Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳಗ್ಗಿನ ವ್ಯಾಯಾಮದ ಪರಿಣಾಮಕಾರಿ ಪ್ರಯೋಜನಗಳು
ಬೆಳಗ್ಗೆ ಬೇಗನೆದ್ದು ವ್ಯಾಯಾಮದಿಂದ ನಿಮ್ಮ ದಿನವನ್ನು ಪ್ರಾರಂಭಿಸಿದರೆ ನಿಮ್ಮ ದೇಹ ಅದಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತದೆ. ಆಯಾಸ, ದಣಿವು ನಿಮಗುಂಟಾಗುವುದಿಲ್ಲ. ಚಟುವಟಿಕೆಯ ಬುಗ್ಗೆಯಂತೆ ನೀವು ಕಾರ್ಯನಿರ್ವಹಿಸುತ್ತೀರಿ.
ಬೆಳಗ್ಗಿನ ವ್ಯಾಯಾಮದ ಪರಿಣಾಮಕಾರಿ ಅಂಶಗಳತ್ತ ಈಗ ಗಮನ ನೀಡೋಣ. ಚಯಾಪಚಯ ಕ್ರಿಯೆಯನ್ನು ವರ್ಧಿಸುವ ಶಕ್ತಿ ಬೆಳಗ್ಗಿನ ವ್ಯಾಯಮಕ್ಕಿದೆ. ನೀವು ದಿನಪೂರ್ತಿ ಉತ್ಸಾಹದಿಂದಿದ್ದು ಕ್ಯಾಲೋರಿಗಳನ್ನು ಕರಗಿಸಲು ಇದು ನೆರವಾಗುತ್ತ
ನಿಮ್ಮ ಒತ್ತಡವನ್ನು ನೀಗಿಸಿ ನಿಮ್ಮಲ್ಲಿ ಕಿರಿಕಿರಿಯನ್ನುಂಟು ಮಾಡುವ ಅಂಶಗಳನ್ನು ಮನಸ್ಸಿನಿಂದ ಹೊರಹಾಕುವ ಚಮತ್ಕಾರೀ ವಿದ್ಯೆ ಬೆಳಗ್ಗಿನ ವ್ಯಾಯಾಮಕ್ಕಿದೆ. ಉದಾಹರಣೆಗೆ ಬೆಳಗ್ಗೆ ಬೇಗನೇ ಎದ್ದು ನಡಿಗೆ ಅಥವಾ ಓಡುವುದು ನಿಮ್ಮ ಮನಸ್ಸು ಮತ್ತು ದೇಹವನ್ನು ಉತ್ಸಾಹದಿಂದ ಇರಿಸುತ್ತದೆ.
ವ್ಯಾಯಾಮವು ದೇಹದ ಮತ್ತು ಮಾನಸಿಕ ಆರೋಗ್ಯಕ್ಕೆ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಕೆಲವು ವ್ಯಾಯಾಮಗಳು ದೇಹವನ್ನು ಬಳಪಡಿಸಿದರೆ ಕೆಲವು ವ್ಯಾಯಾಮಗಳು ಖಾಯಿಲೆಗಳನ್ನು ದೂರ ಮಾಡುತ್ತವೆ. ಇನ್ನೂ ಯೋಗದಂತಹ ವ್ಯಾಯಾಮಗಳು ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತದೆ.
ಇಲ್ಲಿ ನಾವು ವ್ಯಾಯಾಮದಿಂದ ದೊರೆಯುವ ಅರೋಗ್ಯಕರ ಲಾಭದ ಬಗ್ಗೆ ಹೇಳಿದ್ದೇವೆ ನೋಡಿ.

ಉತ್ತಮ ಕಲಿಯುವಿಕೆ:
ಕ್ರಮಬದ್ದ ವ್ಯಾಯಾಮವು ಮೆದುಳಿನಲ್ಲಿ ರಾಸಾಯನಿಕ ಚಟುವಟಿಕೆಯನ್ನು ಹೆಚ್ಚಿಸಿ ಹೊಸ ಮೆದುಳಿನ ಕೋಶಗಳನ್ನು ಸೃಷ್ಟಿಸಲು ಸಹಾಯವಾಗಿರುತ್ತದೆ. ಪರಸ್ಪರ ಮೆದುಳಿನ ಸಂಪರ್ಕ ಹೆಚ್ಚುವುದರಿಂದ ಗ್ರಹಣಶಕ್ತಿಯು ಹೆಚ್ಚುತ್ತದೆ. ಏಕಾಗ್ರತೆ ಹಾಗೂ ಗ್ರಹಣಶಕ್ತಿ ವರ್ಧಿಸಲು ಟೆನ್ನಿಸ್ ಬಾಸ್ಕೆಟ್ಬಾಲ್ ತರಹದ ತೊಡಕಿನ ಆಟಗಳನ್ನು ಆಡುವುದು ಉತ್ತಮ.

ಬೆನ್ನೋವು ನಿವಾರಣೆ:
ಬೆನ್ನೋವಿನಿಂದ ಬಳಲುತ್ತಿರುವರು ಮತ್ತು ದೇಹದ ನಿಲುವು ಸರಿಯಾಗಿಲ್ಲದವರು ವ್ಯಾಯಾಮದಿಂದ ಪರಿಹಾರ ಪಡೆಯಬಹುದು. ವ್ಯಾಯಾಮ ಬೆನ್ನೋವು ನಿವಾರಣೆಗೆ ನೋವಿಲ್ಲದ ಔಷಧಿ ಇಲ್ಲದ ಉತ್ತಮವಾದ ಪರಿಹಾರ.

ದೀರ್ಘಾಯಸ್ಸು:
ವ್ಯಾಯಾಮ ದೀರ್ಘಾಯಸ್ಸು ನೀಡಬಲ್ಲದು. ಮುಪ್ಪನ್ನು ತಡವಾಗಿ ಹಾಗೂ ಆರೋಗ್ಯಕರವಾಗಿ ಬರುವಂತೆ ಮಾಡುತ್ತದೆ.

ಶರ್ಕರ ರೋಗದ ತಡೆ:
ಕೊಲೋನ್ ಸ್ತನ ಶ್ವಾಸಕೋಶ ಇತ್ಯಾದಿ ಅಂಗಾಂಗಗಳಿಗೆ ಬರುವ ಶರ್ಕರ ರೋಗದಿಂದ ನಿಮ್ಮನ್ನು ಕಾಪಾಡಲು ವ್ಯಾಯಾಮ ಉತ್ತಮವಾಗಿರುತ್ತದೆ.

ಮೂಳೆಗಳ ಆರೋಗ್ಯ:
ವ್ಯಾಯಾಮ ಮೂಳೆಗಳ ರಚನೆಗೆ ಕಾರಣವಾಗಿರುತ್ತೆ ಇದರ ಪರಿಣಾಮವಾಗಿ ಮೂಳೆ ಸಂಬಂಧಿ ರೋಗ ಹಾಗೂ ಆರ್ಥ್ರೈಟಿಸ್ ನಂತಹ ಮೂಳೆರೋಗಗಳಿಂದ ರಕ್ಷಣೆ ಕೊಡುತ್ತೆ.

ಸವಿ ನಿದ್ದೆ:
ವ್ಯಾಯಾಮ ಮಾಡುವವರಿಗೆ ದಿನದ ದೈಹಿಕ ಚಟುವಟಿಕೆಯ ನಂತರ ರಾತ್ರಿ ಒಳ್ಳೆಯ ನಿದ್ರೆ ಬರುತ್ತದೆ. ಆದರೆ ಮಲಗುವ ಮುನ್ನ ವ್ಯಾಯಾಮ ಕೂಡದು.

ಶಕ್ತಿ ವರ್ಧನೆ:
ಕ್ರಮಬದ್ದವಾದ ವ್ಯಾಯಾಮವು ಸ್ನಾಯುಗಳಿಗೆ ಬಲ ನೀಡಿ ಶಕ್ತಿ ವರ್ಧಿಸಿ ಶ್ರಮಸಾಧ್ಯತೆಯನ್ನು ನೀಡುತ್ತದೆ. ಅಂಗಾಂಶಗಳಿಗೆ ಸಮರ್ಥವಾಗಿ ಆಮ್ಲಜನಕವನ್ನು ನೀಡಿ ದೇಹದ ವ್ಯವಸ್ಥೆಗಳಿಗೆ ಸಹಾಯ ಮಾಡುತ್ತದೆ.

ಉತ್ತಮ ಮನಸ್ಥಿತಿ:
ಮನಸ್ಸಿನ ಉತ್ಸಾಹಕ್ಕಾಗಿ ನಿಮ್ಮ ಇಷ್ಟವಾದ ತಿನಿಸು ಮಾತ್ರವಲ್ಲ, ವ್ಯಾಯಾಮ ಸಹ ಉಪಯೋಗವಾಗುವುದು.

ಸ್ನಾಯು ಬಲವರ್ಧನೆ:
ವ್ಯಾಯಾಮವು ಸ್ನಾಯುಗಳ ಬಳವರ್ಧಿಸಿ ಮುಪ್ಪಿನಲ್ಲಿ ಚಲನೆಗೆ ಸುಲಭಮಾಡಿಕೊಡುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ನ ನಿಯಂತ್ರಣ:
ವ್ಯಾಯಾಮ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ವರ್ಧಿಸುತ್ತದೆ. ಅಪಧಮನಿಯನ್ನು (ಆರ್ಟರಿ) ಸ್ವಚ್ಚವಾಗಿ ಇಡುತ್ತದೆ.

ಆರೋಗ್ಯ:
ವ್ಯಾಯಾಮ ಬೊಜ್ಜು ಮಧುಮೇಹ ರಕ್ತದೊತ್ತಡ ಹೃದ್ರೋಗ ಲಕ್ವಾದಂತಹ ನಾನಾ ಅನಾರೋಗ್ಯಗಳಿಂದ ದೂರವಿಟ್ಟು ಆರೋಗ್ಯವನ್ನು ನೀಡುತ್ತದೆ.

ನೆಗಡಿ ಫ್ಲೂ ಜ್ವರದಂತಹ ಖಾಯಿಲೆಗಳನ್ನು ದೂರವಿಡುತ್ತದೆ:
ರಕ್ಷಣಾಕವಚ ವ್ಯಾಯಾಮವು ದೇಹದ ರಕ್ಷಣಾಕವಚವನ್ನು ಬಲಿಷ್ಠಗೊಳಿಸಿ ನೆಗಡಿ ಫ್ಲೂ ಜ್ವರದಂತಹ ಖಾಯಿಲೆಗಳನ್ನು ದೂರವಿಡುತ್ತದೆ.

ಶಕ್ತಿ ವರ್ಧನೆ:
ದೀರ್ಘಾವಧಿಯಲ್ಲಿ ವ್ಯಾಯಾಮವು ತ್ರಾಣ(ಶಕ್ತಿ) ಹೆಚ್ಚಿಸುವುದಲ್ಲದೆ ಆಯಾಸವನ್ನು ಹೋಗಲಾಡಿಸುವುದು.

ರಕ್ತದೊತ್ತಡದ ಹತೋಟಿ:
ವ್ಯಾಯಾಮ ಅತಿ ರಕ್ತದೊತ್ತಡವನ್ನು ಪಡೆಯದಿರಲು ಸಹಕಾರಿಯಾಗಿರುತ್ತದೆ. ವ್ಯಾಯಾಮ ಇಲ್ಲದೆ ಇದು ಜೀವಕ್ಕೆ ಮಾರಕವೇ ಆಗುತ್ತದೆ. ವ್ಯಾಯಾಮವು ರಕ್ತದ ಪರಿಚಲನೆಯನ್ನು ಸರಿಪಡಿಸಿ ಮಾಂಸಖಂಡಗಳಿಗೆ ಆಮ್ಲಜನಕವನ್ನು ಪೂರೈಸಿ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.

ಸಕ್ಕರೆ ಖಾಯಿಲೆಯ ತಡೆ:
ವ್ಯಾಯಾಮವು ದೇಹದಲ್ಲಿ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇದರ ಪರಿಣಾಮದಿಂದ ಸಕ್ಕರೆ ಖಾಯಿಲೆಯ ಬರುವಿಕೆಯನ್ನು ಕಡಿಮೆ ಮಾಡುತ್ತದೆ. ಇನ್ನೂ ತೂಕ ಕಡಿಮೆ ಮಾಡುವುದಲ್ಲದೆ ಹೆಚ್ಚು ತೂಕ ಮತ್ತು ಬೊಜ್ಜು ಇರುವವರಿಗೆ ಮಧುಮೇಹ ಬರದಿರುವಂತೆ ವ್ಯಾಯಾಮ ನೋಡಿಕೊಳ್ಳುತ್ತದೆ.

ದೇಹದ ತೂಕ ನಿಯಂತ್ರಣ:
ವ್ಯಾಯಾಮದ ಪರಿಣಾಮದಿಂದಾಗಿ ದೇಹದ ತೂಕವು ಆರೋಗ್ಯಕರವಾದ ಸ್ಥಿತಿಗೆ ಬರುತ್ತದೆ. ಹಿತವಾದ ಪ್ರಮಾಣದ ತೂಕ ಯಾರಿಗೆ ತಾನೇ ಬೇಡ ? ವ್ಯಾಯಾಮ ಮತ್ತು ಆರೋಗ್ಯಕರ ಆಹಾರದಿಂದ ಹೆಚ್ಚಿನ ತೂಕವನ್ನು ಇಳಿಸಬಹುದು.

ಹೃದಯ ಆರೋಗ್ಯ ವರ್ಧನೆ:
ಕ್ರಮಬದ್ಧ ವ್ಯಾಯಾಮ ಮಾರಣಾಂತಕ ಹೃದ್ರೋಗಗಳನ್ನು ದೂರವಿಡುತ್ತದೆ. ವಂಶಪಾರಂಪರ್ಯವಾಗಿ ಹೃದ್ರೋಗಗಳು ಕಂಡುಬಂದಲ್ಲಿ ನಿಮಗೆ ಬರುವ ಸಾಧ್ಯತೆಯನ್ನು ವ್ಯಾಯಾಮದಿಂದ ಕಡಿಮೆ ಮಾಡಬಹುದು ಹಾಗೂ ಒಳ್ಳೆಯ ಅರೋಗ್ಯಕರ ಜೀವನವನ್ನು ನೀವು ಪಡೆಯಬಹುದು.

ಆತ್ಮವಿಶ್ವಾಸ ಹೆಚ್ಚಿಸುತ್ತದೆ:
ವ್ಯಾಕುಲ ಪರಿಹಾರ ನಿರಂತರ ವ್ಯಾಕುಲದಿಂದ ಪರಿಹಾರವನ್ನು ವ್ಯಾಯಾಮ ನೀಡಬಲ್ಲದು. ವ್ಯಾಯಾಮವು ಮನಃಶಾಂತಿ ನೀಡಿ ಆತ್ಮವಿಶ್ವಾಸ ಹೆಚ್ಚಿಸಿ ನಿಮ್ಮ ಚಿಂತೆಗಳನ್ನು ದೂರಮಾಡಬಲ್ಲದು.

ಲೈಂಗಿಕ ಸಂತೋಷ:
ಕ್ರಮಬದ್ಧವಾದ ವ್ಯಾಯಾಮವು ಬಲವನ್ನು ಹೆಚ್ಚಿಸಿ ಜೋಡಿಗಳಲ್ಲಿ ಪರಸ್ಪರ ಆಕರ್ಷಣೆಯನ್ನು ಉಂಟುಮಾಡುತ್ತದೆ. ದೈಹಿಕ ಚಟುವಟಿಕೆಯು ಸ್ತ್ರೀಯಲ್ಲಿ ಕಾಮ ಪ್ರಚೋದನೆಗೆ ಸಹಾಯವಾಗಿ ಮತ್ತು ಪುರುಷರಲ್ಲಿ ನಪುಂಸಕತ್ವ ಬಾರದಿರಲು ಸಹಾಯಮಾಡುತ್ತದೆ.

ಮಾನಸಿಕ ಆರೋಗ್ಯದ ವೃದ್ಧಿ:
ಕ್ರಮಬದ್ಧವಾಗಿ 30-45 ನಿಮಿಷಗಳ ವ್ಯಾಯಾಮದಿಂದ ಆರೋಗ್ಯವು ಹೆಚ್ಚುತ್ತೆ ಹಾಗೂ ಒಳ್ಳೆಯ ಮನಃಸ್ಥಿತಿ ಉಂಟಾಗುತ್ತದೆ. ಮೆದುಳಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ ಹಾಗು ಹೊಸ ನರಕೊಶಗಳು ಉಂಟಾಗುತ್ತವೆ. ಇದರ ಪರಿಣಾಮ ಅಲ್ಜ್ಹೈಮರ್ಸ್, ಪಾರ್ಕಿನ್ಸನ್ಸ್ ನಂತಹ ರೋಗಗಳನ್ನು ದೂರವಿಡುವುದು. ಇಷ್ಟೇ ಏಕೆ ಜೀವನದ ಕಡೆಯ ಹಂತದಲ್ಲಿ ಉಂಟಾಗುವ ಬುದ್ಧಿಮಾಂದ್ಯವನ್ನೂ ಸಹ ದೂರವಿಡಬಹುದು.

ಸಂಪೂರ್ಣ ಆರೋಗ್ಯ:
ದೇಹದ ಚಯಾಪಚಯ ವ್ಯವಸ್ಥೆಯನ್ನು ಏರಿಸುವುದನ್ನು ಹೊರತುಪಡಿಸಿ, ರಕ್ತದೊತ್ತಡವನ್ನು ಬೆಳಗ್ಗಿನ ನಡಿಗೆ ನಿಯಂತ್ರಿಸುತ್ತದೆ. ಅದೇ ರೀತಿ ಹೃದಯ ಬಡಿತ ಮತ್ತು ಸ್ನಾಯುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.

ಉತ್ತಮ ನಿದ್ರೆ:
ಬೆಳಗ್ಗೆದ್ದು ವ್ಯಾಯಾಮ ಮಾಡುವ ಗಂಡಸರು ಅಥವಾ ಹೆಂಗಸರು ಚೆನ್ನಾಗಿ ನಿದ್ರೆ ಮಾಡುತ್ತಾರೆ ಅದೇ ರೀತಿ ಸಾಯಂಕಾಲ ವ್ಯಾಯಾಮ ಮಾಡುವವರಲ್ಲಿ ಈ ಅಂಶ ಕಡಿಮೆಯಾಗಿದೆ ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಏಕೆಂದರೆ ಸ್ನಾಯುಗಳು ವಿಶ್ರಾಮಗೊಳ್ಳಲು ಮತ್ತು ಸ್ವಾಭಾವಿಕ ಸ್ಥಿತಿಗೆ ಬರಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ ಸಂಜೆಯ ನಡಿಗೆಯು ನಿಮ್ಮ ನಿದ್ದೆಗೆ ಭಂಗವನ್ನುಂಟು ಮಾಡಬಹುದು.

ತೂಕ ಇಳಿಕೆ:
ವ್ಯಾಯಾಮವು ನಿಮ್ಮಲ್ಲಿ ತೂಕ ಇಳಿಯುವಂತೆ ಮಾಡುತ್ತದೆ. ಇದು ದೇಹದ ಚಯಾಪಚಯ ವ್ಯವಸ್ಥೆಯನ್ನು ಏರಿಸಿ, ದಿನಪೂರ್ತಿ ಕ್ಯಾಲೋರಿ ಕರಗುವಂತೆ ಮಾಡುತ್ತದೆ.

ಒತ್ತಡದ ವಿರುದ್ಧ ಹೋರಾಡುತ್ತದೆ:
ಖಿನ್ನತೆ ಮತ್ತು ಒತ್ತಡವನ್ನು ದೂರಮಾಡುವಲ್ಲಿ ಬೆಳಗ್ಗಿನ ವ್ಯಾಯಾಮ ಗಮನಾರ್ಹ ಪರಿಣಾಮವನ್ನುಂಟು ಮಾಡುತ್ತದೆ. ನಿಮ್ಮಲ್ಲಿ ಶಕ್ತಿ ಕಡಿಮೆ ಇದ್ದಂತೆ ತೋರುತ್ತಿದ್ದಲ್ಲಿ, ಬೆಳಗ್ಗಿನ ನಡಿಗೆಯನ್ನು ನಿಮ್ಮದಾಗಿಸಿ. ಶುದ್ಧವಾದ ಗಾಳಿ ನಿಮ್ಮನ್ನು ಉತ್ತಮಗೊಳಿಸುತ್ತದೆ.

ಮಾನಸಿಕ ಅರಿವು:
ಬೆಳಗ್ಗಿನ ವ್ಯಾಯಾಮವು ಜ್ಞಾನಗ್ರಹಣ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ನಮ್ಮ ಮೆದುಳನ್ನು ಚುರುಕಾಗಿಸಿ ಹೆಚ್ಚು ಲಕ್ಷ್ಯವಿರಿಸುವಂತೆ ನಮಗೆ ನೆರವಾಗುತ್ತದೆ.

ಶಕ್ತಿ ವರ್ಧಕ:
ವ್ಯಾಯಾಮವು ನಿಮಗೆ ಶಕ್ತಿಯನ್ನು ನೀಡುತ್ತದೆ. ಬೆಳಗ್ಗಿನ ವ್ಯಾಯಾಮವು ನಿಮ್ಮನ್ನು ದಿನಪೂರ್ತಿ ಚಟುವಟಿಕೆಯಿಂದ ಮತ್ತು ಆರೋಗ್ಯದಿಂದಿರಿಸಲು ಸಹಕಾರಿಯಾಗಿದೆ.

ಹಸಿವನ್ನು ಹೆಚ್ಚಿಸುತ್ತದೆ:
ಬೆಳಗ್ಗಿನ ವ್ಯಾಯಾಮದ ಆರೋಗ್ಯ ಪ್ರಯೋಜನ ಇದಾಗಿದೆ. ವ್ಯಾಯಾಮದ ನಂತರ ನಿಮಗೆ ಹಸಿವಾಗುತ್ತದೆ. ವ್ಯಾಯಾಮ ನಿಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸಿ ನಿಮ್ಮ ಕರುಳ ಚಲನೆಗಳನ್ನು ನಿಯಮಿತವಾಗಿಸುತ್ತದೆ.

ಶಕ್ತಿಯನ್ನು ವೃದ್ಧಿಸುತ್ತದೆ:
ನಿಮಗೆ ಪ್ರತಿದಿನ ಏಳುವಾಗ ಶಕ್ತಿ ಇಲ್ಲ ಎಂದೆನಿಸುತ್ತದೆಯೇ? ಹಾಗಿದ್ದರೆ ವ್ಯಾಯಮ ಮಾಡುವುದರಿಂದ ನಿಮ್ಮ ಬಲ ಹೆಚ್ಚುತ್ತದೆ ಮತ್ತು ಹೆಚ್ಚು ಆರೋಗ್ಯಯುತವಾಗಿರಬಹುದು.

ಜೀರ್ಣ ಕ್ರಿಯೆ ಹೆಚ್ಚಿಸುತ್ತದೆ:
ವ್ಯಾಯಮ ಮಾಡುವುದರಿಂದ ಜೀರ್ಣ ಕ್ರಿಯೆ ಹೆಚ್ಚಿ ಹಸಿವು ಕಾಣಿಸಿಕೊಳ್ಳುವಂತೆ ನೋಡಿಕೊಳ್ಳುತ್ತದೆ. ವ್ಯಾಯಮ ಮಾಡಿದ ನಂತರ ಕ್ಯಾಲೋರಿ ಕಡಿಮೆ ಆಗುವುದರಿಂದ ಹಸಿವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಆರೋಗ್ಯಯುತವಾದ ಆಹಾರ ತಿನ್ನಿ.

ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ:
ವ್ಯಾಯಾಮ ಮಾಡುವುದರಿಂದ ಇಡೀ ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ಆಗುತ್ತದೆ. ನಿಮ್ಮ ದೇಹಕ್ಕೆ ಹೆಚ್ಚು ಆಮ್ಲಜನಕ ಮತ್ತು ಪೋಷಕಾಂಶ ದೊರೆಯುವಂತೆ ಮಾಡುತ್ತದೆ ಇದರಿಂದ ನಿಮ್ಮ ಮಿದುಳಿನ ಅರೋಗ್ಯ ಹೆಚ್ಚುತ್ತದೆ.

ಮಧುಮೇಹ ಬರುವುದನ್ನು ತಡೆಯುತ್ತದೆ:
ಅಧ್ಯಯನದ ಪ್ರಕಾರ ಪ್ರತಿದಿನ ವ್ಯಾಯಮ ಮಾಡುವುದರಿಂದ ಟೈಪ್ -2 ಮಧುಮೇಹದ ತೊಂದರೆ ಕಡಿಮೆ ಮಾಡಿಕೊಳ್ಳಬಹುದು.

ನಿಮಗೆ ಒಳ್ಳೆಯ ಅನುಭವವನ್ನು ನೀಡುತ್ತದೆ:
ಪ್ರತಿದಿನ ವ್ಯಾಯಾಮದಿಂದ ನಿಮ್ಮ ಅರೋಗ್ಯ ಸರಿಯಾಗಿ ಇರುತ್ತದೆ ಅಲ್ಲದೆ ನಿಮಗೆ ಒಳ್ಳೆಯ ಫೀಲ್ ನೀಡುತ್ತದೆ. ವ್ಯಾಯಾಮ ನಿಮ್ಮ ಜೈವಿಕ ಆರೋಗ್ಯ, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಆರೋಗ್ಯ ವೃದ್ಧಿಸುತ್ತದೆ.

ನಿಮ್ಮ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ:
ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಅತಿ ದೊಡ್ಡ ಹಂತಕ - ಹೃದಯಕ್ಕೆ ತಗಲುವ ರೋಗವನ್ನು ತಡೆಯಬಹುದು. ಅದಲ್ಲದೆ ನಿಯಮಿತ ವ್ಯಾಯಾಮ ಮಾಡುತ್ತಿದ್ದರೆ ಹೃದಯಾಘಾತ ಮತ್ತು ಬೈಪಾಸ್ ಚಿಕಿತ್ಸೆಯಾಗಿರುವವರು ಬಹಳ ಬೇಗ ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಹಾಗೂ ಮತ್ತೊಂದು ಹೃದಯಾಘಾತವಾಗುವ ಪರಿಸ್ಥಿತಿಯನ್ನು ಕಡಿಮೆಮಾಡುತ್ತದೆ.

ನಿಮ್ಮ ದೇಹದ ಆರೋಗ್ಯವನ್ನು ಸುಧಾರಿಸುತ್ತದೆ:
ನಿಯಮಿತ ವ್ಯಾಯಾಮ ಮಾಡುವುದರಿಂದ ನಿಮ್ಮ ದೇಹವನ್ನು ಸರಿಪಡಿಸಲು ಮತ್ತು ಆರೋಗ್ಯದಿಂದಿರಲು ನಿಮ್ಮ ಉತ್ತಮ ಮನಸ್ಥಿತಿಯ ಅರಿವನ್ನುಂಟುಮಾಡುತ್ತದೆ. ಇದು ನಿಮ್ಮ ಜೈವಿಕ ಆರೋಗ್ಯ, ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ ಮತ್ತು ಭಾವನಾತ್ಮಕ ಆರೋಗ್ಯಕ್ಕೆ ಸಹಾಯಮಾಡುತ್ತದೆ.

ನಿಮ್ಮ ರಕ್ತದೊತ್ತಡ ಕಡಿಮೆ ಮಾಡುತ್ತದೆ:
ವ್ಯಾಯಾಮ ಶಾರೀರಿಕ ಚಟುವಟಿಕೆಯಂತೆ ರೋಗಿಗಳಲ್ಲಿ ಹೆಚ್ಚಿನ ರಕ್ತದೊತ್ತಡವನ್ನು ಕಡಿಮೆಮಾಡಲು ಸಹಾಯಮಾಡುತ್ತದೆ. ವ್ಯಾಯಾಮ ರಕ್ತಸಂಚಾರವನ್ನು ಉತ್ತಮಗೊಳಿಸಲು ಸಹಾಯಮಾಡುವುದಲ್ಲದೆ ಲಭ್ಯವಿರುವ ಆಮ್ಲಜನಕ (Oxygen) ವನ್ನು ಸ್ನಾಯುಗಳಿಗೆ ಒದಗಿಸುವುದರಿಂದ ರಕ್ತನಾಳಗಳಿಗೆ ಹೆಚ್ಚು ವಿಶ್ರಾಂತಿ ದೊರೆಯುತ್ತದೆ. ಹಾಗೂ ರಕ್ತದೊತ್ತಡವು ಸುಧಾರಿಸುತ್ತದೆ.

ಮಧುಮೇಹದ ಆಪತ್ತನ್ನು ಕಡಿಮೆ ಮಾಡುತ್ತದೆ:
ಮಧುಮೇಹದ ಆಪತ್ತನ್ನು ಕಡಿಮೆ ಮಾಡುತ್ತದೆ ಮಧುಮೇಹದಿಂದ ಬಳಲುತ್ತಿರುವವರು ನಿಯಮಿತ ವ್ಯಾಯಾಮದಿಂದ ಬಿ.ಎಮ್.ಐ.(Body and Mass Index) ಮಟ್ಟವನ್ನು ಸುಧಾರಿಸಲು ಸಹಾಯಮಾಡುತ್ತದೆ ಮತ್ತು ದೇಹದಲ್ಲಿರುವ ಇನ್ಸುಲಿನ್ ಸರಿಯಾದ ಮಟ್ಟದಲ್ಲಿಟ್ಟುಕೊಳ್ಳಲು ಸಹಾಯಮಾಡುತ್ತದೆ. ಇದರಿಂದ ಇನ್ಸುಲಿನ್ ಸಮರ್ಥವಾಗಿ ಬಳಕೆಯಾಗುವುದಲ್ಲದೆ ಸಕ್ಕರೆಯ ಮಟ್ಟವನ್ನು ಸುಧಾರಿಸಲು ಸಹಾಯವಾಗುತ್ತದೆ.

ಖಿನ್ನತೆಯಿಂದ ಕೊರಗುವುದನ್ನು ತಡೆಗಟ್ಟುತ್ತದೆ:
ವ್ಯಾಯಾಮ ಮಾಡುವುದರಿಂದ ನಿಮ್ಮ ಮನಸ್ಥಿತಿಯು ವೃದ್ಧಿಸುತ್ತದೆ ಮತ್ತು ಖಿನ್ನತೆಯನ್ನು ತಡೆಯಲು ಸಹಾಯಮಾಡುತ್ತದೆ. ಅಲ್ಲದೆ ನಿಯಮಿತವಾಗಿ ವ್ಯಾಯಾಮ ಮಾಡುವವರು ಖಿನ್ನತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಹೋರಾಡಬಲ್ಲರು.

ಸರಳ ಏರೋಬಿಕ್ ವ್ಯಾಯಾಮ:
ಜಾಗೃತಾವಸ್ತೆಯನ್ನು ಹೆಚ್ಚಿಸುತ್ತದೆ ಈ ಸರಳ ಏರೋಬಿಕ್ ವ್ಯಾಯಾಮ ಕೂಡ ನಿಮ್ಮ ಮನಸ್ಸಿನ ಜಾಗರೂಕತೆ ಸುಧಾರಿಸಲು ಸಹಾಯ ಮಾಡುತ್ತದೆ.

ನಿದ್ರೆಯನ್ನು ಸುಧಾರಿಸುತ್ತದೆ:
ವ್ಯಾಯಾಮ ಹಗಲಿನ ಶಕ್ತಿಯನ್ನು ವೃದ್ಧಿಸಲು ಸಹಾಯಮಾಡುತ್ತದೆ. ಇದರಿಂದ ದೀರ್ಘವಾದ ಮತ್ತು ಗಾಢವಾದ ನಿದ್ರೆಮಾಡಲು ಸಹಾಯವಾಗುತ್ತದೆ.

ದೇಹದ ಕೊಬ್ಬನ್ನು ಕಡಿಮೆಮಾಡುತ್ತದೆ:
ಪ್ರತಿ ದಿನ ವ್ಯಾಯಾಮ ಮಾಡುವುದರಿಂದ ನೀವು ನಿಮ್ಮ ಆರೋಗ್ಯಕರ ತೂಕವನ್ನು ಕಾಪಾಡಲು ಸಹಾಯವಾಗುತ್ತದೆ.



Click it and Unblock the Notifications