Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕಡಿಮೆ ಕೊಬ್ಬಿನೊಂದಿಗೆ ಫಾಸ್ಟ್ ಫುಡ್ ಅನ್ನು ಸವಿಯುವ ಉಪಾಯಗಳು
ನಮ್ಮಲ್ಲಿ ಬಹುತೇಕ ಮಂದಿ ಫಾಸ್ಟ್ ಫುಡ್ ಪ್ರಿಯರು ಎಂಬುದರಲ್ಲಿ ಎರಡು ಮಾತಿಲ್ಲ. ಇದಕ್ಕಿರುವ ಒಂದು ಸವಿಯಾದ ಕಾರಣವೆಂದರೆ ಫಾಸ್ಟ್ ಫುಡ್ ಗಳು ತಿನ್ನಲು ರುಚಿಕರವಾಗಿರುತ್ತವೆ. ಆದರೆ, ಇಂತಹ ರುಚಿಯ ಹಿಂದಿರುವ ವಸ್ತುಗಳು ಕೊಬ್ಬು ಮತ್ತು ಉಪ್ಪು ಎಂಬುದು ಅನೇಕರಿಗೆ ಗೊತ್ತಿರುವುದಿಲ್ಲ.
ಆದಾಗ್ಯೂ, ನೀವು ಫಾಸ್ಟ್ ಫುಡ್ ಅನ್ನು ಸೇವಿಸುವುದನ್ನು ಮುಂದುವರಿಸಬಹುದು. ಫಾಸ್ಟ್ ಫುಡ್ ಅನ್ನು ತಯಾರಿಸುವಾಗ, ನೀವು ಯಾವಯಾವ ವಸ್ತುಗಳನ್ನು ಯಾವ ಪ್ರಮಾಣದಲ್ಲಿ ಉಪಯೋಗಿಸಿದ್ದೀರಿ ಎಂಬ ಅರಿವು ನಿಮಗಿದ್ದರೆ ಸಾಕು.
ತೂಕ ಇಳಿಸಲು ಸಹಕಾರಿ ಈ ಸೂಪರ್ ಫುಡ್‌ಗಳು
ಪರಿಮಾಣಾತ್ಮಕವಾಗಿ, McDonald's ಅವರ ಫಾಸ್ಟ್ ಫುಡ್‌ಗಳು ಮೂಲತಃ ದೊಡ್ಡ ಗಾತ್ರದವುಗಳಾಗಿದ್ದು, ತನ್ಮೂಲಕ ಅವು ಕೊಬ್ಬನ್ನೂ ಸಹ ಅಷ್ಟೇ ದೊಡ್ಡ ಪ್ರಮಾಣದಲ್ಲಿ ದೇಹಕ್ಕೆ ಪೂರೈಸುತ್ತವೆ. Big Mac ತಿನಿಸಿನಲ್ಲಿ 540 ಕ್ಯಾಲರಿಗಳು ಹಾಗೂ 34 ಗ್ರಾಂ ಗಳಷ್ಟು ಕೊಬ್ಬು ಇರುತ್ತದೆ.

ಇದರ ಬದಲಿಗೆ ಒಂದು hamburger ಮತ್ತು ಜೊತೆಗೆ ಒಂದು ಸಲಾಡ್ ಅನ್ನು ಸವಿಯಬಹುದು. ಇದರ ಸೇವನೆಯಿಂದ ನಿಮಗೆ Big Mac ತಿನಿಸನ್ನು ಸೇವಿಸಿದಷ್ಟೇ ತೃಪ್ತಿ ದೊರಕುತ್ತದೆ ಮತ್ತು ಜೊತೆಗೆ ನೀವು ಸುಮಾರು 200 ಕ್ಯಾಲರಿಗಳಷ್ಟು ಕೊಬ್ಬಿನ ಸೇವನೆಯನ್ನು ತಪ್ಪಿಸಿದಂತಾಗುತ್ತದೆ.
ಲಘುವಾದ ಸಿಹಿತಿನಿಸೊಂದನ್ನು ಸೇವಿಸಲು ನೀವು ಬಯಸುವಿರಾದರೆ McFlurry ಯ ಬದಲಿಗೆ ಒಂದು ಸಾದಾ ವೆನಿಲಾ ಕೋನ್ ಐಸ್ ಕ್ರೀಂ ಅನ್ನು ಸೇವಿಸಿರಿ ಮತ್ತು ತನ್ಮೂಲಕ 300 ಕ್ಯಾಲರಿಗಳ ಹೆಚ್ಚುವರಿ ಕೊಬ್ಬಿನ ಸೇವನೆಯನ್ನು ತಪ್ಪಿಸಿರಿ.
ಗಿಣ್ಣಿನೊoದಿಗೆ ಸೇವಿಸುವ Burger King's Double Whopper, ತನ್ನಲ್ಲಿ ಬೃಹತ್ ಗಾತ್ರದ ಸುಮಾರು 990 ಕ್ಯಾಲರಿಗಳು ಮತ್ತು 64 ಗ್ರಾಂ ಗಳಷ್ಟು ಒಳಗೊಂಡಿದೆ. I ಪ್ರಮಾಣದ ಕ್ಯಾಲರಿಯು ಒಂದಿಡೀ ದಿನದ ಅವಶ್ಯಕತೆಯನ್ನು ಪೂರೈಸಲು ಸಾಕಾಗುವಷ್ಟಾಗಿದೆ. ಅದ್ದರಿಂದ, ಇದನ್ನು ಹೊರತುಪಡಿಸಿ ಅಹಾರಪಟ್ಟಿಯಲ್ಲಿರುವ ಬೇರೆ ಯಾವುದೇ ತಿನಿಸಾದರೂ ಸೇವಿಸಲು ಉತ್ತಮವಾದುದಾಗಿದೆ.
ನಿಮಗೆ humburger ಅನ್ನು ಸೇವಿಸಲೇಬೇಕು ಎಂದೆನಿಸಿದಲ್ಲಿ, ಕೇವಲ 290 ಕ್ಯಾಲರಿಗಳು ಮತ್ತು 12 ಗ್ರಾಂ ಗಳಷ್ಟು ಕೊಬ್ಬುಳ್ಳ Whopper Jr. sandwich ಅನ್ನು mayo ರಹಿತವಾಗಿ ಪಡೆಯಿರಿ. ಹೆಸರೇ ಸೂಚಿಸುವಂತೆ, KFC ಯ F ಎಂಬ ಅಕ್ಷರವು Fried (ಕರಿದದ್ದು) ಎಂಬ ಅರ್ಥವನ್ನು ಹೊಂದಿದೆ. ಅಂತೆಯೇ KFC ಯಲ್ಲಿ ದೊರೆಯುವ ತಿನಿಸುಗಳು ಕರಿದ ಪದಾರ್ಥಗಳಾಗಿದ್ದು, ಇವು ಕ್ಯಾಲರಿಗಳು ಮತ್ತು ಕೊಬ್ಬಿಗೆ ಕುಖ್ಯಾತವಾದವುಗಳಾಗಿವೆ. ಕೇವಲ 3 ಗರಿಗರಿಯಾದ ತುಂಡುಗಳು (strips) ಭರಪೂರ 400 ಕ್ಯಾಲರಿಗಳು ಮತ್ತು 24 ಗ್ರಾಂ ಗಳಷ್ಟು ಕೊಬ್ಬನ್ನು ಹೊಂದಿವೆ.
ಬಾಳೆಹಣ್ಣಿನಲ್ಲಿರುವ ಅದ್ಭುತ ಗುಣ ತಿಳಿದಿದೆಯೇ?
ಇದಕ್ಕೆ ಬದಲಾಗಿ ರೋಸ್ಟ್ ಮಾಡಲ್ಪಟ್ಟ ಎಳೆಯ ಚಿಕನ್ ಅನ್ನು ಪಡೆಯಬಹುದು. ಇದು ಕೇವಲ 250 ಕ್ಯಾಲರಿಗಳು ಮತ್ತು 11 ಗ್ರಾಂ ಗಳಷ್ಟು ಕೊಬ್ಬನ್ನು ಒಳಗೊಂಡಿದೆ. ಇದರೊಂದಿಗೆ ಸಾಮಾನ್ಯವಾಗಿ ತೆಗೆದುಕೊಳ್ಳುವ ಸೈಡ್ ಡಿಶ್‌ಗಳು ಕೂಡ ಕ್ಯಾಲರಿ ಹೆಚ್ಚಳಕ್ಕೆ ತಮ್ಮ ಕೊಡುಗೆ ಸಲ್ಲಿಸುತ್ತವೆ.
ಆಶ್ಚರ್ಯಕರವಾದ ಸಂಗತಿ ಏನೆಂದರೆ, 190 ಕ್ಯಾಲರಿಗಳು ಮತ್ತು 11 ಗ್ರಾಂ ಗಳಷ್ಟು ಕೊಬ್ಬುಳ್ಳ coleslaw ಗಿಂತಲೂ ಕೇವಲ 130 ಕ್ಯಾಲರಿಗಳು ಮತ್ತು 4.5 ಗ್ರಾಂ ಗಳಷ್ಟು ಕೊಬ್ಬನ್ನು ಒಳಗೊಂಡಿರುವ ಬೇಯಿಸಿ ಪುಡಿ ಮಾಡಿದ ಆಲೂಗಡ್ಡೆ ಮತ್ತು ಗ್ರೇವಿಯು ಆರೋಗ್ಯಕ್ಕೆ ಏಷ್ಟೋ ಪಾಲು ಮಿಗಿಲು.
Pizza Hut ನ ಉತ್ಪನ್ನಗಳೂ ಕೂಡ ಆರೋಗ್ಯದ ದೃಷ್ಟಿಯಿಂದ ಅಷ್ಟೇನೂ ಆಶಾದಾಯಕವಾಗಿಲ್ಲ. Pizza ವನ್ನು ಮುಖ್ಯವಾಗಿ ಗಿಣ್ಣಿನಿಂದ ತಯಾರಿಸಲಾಗಿದ್ದು, ಗಿಣ್ಣಿನಲ್ಲಿ ಅತ್ಯಧಿಕ ಪ್ರಮಾಣದ ಕೊಬ್ಬು ಇದೆ. ಸಸ್ಯಾಹಾರಿಗಳು ಸೇವಿಸುವ ಪಿಜ್ಜಾದಲ್ಲಿ 500 ಕ್ಯಾಲರಿಗಳು ಮತ್ತು 23 ಗ್ರಾಂ ಗಳಷ್ಟು ಕೊಬ್ಬು ಇದ್ದು, ಮಾಂಸಾಹಾರಿಗಳು ಸೇವಿಸುವ ಪಿಜ್ಜಾದಲ್ಲಿ 760 ಕ್ಯಾಲರಿಗಳು ಮತ್ತು 41 ಗ್ರಾಂ ಗಳಷ್ಟು ಕೊಬ್ಬು ಇರುತ್ತದೆ. ಆದ್ದರಿಂದ ಪಿಜ್ಜಾವನ್ನು ತಿನ್ನುವುದೇ ಆದರೆ, ಸಸ್ಯಾಹಾರೀ ಪಿಜ್ಜಾಕ್ಕೆ ಮೊರೆ ಹೋಗುವುದು ಒಳಿತು.
ಕ್ಯಾಲರಿಗಳು, ಉಪ್ಪು, ಮತ್ತು ಕೊಬ್ಬು ಸರ್ವೇಸಾಮಾನ್ಯವಾಗಿ ಎಲ್ಲಾ ಫಾಸ್ಟ್ ಫುಡ್ ಗಳಲ್ಲಿ ಅಡಕವಾಗಿರುತ್ತವೆ. ಆದರೂ ಸಹ ಅನೇಕ ಫಾಸ್ಟ್ ಫುಡ್ ರೆಸ್ಟೋರೆಂಟ್ ಗಳಲ್ಲಿ ಪೋಷಕಾಂಶ ಮೌಲ್ಯಗಳುಳ್ಳ ಅನೇಕ ತಿನಿಸುಗಳು ಗ್ರಾಹಕರಿಗೆ ಲಭ್ಯವಿರುತ್ತವೆ. ನಾವೇ ಅದನ್ನು ಕೇಳಿ ಪಡೆಯಬೇಕಷ್ಟೇ. ನೀವು ತೂಕವನ್ನು ಕಳೆದುಕೊಳ್ಳುವ ಪ್ರಯತ್ನದಲ್ಲಿರುವವರಾದರೆ, ಹೆಚ್ಚಿನ ಜನಪ್ರಿಯ ತಿನಿಸುಗಳು ಮಾರಕವಾದವುಗಳಾಗಿರುತ್ತವೆ.
ನೀವು ಆಗಾಗ್ಗೆ ಫಾಸ್ಟ್ ಫುಡ್ ರೆಸ್ಟೋರೆಂಟ್ ಗಳಿಗೆ ನಿಯಮಿತವಾಗಿ ಭೇಟಿ ನೀಡುವವರ ಪೈಕಿ ಒಬ್ಬರಾಗಿದ್ದರೆ, ಯಾವುದರ ಸೇವನೆ ಯೋಗ್ಯ ಮತ್ತು ಯಾವುದನ್ನು ತ್ಯಜಿಸಬೇಕು ಎಂಬುದರ ಮಾಹಿತಿಯು ನಿಮಗಿದ್ದರೆ ನಿಮಗೇ ಒಳ್ಳೆಯದು.
ಕೊಲೆಸ್ಟ್ರಾಲ್ ಕಡಿಮೆ ಮಾಡಲು ಉತ್ತಮ ಆಹಾರ
ನೀವು ಹೆಚ್ಚು ಕಡಿಮೆ ಪ್ರತಿಯೊಂದು ಬೃಹತ್ ಪ್ರಮಾಣದ ಫಾಸ್ಟ್ ಫುಡ್ franchise ನ website ಅನ್ನು ಅಂತರ್ಜಾಲದ ಮೂಲಕ online ನಲ್ಲಿ ಪಡೆಯಬಹುದು. ಒಂದು ವೇಳೆ ಅವರ website ನಲ್ಲಿ ಪೋಷಕಾಂಶ ಮೌಲ್ಯಗಳುಳ್ಳ ತಿನಿಸುಗಳ ಮಾಹಿತಿಯು ಅಲಭ್ಯವಾಗಿದ್ದಲ್ಲಿ, ನೀವು ಮಿಂಚಂಚೆಯನ್ನು ಅವರಿಗೆ ಕಳುಹಿಸುವುದರ ಮೂಲಕ ಅದರ ಕುರಿತ ಮಾಹಿತಿಯನ್ನು ಪಡೆಯಬಹುದು. ಸಮಯ ಮೀರುವ ಮೊದಲೇ, ಯಾವ ಪದಾರ್ಥಗಳನ್ನು ನೀವು ಸೇವಿಸಬಹುದು ಮತ್ತು ಯಾವುದನ್ನು ಸೇವಿಸಬಾರದು ಎಂಬುದನ್ನು ತಿಳಿದುಕೊಂಡಿದ್ದರೆ, ತೂಕ ಕಳೆದುಕೊಳ್ಳಲು ಸಹಕಾರಿಯಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications