸ್ಟ್ರಾಲ್ ಕಡಿಮೆಯಾಗುವುದು, ಬೊಜ್ಜು ಕರಗುವುದು ಹಾಗೂ ಮೈಕೈ ನೋವನ್ನು ನಿವಾರಿಸುತ್ತದೆ. ದೇಹದ ತೂಕ ಹೆಚ್ಚಾದರೆ ಕಾಲು ನೋವು ಕಂಡು ಬರುತ್ತದೆ. ಆದ್ದರಿಂದ ಸಮತೂಕವಿರುವಂತೆ ನೋಡಿಕೊಳ್ಳುವುದು ಒಳ್ಳೆಯದು. ದೇಹಕ್ಕೆ ವರದಾನವಾಗಿರುವ ಆಲೀವ್ ಎಣ್ಣೆಯ ವಿಶೇಷತೆ ಏನು?

ಅರಿಶಿಣ
ಅರಿಶಿಣವು ದೇಹದಲ್ಲಿ ಉಂಟಾಗುವ ಟಿಶ್ಯೂ ಏರು ಪೇರು, ಕೀಲು ಬಾವುಗಳನ್ನು ತಡೆಯುತ್ತದೆ ಮತ್ತು ನರ ಕೋಶಗಳ ಕಾರ್ಯ ವೈಖರಿಯನ್ನು ಸುಧಾರಿಸುತ್ತದೆ. ಸ್ನಾಯುಗಳಲ್ಲಿ ಉಳುಕು ಅಥವಾ ಗಾಯವಾದಾಗ ಅರಿಶಿಣವನ್ನು ಹೊರಭಾಗದಲ್ಲಿ ಹಚ್ಚಿದಾಗ ನೋವು ಮತ್ತು ಬಾವು ಉಂಟಾಗುವುದು ತಪ್ಪುತ್ತದೆ. ಮಧುಮೇಹಿಗಳಿಗೆ ಬೆಸ್ಟ್ ಮನೆಮದ್ದು ಅರಿಶಿಣ

ಸಮುದ್ರ ಜನ್ಯ ಆಹಾರಗಳು
ಮೀನುಗಳಲ್ಲಿ ಒಮೆಗಾ-3 ಯಥೇಚ್ಛವಾಗಿರುತ್ತದೆ. ಇವುಗಳು ಅತ್ಯುತ್ತಮವಾದ ನೋವು ನಿವಾರಕಗಳು ಮತ್ತು ಬಾವು ನಿವಾರಕಗಳು. ಒಮೆಗಾ 3 ನಮ್ಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸಿ ನೋವನ್ನು ಕಡಿಮೆ ಮಾಡುತ್ತವೆ. ಮೀನಿನ ಎಣ್ಣೆಯು ಹೃದಯ ಸಂಬಂಧಿ ಕಾಯಿಲೆಗಳಿಗೆ ಅತ್ಯುತ್ತಮವಾದ ನಿವಾರಕ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ. ಹಾಗಾಗಿ ಮುಂದೆ ಬರುವ ಯಾವುದೇ ತೀವ್ರತರವಾದ ನೋವುಗಳನ್ನು ನಿವಾರಿಸಿಕೊಳ್ಳಲು ಮೀನನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದು ಉತ್ತಮ.

ಶುಂಠಿ
ಶುಂಠಿಯು ಅಸ್ಪಿರಿನ್ ಮಾತ್ರೆಗೆ ಉತ್ತಮ ಬದಲಿಯಾಗಿದೆ. ಇದು ಅಸ್ಪಿರಿನ್ ಮಾಡುವ ಕೆಲಸವನ್ನು ಸ್ವಾಭಾವಿಕವಾಗಿ ಮಾಡಿ ತೋರಿಸುತ್ತದೆ. ತಲೆ ನೋವು ಮತ್ತು ಮೈಗ್ರೇನ್ ನೋವುಗಳಿಗೆ ಇದು ಅಸ್ಪಿರಿನ್‍ಗಿಂತ ಒಳ್ಳೆಯ ಮುಲಾಮಾಗಿದೆ. ಇದನ್ನು ಸುಲಭವಾಗಿ ನಿಮ್ಮ ಆಹಾರದ ಜೊತೆಗೆ ಸೇವಿಸಬಹುದು. ಹಾಗಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಶುಂಠಿಯನ್ನು ಮಿತವಾಗಿ ಬಳಸಿ ಸಾಕು. ಶುಂಠಿ ಚಹಾದ 8 ಆರೋಗ್ಯ ಪ್ರಯೋಜನಗಳು

ಚೆರ್ರಿಗಳು
ಕೆಂಪು ಬಣ್ಣದ ಈ ಸಣ್ಣ ಹಣ್ಣುಗಳು ಸಮೃದ್ಧವಾದ ಅಂಟಿ ಆಕ್ಸಿಡೆಂಟ್‍ಗಳನ್ನು ಮತ್ತು ಅಂಟಿ ಇನ್‍ಫ್ಲೆಮ್ಮಟೊರಿ ಎನ್‍ಜೈಮ್‍ಗಳನ್ನು ತನ್ನಲ್ಲಿ ಒಳಗೊಂಡಿದೆ. ಇವುಗಳು ಕೀಲು ನೋವು ಮತ್ತು ಅರ್ತಿರಿಟಿಸ್‍ನಿಂದ ಉಂಟಾಗುವ ನೋವುಗಳನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ನೀವು ಪ್ರತಿದಿನ 45 ಚೆರ್ರಿಗಳನ್ನು ಸೇವಿಸಬೇಕಾಗುತ್ತದೆ.



Click it and Unblock the Notifications