Latest Updates
-
ತೆಲಂಗಾಣ ಬಿಸಿಲ ಬೇಗೆ: ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ -
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ಕಹಿ ಜ್ಯೂಸ್‌ನ ಸಿಹಿ ಗುಣಗಳು ಒಂದೇ ಎರಡೇ?
ಕಹಿ ಎಂದರೆ ಎಲ್ಲರಿಗೂ ಅಪ್ರಿಯ ಅದರಲ್ಲೂ ಮಕ್ಕಳು ಕಹಿ ಸೇವಿಸುವುದೆಂದರೆ ಮಾರು ದೂರ ಓಡುತ್ತಾರೆ ಕಹಿಯನ್ನು ಹೊಂದಿದ ತರಕಾರಿಗಳಲ್ಲಿ ಹಾಗಲಕಾಯಿ ಮತ್ತು ಬೇವಿನಸೊಪ್ಪು ಮುಖ್ಯವಾಗಿ ಕಾಣಬಹುದು ಆದರಲ್ಲೂ ಕಡು ಕಹಿಯಾದ ಹಾಗಲಕಾಯನ್ನು ಸ್ವಲ್ಪ ಪ್ರಮಾಣವಾದರೂ ನಿಯಮಿತವಾಗಿ ಸೇವಿಸುತ್ತ ಬಂದರೆ ಸಾಕು ಅದು ಆರೋಗ್ಯದ ಮೇಲೆ ಎಂತ ಪರಿಣಾಮ ಬೀರುತ್ತೆ ಅನ್ನೋದನ್ನ ನೀವೇ ನೋಡಬಹುದು.
ಹಾಗಲಕಾಯಿ ಜ್ಯೂಸ್ ಕೇವಲ ಮಧುಮೇಹ ಇರುವವರಿಗೆ ಮಾತ್ರ ಅನುಕೂಲ ಎಂಬ ತಪ್ಪು ಕಲ್ಪನೆಗಳಿವೆ ಆದರೆ ಇದರಿಂದ ಆರೋಗ್ಯಕ್ಕೆ ಇತರ ಅನುಕೂಲಗಳೂ ಸಾಕಷ್ಟಿವೆ. ನೈಸರ್ಗಿಕ ಉತ್ಪನ್ನವೇ ಆಗಿರುವ ಹಾಗಲಕಾಯಿಯೆ೦ಬ ಈ ಒ೦ದೇ ತರಕಾರಿಯು ಎಷ್ಟೆಲ್ಲಾ ಪ್ರಯೋಜನಗಳನ್ನು ಹೊ೦ದಿದೆ ಎ೦ಬುದನ್ನು ತಿಳಿದುಕೊ೦ಡರೆ ನಿಮಗೆ ನ೦ಬಲು ಕಷ್ಟವಾದೀತು. ಕಹಿ ಸಂಜೀವಿನಿ ಬೇವಿನ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ
ಇಂದಿನ ವೈಜ್ಞಾನಿಕ ವಿಶ್ಲೇಷಣೆಗಳು ಸಹಾ ಇದನ್ನು ಖಾತರಿಪಡಿಸುತ್ತವೆ. ತನ್ನ ಕಹಿರುಚಿಯಿಂದಾಗಿ ಹೆಚ್ಚಿನವರ ಮೆಚ್ಚಿಗೆ ಪಾತ್ರನಾಗದ ಈ ಮುಳ್ಳುಮುಳ್ಳಾದ ತರಕಾರಿ ನಿಜಕ್ಕೂ ಆರೋಗ್ಯವನ್ನು ವೃದ್ಧಿಸುವ ಅದ್ಭುತ ಪೋಷಕಾಂಶಗಳ ಆಗರವಾಗಿದೆ. ಈ 9 ಹಸಿರು ಜ್ಯೂಸ್ ಗಳಲ್ಲಿ ಯಾವುದನ್ನು ರುಚಿ ನೋಡಿಲ್ಲ?
ಹಾಗಲಕಾಯಿ ಹಾಗೂ ಇನ್ನಿತರ ಕಹಿ ತರಕಾರಿಯ ಜ್ಯೂಸ್ ಸೇವಿಸುವುದರಿಂದ ಆರೋಗ್ಯಕ್ಕೆ ಎಷ್ಟೇ ಅನುಕೂಲವೆಂದರೂ ಮಕ್ಕಳಿಗೆ ಇದನ್ನು ಕುಡಿಸುವುದು ಕಷ್ಟ. ಜೊತೆಗೆ ದೊಡ್ಡವರೂ ಕೂಡ ಕಹಿ ಜ್ಯೂಸ್ ಎಂದರೆ ಮುಖ ಮುರಿಯುತ್ತಾರೆ. ಆದರೆ ಇದರ ಜ್ಯೂಸ್ ಕುಡಿಯುವುದರಿಂದ ಯಕೃತ್ತಿಗೆ (ಲಿವರ್) ಬಹಳ ಅನುಕೂಲವಿದೆ. ಲಿವರ್ ರೋಗಗಳಾದ ಕಾಮಾಲೆ ಇನ್ನಿತರ ಕಾಯಿಲೆಗಳು ಕಾಣಿಸಿಕೊಂಡರೆ ಅದನ್ನು ಹೋಗಲಾಡಿಸಲು ಅಥವಾ ಬರದಂತೆ ತಡೆಯಲು ಈ ಜ್ಯೂಸ್ ಬಹಳ ಅನುಕೂಲಕರ, ಬನ್ನಿ ಇದರ ಆರೋಗ್ಯಕರ ಅಂಶಗಳತ್ತ ಗಮನಹರಿಸೋಣ...

ಜಾಂಡೀಸ್‌ಗೆ ರಾಮಬಾಣ
ಕಾಮಾಲೆ ರೋಗಕ್ಕೆ ಆರಂಭದಲ್ಲೇ ಸರಿಯಾದ ಚಿಕಿತ್ಸೆ ನೀಡದಿದ್ದಲ್ಲಿ ದೇಹಕ್ಕೆ ಹಾನಿಕಾರಕವಾಗಬಹುದು. ಇದನ್ನು ತಡೆಯಲು ಲಿವರ್ ಆರೋಗ್ಯಕರವಾಗಿರುವುದು ಕೂಡ ಅಷ್ಟೇ ಮುಖ್ಯ. ಆಗಾಗ ಹಾಗಲಕಾಯಿ ಜ್ಯೂಸ್ ಮಾಡಿ ಕುಡಿಯುವುದರಿಂದ ಇದನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ.

ಯಕೃತ್ತಿನ ಜೀವಕೋಶಗಳು ಮರುಜೀವಪಡೆಯುತ್ತವೆ
ಯಕೃತ್ತನ್ನು ಸದಾ ಚಟುವಟಿಕೆ ಭರಿತವಾಗಿ ಇಡುವಲ್ಲಿ ಕಹಿ ಜ್ಯೂಸ್ ಅನುಕೂಲಕರ. ಒಂದು ಕಪ್ ಕಹಿ ಜ್ಯೂಸ್ ಸೇವಿಸಿದರೆ ಯಕೃತ್ತಿನ ಜೀವಕೋಶಗಳು ಮರುಜೀವಪಡೆಯುತ್ತವೆ. ಜೊತೆಗೆ ನಿಮ್ಮ ಲಿವರ್ ಹೆಚ್ಚು ಬಲಯುತವಾಗುತ್ತದೆ.

ಯಕೃತ್ತಿನ ಸಮಸ್ಯೆಗೆ ಪರಿಹಾರ
ಕಹಿ ಜ್ಯೂಸ್ ಸೇವಿಸುವುದರಿಂದ ಯಕೃತ್ತು ದೊಡ್ಡದಾಗುವ ಸಮಸ್ಯೆ ಪರಿಹರಿಸಬಹುದು. ಯಕೃತ್ತಿನ ಸಮಸ್ಯೆ ಇತರ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ರೀತಿಯ ಸಮಸ್ಯೆಗಳನ್ನು ಹಾಗಲಕಾಯಿ ಜ್ಯೂಸ್ ಅಥವಾ ಬೇವಿನ ಜ್ಯೂಸ್ ಕುಡಿಯುವುದರ ಮೂಲಕ ತಡೆಗಟ್ಟಬಹುದು.

ಲಿವರ್ ಹಾನಿ ಆಗುವುದನ್ನು ತಪ್ಪಿಸುತ್ತದೆ
ಅಲ್ಕೋಹಾಲ್ ಸೇವನೆಯಿಂದ ಅಥವಾ ಸಿಗರೇಟ್ ಮತ್ತು ಅಧಿಕ ಖಾರದ ಪದಾರ್ಥಗಳ ಸೇವನೆಯಿಂದ ಲಿವರ್ ಫೈಲ್ಯುರ್ ಆಗುವ ಸಾಧ್ಯತೆ ಇರುತ್ತದೆ. ಮೊದಲೇ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸೂಕ್ತ. ಕಹಿ ಜ್ಯೂಸಿನಲ್ಲಿ ಉರಿಯೂತವನ್ನು ತಡೆಗಟ್ಟುವ ಗುಣ ಇರುವುದರಿಂದ ಲಿವರ್ ಹಾನಿ ಆಗುವ ತೊಂದರೆಯನ್ನು ತಡೆಯಬಹುದು.

ಯಕೃತ್ತನ್ನು ಸ್ವಚ್ಛಗೊಳಿಸುತ್ತದೆ
ಹಾಗಲಕಾಯಿ ಜ್ಯೂಸ್ ಸೇವನೆಯಿಂದ ಯಕೃತ್ತು ಸ್ವಚ್ಛಗೊಳಿಸಿ ರಕ್ತದಲ್ಲಿರುವ ನಂಜಿನ ಅಂಶವನ್ನು ಹೊರಹಾಕಲು ಸಹಾಯಕವಾಗುತ್ತದೆ. ಲಿವರ್ ಸರಿಯಾಗಿ ಕೆಲಸ ಮಾಡಲು ಮತ್ತು ಚಟುವಟಿಕೆಯಿಂದ ಇರಲು ಇದು ಸಹಕರಿಸುತ್ತದೆ.

ಮಧುಮೇಹ ತಡೆಯಲು ಸಹಕಾರಿ
ಕಹಿ ಜ್ಯೂಸ್ ಕೇವಲ ಲಿವರ್‌ಗೆ ಮಾತ್ರವಲ್ಲ ಮಧುಮೇಹ ತಡೆಗಟ್ಟಲೂ ಕೂಡ ಸಹಾಯಕವಾಗುತ್ತದೆ.ಕಹಿಯಾಗಿರುವ ಹಾಗಲಕಾಯಿ ಮತ್ತು ಬೇವಿನ ಜ್ಯೂಸಿನಲ್ಲಿರುವ ಹೈಪೋಗ್ಲಿಸಮಿಕ್ ಅಂಶ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.ಜೊತೆಗೆ ರಕ್ತದಲ್ಲಿ ಸಕ್ಕರೆ ಅಂಶವನ್ನು ಸಮತೋಲನದಲ್ಲಿ ಇಡುತ್ತದೆ.



Click it and Unblock the Notifications











