Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಇಂತಹ ಹವ್ಯಾಸಗಳು ಸ್ಥೂಲಕಾಯಕ್ಕೆ ಆಹ್ವಾನ ನೀಡಬಹುದು!
ಸ್ಥೂಲಕಾಯ ಇಂದು ಎಲ್ಲರ ಮನೆಯ ತೊಂದರೆಯಾಗಿದೆ. ಹೆಚ್ಚಿರುವ ಸೌಲಭ್ಯ, ಲಭ್ಯವಾಗುತ್ತಿರುವ ಉತ್ತಮ ಆಹಾರ, ಕಡಿಮೆಯಾಗುತ್ತಿರುವ ದೈಹಿಕ ಚಟುವಟಿಕೆಗಳು ಸ್ಥೂಲಕಾಯ ಆವರಿಸುವ ಸಂಭವವನ್ನು ಹೆಚ್ಚುಮಾಡುತ್ತಿವೆ. ಆದರೆ ನಮ್ಮ ಕೆಲವು ಅಭ್ಯಾಸಗಳೂ ಸ್ಥೂಲಕಾಯವನ್ನು ಹೆಚ್ಚಿಸುತ್ತವೆ. ಅದರಲ್ಲೂ ಊಟದ ಬಳಿಕ ನಮಗೆ ಗೊತ್ತಿಲ್ಲದೇ ನಮ್ಮ ಕೆಲವು ಹವ್ಯಾಸಗಳು ಸ್ಥೂಲಕಾಯವನ್ನು ಬೇಗನೇ ಬನ್ನಿ ಎಂದು ಕರೆಯುತ್ತವೆ. ಕೆಲವು ಅಭ್ಯಾಸಗಳಂತೂ ನಮ್ಮ ಆಹಾರ ಪಚನಗೊಳ್ಳುವ ಕ್ರಿಯೆಗೆ ಅಡ್ಡಿಪಡಿಸುವುದರ ಜೊತೆಗೇ ಆರೋಗ್ಯವನ್ನೂ ಕೆಡಿಸಬಹುದು.
ಸ್ಥೂಲಕಾಯದಿಂದ ಮುಕ್ತಿಪಡೆಯಲು ಊಟ ಬಿಡುವುದು ಸರ್ವಥಾ ಉತ್ತಮ ಮಾರ್ಗವಲ್ಲ. ಬದಲಿಗೆ ಅನಾರೋಗ್ಯಕರವೂ, ಅಪಾಯಕರವೂ ಆಗಿದೆ. ಅಂತೆಯೇ ಸೂಕ್ತ ಆಹಾರ ಸೇವಿಸುವುದರ ಜೊತೆಗೆ ಸೂಕ್ತವಾದ ಅಭ್ಯಾಸಗಳನ್ನು ಅನುಸರಿಸುವುದು, ಸಾಕಷ್ಟು ವ್ಯಾಯಾಮ ಮಾಡುವುದು ಉತ್ತಮವಾದ ಅಭ್ಯಾಸವಾಗಿದೆ. ಅಲ್ಲದೇ ಜೀರ್ಣವಾದ ಆಹಾರದ ಬಹುಭಾಗ ಕೊಬ್ಬಾಗಿ ಪರಿವರ್ತಿತವಾಗಿ ತೂಕ ಹೆಚ್ಚುವುದನ್ನು ತಡೆಯುವುದರ ಮೂಲಕ ಸ್ಥೂಲಕಾಯದಿಂದ ಮುಕ್ತಿ ಪಡೆಯಬಹುದು. ಹೊಟ್ಟೆಯ ಬೊಜ್ಜಿನ ಸಮಸ್ಯೆ: ಆರೋಗ್ಯಕ್ಕೆ ಕಾದಿದೆ ಗಂಡಾಂತರ!
ಉತ್ತಮ ಆರೋಗ್ಯಕ್ಕೆ ಕಡಿಮೆ ಪ್ರಮಾಣದ್ದಾದರೂ ಪೌಷ್ಟಿಕವಾದ ಆಹಾರವನ್ನು ಸರಿಯಾದ ಸಮಯದಲ್ಲಿ ಸೇವಿಸುವುದು ಅಗತ್ಯವಾಗಿದೆ. ನಾಲಿಗೆಯನ್ನು ಮೆಚ್ಚಿಸಲು ಭಾರೀ ಪ್ರಮಾಣದಲ್ಲಿ ಸೇವಿಸುವ ಊಟ ನಿಮ್ಮನ್ನು ಸೋಮಾರಿಯಾಗಿಯೂ, ಸ್ಥೂಲಕಾಯದವರನ್ನಾಗಿಯೂ ಪರಿವರ್ತಿಸುತ್ತದೆ. ಚಿಟಿಕೆ ಹೊಡೆದಷ್ಟು ಸುಲಭವಾಗಿ ಹೊಟ್ಟೆಯ ಬೊಜ್ಜನ್ನು ಕರಗಿಸಿಕೊಳ್ಳಿ!
ಊಟದ ಬಳಿಕ ತಕ್ಷಣ ಹಣ್ಣುಗಳನ್ನು ಮತ್ತು ಹಸಿತರಕಾರಿಗಳನ್ನು ಸೇವಿಸದಿರಿ ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಇಂತಹವೇ ಕೆಲವು ಅನಾರೋಗ್ಯಕರ ಅಭ್ಯಾಸಗಳು ನಿಮ್ಮನ್ನು ಸ್ಥೂಲಕಾಯದತ್ತ ದೂಡುತ್ತವೆ. ಇವು ಯಾವುದು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ತಿಳಿದುಕೊಳ್ಳೋಣ...

ಊಟದ ಬಳಿಕ ನಿದ್ರಿಸುವುದು
ಆಂಗ್ಲ ಸುಭಾಷಿತವೊಂದರ ಪ್ರಕಾರ ಮಧ್ಯಾಹ್ನದ ಊಟದ ಬಳಿಕ ಸ್ವಲ್ಪ ನಿದ್ದೆ ಮಾಡಿ, ರಾತ್ರಿಯೂಟದ ಬಳಿಕ ಒಂದು ಮೈಲಿ ನಡೆಯಿರಿ, ಇದರಿಂದ ಆರೋಗ್ಯ ವೃದ್ಧಿಸುತ್ತದೆ ಎನ್ನುತ್ತದೆ. ಆದರೆ ವಾಸ್ತವವಾಗಿ ಮಧ್ಯಾಹ್ನದ ಊಟವಾಗಲೀ, ರಾತ್ರಿಯೂಟವಾಗಲೀ ಊಟ ಮುಗಿಸಿದ ತಕ್ಷಣ ಮಲಗುವುದರಿಂದ ಹೊಟ್ಟೆಯುಬ್ಬರಿಕೆಯ ಸಾಧ್ಯತೆ ಹೆಚ್ಚಾಗುತ್ತದೆ. ಮುಂದೆ ಓದಿ

ಊಟದ ಬಳಿಕ ನಿದ್ರಿಸುವುದು
ಅಲ್ಲದೇ ಇದರಿಂದ ಸ್ಥೂಲಕಾಯ ಆವರಿಸುವ ಸಾಧ್ಯತೆ ಅತ್ಯಂತ ಹೆಚ್ಚಾಗುತ್ತದೆ. ಆದ್ದರಿಂದ ಊಟವಾದ ಎರಡು ಘಂಟೆಗಳವರೆಗೆ ನಿದ್ದೆ ಮಾಡಬೇಡಿ ಎಂದು ಸಂಶೋಧನೆ ತಿಳಿಸುತ್ತದೆ.

ಊಟದ ಬಳಿಕ ಚಟುವಟಿಕೆಯಿಲ್ಲದೇ ಇರುವುದು
ಸಾಮಾನ್ಯವಾಗಿ ಊಟದ ಬಳಿಕ ಕೊಂಚ ವಿರಮಿಸಲು ಎಲ್ಲರೂ ಹೇಳುತ್ತಾರೆ. ಆದರೆ ಊಟವಾದ ಬಳಿಕ ಕೇವಲ ಐದು ನಿಮಿಷಗಳ ವಿಶ್ರಾಂತಿ ಪಡೆದು ಸುಮಾರು ಹದಿನೈದು ಅಥವಾ ಇಪ್ಪತ್ತು ನಿಮಿಷಗಳ ಕಾಲ ನಡೆದಾಡುವುದು ಪಚನಕ್ರಿಯೆಯನ್ನು ಉತ್ತಮಗೊಳಿಸುತ್ತದೆ.

ಊಟದ ಬಳಿಕ ಚಟುವಟಿಕೆಯಿಲ್ಲದೇ ಇರುವುದು
ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದು ಮತ್ತು ಹೊಟ್ಟೆಯುಬ್ಬರದಿಂದ ತಡೆದಂತಾಗುತ್ತದೆ. ಆದರೆ ವೇಗದ ಓಟ, ಭಾರ ಎತ್ತುವುದು, ಹೆಚ್ಚಿನ ಶ್ರಮದಾಯಕ ವ್ಯಾಯಾಮ ಅಥವಾ ಚಟುವಟಿಕೆಗಳನ್ನು ಮಾಡಬಾರದು.

ಸೊಂಟದ ಬೆಲ್ಟ್ ಬಿಚ್ಚುವುದು
ಊಟಕ್ಕೂ ಮುಂಚೆ ಬೆಲ್ಟ್ ಎಷ್ಟು ಬಿಗಿಯಿತ್ತೋ ಊಟದ ಬಳಿಕವೂ ಅಷ್ಟೇ ಇರುವುದು ಮುಖ್ಯ. ಏಕೆಂದರೆ ಬೆಲ್ಟ್ ಸಡಲಿಸಿದರೆ ಹೊಟ್ಟೆ ಇನ್ನಷ್ಟು ವಿಸ್ತಾರಗೊಳ್ಳುವ ಮೂಲಕ ಹೊಟ್ಟೆಯ ಸುತ್ತಲ ಮಾಂಸಖಂಡಗಳು ಸಡಿಲಗೊಳ್ಳುತ್ತವೆ ಮತ್ತು ಇನ್ನಷ್ಟು ವಿಸ್ತಾರವಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಬೆಲ್ಟ್ ಹಾಗೆಯೇ ಇರಲಿ.

ಊಟದ ಬಳಿಕ ಸ್ನಾನ ಮಾಡುವುದು
ದಿನದ ಯಾವುದೇ ಹೊತ್ತಿನಲ್ಲಿ ಆಹಾರ ಸೇವಿಸಿದ ಬಳಿಕ ಸ್ನಾನ ಮಾಡುವುದು ಅತ್ಯಂತ ಕೆಟ್ಟ, ಅನಾರೋಗ್ಯಕರ ಮತ್ತು ಸ್ಥೂಲಕಾಯವನ್ನು ಹೆಚ್ಚಿಸುವ ಅಭ್ಯಾಸವಾಗಿದೆ. ಎಷ್ಟೋ ಧರ್ಮಗಳಲ್ಲಿ ಸ್ನಾನಕ್ಕೂ ಮೊದಲು ಊಟ ಮಾಡುವುದನ್ನೇ ನಿಷೇಧಿಸಲಾಗಿದೆ. ಊಟದ ಬಳಿಕ ರಕ್ತಸಂಚಾರದ ಬಹುಭಾಗ ಜೀರ್ಣಾಂಗಗಳಿಗೆ ನುಗ್ಗುವುದರಿಂದ ಇತರೆಡೆ ರಕ್ತಸಂಚಾರ ಕಡಿಮೆಯಾಗುತ್ತದೆ. ಈ ಹೊತ್ತಿನಲ್ಲಿ ಸ್ನಾನ ಮಾಡಿದರೆ ದೇಹದ ತಾಪಮಾನ ಥಟ್ಟನೇ ಕಡಿಮೆಯಾಗಿ ಜೀರ್ಣಾಂಗಗಳಿಗೆ ಹರಿಯುತ್ತಿರುವ ರಕ್ತವನ್ನು ಹಿಂದೆ ಪಡೆದು ಈ ಪರಿಸ್ಥಿತಿಯನ್ನು ನಿಭಾಯಿಸುವಂತೆ ಮೆದುಳು ಅನಿವಾರ್ಯವಾಗಿ ಸೂಚನೆ ನೀಡಾಬೇಕಾಗುತ್ತದೆ. ಮುಂದೆ ಓದಿ

ಊಟದ ಬಳಿಕ ಸ್ನಾನ ಮಾಡುವುದು
ಇದು ದೇಹದ ಎಲ್ಲಾ ವ್ಯವಸ್ಥೆಗಳನ್ನು ಏರುಪೇರಾಗಿಸಿ ದೀರ್ಘಾವಧಿಯಲ್ಲಿ ದೇಹಕ್ಕೆ ಹಲವು ತೊಂದರೆಗಳು ಬೇಗನೇ ಆವರಿಸಬಹುದು. ಮೂತ್ರಪಿಂಡಗಳ ವೈಫಲ್ಯ, ಮಧುಮೇಹ ಮೊದಲಾದವು ಚಿಕ್ಕವಯಸ್ಸಿಗೇ ಆವರಿಸಿಬಿಡುತ್ತವೆ. ಆದ್ದರಿಂದ ಎಂದಿಗೂ ಊಟದ ಬಳಿಕ ಸ್ನಾನ ಮಾಡಬೇಡಿ. ಕನಿಷ್ಠ ಎರಡು ಗಂಟೆಗಳ ಅಂತರ ಇರಲಿ. ಆರೋಗ್ಯಕರ ವಿಧಾನವೆಂದರೆ ಬೆಳಿಗ್ಗೆದ್ದ ಬಳಿಕ ಪ್ರಾತಃವಿಧಿಗಳನ್ನು ಪೂರೈಸಿ ಸ್ನಾನ ಮಾಡುವುದು. ಕೊಂಚ ಅಡ್ಡಾಟ ಅಥವಾ ವ್ಯಾಯಾಮದ ಬಳಿಕವೇ ಉಪಾಹಾರ ಸೇವಿಸುವುದು.

ಧೂಮಪಾನ ಮಾಡುವುದು
ಯಾವುದೇ ಹೊತ್ತಿನಲ್ಲಿ ಮಾಡಿದ ಧೂಮಪಾನ ದೇಹಕ್ಕೆ ಹಾನಿಕರವಾಗಿದೆ. ಆದರೆ ಊಟದ ಬಳಿಕ ತಕ್ಷಣ ಧೂಮಪಾನ ಮಾಡುವುದು ಅತಿ ಹೆಚ್ಚು ಅಪಾಯಕಾರಿ. ಏಕೆಂದರೆ ಧೂಮಪಾನದ ಮೂಲಕ ಶ್ವಾಸಕೋಶ, ಶ್ವಾಸನಾಳಗಳು ಕೆಡುವುದು ಮಾತ್ರವಲ್ಲ, ಹೊಟ್ಟೆಯಲ್ಲಿ ಆಮ್ಲೀಯತೆ, ಎದೆಯುರಿ ಮತ್ತು ಸ್ಥೂಲಕಾಯವನ್ನು ತರುತ್ತದೆ.ಮುಂದೆ ಓದಿ

ಧೂಮಪಾನ ಮಾಡುವುದು
ಎಷ್ಟೋ ವರ್ಷದಿಂದ ಧೂಮಪಾನ ಮಾಡುತ್ತಿದ್ದೇನೆ, ಇದುವರೆಗೆ ಏನೂ ಆಗಿಲ್ಲವಲ್ಲಾ ಎಂಬ ಮೊಂಡುವಾದವನ್ನು ಹೆಚ್ಚಿನ ಧೂಮಪಾನಿಗಳು ಮುಂದಿಡುತ್ತಾರೆ. ಆದರೆ ಇದರ ಪ್ರಭಾವ ಮುಂದೆ ಎಂದೋ ಥಟ್ಟನೇ ಒಮ್ಮೆಲೇ ಆಗುವುದರಿಂದ ಈ ಬಿಗುಮಾನ ಬೇಡ.

ವ್ಯಾಯಾಮ
ಊಟದ ಬಳಿಕ ಯಾವುದೇ ಭಾರೀ ವ್ಯಾಯಾಮ ಮಾಡುವುದು ಉತ್ತಮವಲ್ಲ. ಏಕೆಂದರೆ ವ್ಯಾಯಾಮದಿಂದ ದೇಹದ ತಾಪಮಾನ ಏರುತ್ತದೆ. ಇದರಿಂದಾಗಿ ಜೀರ್ಣಕ್ರಿಯೆಗೆ ಹೋಗಬೇಕಾಗಿದ್ದ ರಕ್ತ ಈ ತಾಪಮಾನವನ್ನು ಕಡಿಮೆಗೊಳಿಸಲು ಬಳಕೆಯಾಗುವುದರಿಂದ ದೇಹದ ವ್ಯವಸ್ಥೆ ಏರುಪೇರಾಗುತ್ತದೆ. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ ತಕ್ಷಣ ಹೊಟ್ಟೆಯಲ್ಲಿ ನೋವಾಗುವುದು.

ವ್ಯಾಯಾಮ
ಇದು ಅಪಾಯಕರ ಎಂದು ಮೆದುಳು ನೀಡುವ ಸೂಚನೆಯಾಗಿದೆ. ಇನ್ನೂ ಬಲವಂತವಾಗಿ ವ್ಯಾಯಾಮ ಮುಂದುವರೆಸಿದರೆ ಸ್ನಾಯು ಸೆಡೆತವೂ ಉಂಟಾಗಬಹುದು. ವೇಗದ ಓಟ, ಭಾರ ಎತ್ತುವುದು, ಬೇಗಬೇಗನೇ ನಡೆಯುವುದು ಮೊದಲಾದ ಯಾವುದೇ ಚಟುವಟಿಕೆಗಳನ್ನು ಮಾಡಬಾರದು.

ಹಣ್ಣು ಸೇವಿಸುವುದು
ಊಟದ ಬಳಿಕ ಹಣ್ಣುಗಳನ್ನು ಸೇವಿಸಬಾರದು ಎಂದು ಇತ್ತೀಚಿನ ಸಂಶೋಧನೆಗಳು ತಿಳಿಸುತ್ತವೆ. ಏಕೆಂದರೆ ಹಣ್ಣು ಮತ್ತು ಹಸಿ ತರಕಾರಿಗಳನ್ನು ಜೀರ್ಣಿಸಿಕೊಳ್ಳಲು ಜೀರ್ಣಾಂಗಗಳಿಗೆ ಕೊಂಚ ಹೆಚ್ಚಿನ ಶ್ರಮದ ಅಗತ್ಯವಿದ್ದು ಊಟದಲ್ಲಿ ಲಭ್ಯವಾದ ಆಹಾರವನ್ನು ಜೀರ್ಣಿಸಲು ವ್ಯಸ್ತವಾಗಿರುವುದರಿಂದ ಊಟದ ತಕ್ಷಣ ಸೇವಿಸಿದರೆ ಈ ಆಹಾರದ ಜೀರ್ಣಕ್ರಿಯೆಯೂ ನಿಧಾನಗೊಳ್ಳುತ್ತದೆ, ಹಣ್ಣುಗಳೂ ಜೀರ್ಣವಾಗುವುದಿಲ್ಲ.

ಹಣ್ಣು ಸೇವಿಸುವುದು
ಇದು ಅಜೀರ್ಣಕ್ಕೆ ಮೂಲವಾಗಿದೆ. ಆದ್ದರಿಂದ ಊಟವಾದ ಒಂದು ಘಂಟೆಯ ಬಳಿಕ ಹಣ್ಣುಮತ್ತು ತರಕಾರಿಗಳನ್ನು ಸೇವಿಸುವುದು ಉತ್ತಮ ಎಂದು ಸಂಶೋಧನೆಗಳು ತಿಳಿಸುತ್ತವೆ.



Click it and Unblock the Notifications











