Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಹುಳಿ ಸ್ವಾದಕ್ಕೆ ಹೆಸರಾಗಿರುವ ಟೊಮೇಟೊ ಹಣ್ಣಿನ ಪ್ರಯೋಜನಗಳೇನು?
ಟೊಮೇಟೊ ಹಣ್ಣು ಇಡೀ ಪ್ರಪಂಚದಲ್ಲಿ ತನ್ನ ರಸ ಮತ್ತು ಹುಳಿಯ ಸ್ವಾದಕ್ಕೆ ಹೆಸರಾಗಿರುವ ಹಣ್ಣು!. ಹೌದು, ನಮ್ಮ ಭಾರತೀಯ ಅಡುಗೆಗಳಲ್ಲಿ ಇದಕ್ಕೆ ತನ್ನದೆ ಆದ ಸ್ಥಾನಮಾನವಿದೆ. ಇದನ್ನು ಬಹುತೇಕ ಎಲ್ಲಾ ಬಗೆಯ ಅಡುಗೆಯಲ್ಲಿ ನಾವು ಬಳಸುತ್ತೇವೆ. ಇದರಲ್ಲಿ ಪೋಷಕಾಂಶಗಳ ಪ್ರಮಾಣ ಅಧಿಕವಾಗಿರುತ್ತದೆ.
ಆಹಾರಗಳಿಗೆ ಬಣ್ಣವನ್ನು ಮತ್ತು ರುಚಿಯನ್ನು ನೀಡುವುದರ ಜೊತೆಗೆ ಇದು ತನ್ನಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳ ಕಾರಣ ಸೂಪರ್ ಫುಡ್ ಆಗಿ ಗುರುತಿಸಿಕೊಂಡಿದೆ. ಇದರಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳನ್ನು ನೀವು ತಿಳಿದುಕೊಂಡರೆ ಅಚ್ಚರಿ ಪಡುವಿರಿ.

ಹೃದ್ರೋಗದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ
ಟೊಮೇಟೊಗಳಲ್ಲಿರುವ ವಿಟಮಿನ್‍ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ನಿಮಗೆ ಹೃದ್ರೋಗ ಬರದಂತೆ ಕಾಯುತ್ತವೆ. ವಿಶೇಷವಾಗಿ ಇದರಲ್ಲಿರುವ ಲೈಕೊಪೀನ್ ನಿಮ್ಮ ಹೃದಯದ ಗೋಡೆಗಳಲಿ ಆಕ್ಸಿಡೈಸಡ್ LDL ಬೆಳೆಯದಂತೆ ಕಾಪಾಡುತ್ತವೆ. ಜೊತೆಗೆ ಇವು ಮ್ಯಾಕ್ರೊಫೇಜ್‌ಗಳನ್ನು ನಿವಾರಿಸುತ್ತವೆ. ಇದರ ಜೊತೆಗೆ ಟೊಮೇಟೊದಲ್ಲಿರುವ ಬೀಟಾ ಕೆರೊಟಿನ್, ಲೈಕೊಪಿನ್, ಫೊಲಿಕ್ ಆಸಿಡ್, ಪೊಟಾಶಿಯಂ, ಫ್ಲಾವೊನಾಯ್ಡ್, ವಿಟಮಿನ್ ಸಿ ಮತ್ತು ವಿಟಮಿನ್ ಇ ಗಳು ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತವೆ ಮತ್ತು ಕಿರುತ್ತಟ್ಟೆಗಳ ಮೊತ್ತವನ್ನು ಸಹ ಕಡಿಮೆ ಮಾಡುತ್ತವೆ. ಪುದಿನ ಸೊಪ್ಪಿನ ಚಹಾ: ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!
ಕ್ಯಾನ್ಸರ್ ಬರದಂತೆ ತಡೆಯುತ್ತದೆ
ಟೊಮೇಟೊಗಳಲ್ಲಿರುವ ಅಧಿಕ ಆಂಟಿ ಆಕ್ಸಿಡೆಂಟ್‌ಗಳು ಮತ್ತು ಉರಿಬಾವು ನಿರೋಧಕಗಳು ನಮಗೆ ಕ್ಯಾನ್ಸರ್ ಬರದಂತೆ ತಡೆಯುತ್ತವೆ. ಪುರುಷರ ರೋಗಗಳ ತಜ್ಞರ ಪ್ರಕಾರ ಪ್ರತಿ ವಾರ 2-4 ಟೊಮೇಟೊಗಳನ್ನು ಸೇವಿಸುವುದರಿಂದ 35% ಪ್ರೋಸ್ಟೇಟ್ ಕ್ಯಾನ್ಸರ್ ಬರದಂತೆ ತಡೆಯಬಹುದು ಮತ್ತು 50% ಅಡ್ವಾನ್ಸ್‌ಡ್ ಪ್ರೋಸ್ಟೇಟ್ ಕ್ಯಾನ್ಸರ್ ಬರದಂತೆ ತಡೆಯಬಹುದಂತೆ.
ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ
ಟೊಮೇಟೊಗಳಲ್ಲಿ ಕಡಿಮೆ ಪ್ರಮಾಣದ ಕ್ಯಾಲೊರಿಗಳು ಇರುತ್ತವೆ. 100 ಗ್ರಾಂ ಟೊಮೇಟೊನಲ್ಲಿ ಕೇವಲ 18 ಕ್ಯಾಲೊರಿ ಇರುತ್ತದೆ. ಜೊತೆಗೆ ಇದರಲ್ಲಿರುವ ನಾರಿನಂಶಗಳು ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತವೆ. ಆಗ ನೀವು ಹೆಚ್ಚು ಊಟ ಸೇವಿಸುವುದಿಲ್ಲ.
ಮಲಬದ್ಧತೆಯನ್ನು ನಿವಾರಿಸುತ್ತದೆ
ನಿಮ್ಮ ಕೋಲನ್‌ನಲ್ಲಿ ಆಹಾರ ಸಿಕ್ಕಿ ಹಾಕಿಕೊಂಡಾಗ ಮಲಬದ್ಧತೆ ಕಾಡುತ್ತದೆ. ಆಗ ಇದು ನಿಮಗೆ ಅತ್ಯಂತ ಅಸೌಖ್ಯವನ್ನುಂಟು ಮಾಡುತ್ತದೆ. ಟೊಮೇಟೊಗಳಲ್ಲಿ ಅಧಿಕ ಪ್ರಮಾಣದ ನೀರಿನಂಶ ಇರುತ್ತದೆ ಮತ್ತು ಇದರಲ್ಲಿರುವ ನಾರಿನಂಶವು ನಿಮ್ಮ ಕೋಲನ್‌ನಲ್ಲಿರುವ ಆಹಾರ ನಿವಾರಣೆಯಾಗುವಂತೆ ಮಾಡುತ್ತದೆ. ಹೀಗೆ ಮಲಬದ್ಧತೆ ಸಹ ನಿವಾರಣೆಯಾಗುತ್ತದೆ. ಮನೆಯಂಗಳದಲ್ಲೇ ಬೆಳೆಸಬಹುದಾದ ಆರೋಗ್ಯಕಾರಿ ಸಂಜೀವಿನಿಗಳು!
ದೃಷ್ಟಿಯನ್ನು ಸುಧಾರಿಸುತ್ತದೆ
ಟೊಮೇಟೊಗಳಲ್ಲಿ ಕ್ಯಾರೆಟ್‌ನಷ್ಟು ವಿಟಮಿನ್ ಎ ಇರುವುದಿಲ್ಲ. ಆದರೂ ಸಹ ಅವು ಒಳ್ಳೆಯ ಪೋಷಕಾಂಶದ ಗಣಿಗಳು. ವಿಟಮಿನ್ ಎ ದೃಷ್ಟಿ ದೋಷವನ್ನು ನಿವಾರಿಸುತ್ತದೆ. ವಯಸ್ಸಾದಂತೆ ಕಂಡು ಬರುವ ದೃಷ್ಟಿ ದೋಷವನ್ನು ಟೊಮೇಟೊ ಸೇವಿಸುವುದರಿಂದ ಕಡಿಮೆ ಮಾಡಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

