Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೈದ್ಯ ಲೋಕವನ್ನು ಅಚ್ಚರಿಗೊಳಿಸುವ ಹಳ್ಳಿ ಮದ್ದಿನ ಕಮಾಲು
ಕೆಲವೊಮ್ಮೆ ದೇಹಕ್ಕೆ ಅತಿಯಾಗಿ ತೊಂದರೆ ಕೊಡುವ ಸಾಮಾನ್ಯ ಕಾಯಿಲೆಗಳು ವೈದ್ಯರ ಗುಳಿಗೆಗಳಿಗೆ ಬಗ್ಗುವುದೇ ಇಲ್ಲ. ಈ ಕಾಯಿಲೆಗೆ ಕಾರಣವಾದ ವೈರಸ್ಸು ಬ್ಯಾಕ್ಟೀರಿಯಾಗಳು ಈ ಔಷಧಿಯನ್ನು ಜೀರ್ಣಿಸಿಕೊಳ್ಳುವ ಗುಣವನ್ನು ಪಡೆದಿರಬಹುದು. ಒಮ್ಮೆ ಹೀಗಾಯಿತು. ಟೈಫಾಯ್ಡ್ ಜ್ವರ ಬಂದ ಸುಮಾರು ಹದಿನಾಲ್ಕು ವರ್ಷದ ಹುಡುಗನಿಗೆ ವೈದ್ಯರು ಹಲವಾರು ಔಷಧಿಗಳನ್ನು ನೀಡಿದರು.
ಸುಮಾರು ಹದಿನೈದು ದಿನಗಳ ಬಳಿಕ ಜ್ವರವೇನೋ ಕಡಿಮೆಯಾಯಿತು ಆದರೆ ಔಷಧಗಳ ಅಡ್ಡಪರಿಣಾಮದ ಕಾರಣ ನಾಲಿಗೆಯಲ್ಲಿ ಗುಳ್ಳೆಗಳೆದ್ದವು. ಉಪ್ಪು, ಖಾರ, ಬಿಸಿ, ತಣ್ಣಗಿನ ಏನನ್ನೂ ತಿನ್ನಲಾರದ ಮಟ್ಟಕ್ಕೆ ಗುಳ್ಳೆಗಳು ತೊಂದರೆ ನೀಡತೊಡಗಿದವು. ವೈದ್ಯರು ಇದಕ್ಕಾಗಿಯೂ ಹಲವಾರು ಲೇಪನ, ಗುಳಿಗೆಗಳನ್ನು ನೀಡಿ ಎರಡು ಮೂರು ದಿನದಲ್ಲಿ ಕಡಿಮೆಯಾಗುತ್ತದೆ ಎಂದರು. ಕೆಮ್ಮಿನ ನಿವಾರಣೆಗೆ ಅತಿ ಸೂಕ್ತವಾಗಿರುವ 15 ಸಲಹೆಗಳು
ಆದರೆ ವಾರವಾದರೂ ಗುಳ್ಳೆಗಳು ಹೆಚ್ಚಾದವೇ ಹೊರತು ಒಂದಿನಿತೂ ಕಡಿಮೆಯಾಗಲಿಲ್ಲ. ಈ ಗೋಳನ್ನು ಬಾಲಕ ಯಾರೊಂದಿಗೋ ಹೇಳಿಕೊಳ್ಳುತ್ತಿದ್ದುದನ್ನು ಕೇಳಿದ ರೈತರೊಬ್ಬರು ಇದಕ್ಕೆ ಬಸಲೆ ಸೊಪ್ಪಿನ ಹಸಿ ಎಲೆಗಳನ್ನು ಎಷ್ಟು ಹೊತ್ತು ಸಾಧ್ಯವೋ ಅಷ್ಟು ಹೊತ್ತು ಜಗಿಯುತ್ತಿದ್ದು ನೀರುನೀರಾದ ಬಳಿಕ ಉಗಿಯುವಂತೆ ಸಲಹೆ ನೀಡಿದರು.
ಎತ್ತಿನಗಾಡಿಯನ್ನು ಚಲಾಯಿಸುತ್ತಿದ್ದ ಹಳ್ಳಿ ಹೈದ ಹೇಳಿದ ಈ ಚಿಕಿತ್ಸೆಯನ್ನು ಯಾರಾದರೂ ಉಪೇಕ್ಷೆ ಮಾಡಬಹುದಿತ್ತು. ಆದರೆ ನಾಲಿಗೆಯ ಉರಿಯಿಂದ ಹೈರಾಣಾಗಿದ್ದ ಬಾಲಕ ಪ್ರಯತ್ನಿಸೋಣವೆಂದು ಎರಡು ಬಸಲೆ ಎಲೆಗಳನ್ನು ಹಸಿಯಾಗಿ ಜಗಿಯಲು ತೊಡಗಿದ. ಏನಾಶ್ಚರ್ಯ! ಸ್ವಲ್ಪ ಸಮಸಯದಲ್ಲಿಯೇ ಉರಿ ಕಡಿಮೆಯಾಗಿತ್ತು. ಎರಡು ದಿನ ಕಳೆದು ಮೂರನೆಯ ದಿನ ಎದ್ದಾಗ ನಾಲಿಗೆಯ ಗುಳ್ಳೆಗಳು ಇಲ್ಲವೆನಿಸುವಷ್ಟು ಕಡಿಮೆಯಾಗಿದ್ದವು. ವಾರದ ಬಳಿಕ ಸಂಪೂರ್ಣವಾಗಿ ವಾಸಿಯಾಗಿತ್ತು.
ಬನ್ನಿ ಇಂದು ಬೋಲ್ಡ್ ಸ್ಕೈ ನಮ್ಮ ಹಿರಿಯರಿಂದ ಪ್ರಯೋಗಿಸಲ್ಪಟ್ಟು ಪ್ರಮಾಣಿಸಿದ ಕೆಲವೊಂದು ಮನಮದ್ದನ್ನು ನಿಮ್ಮೊಂದಿಗೆ ಹಂಚಿಕೊಂಡಿದೆ, ಅವು ಯಾವುದು ಎಂಬುದನ್ನು ನೋಡೋಣ...

ಕಡಿಮೆ ರಕ್ತದ ಒತ್ತಡ ಇದ್ದರೆ
ಹೆಚ್ಚಿನ ರಕ್ತದೊತ್ತಡಕ್ಕಿಂತಲೂ ಕಡಿಮೆ ರಕ್ತದೊತ್ತಡ ಜೀವಕ್ಕೆ ಅಪಾಯಕಾರಿಯಾಗಿದೆ. ಚೆನ್ನಾಗಿ ಕಳಿತ ದಾಳಿಂಬೆ ಹಣ್ಣಿನ ಬೀಜಗಳನ್ನು ಬೇರ್ಪಡಿಸಿ ಹಿಂಡಿ ತೆಗೆದ ರಸವನ್ನು ಹಾಗೇ ಪ್ರತಿದಿನ ಕುಡಿಯುವುದರಿಂದ ಕಡಿಮೆಯಾಗಿದ್ದ ರಕ್ತದೊತ್ತಡ ಸಾಮಾನ್ಯಸ್ಥಿತಿಗೆ ಬರುತ್ತದೆ. ಕಡಿಮೆ ರಕ್ತದೊತ್ತಡಕ್ಕೆ ಉಪ್ಪು ಸೇವಿಸಲು ಕೆಲವರು ಸಲಹೆ ನೀಡುತ್ತಾರೆ. ಆದರೆ ಉಪ್ಪಿನ ಸೇವನೆಯಿಂದ ತಾತ್ಕಾಲಿಕವಾದ ಉಪಶಮನ ಮಾತ್ರ ದೊರಕುತ್ತದೆ. ಆದರೆ ದಾಳಿಂಬೆರಸದ ದಿನನಿತ್ಯದ ಸೇವನೆ ಶಾಶ್ವತ ಪರಿಣಾಮ ನೀಡುತ್ತದೆ ಹಾಗೂ ಹೃದಯದ ಆರೋಗ್ಯವನ್ನೂ ಹೆಚ್ಚಿಸುತ್ತದೆ.

ಹುಳಿತೇಗು, ಹೊಟ್ಟೆಯಲ್ಲಿ ಉರಿ, ಇದ್ದರೆ
ಸುಮಾರು ಐದು ಅಥವಾ ಆರು ದೊಡ್ಡ ತುಳಸಿ ಎಲೆಗಳನ್ನು (ಚಿಕ್ಕದಾದರೆ ಹತ್ತು) ಚೆನ್ನಾಗಿ ತೊಳೆದುಕೊಂಡು ಊಟದ ಬಳಿಕ ನೀರಾಗುವ ತನಕ ಜಗಿದು ನುಂಗುವ ಮೂಲಕ ಹುಳಿತೇಗು, ಹೊಟ್ಟೆಯಲ್ಲಿ ಉರಿ, ಉಬ್ಬರ ಮೊದಲಾದ ತೊಂದರೆಗಳನ್ನು ನಿವಾರಿಸುತ್ತದೆ. ಅಲ್ಲದೇ ಜೀರ್ಣಕ್ರಿಯೆಯಲ್ಲಿ ಸಹಕರಿಸಿ ಕರುಳಿನ ವ್ರಣ (ಅಲ್ಸರ್) ಗಳಾಗದಂತೆ ತಡೆಯುತ್ತದೆ ಮತ್ತು ಹಿಮ್ಮುಖ ಹರಿವನ್ನು ತಡೆಯುತ್ತದೆ.

ಹೊಟ್ಟೆಯಲ್ಲಿ ಹುಳಿತನ (acidity) ಇದ್ದರೆ
ಮಧ್ಯಾಹ್ನ ಮತ್ತು ರಾತ್ರಿ ಊಟದ ಬಳಿಕ ಒಂದು ಲವಂಗವನ್ನು ಚೀಪುತ್ತಾ ಇದ್ದರೆ ಹುಳಿತನ ಕಡಿಮೆಯಾಗುತ್ತದೆ.

ಹೊಟ್ಟೆಯುಬ್ಬರ ಮತ್ತು ಹೊಟ್ಟೆಯ ಉರಿ ಇದ್ದರೆ
ಹಸಿ ಬೆಳ್ಳುಳ್ಳಿಯ ಒಂದು ಎಸಳಿನ ಸಿಪ್ಪೆ ಸುಲಿದು ಜಜ್ಜಿ ತಣ್ಣೀರಿನೊಂದಿಗೆ ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಕುಡಿಯುವುದರಿಂದ ಉತ್ತಮ ಪರಿಣಾಮ ದೊರಕುತ್ತದೆ. ಆದರೆ ಬಳಿಕ ಕನಿಷ್ಟ ಒಂದು ಘಂಟೆಯವರೆಗೆ ಬೇರೇನನ್ನೂ ತಿನ್ನಬಾರದು.

ಬಿಸಿಲಿನ ಧಗೆಯಿಂದಾದ ತಲೆನೋವಿಗೆ
ಕೆಲವರಿಗೆ ಬಿಸಿಲಿನಲ್ಲಿ ಹೆಚ್ಚು ಹೊತ್ತು ಇದ್ದರೆ ತಲೆಸುತ್ತು ಬಂದು ತಲೆನೋವು ಪ್ರಾರಂಭವಾಗುತ್ತದೆ. ಕೂಡಲೇ ಒಂದು ಲೋಟ ಕಲ್ಲಂಗಡಿ ಹಣ್ಣಿನ ರಸವನ್ನು ಸೇವಿಸಿದರೆ ತಲೆನೋವು ಕಡಿಮೆಯಾಗುತ್ತದೆ.

ಸಾಮಾನ್ಯವಾದ ಕೆಮ್ಮು ಇದ್ದರೆ
ಅರ್ಧ ಲೀಟರ್ ಹಾಲಿನಲ್ಲಿ ಆರು ಹಸಿ ಖರ್ಜೂರಗಳನ್ನು ತುಂಡು ಮಾಡಿ ಹಾಕಿ ಸುಮಾರು ಇಪ್ಪತ್ತೈದು ನಿಮಿಷಗಳವೆರೆಗೆ ಚಿಕ್ಕ ಉರಿಯಲ್ಲಿ ಬೇಯಿಸಿ. ಹಾಲು ಉಕ್ಕಲು ಬಿಡಬಾರದು. ಈ ಹಾಲನ್ನು ಸುಮಾರು ಒಂದು ಚಿಕ್ಕ ಕಪ್ ನಷ್ಟು ದಿನಕ್ಕೆ ಮೂರು ಬಾರಿ ಕುಡಿಯಿರಿ.

ಮೂಗಿನ ಮೇಲೆ ಮೂಡುವ ಕಪ್ಪುತಲೆ (blackhead) ಗಾಗಿ
ಎಳೆ ಸೌತೆಕಾಯಿಯನ್ನು ಸಣ್ಣಗೆ ಹೆಚ್ಚಿ ಅರೆದು ನುಣ್ಣನೆಯ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖ, ಕಣ್ಣಿನ ರೆಪ್ಪೆ ಮತ್ತು ಸುತ್ತಲ ಭಾಗ ಮತ್ತು ಮೂಗಿನ ಮೇಲೆ ಸವರಿ ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಮೊಡವೆಗಳೂ ಮುಖದಿಂದ ಮಾಯವಾಗುತ್ತವೆ.

ರಕ್ತಹೀನತೆ ಮತ್ತು ಕಬ್ಬಿಣದ ಕೊರತೆಗಾಗಿ
ಸುಮಾರು ನಾಲ್ಕು ಹಸಿ ಖರ್ಜೂರಗಳನ್ನು ಜಜ್ಜಿ ಹಾಲಿನೊಂದಿಗೆ ರುಬ್ಬಿ. ಬಳಿಕ ಒಂದು ಚಮಚದಷ್ಟು ಶುದ್ಧ ಹಸುವಿನ ತುಪ್ಪವನ್ನು ಸೇರಿಸಿದರೆ ಒಂದು ಅಳತೆಯ ಔಷಧಿ ಸಿಗುತ್ತದೆ. ಈ ಅಳತೆಯನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸುವುದರಿಂದ ರಕ್ತಹೀನತೆ (Anemia)ಯಾಗದಂತೆ ತಡೆಗಟ್ಟಬಹುದು.

ಕಣ್ಣಿನ ಸುತ್ತ ಇರುವ ಕಪ್ಪು ವೃತ್ತಗಳಿಗಾಗಿ
ಒಂದು ದೊಡ್ಡ (ಅಥವಾ ಎರಡು ಚಿಕ್ಕ) ಟೊಮಾಟೋ ಹಣ್ಣುಗಳು (ವಾಸ್ತವವಾಗಿ ಟೊಮಾಟೋ ಹಣ್ಣು, ನಾವು ತರಕಾರಿಯಾಗಿ ಬಳಸುತ್ತಿದ್ದೇವೆ ಅಷ್ಟೇ), ಒಂದು ದೊಡ್ಡ ಚಮಚ ಲಿಂಬೆ ಹಣ್ಣಿನ ರಸ ಮತ್ತು ಅರ್ಧ ಚಮಚ ಕಡಲೆ ಬೇಳೆ ಮತ್ತು ಕಾಲು ಚಮಚ ಅರಿಸಿನ ಪುಡಿಯನ್ನು ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ. ಕೊಂಚ ಸಮಯದ ಬಳಿಕ ಇದು ನಯವಾದ ಪೇಸ್ಟ್ ನಂತೆ ಆಗುತ್ತದೆ. ಈ ಮಿಶ್ರಣವನ್ನು ಕಣ್ಣುಗಳ ಸುತ್ತ ಹಚ್ಚಿ ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆದುಕೊಳ್ಳಿ. ಒಂದು ವೇಳೆ ಉರಿ ಅನಿಸಿದರೆ ಹತ್ತು ನಿಮಿಷಗಳ ಬಳಿಕ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನರಾವರ್ತಿಸಿ.

ಕಂಕುಳ ದುರ್ವಾಸನೆಗೆ
ಸಮಪ್ರಮಾಣದಲ್ಲಿ ಬೆರೆಸಿದ ಅಡುಗೆ ಸೋಡಾ ಮತ್ತು ಲಿಂಬೆರಸದ ಮಿಶ್ರಣದ ಲೇಪನವನ್ನು ಹಚ್ಚಿ

ಹೊಟ್ಟೆಯುಬ್ಬರಕ್ಕೆ
ದೊಡ್ಡ ಜೀರಿಗೆ (ಅಥವ ಸೌಂಫ್)ಯನ್ನು ಬಿಸಿನೀರಿನಲ್ಲಿ ಐದು ನಿಮಿಷದವರೆಗೆ ಚಿಕ್ಕ ಉರಿಯಲ್ಲಿ ಕುದಿಸಿ. ಈ ನೀರನ್ನು ಸೋಸಿ ಕುಡಿಯಿರಿ. ಒಂದು ವೇಳೆ ದೊಡ್ಡ ಜೀರಿಗೆಯ ಗಿಡದ ಎಲೆಗಳನ್ನು ಹಸಿಯಾಗಿ ತಿನ್ನಲು ಸಾಧ್ಯವಾದರೆ ಹಾಗೇ ಸೇವಿಸಬಹುದು. ತೀವ್ರ ಪ್ರಮಾಣದ ಹೊಟ್ಟೆಯುಬ್ಬರಕ್ಕೆ ದೊಡ್ಡ ಜೀರಿಗೆಯ ಜೊತೆ ಕೆಲವು ಏಲಕ್ಕಿ ಮತ್ತು ಪುದಿನಾ ಎಲೆಗಳನ್ನು ಸೇರಿಸಿ ಕುದಿಸಿ.

ಲಿಂಬೆಹಣ್ಣಿನ ಮಹತ್ವಗಳು
ವಿಟಮಿನ್ ಸಿ ಪ್ರಮಾಣ ಲಿಂಬೆಹಣ್ಣಿನಲ್ಲಿ ಅತ್ಯಧಿಕವಾಗಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜೊತೆಗೆ ವಿಟಮಿನ್ ಬಿ, ರೈಬೋಫ್ಲೋವಿನ್, ಪಾಸ್ಪರಸ್, ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂ ಸಹಾ ಉತ್ತಮ ಪ್ರಮಾಣದಲ್ಲಿವೆ. ಉಗುರುಬೆಚ್ಚನೆಯ ನೀರಿನಲ್ಲಿ ಲಿಂಬೆರಸವನ್ನು ಸೇರಿಸಿ ಪ್ರತಿದಿನ ಬೆಳಿಗ್ಗೆ ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ನಮ್ಮ ಯಕೃತ್ ಬಲಗೊಳ್ಳುತ್ತದೆ, ಹೊಟ್ಟೆಯಲ್ಲಿನ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಸಹಕರಿಸುತ್ತದೆ, ತಲೆಸುತ್ತು, ಹೊಟ್ಟೆಯಲ್ಲಿ ಉರಿ, ಅಜೀರ್ಣ, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ ಮತ್ತು ಖಿನ್ನತೆ ಮೊದಲಾದವುಗಳಿಗೆ ಶೀಘ್ರ ಉಪಶಮನ ನೀಡುತ್ತದೆ.

ಮದ್ಯಪಾನದ ಬಳಿಕ ಆಲಸ್ಯ ಅಥವಾ ಜಡತ್ವ ಕಂಡುಬಂದರೆ (hangover)
ಒಂದು ಲೋಟ ಹಾಲಿನಲ್ಲಿ ಒಂದು ಬಾಳೆಹಣ್ಣು ಮತ್ತು ಒಂದು ಚಿಕ್ಕ ಚಮಚ ಜೇನು ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ಕುಡಿಯುವುದರಿಂದ ಉಪಶಮನ ದೊರಕುತ್ತದೆ.

ಅತಿ ಹೆಚ್ಚಿನ ಕೆಮ್ಮಿಗೆ
ಕೆಲವು ತುಳಸಿ ಎಲೆಗಳು, ಒಂದು ಚಮಚ ಬೆಳ್ಳುಳ್ಳಿ ರಸ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಮಿಶ್ರಣವನ್ನು ತಯಾರಿಸಿ. ಪ್ರತಿ ಮೂರು ಘಂಟೆಗೊಂದು ಚಮಚದಷ್ಟು ಕುಡಿಯುವುದರಿಂದ ಶೀಘ್ರ ಉಪಶಮನ ದೊರಕುತ್ತದೆ.



Click it and Unblock the Notifications