ವಾವ್! ಮಸಾಲಾ ಚಹಾ ಟೇಸ್ಟ್ ಮಾಡಿರುವಿರಾ?

ಭಾರತೀಯ ರೆಸ್ಟೋರೆಂಟ್‌ಗಳಲ್ಲಿ ಮಸಾಲಾ ಚಹಾದ ಪರಿಮಳವನ್ನು ಸ್ವಾದವನ್ನು ಅನುಭವಿಸದವರು ಯಾರಿದ್ದಾರೆ ಹೇಳಿ? ಭಾರತದಲ್ಲಿ ಆರೋಗ್ಯಪೂರ್ಣ ಹಾಗೂ ವ್ಯವಸ್ಥಿತ ದೇಹ ಪ್ರಕೃತಿಯನ್ನು ಪಡೆಯಲು ಮಸಾಲಾ ಚಹಾವನ್ನು ನಿತ್ಯವೂ ಸೇವಿಸುತ್ತಾರೆ.

ಮಸಾಲಾ ಚಹಾದಲ್ಲಿ ಬಳಸಲಾಗುವ ಅನೇಕ ಸಾಂಬಾರು ಪದಾರ್ಥಗಳು ನಿಮ್ಮ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಲಿಂಪಿಕ್ ಕ್ರೀಡಾಪಟುಗಳು ಹೆಚ್ಚಿನ ಪ್ರಮಾಣದ ಮಸಾಲಾ ಚಹಾವನ್ನು ನಿತ್ಯವೂ ಸೇವಿಸುತ್ತಾರೆ. ಇದರಿಂದ ಅವರ ನೋವು, ಸೆಳೆತ ಮೊದಲಾದ ಕ್ರೀಡಾ ಅಸ್ವಸ್ಥತೆಗಳು ಮಾಯವಾಗಿ ಅವರಲ್ಲಿ ಚೈತನ್ಯ ಹಾಗೂ ದೇಹಕ್ಕೆ ಶಕ್ತಿ ಉಂಟಾಗುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಗ್ರೀನ್ ಟೀ ಹೊಟ್ಟೆಯ ಸಮಸ್ಯೆಗಳಿಗೆ ಉತ್ತಮವೇ?

ಹರ್ಬಲ್ ಟೀ ಅಥವಾ ಗ್ರೀನ್ ಟೀಗಿಂತ ಉತ್ತಮ ಚಹಾ ಮಸಾಲಾ ಚಹಾ ಆಗಿದೆ. ಒಂದು ಕಪ್‌ನಷ್ಟು ಮಸಾಲಾ ಚಹಾ ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ.

ನಿಮಗೆ ಆರೋಗ್ಯಕಾರಿ ಮತ್ತು ಸ್ವಾಸ್ಥ್ಯಪೂರ್ಣ ಶರೀರ ಬೇಕೆಂದಲ್ಲಿ ನಿಮ್ಮ ಪ್ರಥಮ ಹಂತ ಮಸಾಲಾ ಚಹಾ ಸೇವಿಸುವುದಾಗಿದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ವರ್ಧಿಸಿ, ರೋಗವನ್ನು ನಿವಾರಿಸಿ, ಮಧುಮೇಹವನ್ನು ನಿಯಂತ್ರಿಸಿ, ಕ್ಯಾನ್ಸರ್ ಅನ್ನು ಮೊಳಕೆಯಲ್ಲಿ ಚಿವುಟಿ ಹಾಕುವ ಗುಣ ಮಸಾಲಾ ಚಹಾಕ್ಕಿದೆ.

ಹಾಗಿದ್ದರೆ ಇನ್ನೇಕೆ ತಡ? ಮಸಾಲಾ ಚಹಾದ ಆರೋಗ್ಯ ಪ್ರಯೋಜನಗಳತ್ತ ಗಮನ ನೀಡಿ. ನಿಮ್ಮ ಇಷ್ಟದ ಪೇಯವನ್ನು ಮಸಾಲಾ ಚಹಾಕ್ಕೆ ಬದಲಾಯಿಸಿ. ಖಂಡಿತ ಇದು ನಿಮ್ಮಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಟೀ ಕುಡಿಯುವವರಿಗೆ ಇಲ್ಲಿದೆ 10 ಸಿಹಿ ಸುದ್ದಿ

ಉರಿಯೂತ:

ಉರಿಯೂತ:

ಮಸಾಲಾ ಚಹಾದಲ್ಲಿರುವ ಸಾಂಬಾರು ಪದಾರ್ಥಗಳು ನಿಮ್ಮ ದೇಹದಲ್ಲಿರುವ ಉರಿಯೂತವನ್ನು ನೈಸರ್ಗಿಕವಾಗಿ ನಿವಾರಿಸುತ್ತವೆ.

ಶಕ್ತಿಯನ್ನು ಒದಗಿಸುತ್ತದೆ:

ಶಕ್ತಿಯನ್ನು ಒದಗಿಸುತ್ತದೆ:

ನಿಮಗೆ ಶಕ್ತಿಯನ್ನು ಪೂರೈಸುವಲ್ಲಿ ಮಸಾಲಾ ಚಹಾದ ಪಾತ್ರ ಅತ್ಯಂತ ಹಿರಿದು. ಮಸಾಲಾ ಚಹಾದಲ್ಲಿರುವ ಟ್ಯಾನಿನ್ ಅಂಶ ದೇಹವನ್ನು ಶಾಂತಗೊಳಿಸಿ ನಿಮಗೆ ಶಕ್ತಿಯನ್ನು ನಿಡುತ್ತದೆ ಆಯಾಸವನ್ನು ಪರಿಹರಿಸುತ್ತದೆ.

ಕಟ್ಟಿದ ಮೂಗಿಗೆ:

ಕಟ್ಟಿದ ಮೂಗಿಗೆ:

ಕಟ್ಟಿದ ಮೂಗು ಹಾಗೂ ಕಿರಿಕಿರಿಯುಂಟು ಮಾಡುತ್ತಿರುವ ಗಂಟಲು ನೋವಿನಿಂದ ಬಳಲುತ್ತಿದ್ದೀರಾ, ಇದಕ್ಕೆ ಉತ್ತಮ ಮನೆಮದ್ದು ಮಸಾಲಾ ಚಹಾವಾಗಿದೆ. ಏಲಕ್ಕಿ ಮತ್ತು ಶುಂಠಿ ನಿಮ್ಮ ಕಟ್ಟಿದ ಮೂಗನ್ನು ನಿರಾಳಗೊಳಿಸುತ್ತದೆ.

ರೋಗನಿರೋಧಕ ಶಕ್ತಿ ವರ್ಧನೆಗೆ:

ರೋಗನಿರೋಧಕ ಶಕ್ತಿ ವರ್ಧನೆಗೆ:

ನಿಮ್ಮ ರೋಗನಿರೋಧಕ ಶಕ್ತಿಯನ್ನು ವರ್ಧಿಸಲು, ಮಸಾಲಾ ಚಹಾ ಉತ್ತಮ ಪರಿಹಾರವಾಗಿದೆ. ದಾಲ್ಷಿನ್ನಿ, ಏಲಕ್ಕಿ, ಲವಂಗ ಮಸಾಲಾ ಚಹಾದಲ್ಲಿರುವ ಸಾಂಬಾರು ಪದಾರ್ಥಗಳಾಗಿದ್ದು ನಿಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ವರ್ಧಿಸುತ್ತವೆ. ಬೇಸಿಗೆಯಲ್ಲಿ ಕಂಡುಬರುವ ಸಾಮಾನ್ಯ ಸೋಂಕುಗಳನ್ನು ಬುಡದಿಂದಲೇ ನಿವಾರಿಸುವ ಸಾಮರ್ಥ್ಯ ಮಸಾಲಾ ಚಹಾಕ್ಕಿದೆ.

ಜೀರ್ಣಕ್ರಿಯೆಗೆ ಉತ್ತಮ:

ಜೀರ್ಣಕ್ರಿಯೆಗೆ ಉತ್ತಮ:

ಮಸಾಲಾ ಚಹಾದಲ್ಲಿರುವ ನೈಸರ್ಗಿಕ ಸಾಂಬಾರು ಪದಾರ್ಥಗಳು ನಿಮ್ಮ ಜೀರ್ಣಕ್ರಿಯೆಗೆ ಸಹಕಾರಿ. ಇದರಲ್ಲಿರುವ ಶುಂಠಿ ಜೀರ್ಣಕ್ರಿಯೆಯ ಸಮಸ್ಯೆಗಳನ್ನು ನಿವಾರಿಸಿ ಏಸಿಡಿಟಿ ನಿವಾರಣೆಯನ್ನು ಮಾಡುತ್ತದೆ.

ನಿಮ್ಮ ಹೃದಯಕ್ಕೆ ಚೇತೋಹಾರಿ:

ನಿಮ್ಮ ಹೃದಯಕ್ಕೆ ಚೇತೋಹಾರಿ:

ಹೌದು, ಮಸಾಲಾ ಚಹಾ ಅಪಧಮನಿಯ ಬ್ಲಾಕ್‌ಗಳಲ್ಲಿ ಪ್ಲೇಕ್ ರಚನೆಯನ್ನು ತಡೆಗಟ್ಟಿ ಹೃದಯವನ್ನು ಕಾಪಾಡುತ್ತದೆ.

ರಕ್ತದೊತ್ತಡ ಸಮಸ್ಯೆಗಳು:

ರಕ್ತದೊತ್ತಡ ಸಮಸ್ಯೆಗಳು:

ನಿಮಗೆ ರಕ್ತದೊತ್ತಡದ ಸಮಸ್ಯೆಯಿದ್ದಲ್ಲಿ ದಿನವೂ ಒಂದು ಕಪ್ ಮಸಾಲಾ ಚಹಾವನ್ನು ಸೇವಿಸಿ. ರಕ್ತದೊತ್ತಡವನ್ನು ನಿಯಂತ್ರಿಸುವ ಕಲೆಗಾರಿಕೆ ಮಸಾಲಾ ಚಹಾದಲ್ಲಿದೆ.

ಚಯಾಪಚಯ ಕ್ರಿಯೆಗೆ:

ಚಯಾಪಚಯ ಕ್ರಿಯೆಗೆ:

ಮಸಾಲಾ ಚಹಾ ಶಾಖವನ್ನು ಉತ್ಪಾದಿಸುವ ಪೇಯವಾಗಿದ್ದು ನಿಮ್ಮ ಚಯಾಪಚಯ ಕ್ರಿಯೆಗೆ ಸಹಕಾರಿಯಾಗಿದೆ. ನಿಮ್ಮ ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ನೆರವಾಗುವ ಒಂದು ಉತ್ತಮ ಮತ್ತು ನೈಸರ್ಗಿಕ ವಿಧಾನವಾಗಿದೆ ಮಸಾಲಾ ಚಹಾ ಸೇವನೆ.

ಮಧುಮೇಹ ನಿವಾರಣೆ:

ಮಧುಮೇಹ ನಿವಾರಣೆ:

ಲವಂಗ, ದಾಲ್ಚಿನ್ನಿ,ಹಾಗೂ ಏಲಕ್ಕಿ ಮಸಾಲಾ ಚಹಾದಲ್ಲಿ ಬೆರೆತುಕೊಂಡಿರುವ ಸಾಂಬಾರು ಪದಾರ್ಥಗಳಾಗಿದ್ದು ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಮಧುಮೇಹವನ್ನು ನಿವಾರಿಸುತ್ತದೆ.

ತಿಂಗಳ ಸೆಳೆತಕ್ಕೆ:

ತಿಂಗಳ ಸೆಳೆತಕ್ಕೆ:

ತಿಂಗಳ ಸಮಯದಲ್ಲಿ ಮಹಿಳೆಯರನ್ನು ಕಾಡುವ ಸೊಂಟನೋವು, ಸೆಳೆತಕ್ಕೆ ಮಸಾಲಾ ಚಹಾ ರಾಮಬಾಣವಾಗಿದೆ. ಮಸಾಲಾ ಚಹಾ ಹೊಟ್ಟೆಯಲ್ಲಿರುವ ಸ್ನಾಯುಗಳನ್ನು ರಿಲ್ಯಾಕ್ಸ್ ಮಾಡಿ ನೋವನ್ನು ಉಪಶಮನ ಮಾಡುತ್ತದೆ.

ತೂಕ ಇಳಿಕೆಗೆ:

ತೂಕ ಇಳಿಕೆಗೆ:

ಹೌದು, ನಿಮ್ಮ ದೇಹದಲ್ಲಿರುವ ಅತಿಯಾದ ತೂಕವನ್ನು ಕಳೆಯುವಲ್ಲಿ ಮಸಾಲಾ ಚಹಾದ ಪಾತ್ರ ಹಿರಿದು. ದಿನದಲ್ಲಿ ಎರಡು ಬಾರಿ ಮಸಾಲಾ ಚಹಾ ಸೇವಿಸುವುದು ಬೇಡದ ಕೊಬ್ಬನ್ನು ದೇಹದಿಂದ ಕರಗಿಸುತ್ತದೆ.

ಕೊಲೆಸ್ಟ್ರಾಲ್:

ಕೊಲೆಸ್ಟ್ರಾಲ್:

ಮಸಲಾ ಚಹಾದಲ್ಲಿರುವ ಪ್ರಬಲ ಉತ್ಕರ್ಷಣ ನಿರೋಧಿ ಅಂಶಗಳು ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.

ಕ್ಯಾನ್ಸರ್ ನಿರೋಧಕ:

ಕ್ಯಾನ್ಸರ್ ನಿರೋಧಕ:

ಸಂಶೋಧನೆಗಳ ಪ್ರಕಾರ, ಒಂದು ಕಪ್‌ನಷ್ಟು ಬ್ಲಾಕ್ ಮಸಾಲಾ ಚಹಾ ಅದರಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳಿಂದ ಕ್ಯಾನ್ಸರ್ ನಿವಾರಕವಾಗಿದೆ.

ಬಾಯಿ ದುರ್ವಾಸನೆಯ ವಿರುದ್ಧ ಹೋರಾಟ:

ಬಾಯಿ ದುರ್ವಾಸನೆಯ ವಿರುದ್ಧ ಹೋರಾಟ:

ಮಸಾಲಾ ಚಹಾದಲ್ಲಿ ಬೆರೆತಿರುವ ಒಂದು ಮಸಾಲಾ ಪದಾರ್ಥ ದಾಲ್ಚಿನ್ನಿ ಬಾಯಿ ದುರ್ವಾಸನೆಯ ವಿರುದ್ಧ ಹೋರಾಡುತ್ತದೆ.

ಗರ್ಭಾವಸ್ಥೆಯ ಸಂದರ್ಭದಲ್ಲಿ:

ಗರ್ಭಾವಸ್ಥೆಯ ಸಂದರ್ಭದಲ್ಲಿ:

ಪ್ರಾತಃ ಕಾಲದ ರೋಗಗಳಿಂದ ಬಳಲುವ ಗರ್ಭಿಣಿ ಸ್ತ್ರೀಯರಿಗೆ ಮಸಾಲಾ ಚಹಾ ವರದಾನವಾಗಿದೆ. ವಾಕರಿಕೆಯ ರೋಗಲಕ್ಷಣಗಳನ್ನು ನಿವಾರಿಸಲು ಮಸಾಲಾ ಚಹಾ ಸಹಕಾರಿ.

X
Desktop Bottom Promotion