Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಇವು ಅಂತಿಂಥ ಹಣ್ಣುಗಳಲ್ಲ, ನಮ್ಮ ಆರೋಗ್ಯದ ಕಣ್ಣು!
ಮಳೆಗಾಲ ಬಂತೆಂದರೆ ನಮ್ಮಲ್ಲಿ ಕೆಲವರಿಗಾದರೂ ಶೀತ ಬಹುಬೇಗ ಶುರುವಾಗಿ ಬಿಡುತ್ತದೆ. ಕೊಂಚ ಗಮನಿಸಿ ನೋಡಿ, ನಿಮ್ಮ ಪರಿಸರದಲ್ಲಿ ವಾಸವಾಗಿರುವ ಹಿರಿಯರಿಗೆ ಶೀತವಾಗುವುದು ಕಡಿಮೆ. ಕಿರಿಯರಿಗೆ, ಅದರಲ್ಲೂ ಮಕ್ಕಳಿಗೆ ಬಹುಬೇಗನೇ ಶೀತ ಹಿಡಿಯುತ್ತದೆ.
ಸಾಮಾನ್ಯವಾಗಿ ವರ್ಷದ ಬೇಸಿಗೆಗಾಲದಲ್ಲಿ ನಿರ್ಜೀವವಾಗಿದ್ದ ವೈರಸ್ಸುಗಳು, ಹುಲ್ಲಿನ ಬೀಜಗಳು ಮೊದಲಾದವು ಮಳೆಯಾಗುತ್ತಿದ್ದಂತೆಯೇ ಜೀವ ಪಡೆದು ತಮ್ಮ ವಂಶಾಭಿವೃದ್ಧಿಗೆ ಸೂಕ್ತ ನೆಲೆಯನ್ನು ಹುಡುಕುತ್ತಿರುತ್ತವೆ. ಇವುಗಳಲ್ಲಿ ಕೆಲವಕ್ಕೆ ಮನುಷ್ಯನ ದೇಹವೇ ನೆಲೆ! ಕರೆಯದೇ ಬಂದ ಅತಿಥಿಗಳಂತೆ ನಮ್ಮ ದೇಹವನ್ನು ಹೊಕ್ಕು ಉಂಡು ಕಡೆಗೆ ಉಂಡ ಮನೆಗೆ ದ್ರೋಹ ಬಗೆದು ಕೆಲವು ರೋಗಗಳನ್ನು ಹರಡುತ್ತವೆ.
ಆ ಬಳಿಕ ವೈದ್ಯರ ಔಷಧಿ ತೆಗೆದುಕೊಂಡು ಮೊದಲಿನ ಆರೋಗ್ಯ ಪಡೆಯುವವರೆಗೂ ರೋಗದ ಕಿರಿಕಿರಿ, ಸುಸ್ತು ಅನುಭವಿಸಬೇಕಾಗುತ್ತದೆ. ಇದಕ್ಕೆ ಉಪಾಯವೆಂದರೆ ನಮ್ಮ ದೇಹದಲ್ಲಿ ನುಸುಳುವ ವೈರಸ್ಸುಗಳನ್ನು ಒಳಗಿಂದಲೇ ಓಡಿಸುವುದು. ಅದಕ್ಕೆ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಸ್ವಲ್ಪ ಬಲಪಡಿಸಬೇಕಾಗುತ್ತದೆ. ಈ ಕೆಲಸದಲ್ಲಿ ನಿಪುಣರಾಗಿರುವ ಹಣ್ಣುಗಳನ್ನು ಕೆಳಗಿನ ಸ್ಲೈಡ್ ಮೂಲಕ ವಿವರಿಸಲಾಗಿದೆ ಮುಂದೆ ಓದಿ..

ದಾಳಿಂಬೆ ಹಣ್ಣು
ಅಪ್ಪಟ ರತ್ನಗಳಂತೆ ಹೊಳೆಯುವ ದಾಳಿಂಬೆಯ ಬೀಜಗಳಲ್ಲಿ ಹಲವು ಉಪಯುಕ್ತ ಅಂಶಗಳಿವೆ. ಪವಿತ್ರ ಕುರಾನ್ ನಲ್ಲಿ ದಾಳಿಂಬೆಯನ್ನು ಸ್ವರ್ಗದ ಹಣ್ಣೆಂದು ಬಣ್ಣಿಸಿ ಒಂದೂ ಬೀಜವನ್ನು ಬಿಡದಂತೆ ಸೇವಿಸಲು ಆಗ್ರಹಿಸಲಾಗಿದೆ. (Quran, 6:99). ಈ ಹಣ್ಣಿನಲ್ಲಿ ಬೇರೆಲ್ಲಾ ಹಣ್ಣುಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಂಟಿ ಆಕ್ಸಿಡೆಂಟುಗಳಿರುವುದರಿಂದ ಹಲವು ಕ್ಯಾನ್ಸರ್ ಗಳಿಗೆ ರಾಮಬಾಣವಾಗಿದೆ.

ದಾಳಿಂಬೆ ಹಣ್ಣು
ವಿಟಮಿನ್ ಸಿ. ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಕರಗುವ ಹಾಗೂ ಕರಗದಿರುವ ನಾರುಗಳು ಹೇರಳವಾಗಿರುವುದರಿಂದ ಜೀರ್ಣಶಕ್ತಿ ಹಾಗೂ ರಕ್ತಪರಿಚಲನೆ ಸರಾಗವಾಗುತ್ತದೆ. ವಿಟಮಿನ್ ಎ, ಸಿ, ಕೆ, ಬಿ5, ಮೊದಲಾದ ಬಿ. ಕಾಂಪ್ಲೆಕ್ಸ್ ಅಂಶಗಳು ಆರೋಗ್ಯವನ್ನು ವೃದ್ಧಿಸುತ್ತವೆ. ಕ್ಯಾಲ್ಸಿಯಂ, ಪೊಟ್ಯಾಸಿಯಂ, ಮತ್ತು ತಾಮ್ರ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ಸೇಬುಹಣ್ಣು
ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುವುದು ಎಂಬ ಆಂಗ್ಲ ಗಾದೆ ಮಳೆಗಾಲಕ್ಕೂ ಅನ್ವಯಿಸುತ್ತದೆ. ಕ್ಯಾಲೋರಿ ಕಡಿಮೆ ಇದ್ದು ನಾರಿನಂಶ ಹೆಚ್ಚಿರುವ ಸೇಬು ಮಳೆಗಾಲದ ಮಿತ್ರನಾಗಿದೆ. ಕರುಳಿನಲ್ಲಿ ಆಹಾರದ ಕೆಟ್ಟ ಕೊಲೆಸ್ಟರಾಲ್ ಅಥವಾ (LDL-ಲೋ ಡೆನ್ಸಿಟಿ ಲಿಪಿಡ್ಸ್) ಗಳನ್ನು ಹೀರಿಕೊಳ್ಳದಿರಲು ಅಗತ್ಯವಾದ ನಾರಿನಂಶ ಸೇಬಿನಲ್ಲಿರುವುದರಿಂದ ಹಲವು ರೋಗಗಳಿಂದ ರಕ್ಷಣೆ ಪಡೆದಂತಾಗುತ್ತದೆ. ಅಲ್ಲದೇ ದೊಡ್ಡ ಕರುಳಿನಲ್ಲಿ ಕ್ಯಾನ್ಸರ್ ಉಂಟುಮಾಡುವ ಹಲವು ರಸಾಯನಿಕಗಳಿಗೆ ತಡೆಗೋಡೆಯಾಗಿ ನಿಲ್ಲುತ್ತದೆ.

ಸೇಬುಹಣ್ಣು
ಹೇರಳವಾಗಿರುವ ವಿಟಮಿನ್ ಸಿ ಹಾಗೂ ಬೀಟಾ ಕ್ಯಾರೋಟಿನ್‌ಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ವಿಟಮಿನ್ ಬಿ-6 ಮೊದಲಾದ ಬಿ. ಕಾಂಪ್ಲೆಕ್ಸ್ ಗಳೂ ಹೇರಳವಾಗಿವೆ. ಅಲ್ಪ ಪ್ರಮಾಣದಲ್ಲಿ ಪೊಟ್ಯಾಸಿಯಂ, ಫಾಸ್ಫರ್ ಹಾಗೂ ಕ್ಯಾಲ್ಸಿಯಂಗಳು ದೇಹದ ಆರೋಗ್ಯ ಕಾಪಾಡುವಲ್ಲಿ ನೆರವಾಗುತ್ತವೆ. ಆದರೆ ಸೇಬಿನಲ್ಲಿರುವ polyphenol oxidase ಅಥವಾ tyrosinase ಎಂಬ ಕಿಣ್ವದ ಕಾರಣ ಹಣ್ಣನ್ನು ತುಂಡರಿಸಿದ ಕೊಂಚ ಕಾಲದಲ್ಲಿಯೇ ಬಣ್ಣಗೆಡುವುದರಿಂದ ತುಂಡರಿಸಿದ ಕೂಡಲೇ ಸೇವಿಸುವುದು ಒಳ್ಳೆಯದು.

ಪಪ್ಪಾಯಿ
ಪಪ್ಪಾಯಿ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿದ್ದು ದೇಹಕ್ಕೆ ಅಗತ್ಯವಾದ ಪ್ರತಿರೋಧ ಶಕ್ತಿಯನ್ನು ನೀಡುತ್ತದೆ. ಹೆಚ್ಚಿನ ನಾರಿನಂಶ, ಜೀರ್ಣಕ್ರಿಯೆಯನ್ನು ಸರಾಗವಾಗಿಸಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಇದರಲ್ಲಿ ಸಕ್ಕರೆ ಅಂಶ ಕಡಿಮೆ ಇರುವ ಕಾರಣ ಮಧುಮೇಹಿಗಳೂ ಸೇವಿಸಬಹುದಾಗಿದೆ. ಇದರಲ್ಲಿ ಹೇರಳವಾಗಿರುವ ವಿಟಮಿನ್ ಎ ಕಣ್ಣಿನ ಆರೋಗ್ಯವನ್ನು ವೃದ್ಧಿಸುತ್ತದೆ. ಮೂಳೆಗಳಿಗೆ ಅಗತ್ಯವಾದ ವಿಟಮಿನ್ ಸಿ ಹೇರಳವಾಗಿರುವುದರಿಂದ ಆರ್ಥೈಟಿಸ್ (ಸಂಧಿವಾತ)ರೋಗದಿಂದ ದೂರವಿರಬಹುದು.

ಪಪ್ಪಾಯಿ
ಮಹಿಳೆಯರಿಗೆ ತಿಂಗಳ ದಿನಗಳಲ್ಲಿ ಎದುರಾಗುವ ನೋವಿನಿಂದ ಪಾರಾಗಲು ವೈದ್ಯರು ಪಪ್ಪಾಯಿ ಹಣ್ಣನ್ನು ಸತತವಾಗಿ ಸೇವಿಸಲು ಸಲಹೆ ನೀಡುತ್ತಾರೆ. ಇದರಲ್ಲಿರುವ papain ಎಂಬ ಕಿಣ್ವ ರಕ್ತ ಹರಿಯುವಿಕೆಗೆ ಹಾಗೂ ದೇಹ ಪುನಶ್ಚೇತನ ಪಡೆಯಲು ನೆರವಾಗುತ್ತದೆ. ಆದರೆ ಗರ್ಭಾಪಾತವಾಗುವ ಸಂಭವವಿರುವ ಕಾರಣ ಪಪ್ಪಾಯಿ ಯನ್ನು ಗರ್ಭವತಿಯರು ಸೇವಿಸದಿರುವುದು ಒಳ್ಳೆಯದು.



Click it and Unblock the Notifications
