Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಇವು ಅಂತಿಂಥ ಮನೆಮದ್ದುಗಳಲ್ಲ, ಆರೋಗ್ಯದ ಕೀಲಿ ಕೈ
ಆಧುನೀಕತೆ ನಮಗೆ ಹೊಸದಾದ ಪ್ರಪಂಚದ ಪರಿಚಯವನ್ನು ಮಾಡಿಕೊಟ್ಟಿದೆ. ನಮ್ಮ ದೈನಂದಿನ ಜೀವನ ಈ ತೆರನಾಗಿ ಮಾರ್ಪಾಡನ್ನು ಪಡೆದುಕೊಳ್ಳುತ್ತಿದ್ದು ಆಧುನಿಕವಾಗಿ ನಾವು ಬದಲಾಗುತ್ತಿದ್ದೇವೆ. ಆದರೆ ಈ ಲೋಕ ನಮಗೆ ಅನುಕೂಲಕರವಾಗಿ ಹೇಗೆ ಪ್ರತಿಕ್ರಿಯಿಸುತ್ತದೆಯೋ ಅಂತೆಯೇ ಅನಾನುಕೂಲವಾಗಿ ಕೂಡ ಕಾರ್ಯನಿರ್ವಹಿಸುತ್ತದೆ. ಅತಿಯಾದ ಮಾರ್ಪಾಡಿನ ಪರಿಣಾಮ ಎಂಬಂತೆ ಸೋಮಾರಿತನ ನಮ್ಮನ್ನು ಬಹುವಾಗಿ ಆವರಿಸಿಕೊಳ್ಳುತ್ತಿದೆ.
ಎಲ್ಲಾ ಕೆಲಸವನ್ನು ಯಂತ್ರಗಳನ್ನು ಅವಲಂಬಿಸಿ ನಾವು ಮಾಡಿಕೊಳ್ಳುತ್ತಿರುವುದರಿಂದ ಯಾಂತ್ರಿಕ ಜೀವನ ನಮ್ಮ ಪಾಲಿಗೆ ಮುಳುವಾಗಿಬಿಟ್ಟಿದೆ. ಇದರಿಂದಾಗಿ ರೋಗ ರುಜಿನಗಳ ಗೂಡು ನಾವಾಗಿ ಬಿಟ್ಟಿದ್ದೇವೆ. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳಲಾರದಷ್ಟು ಕಂಗಾಲಾಗಿ ನಾವು ಬದಲಾಗುತ್ತಿದ್ದೇವೆ. ಇದರಿಂದಾಗಿ ಸಣ್ಣ ಕಾಯಿಲೆಗಳಿಗೂ ದುಬಾರಿ ಬೆಲೆಯ ಔಷಧವನ್ನು ಪಡೆದುಕೊಳ್ಳುವ ಸ್ಥಿತಿ ಬಂದೊದಗಿಬಿಟ್ಟಿದೆ. ಆದರೂ ಇನ್ನೂ ಕಾಲಮಿಂಚಿಲ್ಲ. ಇಂಗ್ಲೀಷ್ ಔಷಧಕ್ಕೆ ತಿಲಾಂಜಲಿ ಇಟ್ಟು ಹಿತ್ತಲ ಮದ್ದನ್ನೇ ಸರ್ವರೋಗಕ್ಕೂ ರಾಮಬಾಣವಾಗಿ ಬಳಬಹುದಾಗಿದೆ.
ಇವು ತೊಂದರೆಯನ್ನು ನಿವಾರಿಸುವುದು ಮಾತ್ರವಲ್ಲ, ಜೀವನದಲ್ಲಿ ಮುಂದೆ ಇದೇ ತೊಂದರೆ ಎದುರಾದರೆ ಎದುರಿಸಲು ಶಕ್ತವಾಗುವಂತೆ ದೇಹದ ರೋಗನಿರೋಧಕ ವ್ಯವಸ್ಥೆಯನ್ನೂ ಬಲಪಡಿಸುತ್ತವೆ. ಅದರಲ್ಲೂ ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಆರು ಪ್ರಮುಖ ವಿಧಾನಗಳು ಸಾಮಾನ್ಯವಾಗಿ ಎಲ್ಲರೂ ಎದುರಿಸುವ ತೊಂದರೆಗಳನ್ನು ಹತ್ತಿಕ್ಕುತ್ತವೆ. ಇವು ಯಾವುವು ಎಂಬುದನ್ನು ಮುಂದೆ ಓದಿ..

ಬಾಯಿಯೊಳಗಣ ಹುಣ್ಣುಗಳಿಗೆ
ಬಾಯಿಯೊಳಗೆ, ಅದರಲ್ಲೂ ವಿಶೇಷವಾಗಿ ಕೆನ್ನೆ, ತುಟಿಗಳ ಒಳಭಾಗದಲ್ಲಿ ವೃತ್ತಾಕಾರದ ಹುಣ್ಣು ಆಗಿದ್ದರೆ ಚೆನ್ನಾಗಿ ಕಳಿತ ಬಾಳೆಹಣ್ಣನ್ನು ತಿನ್ನುವುದರಿಂದ ಕೂಡಲೇ ಗುಣವಾಗುತ್ತದೆ. ಉತ್ತಮ ಪರಿಣಾಮಕ್ಕಾಗಿ ಬಾಳೆಹಣ್ಣನ್ನು ಕಿವುಚಿ ಇದರ ಲೇಪನವನ್ನು ಹುಣ್ಣು ಇರುವ ಭಾಗಕ್ಕೆ ಹಚ್ಚುವುದು ಉತ್ತಮ. ರಾತ್ರಿ ಮಲಗುವ ಕೊಂಚ ಮೊದಲು ತೆಳುವಾಗಿ ಹಚ್ಚಿ ಮಲಗುವುದರಿಂದ ಉರಿ ಶೀಘ್ರವೇ ಕಡಿಮೆಯಾಗುತ್ತದೆ.

ಕೂದಲು ಬೇಗನೇ ನೆರೆಯತೊಡಗಿದಾಗ
ಮೂವತ್ತು ದಾಟುತ್ತಿದ್ದಂತೆಯೇ ಕೂದಲುಗಳು ಅಲ್ಲಲ್ಲಿ ನೆರೆಯಲು ತೊಡಗಿದ್ದರೆ ಆತಂಕ ಎದುರಾಗುತ್ತದೆ. ಇದನ್ನು ನಿವಾರಿಸಲು ಕೆಲವು ಒಣ ನೆಲ್ಲಿಕಾಯಿಗಳನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ. ಚೆನ್ನಾಗಿ ಕುದಿದ ಬಳಿಕ ತಣಿಸಿ ಈ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳಿ.

ಅಧಿಕ ರಕ್ತದೊತ್ತಡಕ್ಕೆ
ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಹಾಲಿನೊಂದಿಗೆ ಒಂದು ನೆಲ್ಲಿಕಾಯಿಯನ್ನು ನಿತ್ಯವೂ ಸೇವಿಸಿ. ಇದರಿಂದ ರಕ್ತದೊತ್ತಡ ಶೀಘ್ರವೇ ಸಾಮಾನ್ಯಗತಿಗೆ ಬರುತ್ತದೆ. ಉತ್ತಮ ಪರಿಣಾಮಕ್ಕಾಗಿ ಬೆಳಗ್ಗಿನ ಹೊತ್ತಿನಲ್ಲಿ ಸೇವಿಸಿ.

ಗಂಟಲ ಬೇನೆಗಾಗಿ
ಗಂಟಲ ಒಳಗೆ ಕೆರೆತ, ಕೆಮ್ಮು, ಕಫ ಬಾಧಿಸುತ್ತಿದ್ದರೆ ಕೆಲವು ಪುದಿನಾ ಎಲೆಗಳನ್ನು ಹಸಿಯಾಗಿ ಅಗಿದು ನುಂಗುವುದು ಉತ್ತಮ ಪರಿಹಾರವಾಗಿದೆ. ಬದಲಿಗೆ ತುಳಸಿ ಎಲೆಗಳನ್ನು ನೀರಿನಲ್ಲಿ ಹಾಕಿ ಕೊಂಚಕಾಲ ಕುದಿಸಿ. ಬಳಿಕ ಸೋಸಿದ ಈ ನೀರು ಉಗುರುಬೆಚ್ಚಗಾಗಿರುವಾಲೇ ಮುಖ ಮೇಲೆತ್ತಿ ಗಂಟಲಿನೊಳಗೆ ಗಲಬರಿಸಿ. (ಗಳಗಳ ಮಾಡಿ)

ಮಹಿಳೆಯರ ಮಾಸಿಕ ದಿನಗಳ ನೋವಿಗಾಗಿ
ಮಹಿಳೆಯರು ಅನುಭವಿಸುವ ಕೆಳಹೊಟ್ಟೆ ನೋವು ಮತ್ತು ಸೆಡೆತವನ್ನು ಕಡಿಮೆಗೊಳಿಸಲು ಒಂದು ಲೋಟ ತಣ್ಣೀರಿನಲ್ಲಿ ಸುಮಾರು ಮೂರು ಲಿಂಬೆಹಣ್ಣುಗಳ ರಸವನ್ನು ಹಿಂಡಿ ಗಟಗಟನೇ ಕುಡಿಯಿರಿ.

ಕಣ್ಣುಗಳ ಕೆಳಭಾಗದ ಕಪ್ಪು ಕಲೆಗಳಿಗಾಗಿ
ಕಣ್ಣುಗಳ ಕೆಳಗಿನ ಚರ್ಮ ತೀರಾ ತೆಳುವಾಗಿದ್ದು ಹೊರಚರ್ಮ ಮತ್ತು ಒಳಚರ್ಮದ ಪದರಗಳು ತೀರಾ ಹತ್ತಿರವಿರುವುದರಿಂದ ಈ ಭಾಗ ಸುಲಭವಾಗಿ ಕಪ್ಪಗಾಗುತ್ತದೆ. ಇದಕ್ಕಾಗಿ ಒಂದು ಚಮಚ ಕಿತ್ತಳೆ ಹಣ್ಣಿನ ರಸದಲ್ಲಿ ಕೆಲವು ಹನಿ ಗ್ಲಿಸರಿನ್ ಹಾಕಿ ಮಿಶ್ರಣಮಾಡಿ ಕಣ್ಣುಗಳ ಕೆಳಭಾಗಕ್ಕೆ ಹಚ್ಚಿ. ಸುಮಾರು ಇಪ್ಪತ್ತು ನಿಮಿಷ ಅಥವಾ ಅರ್ಧಘಂಟೆಯ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇಂತಹ ಉಪಯುಕ್ತ ಮಾಹಿತಿಗಳು ನಿಮ್ಮಲ್ಲಿದ್ದರೆ ದಯವಿಟ್ಟು ಕೆಳಗಿನ ಕಮೆಂಟ್ (ಅಭಿಪ್ರಾಯ) ಸೂಚಿಸುವ ಸ್ಥಳದಲ್ಲಿ ಬರೆದು ಕಳುಹಿಸಿ.



Click it and Unblock the Notifications
