Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಸ್ನಾಯು ನೋವಿಗೆ ಪರಿಹಾರಗಳು
ಉಳುಕು ಹಾಗೂ ದಣಿವು ಸ್ನಾಯು ಮತ್ತು ಅಸ್ಥಿರಜ್ಜುಗಳಿಗೆ ಪ್ರಭಾವ ಬೀರುವಂತಹ ಗಾಯದ ವಿಧ. ಸ್ನಾಯು ಬಳಸುವ ಶಕ್ತಿಯ ಸರಬರಾಜು ತ್ಯಾಜ್ಯ ಉತ್ಪನ್ನಗಳ ನಿರ್ಮಿಸಲು ಬಳಸಲ್ಪಡುವ ಕಾರಣದಿಂದ ಸ್ನಾಯುವಿನ ನೋವು ಕಾಣಿಸುಕೊಳ್ಳುತ್ತದೆ.
ಸ್ನಾಯು ಸೆಳೆತ ತಡೆಗಟ್ಟುವ ಮಾರ್ಗಗಳು
ಸ್ನಾಯು ನೋವಿನಿಂದಾಗಿ ನಿಮ್ಮ ಫೇವರಿಟ್ ಹೊರಾಂಗಣ ಕ್ರೀಡೆಗಳು ಅಥವಾ ಕಚೇರಿಯ ಪ್ರಮುಖ ಮೀಟಿಂಗ್ ನಿಂದ ದೂರ ಉಳಿಯಬೇಕಾಗಬಹುದು. ವೇಗವಾಗಿ ಇದನ್ನು ಶಮನ ಮಾಡಲು ನೋವಿಗೆ ಕಾರಣ ತಿಳಿದುಕೊಳ್ಳುವುದು ತುಂಬಾ ಮುಖ್ಯ. ಸ್ನಾಯು ನೋವಿನಿಂದ ಮುಕ್ತರಾಗಿ ಮರಳಿ ನೀವು ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಇಲ್ಲಿ ಕೆಲವೊಂದು ಮುಖ್ಯ ಮದ್ದುಗಳಿವೆ.
ಮಸಲ್ ಕ್ಯಾಚ್(ಸ್ನಾಯು ಸೆಳೆತ) ತಡೆಯಲು ಟಿಪ್ಸ್

ಕಾರಣ ಗುರುತಿಸಿ:
ಸ್ನಾಯು ನೋವಿಗೆ ಯಾವುದೇ ಮದ್ದು ಪ್ರಯತ್ನಿಸುವ ಮೊದಲು ಈ ನೋವಿಗೆ ಸರಿಯಾದ ಕಾರಣವೇನೆಂದು ತಿಳಿದುಕೊಳ್ಳಬೇಕು. ವೇಗವಾಗಿ ಚೇತರಿಸಿಕೊಳ್ಳಲು ಸ್ನಾಯು ನೋವಿನ ಮೂಲ ಕಾರಣದಿಂದ ದೂರ ಉಳಿಯವುದು ತುಂಬಾ ಮುಖ್ಯ.

ಸಾಕಷ್ಟು ವಿಶ್ರಾಂತಿ ಪಡೆಯಿರಿ:
ಸ್ನಾಯು ನೋವಿಗೆ ಮುಖ್ಯ ಮದ್ದು ಸಾಕಷ್ಟು ವಿಶ್ರಾಂತಿ ಪಡೆಯುವುದು. ಇದರಿಂದ ಸ್ನಾಯುಗಳಿಗೆ ವಿಶ್ರಾಂತಿ ಸಿಗುತ್ತದೆ ಮತ್ತು ಸ್ವಲ್ಪ ನೋವಿದ್ದರೆ ರಾತ್ರಿ ಮಲಗುವಾಗ ತೆಗೆದುಕೊಳ್ಳುವ ವಿಶ್ರಾಂತಿ ಸಾಕಾಗುತ್ತದೆ. ಸ್ನಾಯು ನೋವು ಉಂಟುಮಾಡುವಂತಹ ಯಾವುದೇ ಚಟುವಟಿಕೆಯಿಂದ ದೂರ ಉಳಿಯಿರಿ.

ಮಸಾಜ್:
ಸ್ನಾಯು ನೋವಿಗೆ ಮಸಾಜ್ ಅತ್ಯಂತ ಪರಿಣಾಮಕಾರಿ ಮದ್ದು. ಇದು ರಕ್ತಸಂಚಲನಕ್ಕೆ ನೆರವಾಗುತ್ತದೆ ಮತ್ತು ವೇಗವಾಗಿ ಉಪಶಮನ ನೀಡುತ್ತದೆ. ಹಿತವಾದ ಒತ್ತಡದೊಂದಿಗೆ ಒಂದೇ ನಿರ್ದೇಶನದಲ್ಲಿ ನೋವಿರುವ ಜಾಗಕ್ಕೆ ಮಸಾಜ್ ಮಾಡಿ.

ಐಸ್ ಪ್ಯಾಕ್:
ಸ್ನಾಯು ಬಿಗಿತವಿದ್ದರೆ ಅದರಿಂದ ಉಪಶಮನಕ್ಕಾಗಿ ಐಸ್ ಪ್ಯಾಕ್ ನ ನೆರವು ಪಡೆಯಬಹುದು. ಸ್ನಾಯು ನೋವಿನೊಂದಿಗೆ ಊದಿಕೊಂಡಿದ್ದರೆ 20 ನಿಮಿಷಗಳ ಕಾಲ ಆ ಜಾಗಕ್ಕೆ ಐಸ್ ಪ್ಯಾಕ್ ಇಡಿ. ಇದು ಸ್ನಾಯು ನೋವಿಗೆ ಅತ್ಯಂತ ಪರಿಣಾಮಕಾರಿ ಮದ್ದು.

ತೇವಭರಿತ ಶಾಖ:
ಸ್ನಾಯು ನೋವಿಗೆ ಉಪಶಮನ ನೀಡಲು ತೇವಭರಿತ ಶಾಖ ತುಂಬಾ ಪರಿಣಾಮಕಾರಿ. ಬಿಸಿನೀರಿನ ಸ್ನಾನ ಅಥವಾ ಎಪ್ಸಮ್ ಉಪ್ಪು ಜೊತೆಗೆ ಆವಿ ಸ್ನಾನ ಒಳ್ಳೆಯ ಆಯ್ಕೆ. ತೇವಭರಿತ ಶಾಖವು ನರಗಳು ಆರಾಮವಾಗಿರಲು ನೆರವಾಗುತ್ತದೆ.

ಸಾರಭೂತ ತೈಲ:
ಸ್ನಾಯು ನೋವಿಗೆ ಪರಿಣಾಮಕಾರಿಯಾಗಬಲ್ಲ ಹಲವಾರು ರೀತಿಯ ಸಾರಭೂತ ತೈಲಗಳಿವೆ. ಒಂದು ಅಥವಾ ಎರಡು ಚಮಚದಷ್ಟು ಸಾರಭೂತ ತೈಲವನ್ನು ಒಂದು ಚಮಚ ತೆಂಗಿನ ಎಣ್ಣೆಯೊಂದಿಗೆ ಮಿಶ್ರ ಮಾಡಿ ಪೀಡಿತ ಜಾಗಕ್ಕೆ ಹಚ್ಚಿ

ಬಿಸಿ ಸ್ನಾನ:
ನರಗಳು ನೋವಿನ ಸೂಚನೆ ನೀಡುವುದನ್ನು ದುರ್ಬಲಗೊಳಿಸುವಂತಹ ಶ್ರೇಷ್ಠ ಗುಣವನ್ನು ಬಿಸಿ ಹೊಂದಿದೆ. ಸ್ನಾಯುಗಳು ಹಿಡಿದುಕೊಂಡಿದ್ದರೆ ಬಿಸಿ ನೀರಿನ ಸ್ನಾನ ಮಾಡಿ. ಸ್ನಾಯು ನೋವಿಗೆ ತುಂಬಾ ಸುಲಭ ಮತ್ತು ಪರಿಣಾಮಕಾರಿ ಮದ್ದು ಇದಾಗಿದೆ. ಸ್ನಾಯುವಿನ ನೋವನ್ನು ಬೇಗ ನಿವಾರಿಸುತ್ತದೆ.

ಚಲನೆ:
ಬಿಗಿಯಾದ ಸ್ನಾಯುಗಳಿಂದಾಗಿ ನಿಮಗೆ ಸಮಸ್ಯೆಯಾಗುತ್ತಿದ್ದರೆ ಕೆಲವೊಂದು ಸೌಮ್ಯವಾದ ಚಲನೆಗಳಿಂದ ನೀವು ಸ್ನಾಯು ನೋವಿನಿಂದ ಆರಾಮ ಪಡೆಯಬಹುದು. ಲಘುವಾದ ವ್ಯಾಯಾಮ ಮಾಡುವುದರಿಂದ ಸಮಸ್ಯೆ ಬಗೆಹರಿಸಬಹುದು. ಸ್ನಾಯು ನೋವಿಗೆ ಹಲವಾರು ರೀತಿಯ ವ್ಯಾಯಾಮಗಳಿವೆ.

ಕಂಪ್ರೆಸ್:
ನಿಮ್ಮ ಸ್ನಾಯು ತುಂಬಾ ನೋಯುತ್ತಿದ್ದರೆ ಇದು ಒಳ್ಳೆಯ ಆಯ್ಕೆ. ತಂಪು ಅಥವಾ ಬಿಸಿಯಾದ ಕಂಪ್ರೆಸ್ ನಿಂದ ಸ್ನಾಯು ನೋವಿನಿಂದ ಉಪಶಮನ ಪಡೆಯಬಹುದು. ನಿಮ್ಮ ಸ್ನಾಯು ನೋವಿಗೆ ಕಾರಣ ತಿಳಿದುಕೊಂಡು ಬಿಸಿ ಅಥವಾ ತಂಪಾದ ಕಂಪ್ರೆಸ್ ಬಳಸಿ.

ಸ್ಟ್ರೆಚಿಂಗ್:
ಸ್ನಾಯು ನೋವನ್ನು ತುಂಬಾ ವೇಗವಾಗಿ ನಿವಾರಿಸಲು ಸ್ಟ್ರೆಚಿಂಗ್ ತುಂಬಾ ಪರಿಣಾಮಕಾರಿ ಮದ್ದು. ನೋವಿರುವ ಸ್ನಾಯುವನ್ನು ಸ್ಟ್ರೆಚ್ ಮಾಡಿ. ಸ್ಟ್ರೆಚಿಂಗ್ ವ್ಯಾಯಾಮ ಮಾಡುವ ಮೊದಲು ಯಾವುದೇ ಸಮಸ್ಯೆಗೆ ಸಿಲುಕುವ ಮೊದಲು ವೈದ್ಯರ ನೆರವು ಪಡೆಯಿರಿ.



Click it and Unblock the Notifications
