Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಸರ್ವರೋಗಕ್ಕೂ ಹಿತ್ತಲಗಿಡವೇ ಪರಿಣಾಮಕಾರಿ ಮನೆಮದ್ದು
ಆಧುನೀಕತೆ ನಮಗೆ ಹೊಸದಾದ ಪ್ರಪಂಚದ ಪರಿಚಯವನ್ನು ಮಾಡಿಕೊಟ್ಟಿದೆ. ನಮ್ಮ ದೈನಂದಿನ ಜೀವನ ಈ ತೆರನಾಗಿ ಮಾರ್ಪಾಡನ್ನು ಪಡೆದುಕೊಳ್ಳುತ್ತಿದ್ದು ಆಧುನಿಕವಾಗಿ ನಾವು ಬದಲಾಗುತ್ತಿದ್ದೇವೆ. ಆದರೆ ಈ ಲೋಕ ನಮಗೆ ಅನುಕೂಲಕರವಾಗಿ ಹೇಗೆ ಪ್ರತಿಕ್ರಿಯಿಸುತ್ತದೆಯೋ ಅಂತೆಯೇ ಅನಾನುಕೂಲವಾಗಿ ಕೂಡ ಕಾರ್ಯನಿರ್ವಹಿಸುತ್ತದೆ.
ಅತಿಯಾದ ಮಾರ್ಪಾಡಿನ ಪರಿಣಾಮ ಎಂಬಂತೆ ಸೋಮಾರಿತನ ನಮ್ಮನ್ನು ಬಹುವಾಗಿ ಆವರಿಸಿಕೊಳ್ಳುತ್ತಿದೆ. ಎಲ್ಲಾ ಕೆಲಸವನ್ನು ಯಂತ್ರಗಳನ್ನು ಅವಲಂಬಿಸಿ ನಾವು ಮಾಡಿಕೊಳ್ಳುತ್ತಿರುವುದರಿಂದ ಯಾಂತ್ರಿಕ ಜೀವನ ನಮ್ಮ ಪಾಲಿಗೆ ಮುಳುವಾಗಿಬಿಟ್ಟಿದೆ. ಇದರಿಂದಾಗಿ ರೋಗ ರುಜಿನಗಳ ಗೂಡು ನಾವಾಗಿ ಬಿಟ್ಟಿದ್ದೇವೆ. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳಲಾರದಷ್ಟು ಕಂಗಾಲಾಗಿ ನಾವು ಬದಲಾಗುತ್ತಿದ್ದೇವೆ. ಇದರಿಂದಾಗಿ ಸಣ್ಣ ಕಾಯಿಲೆಗಳಿಗೂ ದುಬಾರಿ ಬೆಲೆಯ ಔಷಧವನ್ನು ಪಡೆದುಕೊಳ್ಳುವ ಸ್ಥಿತಿ ಬಂದೊದಗಿಬಿಟ್ಟಿದೆ.
ಆದರೂ ಇನ್ನೂ ಕಾಲಮಿಂಚಿಲ್ಲ. ಇಂಗ್ಲೀಷ್ ಔಷಧಕ್ಕೆ ತಿಲಾಂಜಲಿ ಇಟ್ಟು ಹಿತ್ತಲ ಮದ್ದನ್ನೇ ಸರ್ವರೋಗಕ್ಕೂ ರಾಮಬಾಣವಾಗಿ ಬಳಬಹುದಾಗಿದೆ. ನೀವು ನಿಯಮಿತವಾಗಿ ಬಳಸುವ ಸಾಂಬಾರ ಪದಾರ್ಥಗಳು, ತರಕಾರಿ, ಹಣ್ಣುಹಂಪಲುಗಳೇ ನಿಮ್ಮನ್ನು ಕಾಡುವ ರೋಗಗಳಿಗೆ ರಾಮಬಾಣವಾಗಿದೆ. ಅದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ ನೋಡಿ..
ಅಜೀರ್ಣ ಸಮಸ್ಯೆಗೆ ಜೇನು

ಜೇನನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‍ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ.
ಜಠರ ಮತ್ತು ಕರುಳುಗಳಲ್ಲಿ ಸಾಕಷ್ಟು ಪ್ರಮಾಣದ ಜಠರರಸ ಉತ್ಪತ್ತಿಯಾಗದೇ ಅಜೀರ್ಣದ ತೊಂದರೆ ಅನುಭವಿಸುವವರು ಊಟಕ್ಕೂ ಮೊದಲು ಕೊಂಚ ಜೇನು ಸೇವಿಸುವುದರಿಂದ ಉತ್ತಮ ಪರಿಹಾರ ದೊರಕುತ್ತದೆ.
ರೋಗ ನಿರೋಧ ಶಕ್ತಿ ಹೆಚ್ಚಿಸುವ ಮೂಲಂಗಿ ಎಲೆಗಳು
ಮೂಲಂಗಿ ಎಲೆಗಳು ಸಮೃದ್ಧವಾದ ಬೀಟಾ ಕೆರೋಟಿನ್‌ಗಳ ಜೊತೆ (ವಿಟಮಿನ್ ಎ ನ ನಿಷ್ಕ್ರಿಯ ರೂಪ) ಜೊತೆಗೆ ವಿಟಮಿನ್ ಕೆ ಮತ್ತು ಸಿ ಯನ್ನು ಕೂಡ ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿದೆ, ಅಷ್ಟೇ ಏಕೆ ಕ್ಯಾಲ್ಸಿಯಂ ಮತ್ತು ನಾರಿನಂಶವನ್ನು ಕೂಡ ಅಗಣಿತ ಪ್ರಮಾಣದಲ್ಲಿ ತನ್ನಲ್ಲಿರಿಸಿಕೊಂಡಿದೆ. ಇವುಗಳಲ್ಲಿರುವ ಪೋಷಕಾಂಶಗಳು ಮೂಳೆಗಳಿಗೆ, ಕಣ್ಣುಗಳಿಗೆ, ರಕ್ತಕ್ಕೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿರುತ್ತವೆ.
ಮಧುಮೇಹ ಹಾಗೂ ರಕ್ತದೊತ್ತಡಕ್ಕೆ ಬಾದಾಮಿ
ಕಡಿಮೆ ಕ್ಯಾಲರಿವುಳ್ಳ ಆಹಾರದೊ೦ದಿಗೆ ನೆನೆಸಿಟ್ಟಿರುವ ಬಾದಾಮಿ ಕಾಳುಗಳನ್ನು ಸೇವಿಸಿದಲ್ಲಿ, ಅವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅ೦ಶ, ಇನ್ಸುಲಿನ್‌ನ ಅ೦ಶ, ಹಾಗೂ ಸೋಡಿಯ೦ನ ಮಟ್ಟಗಳನ್ನು ತಗ್ಗಿಸುತ್ತವೆ ಹಾಗೂ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸ೦ಭಾವ್ಯವನ್ನು ನಿಯ೦ತ್ರಿಸಬಲ್ಲ ಮೆಗ್ನೀಷಿಯ೦ನ ಮಟ್ಟವನ್ನು ಶರೀರದಲ್ಲಿ ಹೆಚ್ಚಿಸುತ್ತವೆ.
ಹಲ್ಲುನೋವು, ಗಂಟಲು ನೋವಿಗೆ ಪೇರಳೆ ಎಲೆಗಳು
ಪೇರಳೆ ಎಲೆಗಳನ್ನು ಜಜ್ಜಿ ಕಡಿಮೆ ನೀರಿನಲ್ಲಿ ಬೇಯಿಸಿ ಸೋಸಿದ ನೀರಿನಿಂದ ಬೆಳಿಗ್ಗೆ ಮತ್ತು ಪ್ರತಿಬಾರಿ ಊಟದ ಬಳಿಕ ಮುಕ್ಕಳಿಸುವುದರಿಂದ ಬಾಯಿಯೊಳಗಣ ಬ್ಯಾಕ್ಟೀರಿಯಾಸಹಿತ ಇತರ ಕ್ರಿಮಿಗಳು ಹೊರದಬ್ಬಲ್ಪಡುತ್ತವೆ. ಇದೇ ಕಾರಣದಿಂದ ಹಲ್ಲುನೋವು, ಗಂಟಲು ನೋವು ಕಡಿಮೆಯಾಗುವುದು. ಒಸಡುಗಳ ನಡುವೆ ಮನೆಮಾಡಿಕೊಂಡು ಹಾಯಾಗಿದ್ದ ಕ್ರಿಮಿಗಳೆಲ್ಲಾ ನಾಶವಾಗಿರುವುದರಿಂದ ಒಸಡುಗಳು ಪುನಃಶ್ಚೇತನಗೊಳ್ಳುವುವು. ಇದೇ ಕಾರಣದಿಂದಾಗಿ ಹಲವು ಆಯುರ್ವೇದ ಹಲ್ಲು ಮಾರ್ಜಕಗಳಲ್ಲಿ ಪೇರಳೆ ಎಲೆಗಳನ್ನು ಬಳಸುತ್ತಾರೆ. ಪೇರಳೆ ಎಲೆಗಳನ್ನು ಜಜ್ಜಿ ಗಾಢವಾದ ಮಿಶ್ರಣಮಾಡಿಕೊಂಡು ಹಲ್ಲುಜ್ಜುವ ಬ್ರಶ್ ಮೂಲಕ ನೇರವಾಗಿ ಹಲ್ಲು ಮತ್ತು ಒಸಡುಗಳನ್ನು ಉಜ್ಜಲೂ ಬಳಸಬಹುದು.
ಬೆಳ್ಳುಳ್ಳಿ
ಜ್ವರವಿದ್ದಾಗ ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಉಗುರುಬೆಚ್ಚನೆಯ ನೀರಿನೊಂದಿಗೆ ಸೇವಿಸಿದರೆ, ತ್ವರಿತವಾಗಿ ಜ್ವರ ಕಡಿಮೆಯಾಗಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪು ಕೇವಲ ರುಚಿಯನ್ನು ಹೆಚ್ಚಿಸುತ್ತದೆ ಎಂದು ಭಾವಿಸಿದರೆ ಅದು ದೊಡ್ಡ ತಪ್ಪಾಗುತ್ತದೆ. ಏಕೆಂದರೆ ಕೊತ್ತಂಬರಿ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಪೂರಕವಾಗಿವೆ. ಮುಖ್ಯವಾಗಿ ಚರ್ಮದ ತುರಿಕೆ, ರಕ್ತದಲ್ಲಿ ಹೆಚ್ಚಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಅತಿಸಾರ, ಬಾಯಿಯ ಹುಣ್ಣು, ರಕ್ತಹೀನತೆ, ಅಜೀರ್ಣ, ಋತುಚಕ್ರದಲ್ಲಿ ಏರುಪೇರು, ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಏರುಪೇರು ಹಾಗೂ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಕೊತ್ತಂಬರಿ ಸೊಪ್ಪು ಉಪಯುಕ್ತವಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications




